ಆ ಒಂದು ಪೋಸ್ಟ್ನಿಂದ ಹರಿದಾಡ್ತಿದೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಡಿವೋರ್ಸ್ ಸುದ್ದಿ! ಫ್ಯಾನ್ಸ್ ಅರ್ಥ ಮಾಡಿಕೊಂಡಿದ್ದೇ ಬೇರೆ
Virat Kohli: ಸುಮಾರು 3 ದಶಕಗಳ ದಾಂಪತ್ಯದ ನಂತರ ಎಆರ್ ರೆಹಮಾನ್ ಅವರ ಪತ್ನಿ ಸಾಯಿರಾ ಬಾನು ಅವರ ಡಿವೋರ್ಸ್ ಸುದ್ದಿಯ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಂಚಿಕೊಂಡ ಪೋಸ್ಟ್, ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಹಬ್ಬಿದೆ.
ಟೀಮ್ ಇಂಡಿಯಾ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ, ಪತ್ನಿ ಅನುಷ್ಕಾ ಶರ್ಮಾ (Virat Kohli Anushka Sharma Divorce) ಜೋಡಿ ವಿಚ್ಛೇದನ ಪಡೆಯಲಿದ್ದಾರಂತೆ! ಹೀಗೋಂದು ವದಂತಿ ಹಬ್ಬಿದೆ. ಇದಕ್ಕೆ ಕಾರಣ ನವೆಂಬರ್ 20ರಂದು ಕೊಹ್ಲಿ ಹಂಚಿಕೊಂಡಿರುವ ಪೋಸ್ಟ್. ಈ ದಂಪತಿ ಅನ್ಯೋನ್ಯವಾಗಿದ್ದರೂ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಬೇರೆಯೇ ಇದೆ. ಕೊಹ್ಲಿ ಮಾಡಿದ್ದ ಪೋಸ್ಟ್ ಅನ್ನು ತಪ್ಪಾಗಿ ಗ್ರಹಿಸಿರುವ ನೆಟ್ಟಿಗರು ವಿಚ್ಛೇದನ ಘೋಷಿಸಲಿದ್ದಾರೆ ಎಂದು ಉನ್ಮಾದ ಸೃಷ್ಟಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಮತ್ತು ಪತ್ನಿ ಸಾಯಿರಾ ಬಾನು ವಿಚ್ಛೇದನ ಪಡೆದ ಬಳಿಕ ಕೊಹ್ಲಿ ಪೋಸ್ಟ್ ಹಂಚಿಕೊಂಡಿದ್ದು ಊಹಾಪೋಹ ಸುದ್ದಿಗೆ ಕಾರಣವಾಗಿದೆ. ಅದೂ ಅಲ್ಲದೆ, ಕೊಹ್ಲಿ ನಿವೃತ್ತಿ ಬಗ್ಗೆಯೂ ಗೊಂದಲ ಸೃಷ್ಟಿಸಿದೆ.
ಕೊಹ್ಲಿ ಮತ್ತು ಅನುಷ್ಕಾ ಡಿವೋರ್ಸ್ ಪಡೆಯುತ್ತಾರೆ ಎನ್ನುವ ಸುದ್ದಿ ನವೆಂಬರ್ 20ರಂದು ಜೀವ ಪಡೆದುಕೊಂಡಿತು. ಟ್ವಿಟರ್ನಲ್ಲೂ ಟ್ರೆಂಡ್ ಆಗುವ ಮಟ್ಟಕ್ಕೆ ಸದ್ದು ಮಾಡಿತು. #VirushkaDivorce ಎಂಬ ಹ್ಯಾಶ್ಟ್ಯಾಗ್ ಕೂಡ ಇತ್ತು. ಸಾಕಷ್ಟು ಮಂದಿ ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದರು. ಯಾವ ಕಾರಣಕ್ಕೆ ವಿಚ್ಛೇದನ ಪಡೆಯಲು ಈ ಜೋಡಿ ಮುಂದಾಗಿದೆ ಎಂದು ತಿಳಿದುಕೊಳ್ಳಲು ಫ್ಯಾನ್ಸ್ ಗೂಗಲ್ ಮಾಡಿದ್ದರು. ಅಭಿಮಾನಿಗಳಂತೂ ಆತಂಕಕ್ಕೆ ಒಳಗಾಗಿದ್ದರು. ಆದರೆ ಇದು ಸುಳ್ಳು ಸುದ್ದಿ. ಕೆಲವರು ಪೋಸ್ಟ್ ಅನ್ನು ತಪ್ಪಾಗಿ ಅರ್ಥೈಸಿಕೊಂಡು ವದಂತಿ ಹಬ್ಬಿಸಿದ್ದಾರೆ. ಕೊಹ್ಲಿ ಮಾಡಿರುವ ಪೋಸ್ಟ್ನಲ್ಲಿ ಇರುವ ವಿಚಾರವೇ ಬೇರೆ, ಅಭಿಮಾನಿಗಳು ಹಬ್ಬಿಸಿರುವ ವಿಚಾರವೇ ಬೇರೆ. ಇಷ್ಟಕ್ಕೂ ಆ ಪೋಸ್ಟ್ನಲ್ಲಿ ಏನಿದೆ?
ವಿರಾಟ್ ಪೋಸ್ಟ್ನ ಅಸಲಿಯತ್ತು ಇಲ್ಲಿದೆ ನೋಡಿ
ವಿರಾಟ್ ಕೊಹ್ಲಿ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಬಟ್ಟೆ ಬ್ರಾಂಡ್ 'ರಾಗ್ನ್' (WROGN) ಜೊತೆಗಿನ ಸಂಬಂಧದ ಕುರಿತು. ಪೋಸ್ಟ್ನಲ್ಲಿ ಬರೆದಿದ್ದು ಹೀಗೆ... ಹಿಂತಿರುಗಿ ನೋಡಿದರೆ ನಾವು ಯಾವಾಗಲೂ ಸ್ವಲ್ಪ ಭಿನ್ನವಾಗಿರುತ್ತೇವೆ. ನಾವು ಹಲವು ವರ್ಷಗಳಲ್ಲಿ ಬದಲಾಗಿದ್ದೇವೆ. ಆದರೆ, ಯಾವಾಗಲೂ ನಮ್ಮ ರೀತಿಯಲ್ಲಿ ಕೆಲಸ ಮಾಡಿದ್ದೇವೆ. ಹೀಗಾಗಿ ಕೆಲವರು ನಮ್ಮ ಕ್ರೇಜಿ ಎಂದು ಕರೆದಿದ್ದಾರೆ. ಆದರೆ ಇತರರು ಅದನ್ನು ಅರ್ಥಮಾಡಿಕೊಳ್ಳಲಿಲ್ಲ. ನಮ್ಮನ್ನು ನಾವು ಕಂಡುಹಿಡಿಯುವಲ್ಲಿ ನಿರತರಾಗಿದ್ದೆವು. ನಂತರ ವರ್ಷಗಳ ಏರಿಳಿತಗಳು ಮತ್ತು ಸಾಂಕ್ರಾಮಿಕ ರೋಗವು ನಮ್ಮನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ ಎಂದು ಬ್ರಾಂಡ್ ಬಗ್ಗೆ 10ಕ್ಕೂ ಹೆಚ್ಚು ವರ್ಷಗಳ ಸಂಬಂಧದ ಕುರಿತು ಮಾತನಾಡಿದ್ದಾರೆ. ಆದರೆ ಇದು ಭಾವನಾತ್ಮಕವಾಗಿದ್ದ ಕಾರಣ ವಿಚ್ಛೇದನ ಮತ್ತು ನಿವೃತ್ತಿ ಎಂದು ಅಭಿಮಾನಿಗಳು ತಪ್ಪಾಗಿ ಗ್ರಹಿಸಿದ್ದಾರೆ.
ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆ
ಈ ಪೋಸ್ಟ್ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಕೊಹ್ಲಿ ಡಿವೋರ್ಸ್ ಕೊಡ್ತಿದ್ದಾರಾ? ನಿವೃತ್ತಿ ಆಗುತ್ತೀದ್ದೀರಾ ಎಂದು ಅಭಿಮಾನಿಗಳು ಆತಂಕಗೊಂಡು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಕೆಲವರು ಜಾಹೀರಾತು ಪೋಸ್ಟ್ ಎಂದು ತಿಳಿದು ಸ್ಪಷ್ಟನೆಗಳನ್ನು ನೀಡಿದ್ದಾರೆ. ಇದರಿಂದ ವದಂತಿ ಹಬ್ಬಿಸಿದವರು ಸತ್ಯ ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ. ವಿರಾಟ್ ಮತ್ತು ಅನುಷ್ಕಾ 2017ರ ಡಿಸೆಂಬರ್ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಸೆಲೆಬ್ರೆಟಿ ಕಪಲ್ಸ್ಗೆ ಮುದಾದ್ದ ಇಬ್ಬರು ಮಕ್ಕಳಿದ್ದಾರೆ. ಮಗಳು ವಮಿಕಾ, ಮಗ ಅಕಾಯ್. ಇದೇ ವರ್ಷ ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ವಿರಾಟ್ ಪ್ರಸ್ತುತ ಬಾರ್ಡರ್ ಗವಾಸ್ಕರ್ ಟ್ರೋಪಿ ಆಡುತ್ತಿದ್ದು, ಮೊದಲ ಟೆಸ್ಟ್ನ ಪ್ರಥಮ ಇನ್ನಿಂಗ್ಸ್ನಲ್ಲಿ 5 ರನ್ ಗಳಿಸಿದ್ದಾರೆ.