ಕನ್ನಡ ಸುದ್ದಿ  /  ಕ್ರಿಕೆಟ್  /  ಸೆಮಿಫೈನಲ್​​ನಲ್ಲಿ ಅಫ್ಘಾನಿಸ್ತಾನ ಸೋಲಿಸಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ

ಸೆಮಿಫೈನಲ್​​ನಲ್ಲಿ ಅಫ್ಘಾನಿಸ್ತಾನ ಸೋಲಿಸಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ

South Africa vs Afghanistan: ಟಿ20 ವಿಶ್ವಕಪ್ 2024 ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು 9 ವಿಕೆಟ್​​ಗಳಿಂದ ಸೋಲಿಸಿದ ಸೌತ್ ಆಫ್ರಿಕಾ ಇದೇ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದೆ.

ಸೆಮಿಫೈನಲ್​​ನಲ್ಲಿ ಅಫ್ಘಾನಿಸ್ತಾನ ಸೋಲಿಸಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ
ಸೆಮಿಫೈನಲ್​​ನಲ್ಲಿ ಅಫ್ಘಾನಿಸ್ತಾನ ಸೋಲಿಸಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ

ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಸೌತ್ ಆಫ್ರಿಕಾ ತಂಡವು (South Africa vs Afghanistan) ಟಿ20 ವಿಶ್ವಕಪ್ ಇತಿಹಾಸದಲ್ಲಿ (T20 World Cup History) ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾಗೆ ಇದು ಐಸಿಸಿ ವಿಶ್ವಕಪ್​​ಗಳ ಚೊಚ್ಚಲ ಫೈನಲ್ ಆಗಿದೆ. ಚೊಚ್ಚಲ ಸೆಮೀಸ್ ಪ್ರವೇಶಿಸಿದ್ದ ಆಫ್ಘಾನಿಸ್ತಾನ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. 2024ರ ಟಿ 20 ವಿಶ್ವಕಪ್​ ಅಂತಿಮ ಸುತ್ತಿಗೆ ಸ್ಥಾನ ಭದ್ರಪಡಿಸಿಕೊಂಡ ಹರಿಣಗಳು, ಫೈನಲ್ ಪ್ರವೇಶಿಸುವ ಮತ್ತೊಂದು ತಂಡಕ್ಕೆ ಕಾಯುತ್ತಿವೆ.

ಬೌಲಿಂಗ್ ವಿಭಾಗದಲ್ಲಿ ಮಾರಕ ದಾಳಿ ನಡೆಸಿದ ಆಫ್ರಿಕಾ, ಚೊಚ್ಚಲ ಫೈನಲ್ ಕನಸಿನಲ್ಲಿದ್ದ ಅಫ್ಘಾನಿಸ್ತಾನ ತಂಡವನ್ನು ಕೇವಲ 11.5 ಓವರ್​ಗಳಲ್ಲಿ ಕೇವಲ 56 ರನ್​ಗಳಿಗೆ ಆಲೌಟ್ ಮಾಡಿತು. ಆಫ್ಘನ್​ ತಮಗಿದ್ದ ಸುವರ್ಣಾವಕಾಶವನ್ನು ಕಳೆದುಕೊಂಡಿತು. ಗುಂಪು ಮತ್ತು ಸೂಪರ್​-8 ಹಂತದಲ್ಲಿ ಪ್ರಮುಖ ತಂಡಗಳನ್ನೇ ಮಣಿಸಿ ಬಲಿಷ್ಠ ತಂಡವಾಗಿ ಮಾರ್ಪಟ್ಟಿದ್ದ ರಶೀದ್ ಪಡೆ ಸೆಮೀಸ್​​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿತು. ಮಾರ್ಕ್ರಮ್ ಪಡೆ 8.5 ಓವರ್​ಗಳಲ್ಲಿ 1 ವಿಕೆಟ್​ ನಷ್ಟಕ್ಕೆ 60 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.

57 ರನ್​​ಗಳ ಸಾಧಾರಣ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾಗೆ ಈ ಸ್ಕೋರ್​​ ಸವಾಲಾಗಲಿಲ್ಲ. ಇದರ ಹೊರತಾಗಿಯೂ ಕ್ವಿಂಟನ್ ಡಿ ಕಾಕ್ 5 ರನ್ ಗಳಿಸಿ ಫಜಲ್ಹಕ್ ಫಾರೂಕಿ ಬೌಲಿಂಗ್ ಔಟಾದರು. ಆ ಬಳಿಕ ರೀಜಾ ಹೆಂಡ್ರಿಕ್ಸ್ ಮತ್ತು ನಾಯಕ ಏಡನ್ ಮಾರ್ಕ್ರಮ್ ಅವರು ಉತ್ತಮ ಜೊತೆಯಾಟ ಆಡುವ ಮೂಲಕ ಸುಲಭ ಗೆಲುವು ತಂದುಕೊಟ್ಟರು. ರೀಜಾ 29, ಮಾರ್ಕ್ರಮ್ 23 ರನ್ ಗಳಿಸಿದರು. ಟೂರ್ನಿಯಲ್ಲಿ ಸತತ 8ನೇ ಗೆಲುವು ಸಾಧಿಸಿ ಅಜೇಯವಾಗಿ ಫೈನಲ್​ಗೆ ಲಗ್ಗೆ ಹಾಕಿದೆ. ಪ್ರಸ್ತುತ ಟಿ20 ವಿಶ್ವಕಪ್​ನಲ್ಲಿ ಸೋಲು ಕಾಣದೇ ಫೈನಲ್ ಪ್ರವೇಶಿಸಿದೆ.

ಟ್ರೆಂಡಿಂಗ್​ ಸುದ್ದಿ

ಜೂನ್ 29ರಂದು ನಡೆಯುವ ಫೈನಲ್​​ನಲ್ಲಿ ಸೌತ್​ ಆಫ್ರಿಕಾ ತಂಡವು ಇಂದು (ಜೂನ್ 27) ರಾತ್ರಿ ನಡೆಯುವ ಎರಡನೇ ಸೆಮಿಫೈನಲ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್​ ನಡುವೆ ಗೆಲ್ಲುವ ತಂಡವನ್ನು ಎದುರಿಸಲಿದೆ.

ಅಫ್ಘಾನಿಸ್ತಾನ ಕಳಪೆ ಬ್ಯಾಟಿಂಗ್​

ಲೀಗ್ ಮತ್ತು ಸೂಪರ್-8 ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ರಹಮಾನುಲ್ಲಾ ಗುರ್ಬಾಜ್ ಡಕೌಟ್ ಆಗಿ ಹೊರ ನಡೆದರು. ಇಬ್ರಾಹಿಂ ಜದ್ರಾನ್ 2, ಗುಲ್ಬದೀನ್ ನೈಬ್ 9 ರನ್ ಗಳಿಸಿ ನಿರಾಸೆ ಮೂಡಿಸಿದರು. ಬೌಲರ್​​ಗಳ ದಾಳಿಗೆ ಪತರುಗುಟ್ಟಿದ ಆಫ್ಘನ್, ಯಾವ ಹಂತದಲ್ಲೂ ಚೇತರಿಸಿಕೊಂಡಿಲ್ಲ. ಅಜ್ಮತುಲ್ಲಾ ಓಮರ್ಜಾಯ್ 10, ಮೊಹಮ್ಮದ್ ನಬಿ 0, ನಂಗೆಯಲಿಯಾ ಖರೋಟೆ 2, ಕರೀಮ್ ಜನ್ನತ್ 8, ರಶೀದ್ ಖಾನ್ 8, ನೂರು ಅಹ್ಮದ್ 0, ನವೀನ್ ಉಲ್ ಹಕ್ 2, ಫಜಲ್ಹಕ್ ಫಾರೂಕಿ 2 ರನ್ ಗಳಿಸಿ ನಿರಾಸೆ ಮೂಡಿಸಿದರು.

ಖಡಕ್ ಬೌಲಿಂಗ್ ಪ್ರದರ್ಶನ

ಖಡಕ್ ಬ್ಯಾಟಿಂಗ್ ವಿಭಾಗವನ್ನೇ ಧೂಳೀಪಟಗೊಳಿಸಿದ ದಕ್ಷಿಣ ಆಫ್ರಿಕಾ ಬೌಲರ್​​​ಗಳು, ಅಲ್ಪ ಮೊತ್ತಕ್ಕೆ ನಿಯಂತ್ರಿಸಿದರು. ಮಾರ್ಕೊ ಜೆನ್ಸನ್​ ಅವರು 3 ಓವರ್​​ಗಳಲ್ಲಿ 16 ರನ್ ಬಿಟ್ಟುಕೊಟ್ಟು​ 3 ವಿಕೆಟ್​, ಕಗಿಸೋ ರಬಾಡ ತಾನೆಸೆದ 3 ಓವರ್​​​​ಗಳಲ್ಲಿ​ 14 ರನ್​ ನೀಡಿ 2 ವಿಕೆಟ್​ ಪಡೆದರು. ಆನ್ರಿಚ್​ ನೋಕಿಯಾ 3 ಓವರ್​ ಬೌಲಿಂಗ್ ಮಾಡಿ 7 ರನ್​ ಬಿಟ್ಟುಕೊಟ್ಟು 2 ವಿಕೆಟ್​ ಕಬಳಿಸಿದರು. ತಬ್ರೇಜ್​ ಶಮ್ಸಿ 1.5 ಓವರ್​​ಗಳಲ್ಲಿ 6 ರನ್​ ನೀಡಿ 3 ವಿಕೆಟ್​ ಉರುಳಿಸಿ ಮಿಂಚಿದರು.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ