ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ಅಕ್ಟೋಬರ್ 5, 2023 ರಿಂದ ಆರಂಭವಾಗುತ್ತವೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಕಳೆದ ಋತುವಿನ ರನ್ನರ್ ಅಪ್ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಬಾರಿಯ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯು ವಿಶ್ವಕಪ್‌ನ 13 ನೇ ಆವೃತ್ತಿಯಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (International Cricket Council - ICC) ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಏಕದಿನ ಅಂತಾರಾಷ್ಟ್ರೀಯ (ODI) ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸುತ್ತದೆ. ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ಈ ಬಾರಿ ಭಾರತದಲ್ಲಿ ನಡೆಸಲಾಗುತ್ತಿದೆ. ಇದನ್ನು ಮೂಲತಃ ಫೆಬ್ರವರಿಯಿಂದ ಮಾರ್ಚ್ 2023 ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್ ಸೋಂಕಿನಿಂದಾಗಿ ಮುಂದೂಡಲಾಗಿತ್ತು. 2019ರ ಹಾಲಿ ಚಾಂಪಿಯನ್ ಇಂಗ್ಲೆಂಡ್ ಸೇರಿದಂತೆ 10 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ. 1987, 1996 ಮತ್ತು 2011ರಲ್ಲಿ ಭಾರತ ಉಪಖಂಡದ ಇತರ ದೇಶಗಳೊಂದಿಗೆ ಪಂದ್ಯಾವಳಿಯ ಸಹ-ಆತಿಥ್ಯ ವಹಿಸಿದ್ದ ಭಾರತವು ಸಂಪೂರ್ಣವಾಗಿ ತನ್ನದೇ ಆತಿಥ್ಯದಲ್ಲಿ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದು ಇದೇ ಮೊದಲು. ನವೆಂಬರ್ 19, 2023 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಸೆಮಿಫೈನಲ್ ಪಂದ್ಯಗಳು ಮುಂಬೈನ ವಾಂಖೆಡೆ ಸ್ಟೇಡಿಯಂ ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಈ ಆವೃತ್ತಿಯ ಅಡಿಬರಹ "ಇದು ಒಂದು ದಿನ ತೆಗೆದುಕೊಳ್ಳುತ್ತದೆ". ಮೂಲತಃ, ಪಂದ್ಯಾವಳಿಯನ್ನು ಫೆಬ್ರವರಿ 9 ರಿಂದ ಮಾರ್ಚ್ 26, 2023 ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಕೋವಿಡ್-19 ಕಾರಣದಿಂದಾಗಿ ಪಂದ್ಯಗಳ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಿದೆ. ತರುವಾಯ, ಇದನ್ನು ಅಕ್ಟೋಬರ್ ಮತ್ತು ನವೆಂಬರ್‌ಗೆ ವರ್ಗಾಯಿಸಲಾಗುವುದು ಎಂದು ಜುಲೈ 2020 ರಲ್ಲಿ ಘೋಷಿಸಲಾಯಿತು. ICC ಪಂದ್ಯಾವಳಿಯ ವೇಳಾಪಟ್ಟಿಯನ್ನು 27ನೇ ಜೂನ್ 2023 ರಂದು ಬಿಡುಗಡೆ ಮಾಡಿತು.
ಈ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡವನ್ನು ಕಳುಹಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರಾಕರಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿವಾದಾತ್ಮಕವಾಗಿ ಪಂದ್ಯಾವಳಿಯನ್ನು ಬಹಿಷ್ಕರಿಸಿತು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪ್ರಸ್ತಾಪಿಸಿದ ಹೈಬ್ರಿಡ್ ಮಾದರಿಯನ್ನು ಬಳಸಿಕೊಂಡು ಪಂದ್ಯಾವಳಿಯನ್ನು ಆಯೋಜಿಸಲಾಗುವುದು ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಘೋಷಿಸಿದ ನಂತರ ಜೂನ್ 2023 ರಲ್ಲಿ ಏಷ್ಯಾಕಪ್ ವಿಚಾರದಲ್ಲಿದ್ದ ಗೊಂದಲ ಪರಿಹಾರವಾಯಿತು. ಏಷ್ಯಾಕಪ್ ಕ್ರಿಕೆಟ್‌ನ 13 ಪಂದ್ಯಗಳ ಪೈಕಿ ಒಂಬತ್ತು ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯುತ್ತಿವೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆಗಸ್ಟ್ 30 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ಏಷ್ಯಾಕಪ್ ವಿಚಾರ ಅಂತಿರಲಿ, ಈಗ ನಾವು ವಿಶ್ವಕಪ್ ಕಡೆಗೆ ಗಮನ ಕೊಡೋಣ. ಹಿಂದಿನ ವಿಶ್ವಕಪ್‌ನಂತೆ ಈ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಲಿವೆ. ಕ್ರಿಕೆಟ್ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸೂಪರ್ ಲೀಗ್ ಮುಖ್ಯ ಮಾರ್ಗವಾಗಿದೆ. ಸೂಪರ್ ಲೀಗ್‌ನ 13 ತಂಡಗಳಲ್ಲಿ ಅಗ್ರ ಎಂಟು ತಂಡಗಳು ಸ್ವಯಂಚಾಲಿತವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತವೆ.
ಆರನೇ ಸ್ಥಾನದಲ್ಲಿರುವ ಭಾರತಕ್ಕೆ ಈ ಬಾರಿ ವಿಶ್ವಕಪ್‌ನಲ್ಲಿ ಸ್ಪರ್ಧಿಸುವ ಸ್ಥಾನ ಖಚಿತವಾಯಿತು. 8 ತಂಡಗಳನ್ನು ಆಯ್ಕೆ ಮಾಡುವುದರೊಂದಿಗೆ, ಉಳಿದ ಎರಡು ಸ್ಥಾನಗಳಿಗೆ ತಂಡಗಳನ್ನು ಆಯ್ಕೆ ಮಾಡಲು ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ನಡೆಸಲಾಯಿತು. ನೆದರ್‌ಲೆಂಡ್ಸ್ ಮತ್ತು ಶ್ರೀಲಂಕಾ ಅವಕಾಶ ಪಡೆದವು. ಆದರೆ ಸ್ಕಾಟ್ಲೆಂಡ್ ವಿರುದ್ಧದ ಸೋಲಿನ ನಂತರ ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ಅರ್ಹತೆ ಪಡೆಯಲು ವಿಫಲವಾಯಿತು. ಇದು ವೆಸ್ಟ್‌ಇಂಡೀಸ್ ಭಾಗವಹಿಸದ ಮೊದಲ ವಿಶ್ವಕಪ್ ಸರಣಿಯಾಗಿದೆ. ಐಸಿಸಿ ಪೂರ್ಣ ಸದಸ್ಯರಾದ ಐರ್ಲೆಂಡ್ ಮತ್ತು ಜಿಂಬಾಬ್ವೆ ಸಹ ಈ ಬಾರಿ ಅರ್ಹತೆ ಗಳಿಸಲಿಲ್ಲ. ಅಂದರೆ ನಾಕೌಟ್ ಅರ್ಹತಾ ಸುತ್ತಿನಲ್ಲಿ ಇವು ವಿಫಲವಾದವು. ವಿಶ್ವಕಪ್‌ಗೆ ಮುಂಚಿತವಾಗಿ ಸೌಲಭ್ಯಗಳನ್ನು ನವೀಕರಿಸಲು BCCI ಆತಿಥ್ಯ ಸ್ಥಳಗಳಿಗೆ ತಲಾ 50 ಕೋಟಿ ರೂಪಾಯಿಗಳನ್ನು (US$ 6.3 ಮಿಲಿಯನ್) ನೀಡುತ್ತಿದೆ. ವಾಂಖೆಡೆ ಸ್ಟೇಡಿಯಂನ ಔಟ್‌ಫೀಲ್ಡ್ ಅನ್ನು ನವೀಕರಿಸಲಾಗಿದೆ. ಫ್ಲಡ್‌ಲೈಟ್‌ಗಳನ್ನು ಎಲ್‌ಇಡಿ ದೀಪಗಳಿಗೆ ಅಪ್‌ಗ್ರೇಡ್ ಮಾಡಲಾಗಿದೆ. ಶೌಚಾಲಯಗಳನ್ನೂ ಮೇಲ್ದರ್ಜೆಗೇರಿಸಲಾಗಿದೆ. ಚಿದಂಬರಂ ಕ್ರೀಡಾಂಗಣದಲ್ಲಿ ಹೊಸ ಫ್ಲಡ್‌ಲೈಟ್‌ಗಳನ್ನು ಅಳವಡಿಸಲಾಗಿದೆ. ಅಭ್ಯಾಸ ಪಂದ್ಯಗಳು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3 ರವರೆಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಗುವಾಹಟಿಯ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಮತ್ತು ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿವೆ. ಪಂದ್ಯಗಳನ್ನು ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.