ವಿಶ್ವಕಪ್ ಹೆಚ್ಚು ರನ್ಸ್
'ಎಷ್ಟಾಯ್ತು ಸೋರ್' ಎನ್ನುವುದು ಕ್ರಿಕೆಟ್ ಮ್ಯಾಚ್ ಬಗ್ಗೆ ಆಸಕ್ತಿಯಿರುವವರ ಮೊದಲ ಪ್ರಶ್ನೆ. ಸ್ಕೋರ್ ಎನ್ನುವುದು ಸದಾ ಕಾಡುವ ಕುತೂಹಲ. 'ಸ್ಕೋರ್ ಎಷ್ಟು' ಎನ್ನುವುದರ ಅರ್ಥ, ಎಷ್ಟು ರನ್ ಆಗಿದೆ ಎನ್ನುವುದೇ ಆಗಿರುತ್ತದೆ. ನಂತರ ಎಷ್ಟು ವಿಕೆಟ್, ಯಾರು ಕ್ರೀಸ್‌ನಲ್ಲಿದ್ದಾರೆ, ಯಾರು ಬೌಲ್ ಮಾಡ್ತಿದ್ದಾರೆ ಎಂಬ ಪ್ರಶ್ನೆಗಳಿರುತ್ತವೆ. ಏಷ್ಯಾಕಪ್, ವಿಶ್ವಕಪ್ ಕ್ರಿಕೆಟ್ ಮ್ಯಾಚ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳು ಸಹಜವಾಗಿಯೇ ಮುಖ್ಯಪಾತ್ರ ನಿರ್ವಹಿಸುತ್ತಾರೆ. ಕಳೆದ ವಿಶ್ವಕಪ್‌ನಲ್ಲಿ (2019) ಅತಿ ಹೆಚ್ಚು ರನ್ ಗಳಿಸಿದ ಶ್ರೇಯ ರೋಹಿತ್ ಶರ್ಮಾ ಅವರದು. 9 ಮ್ಯಾಚ್‌ಗಳನ್ನು ಆಡಿದ ಅವರು 648 ರನ್ ಗಳಿಸಿದರು. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಎರಡನೇ ಸ್ಥಾನದಲ್ಲಿದ್ದಾರೆ. 10 ಮ್ಯಾಚ್ ಆಡಿದ ಅವರು, 647 ರನ್ ಗಳಿಸಿದರು. 606 ರನ್ ಗಳಿಸಿದ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಶಕೀಬ್ ಅಲ್ ಹಸನ್ ಮೂರನೇ ಸ್ಥಾನದಲ್ಲಿದ್ದರು. ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಮತ್ತು ಇಂಗ್ಲೆಂಡ್‌ನ ಜೋ ರೂಟ್ ನಂತರದ ಸ್ಥಾನಗಳಲ್ಲಿ ಇದ್ದಾರೆ.
ಈವರೆಗಿನ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಂತಿರುವುದು ಓರ್ವ ಭಾರತೀಯ. ಅವರು ಬೇರೆ ಯಾರೂ ಅಲ್ಲ; ಸಚಿನ್ ತೆಂಡೂಲ್ಕರ್. ಕ್ರಿಕೆಟ್ ದೇವರು ಎಂದೇ ಹೆಸರಾದ ಸಚಿನ್ ತೆಂಡೂಲ್ಕರ್ 1992ರಿಂದ 2011ರ ವರೆಗಿನ ವಿಶ್ವಕಪ್ ಟೂರ್ನಿಗಳಲ್ಲಿ ಒಟ್ಟು 45 ಮ್ಯಾಚ್ ಆಡಿ, 2278 ರನ್ ಕಲೆ ಹಾಕಿದ್ದಾರೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಇದ್ದಾರೆ. ಅವರು 46 ಮ್ಯಾಚ್‌ಗಳಿಂದ 1743 ರನ್ ಗಳಿಸಿದ್ದಾರೆ. ಶ್ರೀಲಂಕಾದ ಮಾಜಿ ಆಟಗಾರ ಸಂಗಕ್ಕಾರ ಮೂರನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅಗ್ರ ಶ್ರೇಯಾಂಕದ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.

ಆಟಗಾರ | ತಂಡಗಳು | ರನ್ಸ್ | ಸ್ಟೈಕ್ರೇಟ್ | ಪಂದ್ಯಗಳು | ಇನ್ನಿಂಗ್ಸ್ | ನಾಟೌಟ್ | ಹೈಯೆಸ್ಟ್ ಸ್ಕೋರ್ | ಸರಾಸರಿ | 30 ರನ್ಸ್ | ಅರ್ಧಶತಕಗಳು | ಶತಕಗಳು | ಸಿಕ್ಸರ್ | |
---|---|---|---|---|---|---|---|---|---|---|---|---|---|
1 | ![]() | IND | 765 | 90 | 11 | 11 | 3 | 117 | 95 | 0 | 6 | 3 | 9 |
2 | ![]() | IND | 597 | 125 | 11 | 11 | 0 | 131 | 54 | 5 | 3 | 1 | 31 |
3 | ![]() | SA | 594 | 107 | 10 | 10 | 0 | 174 | 59 | 1 | 0 | 4 | 21 |
4 | ![]() | NZ | 578 | 106 | 10 | 10 | 1 | 123* | 64 | 2 | 2 | 3 | 17 |
5 | ![]() | NZ | 552 | 111 | 10 | 9 | 1 | 134 | 69 | 2 | 2 | 2 | 22 |
6 | ![]() | AUS | 535 | 108 | 11 | 11 | 0 | 163 | 48 | 1 | 2 | 2 | 24 |
7 | ![]() | IND | 530 | 113 | 11 | 11 | 3 | 128* | 66 | 1 | 3 | 2 | 24 |
8 | ![]() | IND | 452 | 90 | 11 | 10 | 4 | 102 | 75 | 3 | 2 | 1 | 9 |
9 | ![]() | SA | 448 | 84 | 10 | 10 | 1 | 133 | 49 | 0 | 2 | 2 | 8 |
10 | ![]() | AUS | 441 | 107 | 10 | 10 | 1 | 177* | 49 | 1 | 1 | 2 | 21 |
11 | ![]() | SA | 406 | 110 | 10 | 10 | 1 | 106 | 45 | 1 | 3 | 1 | 9 |
12 | ![]() | ENG | 404 | 101 | 9 | 9 | 0 | 140 | 44 | 2 | 2 | 1 | 9 |
13 | ![]() | AUS | 400 | 150 | 9 | 9 | 3 | 201* | 66 | 2 | 0 | 2 | 22 |
14 | ![]() | PAK | 395 | 95 | 9 | 8 | 2 | 131* | 65 | 4 | 1 | 1 | 5 |
15 | ![]() | AFG | 376 | 76 | 9 | 9 | 1 | 129* | 47 | 1 | 1 | 1 | 5 |
ನ್ಯೂಸ್
ಪದೇಪದೇ ಕೇಳುವ ಪ್ರಶ್ನೆಗಳು (FAQs)
ಪ್ರಶ್ನೆ: ಈವರೆಗೆ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು ಯಾರು?
ಉ: ಭಾರತದ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಶ್ರೇಯ ಹೊಂದಿದ್ದಾರೆ. 2278 ರನ್‌ಗಳನ್ನು ಅವರು ವಿಶ್ವಕಪ್ ಕ್ರಿಕೆಟ್‌ನಲ್ಲಿ ಗಳಿಸಿದ್ದಾರೆ.
ಪ್ರಶ್ನೆ: 2019ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಯಾರು?
ಉ: ಪ್ರಸ್ತುತ ಭಾರತದ ತಂಡದ ನಾಯಕನಾಗಿರುವ ರೋಹಿತ್ ಶರ್ಮಾ 2019ರ ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. ಅವರು 2019ರ ವಿಶ್ವಕಪ್‌ನಲ್ಲಿ 648 ರನ್ ಗಳಿಸಿದ್ದರು.
ಪ್ರಶ್ನೆ: ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಗಳಿಸಿರುವ ಐವರು ಆಟಗಾರರು ಯಾರು?
ಉ: ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಕುಮಾರ ಸಂಗಕ್ಕಾರ, ಬ್ರಯಾನ್ ಲಾರಾ, ಎಬಿ ಡಿವಿಲಿಯರ್ಸ್.