ಕನ್ನಡ ಸುದ್ದಿ  /  ಕ್ರಿಕೆಟ್  /  Hardik Natasa: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ನತಾಶಾ ಸ್ಟಾಂಕೋವಿಕ್ ಡಿವೋರ್ಸ್ ನಿಜನಾ? ಈವರೆಗೆ ತಿಳಿಯಬೇಕಾದ ಅಂಶಗಳಿವು

Hardik Natasa: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ನತಾಶಾ ಸ್ಟಾಂಕೋವಿಕ್ ಡಿವೋರ್ಸ್ ನಿಜನಾ? ಈವರೆಗೆ ತಿಳಿಯಬೇಕಾದ ಅಂಶಗಳಿವು

ಟೀಂ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತು ಇವರ ಪತ್ನಿ ನತಾಶಾ ಡಿವೋರ್ಸ್ ಹಂತಕ್ಕೆ ಬಂದಿದ್ದಾರೆ ಎಂದು ವಿವಿಧ ಮಾಧ್ಯಮಗಳಲ್ಲಿ ವದಂತಿಗಳು ಹರಿದಾಡುತ್ತಿವೆ. ಇದರ ನಡುವೆ ಹಲವು ಗಮನಾರ್ಹ ಅಂಶಗಳು ಇಲ್ಲಿವೆ.

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ನತಾಶಾ ಸ್ಟಾಂಕೋವಿಕ್ ಡಿವೋರ್ಸ್ ನಿಜನಾ? ಈವರೆಗೆ ತಿಳಿಯಬೇಕಾದ ಅಂಶಗಳಿವು
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ನತಾಶಾ ಸ್ಟಾಂಕೋವಿಕ್ ಡಿವೋರ್ಸ್ ನಿಜನಾ? ಈವರೆಗೆ ತಿಳಿಯಬೇಕಾದ ಅಂಶಗಳಿವು

ಟೀಂ ಇಂಡಿಯಾದ (Team India) ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಇತ್ತೀಚೆಗೆ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಅನುಭವಿಸುತ್ತಿದ್ದಾರೆ. ಹೇಳಿಕೊಳ್ಳುವಂತ ಮಟ್ಟದಲ್ಲಿ ಆಟ ಅವರ ಕೈ ಹಿಡಿಯುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಪಾಂಡ್ಯ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಹಾರ್ದಿಕ್ ನಾಯಕತ್ವದಲ್ಲಿ ಐಪಿಎಲ್ 2024 ರಲ್ಲಿ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ ಕಳಪೆ ಪ್ರದರ್ಶನ ನೀಡಿತ್ತು. ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ ಎಂಬ ಆರೋಪದ ನಡುವೆಯೇ ಐಸಿಸಿ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಪಾಂಡ್ಯಗೆ ಸ್ಥಾನ ನೀಡಿದ ಬಗ್ಗೆಯೂ ಬಾರಿ ಚರ್ಚೆಯಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಹಾರ್ದಿಕ್ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿರುವುದಾಗಿ ಹಲವು ಮಾಧ್ಯಮಗಳು ವರದಿ ಮಾಡಿವೆ.

ಟ್ರೆಂಡಿಂಗ್​ ಸುದ್ದಿ

ಹಾರ್ದಿಕ್ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ (Hardik Pandya Natasa Stankovic Divorce Rumour) ನಡುವೆ ಪ್ರತ್ಯೇಕತೆಯ ವದಂತಿಗಳನ್ನು ರೆಡ್ಡಿಟ್ ಪೋಸ್ಟ್ ಹುಟ್ಟುಹಾಕಿದೆ. ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್‌ಗಳ ಪ್ರಕಾರ, ನತಾಶಾ ತನ್ನ ಇನ್ಸ್ಟಾಗ್ರಾಮ್‌ ಖಾತೆಯಿಂದ ಹಾರ್ದಿಕ್ ಅವರ ಎಲ್ಲಾ ಹಳೆಯ ಫೋಟೋಗಳನ್ನು ತೆಗೆದುಹಾಕಿದ್ದಲ್ಲದೆ, ಅವರ ಹೆಸರನ್ನು ತನ್ನ ಬಯೋದಿಂದ ತೆಗೆದುಹಾಕಿದ್ದಾರೆ. ಅಷ್ಟೇ ಅಲ್ಲದೆ, ಅವರು ಐಪಿಎಲ್ 2024ರ ಟೂರ್ನಿಯ ಪಂದ್ಯಗಳಿಗೆ ಗೈರು ಹಾಜರಾಗುವ ಮೂಲಕ ಹಾರ್ದಿಕ್ ಮತ್ತು ಪತ್ನಿ ನತಾಶ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದನ್ನು ಒತ್ತಿ ಒತ್ತಿ ಹೇಳುವಂತಿದೆ.

ಹಾರ್ದಿಕ್ ನತಾಶಾ ನಡುವೆ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಪುಷ್ಟಿ ನೀಡಿದ ಈ ಬೆಳವಣಿಗೆಗಳು

  • ಟೀಂ ಇಂಡಿಯಾದ ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನಟಿ ನತಾಶಾ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪರಸ್ಪರ ಪೋಸ್ಟ್ ಮಾಡುತ್ತಿಲ್ಲ

ಇದನ್ನೂ ಓದಿ: ದೂರಾ ದೂರ ಎರಡು ತೀರ.. ಹಾರ್ದಿಕ್ ಪಾಂಡ್ಯ ನತಾಶಾ ಡಿವೋರ್ಸ್‌ ಗಾಸಿಪ್‌; ಆಸ್ತಿಯಲ್ಲಿ ಶೇ 70ರಷ್ಟು ನಟಿಗೆ ನೀಡಲಿದ್ದಾರಾ ಕ್ರಿಕೆಟಿಗ?

  • ಈ ಹಿಂದೆ ನತಾಶಾ ತನ್ನ ಐಜಿಯಲ್ಲಿ ನತಾಶಾ ಸ್ಟಾಂಕೋವಿಕ್ ಪಾಂಡ್ಯ ಅಂತ ಹೆಸರನ್ನು ಹೊಂದಿದ್ದರು. ಆದರೆ ಈಗ ಪಾಂಡ್ಯ ಹೆಸರನ್ನು ತೆಗೆದುಹಾಕಿದ್ದಾರೆ.
  • ಮಾರ್ಚ್ 4 ರಂದು ನತಾಶಾ ಜನ್ಮದಿನವಿತ್ತು. ಹಾರ್ದಿಕ್ ಅವರು ಪತ್ನಿಗೆ ಶುಭ ಕೋರುವ ಯಾವುದೇ ಪೋಸ್ಟ್ ಅನ್ನು ಅಂದು ಹಂಚಿಕೊಂಡಿಲ್ಲ
  • ಪುತ್ರ ಅಗಸ್ತ್ಯ ಜೊತೆಗಿರುವ ಪೋಸ್ಟ್ ಹೊರತುಪಡಿಸಿ ತನ್ನ ಮತ್ತು ಹಾರ್ದಿಕ್ ಅವರ ಇತ್ತೀಚಿನ ಎಲ್ಲಾ ಪೋಸ್ಟ್‌ಗಳನ್ನು ನತಾಶಾ ಜಾಲತಾಣಗಳಿಂದ ಡಿಲೀಟ್ ಮಾಡಿದ್ದಾರೆ
  • 2024ರ ಐಪಿಎಲ್‌ನ ಯಾವುದೇ ಪಂದ್ಯದಲ್ಲೂ ಹಾರ್ದಿಕ್ ಪಾಂಡ್ಯ ಅವರ ಪತ್ನಿ ನತಾಶಾ ಕಾಣಿಸಿಕೊಂಡಿಲ್ಲ. ಈ ಹಿಂದಿನ ಆವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ನಟಿ ನತಾಶಾ ಸ್ಟಾಂಕೋವಿಕ್- ಹಾರ್ದಿಕ್‌ ಪಾಂಡ್ಯ ಸಂಬಂಧದಲ್ಲಿ ಬಿರುಕು? ಹೆಸರು ಬದಲಾವಣೆ, ಐಪಿಎಲ್‌ಗೆ ಗೈರು ಸೇರಿದಂತೆ ಇಲ್ಲಿದೆ ಹಲವು ಸಾಕ್ಷಿ

  • ಹಾರ್ದಿಕ್ ಅವರ ಪಾಲ್ಗೊಳ್ಳುವ ಐಪಿಎಲ್ ತಂಡದ ಯಾವುದೇ ಸ್ಟೋರಿಗಳನ್ನು ನತಾಶಾ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಲ್ಲ. ಈ ಹಿಂದೆ ಪೋಸ್ಟ್ ಮಾಡುತ್ತಿದ್ದರು.
  • ಆದರೆ ಹಾರ್ದಿಕ್ ಅವರ ಸಹೋದರ ಕೃನಾಲ್ ಮತ್ತು ಪತ್ನಿ ಪಂಖುರಿ ಇನ್ನೂ ನತಾಶಾ ಅವರ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುತ್ತಿದ್ದರು. ಹೀಗಾಗಿ ಹಾರ್ದಿಕ್ ಮತ್ತು ನತಾಶಾ ನಡುವೆ ಖಂಡಿತವಾಗಿಯೂ ಏನೋ ತಪ್ಪಾಗಿದೆ ಎಂದು ರೆಡ್ಡಿಟ್ ಪೋಸ್ಟ್ ಹೇಳಿದೆ
  • ಪಾಂಡ್ಯ ತನ್ನ ಪತ್ನಿಗೆ ವಿಚ್ಛೇದನ ನೀಡಿದರೆ ಜೀವನಾಂಶವನ್ನು ನೀಡಿದರೆ ತನ್ನ ಆಸ್ತಿಯ ಶೇಕಡಾ 70 ರಷ್ಟು ಕಳೆದುಕೊಳ್ಳಬಹುದು ವರದಿಯಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ