ವಿಶ್ವಕಪ್ ಹೆಚ್ಚು ವಿಕೆಟ್ಸ್
ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಜನಪ್ರಿಯವಾದಷ್ಟು ಬೌಲರ್‌ಗಳು ಜನಪ್ರಿಯ ಆಗುವುದು ಅಪರೂಪ. ಆದರೆ ಯಾವುದೇ ಪಂದ್ಯದಲ್ಲಿ ತಂಡವೊಂದು ಗೆಲ್ಲಲು ಬೌಲರ್‌ಗಳ ಕೊಡುಗೆಯೇ ದೊಡ್ಡದು. ಏಷ್ಯಾ ಕಪ್, ವಿಶ್ವಕಪ್‌ನಂಥ ಟೂರ್ನಿಗಳಲ್ಲಿ ಬೌಲರ್‌ಗಳ ಕೊಡುಗೆ ಬಹಳ ಮುಖ್ಯ. ವಿಶ್ವಕಪ್‌ನಲ್ಲಿ 39 ಪಂದ್ಯಗಳನ್ನು ಆಡಿರುವ ಆಸ್ಟ್ರೇಲಿಯಾದ ಮೆಕ್‌ಗ್ರಾತ್ 71 ವಿಕೆಟ್ ಪಡೆದಿದ್ದಾರೆ. ಅವರು 1996ರಿಂದ 2007 ರ ಅವಧಿಯಲ್ಲಿ ಸಕ್ರಿಯರಾಗಿದ್ದರು. ಅವರು ಸುಮಾರು 325 ಓವರ್‌ಗಳನ್ನು (1955 ಎಸೆತಗಳು) ಬೌಲಿಂಗ್ ಮಾಡಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರು 40 ಪಂದ್ಯಗಳನ್ನು ಆಡಿದ್ದು, 68 ವಿಕೆಟ್ ಪಡೆದಿದ್ದಾರೆ. 2061 ಬಾಲ್ ಹಾಕಿದ್ದಾರೆ (ಸುಮಾರು 343 ಓವರ್). ಅವರು 1996-2011 ಸಮಯದಲ್ಲಿ ಅವರು ಕ್ರಿಕೆಟ್ ಆಡುತ್ತಿದ್ದರು. ಶ್ರೀಲಂಕಾದ ಲಸಿತ್ ಮಾಲಿಂಗ 2007 ರಿಂದ 2019 ರ ತನಕ 29 ಮ್ಯಾಚ್‌ಗಳನ್ನು ಆಡಿದ್ದಾರೆ. 1394 ಬಾಲ್ ಎಸೆದಿರುವ ಅವರು (ಸುಮಾರು 232 ಓವರ್) ಒಟ್ಟು 56 ವಿಶ್ವಕಪ್ ವಿಕೆಟ್ ಪಡೆದಿದ್ದಾರೆ. ಅವರ ಅತ್ಯುತ್ತಮ ಸಾಧನೆ 6/38.
ಪಾಕಿಸ್ತಾನದ ವಾಸಿಂ ಅಕ್ರಮ್ ಅವರು 1987ರಲ್ಲಿ ಮೊದಲ ಬಾರಿ ವಿಶ್ವಕಪ್ ಆಡಿದರು. 2003 ರವರೆಗೆ ಸಕ್ರಿಯರಾಗಿದ್ದ ಅವರು 38 ಏಕದಿನ ವಿಶ್ವಕಪ್ ಕ್ರಿಕೆಟ್ ಮ್ಯಾಚ್ ಆಡಿದ್ದಾರೆ. 1947 ಎಸೆತಗಳಿಂದ (ಸುಮಾರು 324 ಓವರ್) 55 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾದ ಸ್ಟಾರ್ಕ್ 2015-2019ರ ನಡುವೆ 18 ವಿಶ್ವಕಪ್ ಮ್ಯಾಚ್‌ಗಳನ್ನು ಆಡಿದ್ದು, 49 ವಿಕೆಟ್ ಪಡೆದಿದ್ದಾರೆ. ಅವರ ಅತ್ಯುತ್ತಮ ಸಾಧನೆ 6/28.
2019ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಬೌಲರ್ ಮೈಕೆಲ್ ಸ್ಟಾರ್ಕ್ 27 ವಿಕೆಟ್ ಕಬಳಿಸಿದ್ದರು. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಇವರು ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್ ಆಟಗಾರ ಫರ್ಗುಸನ್ ಇದ್ದಾರೆ. 21 ವಿಕೆಟ್ ಪಡೆದ ಸಾಧನೆ ಅವರ ಹೆಸರಿನಲ್ಲಿದೆ. ಇಂಗ್ಲೆಂಡ್‌ನ ಬೌಲರ್ ಜೋಫ್ರಾ ಆರ್ಚರ್ (20), ಬಾಂಗ್ಲಾದೇಶದ ಆಟಗಾರ ಮುಸ್ತಾಫಿಕರ್ ರೆಹಮಾನ್ (20) ಹೆಚ್ಚು ವಿಕೆಟ್ ಪಡೆದ ಮತ್ತಿಬ್ಬರು ಬೌಲರ್‌ಗಳು. ಮೈಕೆಲ್ ಸ್ಟಾರ್ಕ್ 554 ಬಾಲ್ ಬೌಲ್ ಮಾಡಿ 502 ರನ್ ನೀಡಿದ್ದಾರೆ. ಅವರ ಅತ್ಯುತ್ತಮ ಸಾಧನೆ 5/26. ಫರ್ಗುಸನ್ 502 ಬಾಲ್ ಬೌಲ್ ಮಾಡಿ 409 ರನ್ ನೀಡಿದ್ದಾರೆ. ಜೋಫ್ರಾ ಆರ್ಚರ್ 605 ಬಾಲ್ ಬೌಲ್ ಮಾಡಿ, 461 ರನ್ ನೀಡಿದ್ದಾರೆ. 3/27 ಅವರ ಅತ್ಯುತ್ತಮ ಸಾಧನೆಯಾಗಿದೆ.

ಆಟಗಾರ | ತಂಡಗಳು | ವಿಕೆಟ್ | ಸರಾಸರಿ | ಓವರ್ | ರನ್ಸ್ | ಅತ್ಯುತ್ತಮ ಬೌಲಿಂಗ್ | ಎಕಾನಮಿ | ಸ್ಟೈಕ್ರೇಟ್ | 3 ವಿಕೆಟ್ | 5 ವಿಕೆಟ್ | ಮೇಡಿನ್ಸ್ | |
---|---|---|---|---|---|---|---|---|---|---|---|---|
1 | Mohammed Shami | IND | 24 | 10 | 48 | 257 | 7/57 | 5 | 12 | 1 | 3 | 4 |
2 | Adam Zampa | AUS | 23 | 22 | 96 | 515 | 4/8 | 5 | 25 | 5 | 0 | 1 |
3 | Dilshan Madushanka | SL | 21 | 25 | 78 | 525 | 5/80 | 6 | 22 | 3 | 1 | 4 |
4 | Jasprit Bumrah | IND | 20 | 18 | 91 | 373 | 4/39 | 4 | 27 | 2 | 0 | 9 |
5 | Gerald Coetzee | SA | 20 | 19 | 63 | 396 | 4/44 | 6 | 19 | 4 | 0 | 1 |
6 | Shaheen Afridi | PAK | 18 | 26 | 81 | 481 | 5/54 | 5 | 27 | 2 | 1 | 3 |
7 | Marco Jansen | SA | 17 | 26 | 69 | 450 | 3/31 | 6 | 24 | 2 | 0 | 3 |
8 | Ravindra Jadeja | IND | 16 | 24 | 93 | 398 | 5/33 | 4 | 35 | 1 | 1 | 4 |
9 | Josh Hazlewood | AUS | 16 | 28 | 93 | 449 | 3/38 | 4 | 34 | 1 | 0 | 8 |
10 | Mitchell Santner | NZ | 16 | 28 | 92 | 449 | 5/59 | 4 | 34 | 1 | 1 | 4 |
11 | Mitchell Starc | AUS | 16 | 33 | 87 | 528 | 3/34 | 6 | 32 | 2 | 0 | 2 |
12 | Haris Rauf | PAK | 16 | 33 | 79 | 533 | 3/43 | 6 | 29 | 3 | 0 | 1 |
13 | Bas de Leede | NED | 16 | 30 | 67 | 487 | 4/62 | 7 | 25 | 2 | 0 | 0 |
14 | Keshav Maharaj | SA | 15 | 24 | 89 | 370 | 4/46 | 4 | 35 | 1 | 0 | 1 |
15 | Kuldeep Yadav | IND | 15 | 28 | 95 | 424 | 2/7 | 4 | 38 | 0 | 0 | 2 |
ನ್ಯೂಸ್
ಪದೇಪದೇ ಕೇಳುವ ಪ್ರಶ್ನೆಗಳು (FAQs)
ಪ್ರ: ಇದುವರೆಗೆ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು?
ಉ: ಆಸ್ಟ್ರೇಲಿಯಾ ಮೆಕ್‌ಗ್ರಾತ್. ಅವರು ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ಒಟ್ಟು 71 ವಿಕೆಟ್ ಪಡೆದಿದ್ದಾರೆ.
ಪ್ರ: 2019ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು?
ಉ: ಆಸ್ಟ್ರೇಲಿಯಾದ ಬೌಲರ್ ಮೈಕೆಲ್ ಸ್ಟಾರ್ಕ್. ಅವರು ಒಟ್ಟು 27 ವಿಕೆಟ್ ಪಡೆದಿದ್ದರು.
ಪ್ರ: 2019ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಯಾರು?
ಉ: ಜಸ್‌ಪ್ರೀತ್ ಬೂಮ್ರಾ 2019 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿದರು. ಬೂಮ್ರಾ 18 ವಿಕೆಟ್ ಪಡೆದಿದ್ದರು.
ಪ್ರ: ಇಲ್ಲಿಯವರೆಗೆ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಯಾರು?
ಉ: 2003 ರಿಂದ 2011 ರ ಅವಧಿಯಲ್ಲಿ 23 ವರ್ಲ್ಡ್‌ಕಪ್ ಮ್ಯಾಚ್ ಆಡಿದ್ದ ಜಹೀರ್ ಖಾನ್ ಅತಿಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಎನಿಸಿದ್ದಾರೆ. ಅವರ ಹೆಸರಿನಲ್ಲಿ 44 ವಿಕೆಟ್ ಪಡೆದ ದಾಖಲೆಯಿದೆ.