ಕನ್ನಡ ಸುದ್ದಿ  /  ಕ್ರಿಕೆಟ್  /  Rohit Sharma: ಕ್ರಿಕೆಟ್ ಆಟಗಾರರು ಯಾಕೆ ಯಾವಾಗಲೂ ಹೆಡ್​ಫೋನ್ ಹಾಕಿಕೊಂಡೇ ಇರ್ತಾರೆ; ಇದೇ ಕಾರಣಕ್ಕೆ ನೋಡಿ

Rohit Sharma: ಕ್ರಿಕೆಟ್ ಆಟಗಾರರು ಯಾಕೆ ಯಾವಾಗಲೂ ಹೆಡ್​ಫೋನ್ ಹಾಕಿಕೊಂಡೇ ಇರ್ತಾರೆ; ಇದೇ ಕಾರಣಕ್ಕೆ ನೋಡಿ

Rohit Sharma: ವಿಮಾನ ನಿಲ್ದಾಣಗಳಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗರು ಹೆಡ್​ಫೋನ್ ಹಾಕಿಕೊಂಡೇ ಇರಲು ಕಾರಣವೇನು? ರೋಹಿತ್​ ಶರ್ಮಾ ಕೊಟ್ಟಿದ್ದಾರೆ ಉತ್ತರ ನೊಡಿ.

Rohit Sharma: ಕ್ರಿಕೆಟ್ ಆಟಗಾರರು ಯಾಕೆ ಯಾವಾಗಲೂ ಹೆಡ್​ಫೋನ್ ಹಾಕಿಕೊಂಡೇ ಇರ್ತಾರೆ; ಇದೇ ಕಾರಣಕ್ಕೆ ನೋಡಿ
Rohit Sharma: ಕ್ರಿಕೆಟ್ ಆಟಗಾರರು ಯಾಕೆ ಯಾವಾಗಲೂ ಹೆಡ್​ಫೋನ್ ಹಾಕಿಕೊಂಡೇ ಇರ್ತಾರೆ; ಇದೇ ಕಾರಣಕ್ಕೆ ನೋಡಿ

ವಿಮಾನ ನಿಲ್ದಾಣ ಸೇರಿದಂತೆ ಬಹುತೇಕ ಕಡೆ ಕ್ರಿಕೆಟ್ ಆಟಗಾರರು ಹೆಡ್​ಸೆಟ್ ಹಾಗೂ ಬ್ಲ್ಯೂಟೂತ್​ ಹಾಕಿಕೊಂಡೇ ಇರುತ್ತಾರೆ? ಫ್ಯಾನ್ಸ್ ಎಷ್ಟೇ ಕೂಗಿ ಕಿರುಚಾಡಿದರೂ ಕ್ರಿಕೆಟರ್ಸ್ ಡೋಂಟ್ ಕೇರ್​ ಎನ್ನದೆ ಹೋಗುತ್ತಿರುತ್ತಾರೆ. ಹೀಗಾಗಿ, ಬಹುತೇಕ ಕ್ರಿಕೆಟ್ ಪ್ರಿಯರಿಗೆ ಈ ಪ್ರಶ್ನೆ ಕಾಡಿದೆ. ಹೌದು, ಈ ಬಗ್ಗೆ ಚರ್ಚೆ ನಡೆದಿದ್ದೂ ಇದೆ. ಹಾಗಾದರೆ ಯಾವ ಕಾರಣಕ್ಕೆ ಹೀಗೆ ಯಾವಾಗಲೂ ಹೆಡ್​ಫೋನ್ ಹಾಕಿಕೊಂಡೇ ಇರುತ್ತಾರೆ? ನಾಯಕ ರೋಹಿತ್​ ಶರ್ಮಾ ಉತ್ತರ ಕೊಟ್ಟಿದ್ದಾರೆ ನೋಡಿ.

ಅಭಿಮಾನಿಗಳು ಎಷ್ಟೇ ಕೂಗಾಡಿದರೂ ಏನು ಪ್ರತಿಕ್ರಿಯಿಸಿದೆ, ಏನೂ ಗೊತ್ತಿಲ್ಲದೆ ಆಟಗಾರರು ಹೋಗುವ ಕಾರಣ ಆಟಗಾರರಿಗೆ ಅಹಂಕಾರ ಎಂದು ಹೇಳಿರುವ ಮಾತುಗಳನ್ನು ಕೇಳಿದ್ದೇವೆ. ಆದರೆ ಈ ಹಿಂದೆ ರೋಹಿತ್​ ಇದಕ್ಕೆ ಕಾರಣವನ್ನು ವಿವರಿಸಿದ್ದಾರೆ. ಜನಪ್ರಿಯ ಕಪಿಲ್ ಶೋನಲ್ಲಿ ಪಾಲ್ಗೊಂಡಿದ್ದ ಅವಧಿಯಲ್ಲಿ ರೋಹಿತ್ ಶರ್ಮಾ ಅವರು ಬಹಿರಂಗಪಡಿಸಿದ್ದಾರೆ. ಶ್ರೇಯಸ್ ಅಯ್ಯರ್​ ಕೂಡ ಅವರೊಂದಿಗಿದ್ದರು. ಕ್ರಿಕೆಟಿಗರು ವಿಮಾನ ನಿಲ್ದಾಣಗಳಲ್ಲಿ ಹೆಡ್‌ಫೋನ್ ಬಳಸುವುದೇಕೆ ಎಂದು ಕೇಳಲಾಗಿತ್ತು.

ರೋಹಿತ್​ ಶರ್ಮಾ ಬಹಿರಂಗಪಡಿಸಿದ್ರು ಅಚ್ಚರಿ ವಿಚಾರ

ಅಭಿಮಾನಿಗಳು ಎಷ್ಟೇ ಕೂಗಿದರೂ ಆಟಗಾರರು ನೋಡದೆಯೇ ಹಾಗೆಯೇ ಹೋಗುವಾಗ ನಿಮಗೆ ಅನಿಸಬಹುದು ಎಷ್ಟು ದುರಂಹಕಾರ ಎಂದು. ಆದರೆ ನೀವು ಹಾಗೆ ತಿಳಿದುಕೊಂಡಿದ್ದರೆ ಖಂಡಿತ ಅದು ತಪ್ಪು ಕಲ್ಪನೆ. ನಮಗೂ ನಮ್ಮ ಫ್ಯಾನ್ಸ್ ಜೊತೆ ಸಂಹವನ ನಡೆಸಬೇಕು ಎಂಬ ಆಸೆ ಇರುತ್ತದೆ. ಆದರೆ, ಎಲ್ಲಿ ಒಳ್ಳೆಯದು ಇರುತ್ತದೋ ಅಲ್ಲೇ ಕೆಟ್ಟದ್ದೂ ಇರುತ್ತದೆ. ನಮ್ಮ ಕ್ಷೇಮ ಬಯಸುವವರ ಮಧ್ಯೆ ಕೆಟ್ಟವರೂ ಇರುತ್ತಾರೆ. ಕೆಟ್ಟವರಿಂದ ದೂರ ಇರಲು ಹಾಗೆ ಮಾಡುತ್ತೇವೆ ಎಂದು ಹೇಳಿದ್ದರು.

ಟ್ರೆಂಡಿಂಗ್​ ಸುದ್ದಿ

ವಿಮಾನ ನಿಲ್ದಾಣಗಳಿಗೆ ಪ್ರವೇಶಿಸಿದಾಗ ಕಳೆದ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರೆ ಆ ಚೆಂಡನ್ನು ಆಡಬೇಡಿ, ಈ ಚೆಂಡನ್ನು ಆಡಬೇಡಿ ಎಂದು ಸಲಹೆ ನೀಡುತ್ತಾರೆ. ಹೇಗೆ ಆಡಬೇಕು ಎಂದು ಕೂಗುತ್ತಾರೆ. ಟೀಕೆ ಮಾಡುತ್ತಾರೆ. ಇದು ಮಾನಸಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಇಂತಹ ವಿಷಯಗಳು ನಮ್ಮ ಕಿವಿಗೆ ಬೀಳಬಾರದು ಎಂಬ ಕಾರಣಕ್ಕೆ ವಿಮಾನ ನಿಲ್ದಾಣಗಳಲ್ಲಿ ಕ್ರಿಕೆಟಿಗರು ಹೆಡ್‌ಫೋನ್ ಬಳಸುತ್ತಾರೆ ಎಂದು ರೋಹಿತ್​ ಶರ್ಮಾ ಹೇಳಿದ್ದರು.

ಇದೇ ಶೋನಲ್ಲಿ ಇಬ್ಬರು ಕ್ರಿಕೆಟಿಗರೊಂದಿಗೆ ಎಂದೂ ರೂಮ್​ ಶೇರ್ ಮಾಡಿಕೊಳ್ಳಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಶಿಖರ್ ಧವನ್ ಮತ್ತು ರಿಷಭ್​ ಪಂತ್ ಅವರು ಸಾಕಷ್ಟು ಗಲೀಜು ಮತ್ತು ಅನೈರ್ಮಲ್ಯ ಹೊಂದಿರುವ ಕಾರಣ ಅವರೊಂದಿಗೆ ಕೊಠಡಿ ಹಂಚಿಕೊಳ್ಳಲು ಬಯಸುವುದಿಲ್ಲ ಎಂದು ಬಹಿರಂಗಪಡಿಸಿದ್ದರು. ಐಪಿಎಲ್​ಗೂ ಮುನ್ನ ನಡೆದ ಕಪಿಲ್ ಶರ್ಮಾ ಶೋನಲ್ಲಿ ರೋಹಿತ್ ಭಾಗವಹಿಸಿದ್ದರು. ಇದೀಗ ಈ ಕುರಿತು ಚರ್ಚೆ ನಡೆಯುತ್ತಿದೆ.

ಪ್ರಸ್ತುತ ಭಾರತ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾಗವಹಿಸಿದ್ದು, ಸೂಪರ್​​-8 ಹಂತಕ್ಕೆ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ. ಈಗಾಗಲೇ ಆರಂಭಿಕ ಎರಡು ಪಂದ್ಯಗಳಲ್ಲಿ ಗೆದ್ದಿರುವ ರೋಹಿತ್ ಪಡೆ, ಜೂನ್ 12ರಂದು ಅಮೆರಿಕ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಸೂಪರ್​-8ಕ್ಕೆ ಅರ್ಹತೆ ಪಡೆದುಕೊಳ್ಳಲಿದೆ. ಈ ವಿಶ್ವಕಪ್​ನಲ್ಲಿ ರೊಹಿತ್​, ಐರ್ಲೆಂಡ್ ವಿರುದ್ಧ ಅರ್ಧಶತಕ, ಪಾಕ್ ವಿರುದ್ಧ 13 ರನ್ ಸಿಡಿಸಿದ್ದಾರೆ.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ