ಅಯ್ಯರ್, ಪಂತ್ ಸೇರಿದಂತೆ ಭಾರತದ 6 ಬ್ಯಾಟರ್ಸ್ ಅಟ್ಟರ್ ಫ್ಲಾಪ್: ಶುರುವಾಯಿತು ಹೊಸ ಟೆನ್ಶನ್
ಕನ್ನಡ ಸುದ್ದಿ  /  ಕ್ರಿಕೆಟ್  /  ಅಯ್ಯರ್, ಪಂತ್ ಸೇರಿದಂತೆ ಭಾರತದ 6 ಬ್ಯಾಟರ್ಸ್ ಅಟ್ಟರ್ ಫ್ಲಾಪ್: ಶುರುವಾಯಿತು ಹೊಸ ಟೆನ್ಶನ್

ಅಯ್ಯರ್, ಪಂತ್ ಸೇರಿದಂತೆ ಭಾರತದ 6 ಬ್ಯಾಟರ್ಸ್ ಅಟ್ಟರ್ ಫ್ಲಾಪ್: ಶುರುವಾಯಿತು ಹೊಸ ಟೆನ್ಶನ್

ದುಲೀಪ್ ಟ್ರೋಫಿಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ಡಿ ತಂಡ ಸಂಪೂರ್ಣವಾಗಿ ತತ್ತರಿಸಿತು. ರುತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ಸಿ ವಿರುದ್ಧ ಇನ್ನಿಂಗ್ಸ್ ಆರಂಭಿಸಿದ 2 ಗಂಟೆಯೊಳಗೆ ಶ್ರೇಯಸ್ ಅಯ್ಯರ್, ದೇವದತ್ ಪಡಿಕಲ್ ಮತ್ತು ಶ್ರೀಕರ್ ಭರತ್ ಪೆವಿಲಿಯನ್‌ಗೆ ಮರಳಿದರು.

ಡಿಸೆಂಬರ್ 2022 (ಎಪಿ) ನಲ್ಲಿ ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್‌ನ 2ನೇ ದಿನದ ಸಮಯದಲ್ಲಿ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್
ಡಿಸೆಂಬರ್ 2022 (ಎಪಿ) ನಲ್ಲಿ ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್‌ನ 2ನೇ ದಿನದ ಸಮಯದಲ್ಲಿ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್

ಭಾರತ ತಂಡ ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಪರ ಆಡುವ ಹಲವು ಆಟಗಾರರು ದುಲೀಪ್ ಟ್ರೋಫಿಯಲ್ಲಿ ಪಾಲ್ಗೊಂಡಿದ್ದಾರೆ. ಇವರೆಲ್ಲ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವತ್ತ ಚಿತ್ತ ನೆಟ್ಟಿದ್ದಾರೆ. ಆದರೆ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಸೇರಿದಂತೆ ಕೆಲ ಸ್ಟಾರ್ ಬ್ಯಾಟರ್​​ಗಳ ಕಳಪೆ ಆಟ ಟೀಮ್ ಇಂಡಿಯಾಕ್ಕೆ ಹೊಸ ಟೆನ್ಶನ್ ತಂದೊಡ್ಡಿದೆ.

ಕಳಪೆ ಪ್ರದರ್ಶನ ಯಾರದ್ದು?

ದುಲೀಪ್ ಟ್ರೋಫಿಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ಡಿ ತಂಡ ಸಂಪೂರ್ಣವಾಗಿ ತತ್ತರಿಸಿತು. ರುತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ಸಿ ವಿರುದ್ಧ ಇನ್ನಿಂಗ್ಸ್ ಆರಂಭಿಸಿದ 2 ಗಂಟೆಯೊಳಗೆ ಶ್ರೇಯಸ್ ಅಯ್ಯರ್, ದೇವದತ್ ಪಡಿಕಲ್ ಮತ್ತು ಶ್ರೀಕರ್ ಭರತ್ ಪೆವಿಲಿಯನ್‌ಗೆ ಮರಳಿದರು. ಅತ್ತ ಭಾರತ ಬಿ ಪರ ಆಡುತ್ತಿರುವ ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್ ಮತ್ತು ರಿಷಭ್ ಪಂತ್ ಕೂಡ ತೀರಾ ಕಳಪೆ ಪ್ರದರ್ಶನ ತೋರಿದ್ದಾರೆ.

ಅನಂತಪುರದಲ್ಲಿ ಇಂಡಿಯಾ ಸಿ ಮತ್ತು ಇಂಡಿಯಾ ಡಿ ನಡುವಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯ ಸುಮಾರು 9.30ಕ್ಕೆ ಆರಂಭವಾಯಿತು. ಇದಾದ ಬಳಿಕ 20 ಓವರ್‌ಗಳ ಆಟ 11.30ಕ್ಕೆ ಮುಗಿಯುವ ವೇಳೆಗೆ ಅಯ್ಯರ್ 9 ರನ್‌ಗೆ, ಭರತ್ 13 ರನ್‌ಗಳಿಗೆ ಔಟಾದರೆ, ಪಡಿಕ್ಕಲ್ ಖಾತೆ ತೆರೆಯದೆ ನಿರ್ಗಮಿಸಿದರು. ಮತ್ತೊಂದೆಡೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಭ್​ಮನ್ ಗಿಲ್ ತಂಡದ ವಿರುದ್ಧ ಯಶಸ್ವಿ ಜೈಸ್ವಾಲ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಕೆಲವು ಉತ್ತಮ ಹೊಡೆತಗಳನ್ನು ಹೊಡೆದ ನಂತರ 30 ರನ್​ಗೆ ಸುಸ್ತಾಗಿ ಪೆವಿಲಿಯನ್ ಸೇರಿಕೊಂಡರು.

ದುಲೀಪ್ ಟ್ರೋಫಿ ಮೂಲಕ 20 ತಿಂಗಳ ನಂತರ ರಿಷಭ್ ಪಂತ್ ಕೆಂಪು ಚೆಂಡು ಆಡಿದರು. ಈ ಮೂಲಕ ಪುನಃ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಅವರಿಗೆ ಉತ್ತಮ ಅವಕಾಶ ಹೊಂದಿದ್ದರು, ಆದರೆ ಅವರ ಬ್ಯಾಟ್ ಕೆಲಸ ಮಾಡಲಿಲ್ಲ. ಕೇವಲ 7 ರನ್ ಗಳಿಸಿದ್ದಾಗ ಪಂತ್ ಕ್ಯಾಚ್ ನೀಡಿದರು. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿದ ಸರ್ಫರಾಜ್ ಖಾನ್ 9 ರನ್​ಗೆ ಔಟಾದರು. ವಾಷಿಂಗ್ಟನ್ ಸುಂದರ್ 0 ಸುತ್ತಿದರು.

ಅಕ್ಷರ್ ಪಟೇಲ್ ಫಿಫ್ಟಿ

ದುಲೀಪ್ ಟ್ರೋಫಿಯ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ 6 ಸ್ಟಾರ್ ಬ್ಯಾಟರ್​​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. ಆದರೆ ಭಾರತ ಡಿ ಪರ ಆಡುತ್ತಿರುವ ಅಕ್ಷರ್ ಪಟೇಲ್ ತಮ್ಮ ಅದ್ಭುತ ಇನ್ನಿಂಗ್ಸ್‌ನಿಂದ ಅಯ್ಯರ್ ತಂಡವನ್ನು ಮೇಲೆತ್ತಿದರು. ಇವರು 78 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಒಟ್ಟು 86 ರನ್ ಸಿಡಿಸಿ ಆಸರೆಯಾದರು. 48 ರನ್‌ಗಳಾಗುವಷ್ಟರಲ್ಲಿ 6 ವಿಕೆಟ್‌ಗಳು ಪತನಗೊಂಡ ಬಳಿಕ ಅಕ್ಷರ್ ಎಚ್ಚರಿಕೆಯ ಆಟವಾಡಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತ 164 ರನ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.

Whats_app_banner