ಮಿಚೆಲ್ ಸ್ಟಾರ್ಕ್ ಮೇಲೆ ಕೆಕೆಆರ್​ 24.75 ಕೋಟಿ ಸುರಿದಾಗ ಕುಹಕ ನಗೆಬೀರಿದ್ದ ಎಂಐ ಓನರ್ಸ್; ಮಂಗಳಾರತಿ ಮಾಡಿದ ಫ್ಯಾನ್ಸ್
ಕನ್ನಡ ಸುದ್ದಿ  /  ಕ್ರಿಕೆಟ್  /  ಮಿಚೆಲ್ ಸ್ಟಾರ್ಕ್ ಮೇಲೆ ಕೆಕೆಆರ್​ 24.75 ಕೋಟಿ ಸುರಿದಾಗ ಕುಹಕ ನಗೆಬೀರಿದ್ದ ಎಂಐ ಓನರ್ಸ್; ಮಂಗಳಾರತಿ ಮಾಡಿದ ಫ್ಯಾನ್ಸ್

ಮಿಚೆಲ್ ಸ್ಟಾರ್ಕ್ ಮೇಲೆ ಕೆಕೆಆರ್​ 24.75 ಕೋಟಿ ಸುರಿದಾಗ ಕುಹಕ ನಗೆಬೀರಿದ್ದ ಎಂಐ ಓನರ್ಸ್; ಮಂಗಳಾರತಿ ಮಾಡಿದ ಫ್ಯಾನ್ಸ್

Mitchell Starc: ಐಪಿಎಲ್​-2024 ಫೈನಲ್​ನಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ ಮಿಚೆಲ್ ಸ್ಟಾರ್ಕ್​ ಮೇಲೆ ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 24.75 ಕೋಟಿ ಸುರಿದಾಗ ಮುಂಬೈ ಇಂಡಿಯನ್ಸ್ ಮಾಲೀಕರು ಕುಹಕ ನಗೆ ಬೀರಿದ್ದರು.

ಮಿಚೆಲ್ ಸ್ಟಾರ್ಕ್ ಮೇಲೆ ಕೆಕೆಆರ್​ 24.75 ಕೋಟಿ ಸುರಿದಾಗ ಕುಹಕ ನಗೆಬೀರಿದ್ದ ಎಂಐ ಓನರ್ಸ್; ಮಂಗಳಾರತಿ ಮಾಡಿದ ಫ್ಯಾನ್ಸ್
ಮಿಚೆಲ್ ಸ್ಟಾರ್ಕ್ ಮೇಲೆ ಕೆಕೆಆರ್​ 24.75 ಕೋಟಿ ಸುರಿದಾಗ ಕುಹಕ ನಗೆಬೀರಿದ್ದ ಎಂಐ ಓನರ್ಸ್; ಮಂಗಳಾರತಿ ಮಾಡಿದ ಫ್ಯಾನ್ಸ್

Mitchell Starc: ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ 2024ರ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​ ಫೈನಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್​ಗಳಿಂದ ಪರಾಭವಗೊಳಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ 3ನೇ ಚಾಂಪಿಯನ್ ಆಯಿತು. ಮಿಚೆಲ್​ ಸ್ಟಾರ್ಕ್​ ಅವರ ಖಡಕ್ ಬೌಲಿಂಗ್ ದಾಳಿಯ ನೆರವಿನಿಂದ ಎಸ್​ಆರ್​​ಹೆಚ್​ ಶರಣಾಯಿತು. ಮೂರು ಓವರ್​​ಗಳಲ್ಲಿ 14 ರನ್ ಬಿಟ್ಟುಕೊಟ್ಟು 2 ವಿಕೆಟ್ ಉರುಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಫೈನಲ್ ಮಾತ್ರವಲ್ಲ, ಕ್ವಾಲಿಫೈಯರ್-1ರ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ ಮಿಚೆಲ್ ಸ್ಟಾರ್ಕ್​ ಅವರ ವಿಚಾರವಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲೀಕರು ನೀತಾ ಅಂಬಾನಿ ಮತ್ತು ಮಗ ಆಕಾಶ್ ಅಂಬಾನಿ ಕುಹಕ ನಗೆ ಬೀರಿದ್ದರು. 2023ರ ಡಿಸೆಂಬರ್​ 19 ರಂದು ನಡೆದ ಐಪಿಎಲ್-2024 ಮಿನಿ ಹರಾಜಿನಲ್ಲಿ ಕೆಕೆಆರ್ ತಂಡವು ಆಸ್ಟ್ರೇಲಿಯಾ ಯಾರ್ಕರ್ ಸ್ಪೆಷಲಿಸ್ಟ್ ಮಿಚೆಲ್ ಸ್ಟಾರ್ಕ್ ಮೇಲೆ 24.75 ಕೋಟಿ ಸುರಿದಾಗ ಎಂಐ ಓನರ್ಸ್​ ವ್ಯಂಗ್ಯವಾಗಿ ನಕ್ಕಿದ್ದರು.

ಆದರೆ ಅದೇ ದುಬಾರಿ ಆಟಗಾರ ಇಂದು ಕೋಲ್ಕತ್ತಾ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಮೇಜರ್​ ಪಾತ್ರವನ್ನು ನಿಭಾಯಿಸಿದ್ದಾರೆ. ಐಪಿಎಲ್​ ಇತಿಹಾಸದಲ್ಲಿ ದುಬಾರಿ ಆಟಗಾರ ಎಂಬ ದಾಖಲೆಗೆ ಒಳಗಾದ ಮಿಚೆಲ್ ಸ್ಟಾರ್ಕ್​, ಐಪಿಎಲ್ ಮೊದಲಾರ್ಧದಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟು ಕಳಪೆ ಬೌಲರ್​ ಎಂಬ ಕುಖ್ಯಾತಿಗೆ ಒಳಗಾಗಿದ್ದರು. ಆದರೆ ದ್ವಿತಿಯಾರ್ಧದ ಐಪಿಎಲ್​ನಲ್ಲಿ ಬಲಿಷ್ಠವಾಗಿ ಪುನರಾಗಮನ ಮಾಡಿದ ಸ್ಟಾರ್ಕ್​ ವಿಕೆಟ್ ಬೇಟೆಯಾಡಿದರು.

ಬಿಗ್​ ಮ್ಯಾಚ್​ ಪ್ಲೇಯರ್ ಸ್ಟಾರ್ಕ್​

ಮಿಚೆಲ್ ಸ್ಟಾರ್ಕ್​ ದೊಡ್ಡ ಪಂದ್ಯಗಳ ಪ್ಲೇಯರ್​ ಆಗಿದ್ದಾರೆ. ಲೀಗ್​ ಪಂದ್ಯಗಳಲ್ಲಿ ಅತ್ಯುತ್ತಮ ನಿರ್ವಹಣೆ ತೋರದಿದ್ದರೂ ಫೈನಲ್, ಸೆಮಿ ಫೈನಲ್ ಪಂದ್ಯಗಳಲ್ಲಿ ಮ್ಯಾಚ್​ ವಿನ್ನರ್​ ಮತ್ತು ಗೇಮ್​ ಚೇಂಜರ್ ಆಗಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್​ ಪಂದ್ಯಗಳಲ್ಲಿ 8ರಲ್ಲಿ 10 ವಿಕೆಟ್ ಪಡೆದಿದ್ದ ಸ್ಟಾರ್ಕ್​, 2 ನಾಕೌಟ್​ ಪಂದ್ಯಗಳಲ್ಲಿ 6 ವಿಕೆಟ್ ಉರುಳಿಸಿದರು. ಐಪಿಎಲ್ 2024ರ ಲೀಗ್​ ಪಂದ್ಯಗಳಲ್ಲಿ 12ಕ್ಕೆ 12 ವಿಕೆಟ್ ಪಡೆದಿದ್ದ ವೇಗಿ, 5 ಪ್ಲೇಆಫ್ ಪಂದ್ಯಗಳಲ್ಲಿ 5 ವಿಕೆಟ್ ಉರುಳಿಸಿ ಮಿಂಚಿದರು.

ಕುಹಕ ನಗೆ ಬೀರಿದ್ದ ಅಂಬಾನಿ ತಂಡಕ್ಕೆ 10ನೇ ಸ್ಥಾನ

ಮುಂಬೈ ಇಂಡಿಯನ್ಸ್ ಮಾಲೀಕರು ವ್ಯಂಗ್ಯದ ನಗೆ ಬೀರಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕ್ರಿಕೆಟ್ ಪ್ರಿಯರು ಎಂಐ ಮಾಲೀಕರ ವಿರುದ್ಧ ಕಿಡಿಕಾರಿದ್ದಾರೆ. ಕೆಕೆಆರ್​ 24.75 ಕೋಟಿ ಕೊಟ್ಟು ಸ್ಟಾರ್ಕ್​ ಖರೀದಿಸಿದ ಅವಧಿಯಲ್ಲಿ ನಕ್ಕಿದ್ದ ನೀತಾ ಅಂಬಾನಿ ಮಾಲೀಕತ್ವದ ತಂಡವು 2024ರ ಐಪಿಎಲ್​ನಲ್ಲಿ ಲೀಗ್​​ನಲ್ಲಿ ಹೀನಾಯ ಪ್ರದರ್ಶನದೊಂದಿಗೆ 10ನೇ ಸ್ಥಾನ ಪಡೆದಿದೆ. ಹಾರ್ದಿಕ್ ನಾಯಕತ್ವದಲ್ಲಿ ಆಡಿದ 14 ಪಂದ್ಯಗಳಲ್ಲಿ 4 ಗೆಲುವು, 10 ಸೋಲಿನೊಂದಿಗೆ 10ನೇ ಸ್ಥಾನ ಪಡೆದಿತ್ತು.

ಮಿಚೆಲ್ ಸ್ಟಾರ್ಕ್​ ದಾಖಲೆ

ಮೊದಲ ಕ್ವಾಲಿಫೈಯರ್ ಮತ್ತು ಫೈನಲ್​​ನಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ಮಿಚೆಲ್ ಸ್ಟಾರ್ಕ್​ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ (POTM) ಪ್ರಶಸ್ತಿಯನ್ನು ಒಂದೇ ಋತುವಿನಲ್ಲಿ ಎರಡು ಬಾರಿ ಗೆದ್ದುಕೊಂಡ ಮೊದಲ ಆಟಗಾರನಾಗುವ ಮೂಲಕ ಇತಿಹಾಸ ಪುಸ್ತಕಗಳಲ್ಲಿ ತನ್ನ ಹೆಸರನ್ನು ಬರೆದಿದ್ದಾರೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸ್ಟಾರ್ಕ್​ ಮೂರು ವಿಕೆಟ್ ಪಡೆದಿದ್ದರು.

 

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

 

Whats_app_banner