ವಿಶ್ವಕಪ್ ಕ್ರಿಕೆಟ್‌ 2023 ರ ವೇಳಾಪಟ್ಟಿ

ವಿಶ್ವಕಪ್ ಶೆಡ್ಯೂಲ್


ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಮೊದಲ ಪಂದ್ಯವು ಅಕ್ಟೋಬರ್ 5 ರಂದು ಅಹಮದಾಬಾದ್‌ನಲ್ಲಿ ಪ್ರಾರಂಭವಾಗುತ್ತದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಕಳೆದ ಋತುವಿನಲ್ಲಿ ಎರಡನೇ ಸ್ಥಾನ ಪಡೆದಿದ್ದ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಇದು. ನವೆಂಬರ್ 19 ರಂದು ಫೈನಲ್ ಮತ್ತು ನವೆಂಬರ್ 15 ಮತ್ತು 16 ರಂದು ಎರಡು ಸೆಮಿಫೈನಲ್ ಪಂದ್ಯಗಳನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣ ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆಯೋಜಿಸಲಿದೆ.

ಭಾರತವು 2011 ರಲ್ಲಿ ವಿಶ್ವಕಪ್ ಗೆದ್ದು ಬೀಗಿತ್ತು. ಆಗಲೂ ಭಾರತ ಉಪಖಂಡದಲ್ಲಿಯೇ ವಿಶ್ವಕಪ್ ಪಂದ್ಯಗಳು ನಡೆದಿದ್ದವು. ಈ ಬಾರಿ ವಿಶ್ವಕಪ್‌ನ 48 ಪಂದ್ಯಗಳನ್ನು 10 ಸ್ಥಳಗಳಲ್ಲಿ ಆಡಲಾಗುತ್ತದೆ. ಭಾರತ ತಂಡವು ಚೆನ್ನೈ, ದೆಹಲಿ, ಅಹಮದಾಬಾದ್, ಪುಣೆ, ಧರ್ಮಶಾಲಾ, ಲಖನೌ, ಮುಂಬೈ, ಕೋಲ್ಕತ್ತಾ, ಬೆಂಗಳೂರು ಮತ್ತು ಅಹಮದಾಬಾದ್‌ ನಗರಗಳಲ್ಲಿ ಆಡಲಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂ 55,000 ಆಸನ ಸಾಮರ್ಥ್ಯ ಹೊಂದಿದೆ. 5 ಟೆಸ್ಟ್, 7 ODI ಮತ್ತು 3 T20I ಪಂದ್ಯಾವಳಿಗಳು ನಡೆದಿವೆ. ಎರಡೂ ಸೆಮಿಫೈನಲ್‌ಗಳು ಮೀಸಲು ದಿನವನ್ನು ಹೊಂದಿರುತ್ತವೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಅಕ್ಟೋಬರ್ 8 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಹೊರತುಪಡಿಸಿದರೆ, 2019ರ ವಿಶ್ವಕಪ್‌ನಲ್ಲಿ ಸೋತಿರುವ ಎರಡು ಪ್ರಮುಖ ತಂಡಗಳಿಂದ ಭಾರತ ತಂಡವು ಕಠಿಣ ಸವಾಲು ಎದುರಿಸುತ್ತಿದೆ. ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ಮತ್ತು ಲಖನೌ ನಗರದಲ್ಲಿ ಇಂಗ್ಲೆಂಡ್ ತಂಡಗಳ ವಿರುದ್ಧ ಭಾರತವು ಆಡಲಿದೆ. ನಾಲ್ಕು ವರ್ಷಗಳ ಹಿಂದೆ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತನ್ನ ಏಕೈಕ ಲೀಗ್ ಪಂದ್ಯದಲ್ಲಿ ಸೋತಿತ್ತು. ಮ್ಯಾಂಚೆಸ್ಟರ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ 18 ರನ್‌ಗಳಿಂದ ಜಯಗಳಿಸಿತ್ತು. ಅಕ್ಟೋಬರ್ 20 ರಂದು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾಗೂ 23ರಂದು ಚೆನ್ನೈನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನವು ಸೆಣಸಾಟ ನಡೆಸಲಿದೆ.

ಸೂಪರ್ ಲೀಗ್‌ನ ಮೊದಲ ಐದು ಸ್ಥಾನ ಪಡೆದಿದ್ದ ತಂಡಗಳು ಉಳಿದ ಎರಡು ಸ್ಥಾನಗಳಿಗಾಗಿ 2023 ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಸ್ಪರ್ಧಿಸಿದ್ದವು. ನೆದರ್‌ಲೆಂಡ್ಸ್ ಮತ್ತು ಶ್ರೀಲಂಕಾ ಈ ಹಂತದಲ್ಲಿ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದವು. ಅರ್ಹತಾ ಪ್ರಕ್ರಿಯೆಯ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧದ ಸೋಲಿನ ನಂತರ ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ವಿಶ್ವಕಪ್ ಪಂದ್ಯಾವಳಿಗಳಿಂದ ಹೊರಗೆ ಉಳಿಯಬೇಕಾಯಿತು. ಐಸಿಸಿ ಪೂರ್ಣಕಾಲೀನ ಸದಸ್ಯತ್ವ ಪಡೆದಿರುವ ಐರ್ಲೆಂಡ್ ಮತ್ತು ಜಿಂಬಾಬ್ವೆ ಕೂಡ ಅರ್ಹತೆ ಪಡೆಯುವಲ್ಲಿ ವಿಫಲವಾದವು, ಅಂದರೆ ನಾಕ್-ಔಟ್ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಿದ್ದ ನಾಲ್ಕು ಪೂರ್ಣ ಸದಸ್ಯತ್ವ ಪಡೆದಿದ್ದ ತಂಡಗಳ ಪೈಕಿ ಮೂರು ತಂಡಗಳು ಅರ್ಹತೆ ಪಡೆಯುವಲ್ಲಿ ವಿಫಲವಾದವು. ಶ್ರೀಲಂಕಾ ಮಾತ್ರ ಪ್ರಗತಿ ಸಾಧಿಸಿತು.

ಅಂತಿಮ ಹಂತದ ಅರ್ಹತಾ ಸ್ಥಾನವು ಸಹ ಸ್ಕಾಟ್ಲೆಂಡ್ ಮತ್ತು ನೆದರ್‌ಲೆಂಡ್ಸ್‌ ನಡುವಿನ ಎಲಿಮಿನೇಟರ್ಸ್ ಹಂತಕ್ಕೆ ಹೋಯಿತು. ಎಲಿಮಿನೇಟರ್ ಪಂದ್ಯಾವಳಿಯನ್ನು ಗೆದ್ದ ನೆದರ್‌ಲೆಂಡ್ಸ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡುವ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಯಿತು.

ಮ್ಯಾಚ್‌ಗಳುದಿನಾಂಕಸಮಯಸ್ಥಳ

ನ್ಯೂಸ್

ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರ: ಬೆಂಗಳೂರಿನಲ್ಲಿ ಎಷ್ಟು ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ನಡೆಯಲಿವೆ?

ಉತ್ತರ: ಬೆಂಗಳೂರಿನಲ್ಲಿ 5 ಪಂದ್ಯಗಳು ನಡೆಯಲಿವೆ.

ಪ್ರ: ಬೆಂಗಳೂರಿನಲ್ಲಿ ಎಂದು ಯಾವ ತಂಡಗಳ ನಡುವೆ ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ನಡೆಯಲಿವೆ?

ಉತ್ತರ: ಅ 20ಕ್ಕೆ ಆಸ್ಟ್ರೇಲಿಯಾ vs ಪಾಕಿಸ್ತಾನ, ಅ 26ಕ್ಕೆ ಇಂಗ್ಲೆಂಡ್ vs ಶ್ರೀಲಂಕಾ, ನ 4ಕ್ಕೆ ನ್ಯೂಜಿಲೆಂಡ್ vs ಪಾಕಿಸ್ತಾನ, ನ 9ಕ್ಕೆ ನ್ಯೂಜಿಲೆಂಡ್ vs ಶ್ರೀಲಂಕಾ, ನ 11ಕ್ಕೆ ಭಾರತ vs ನೆದರ್​ಲೆಂಡ್ಸ್ ತಂಡಗಳ ನಡುವೆ ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ನಡೆಯಲಿವೆ.

ಪ್ರ: ಚೆನ್ನೈನಲ್ಲಿ ಎಷ್ಟು ವಿಶ್ವಕಪ್ ಪಂದ್ಯಗಳು ನಡೆಯುತ್ತಿವೆ?

ಉ: ಅ 8 ರಂದು ಭಾರತ-ಆಸ್ಟ್ರೇಲಿಯಾ ಪಂದ್ಯ ನಡೆಯಲಿದೆ. ಪಂದ್ಯ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುತ್ತದೆ. ಚೆನ್ನೈನಲ್ಲಿ ಒಟ್ಟು 5 ಪಂದ್ಯಗಳು ನಡೆಯಲಿವೆ.

ಪ್ರಶ್ನೆ: ವಿಶ್ವಕಪ್ ಸೆಮಿಫೈನಲ್ ಯಾವಾಗ ಮತ್ತು ಎಲ್ಲಿ ನಡೆಯಲಿದೆ?

ಉ: ವಿಶ್ವಕಪ್‌ನ ಮೊದಲ ಸೆಮಿಫೈನಲ್ ನ. 15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮತ್ತು ನ. 16 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಎರಡನೇ ಸೆಮಿಫೈನಲ್ ನಡೆಯಲಿದೆ.

ಪ್ರಶ್ನೆ: 2023 ರ ವಿಶ್ವಕಪ್ ಫೈನಲ್ ಎಲ್ಲಿ ನಡೆಯಲಿದೆ?

ಉ: ನ 19 ರಂದು ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಪ್ರಶ್ನೆ: 2023 ರ ವಿಶ್ವಕಪ್‌ನಲ್ಲಿ ಎಷ್ಟು ಪಂದ್ಯಗಳನ್ನು ಆಡಲಾಗುತ್ತದೆ?

ಉ: ವಿಶ್ವಕಪ್‌ನಲ್ಲಿ 10 ಸ್ಥಳಗಳಲ್ಲಿ ನಾಕೌಟ್ ಹಂತಗಳು ಸೇರಿದಂತೆ ಒಟ್ಟು 48 ಪಂದ್ಯಗಳು ನಡೆಯಲಿವೆ.

ಪ್ರಶ್ನೆ: 2023 ರ ವಿಶ್ವಕಪ್ ಯಾವಾಗ ಪ್ರಾರಂಭವಾಗುತ್ತದೆ?

ಉ: 2023 ರ ವಿಶ್ವಕಪ್‌ನ ರೌಂಡ್ ರಾಬಿನ್ ಪಂದ್ಯಗಳು ಅಕ್ಟೋಬರ್ 5 ರಿಂದ ಪ್ರಾರಂಭವಾಗುತ್ತವೆ. ಆದರೆ ಅಭ್ಯಾಸ ಪಂದ್ಯಗಳು ಒಂದು ವಾರ ಮುಂಚಿತವಾಗಿ, ಅಂದರೆ ಸೆಪ್ಟೆಂಬರ್​ 29 ರಿಂದ ಅಕ್ಟೋಬರ್ 3 ರವರೆಗೆ ನಡೆಯಲಿವೆ.