ಅಯ್ಯರ್ ಔಟ್, ಗಾಯಕ್ವಾಡ್ ಕ್ಯಾಪ್ಟನ್, ಇಶಾನ್ ಕಿಶನ್ ರಿಟರ್ನ್: ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಎ ಸಂಭಾವ್ಯ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಯ್ಯರ್ ಔಟ್, ಗಾಯಕ್ವಾಡ್ ಕ್ಯಾಪ್ಟನ್, ಇಶಾನ್ ಕಿಶನ್ ರಿಟರ್ನ್: ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಎ ಸಂಭಾವ್ಯ ತಂಡ

ಅಯ್ಯರ್ ಔಟ್, ಗಾಯಕ್ವಾಡ್ ಕ್ಯಾಪ್ಟನ್, ಇಶಾನ್ ಕಿಶನ್ ರಿಟರ್ನ್: ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಎ ಸಂಭಾವ್ಯ ತಂಡ

India A vs Australia A: ಆಸ್ಟ್ರೇಲಿಯಾ ಎ ತಂಡದ ವಿರುದ್ಧ ನಡೆಯುವ ಭಾರತ ಎ ತಂಡವನ್ನು 4 ದಿನಗಳ ಕಾಲ ನಡೆಯುವ ಎರಡು ಪಂದ್ಯಗಳಿಗೆ ಬಿಸಿಸಿಐ ಮತ್ತು ಸೆಲೆಕ್ಟರ್​ಗಳು ತಂಡವನ್ನು ಸಜ್ಜುಗೊಳಿಸುತ್ತಿದ್ದಾರೆ.

ಆಸ್ಟ್ರೇಲಿಯಾ ಎ ಪ್ರವಾಸಕ್ಕೆ ಭಾರತ ಎ ಸಂಭಾವ್ಯ ತಂಡ
ಆಸ್ಟ್ರೇಲಿಯಾ ಎ ಪ್ರವಾಸಕ್ಕೆ ಭಾರತ ಎ ಸಂಭಾವ್ಯ ತಂಡ

ಟೀಮ್ ಇಂಡಿಯಾ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ನಿರತವಾಗಿದ್ದು, ಮೊದಲ ಪಂದ್ಯವನ್ನು ಕಳೆದುಕೊಂಡಿದೆ. ನವೆಂಬರ್​ 5ರ ತನಕ ತವರಿನಲ್ಲಿ ಈ ಸಿರೀಸ್​ ಆಡಲಿದೆ. ನಂತರ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​-ಗವಾಸ್ಕರ್ ಟ್ರೋಫಿ ಆಡಲಿದೆ. ನವೆಂಬರ್​ 22 ರಿಂದ 2025ರ ಜನವರಿ 6ರ ತನಕ ಇಂಡೋ-ಆಸೀಸ್ ನಡುವೆ ಐದು ಪಂದ್ಯಗಳ ಸರಣಿ ನಡೆಯಲಿದೆ. ಆದರೆ ಅದಕ್ಕೂ ಮುನ್ನ ಆಸ್ಟ್ರೇಲಿಯಾ ಎ ವಿರುದ್ಧ ಭಾರತ ಎ ತಂಡವು ನಾಲ್ಕು ದಿನಗಳ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದು, ಮ್ಯಾಕೆ ಮತ್ತು ಮೆಲ್ಬೋರ್ನ್​ ಕ್ರಿಕೆಟ್ ಮೈದಾನಗಳು ಆತಿಥ್ಯ ವಹಿಸಲಿವೆ.

ಇದೀಗ ಭಾರತ ಎ ತಂಡಕ್ಕೆ ಪ್ರಮುಖ ಆಟಗಾರರನ್ನೇ ಆಯ್ಕೆ ಮಾಡಲು ಬಿಸಿಸಿಐ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ. ಗುತ್ತಿಗೆ ಪಟ್ಟಿಯಿಂದ ಹೊರ ಬಿದ್ದಿರುವ ಆಟಗಾರರಿಗೂ ಅವಕಾಶ ನೀಡಲು ಚಿಂತಿಸಿದೆ. ಈಗಾಗಲೇ ಸೆಲೆಕ್ಟರ್​ಗಳ ಜೊತೆ ಚರ್ಚೆಯೂ ನಡೆಸಿದೆ. ಇಎಸ್‌ಪಿಎನ್ ಕ್ರಿಕ್‌ಇನ್​ ಫೋ ವರದಿಯ ಪ್ರಕಾರ, ಬುದ್ದಿಕಲಿತ ನಂತರ ದೇಶೀಯ ಕ್ರಿಕೆಟ್​ನಲ್ಲಿ ಅಬ್ಬರಿಸುತ್ತಿರುವ ಇಶಾನ್ ಕಿಶನ್ ಭಾರತ ಎ ತಂಡಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಶ್ರೇಯಸ್ ಅಯ್ಯರ್ ಭಾರತ ಎ ಬದಲಿಗೆ​ ಪ್ರಮುಖ ತಂಡದ ಭಾಗವಾಗಲಿದ್ದಾರೆ ಎನ್ನಲಾಗಿದೆ. ಈ 2ಪಂದ್ಯಗಳಿಗೆ ಋತುರಾಜ್ ಗಾಯಕ್ವಾಡ್ ನಾಯಕತ್ವ ವಹಿಸಲಿದ್ದಾರೆ ಎಂದು ವರದಿಯಾಗಿದೆ.

ಮತ್ತೊಂದೆಡೆ ಆಸೀಸ್ ವಿರುದ್ಧದ ಅಧಿಕೃತವಾಗಿ ಆರಂಭವಾಗುವ ಮೊದಲ ಪಂದ್ಯವನ್ನು ವೈಯಕ್ತಿಕ ಕಾರಣಗಳಿಂದ ರೋಹಿತ್ ಶರ್ಮಾ ತಪ್ಪಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ರೋಹಿತ್ ಸ್ಥಾನ ತುಂಬಲು ಗಾಯಕ್ವಾಡ್ ಪೈಪೋಟಿಯಲ್ಲಿದ್ದು, ಮೊದಲ ಆಯ್ಕೆ ಎಂದು ಹೇಳಲಾತ್ತಿದೆ. ಅಲ್ಲದೆ, ಕಳೆದ 4 ತಿಂಗಳಲ್ಲಿ ಸತತ 4 ಪ್ರಥಮ ದರ್ಜೆ ಶತಕ ಸಿಡಿಸಿರುವ ಅಭಿಮನ್ಯು ಈಶ್ವರನ್​ ಕೂಡ ಪ್ರಮುಖ ತಂಡದಲ್ಲಿ ಸ್ಥಾನ ಪಡೆಯಲು ಹೋರಾಟ ನಡೆಸುತ್ತಿದ್ದಾರೆ. ಹಾಗಾಗಿ, ಭಾರತ ಎ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.

ಇಶಾನ್ ರಿಟರ್ನ್ಸ್, ಅಯ್ಯರ್​​ಗೆ ಪ್ರಮುಖ ತಂಡದಲ್ಲಿ ಸ್ಥಾನ

ರಣಜಿ ಆಡುವಂತೆ ಕೇಳಿದರೂ ನಿರ್ಲಕ್ಷ್ಯ ತೋರಿದ್ದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಸೆಂಟ್ರಲ್ ಕಾಂಟ್ರ್ಯಾಕ್ಟ್​ನಿಂದ ಬಿಸಿಸಿಐ ಹೊರಗಿಟ್ಟಿತ್ತು. ಇದರ ಬೆನ್ನಲ್ಲೇ ದೇಶೀಯ ಕ್ರಿಕೆಟ್​ಗೆ ಮರಳಿದ ಇಶಾನ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬುಚಿ ಬಾಬು ಟೂರ್ನಿ, ದುಲೀಪ್ ಟ್ರೋಫಿ, ಇದೀಗ ರಣಜಿಯಲ್ಲಿ ಸತತ ಮೂರು ಶತಕ ಸಿಡಿಸಿದ್ದಾರೆ. ಆ ಮೂಲಕ ಬಿಸಿಸಿಐ ಮತ್ತು ಸೆಲೆಕ್ಟರ್​​ಗಳ ಗಮನ ಸೆಳೆದಿದ್ದು, ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆ ಮಾಡಲು ಸೆಲೆಕ್ಟರ್ಸ್ ಚಿಂತಿಸಿದ್ದಾರೆ. ಅವರು ಇತ್ತೀಚಿಗೆ ರೈಲ್ವೇಸ್ ವಿರುದ್ಧ ಜಾರ್ಖಂಡ್‌ ಪರ ರಣಜಿಯಲ್ಲಿ ಶತಕ ಸಿಡಿಸಿದ್ದು, ಭಾರತ ಎ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಆದರೆ, ಶ್ರೇಯಸ್ ಅಯ್ಯರ್ ಎ ತಂಡದಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಏಕೆಂದರೆ ಅವರು ಭಾರತ ಎ ತಂಡದ ಬದಲಿಗೆ, ಪ್ರಮುಖ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಪ್ರಸ್ತುತ ಶ್ರೇಯಸ್ ನ್ಯೂಜಿಲೆಂಡ್ ಟೆಸ್ಟ್​ ಸರಣಿಗೆ ಆಯ್ಕೆಯಾಗಲು ವಿಫಲರಾಗಿದ್ದಾರೆ. ಪ್ರಸ್ತುತ ಮುಂಬೈ ಪರ ಅಯ್ಯರ್​ ಮಹಾರಾಷ್ಟ್ರ ವಿರುದ್ಧ ಶತಕ ಸಿಡಿಸಿ ಮಿಂಚಿದ್ದಾರೆ. 142 ರನ್ ಸಿಡಿಸಿ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಫಾಸ್ಟ್​ ಆ್ಯಂಡ್ ಬೌನ್ಸಿ ಟ್ರ್ಯಾಕ್​ನಲ್ಲಿ ಅಯ್ಯರ್​ ಅತ್ಯುತ್ತಮ ಪ್ರದರ್ಶನ ನೀಡುವ ಹಿನ್ನೆಲೆ ಅವರನ್ನು ಪ್ರಮುಖ ತಂಡಕ್ಕೆ ಆಯ್ಕೆ ಮಾಡಲು ಸೆಲೆಕ್ಷನ್ ಕಮಿಟಿ ನಿರ್ಧರಿಸಿದೆ. ಹೀಗಾಗಿ, ಭಾರತ ಎ ತಂಡಕ್ಕೆ ಆಯ್ಕೆ ಮಾಡುವುದಿಲ್ಲ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಸಂಭಾವ್ಯ ಭಾರತ ಎ ತಂಡ

ಋತುರಾಜ್ ಗಾಯಕ್ವಾಡ್, ಅಭಿಮನ್ಯು ಈಶ್ವರನ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ಬಾಬಾ ಇಂದ್ರಜಿತ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಇಶನ್ ಕಿಶನ್ (ವಿಕೆಟ್ ಕೀಪರ್), ಮುಕೇಶ್ ಕುಮಾರ್, ರಿಕಿ ಭುಯಿ, ನಿತೀಶ್ ಕುಮಾರ್ ರೆಡ್ಡಿ, ಮಾನವ್ ಸುತಾರ್, ನವದೀಪ್ ಸೈನಿ, ಖಲೀಲ್ ಅಹ್ಮದ್, ತನುಷ್ ಕೋಟ್ಯಾನ್, ಯಶ್ ದಯಾಳ್.

Whats_app_banner