Annayya Serial Kannada: ಅಕ್ಕನಿಗೆ ಕಾಟ ಕೊಟ್ಟ ಪರ್ಶುವಿಗೆ ಪಾಠ ಕಲಿಸಿದ ರಶ್ಮಿ, ರಮ್ಯಾಳಿಗೆ ಆರತಿ ಮಾಡಿದ ಅಕ್ಕಂದಿರು-annayya serial kannada today episode september 10 rashmi teaches parshu a lesson smk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Annayya Serial Kannada: ಅಕ್ಕನಿಗೆ ಕಾಟ ಕೊಟ್ಟ ಪರ್ಶುವಿಗೆ ಪಾಠ ಕಲಿಸಿದ ರಶ್ಮಿ, ರಮ್ಯಾಳಿಗೆ ಆರತಿ ಮಾಡಿದ ಅಕ್ಕಂದಿರು

Annayya Serial Kannada: ಅಕ್ಕನಿಗೆ ಕಾಟ ಕೊಟ್ಟ ಪರ್ಶುವಿಗೆ ಪಾಠ ಕಲಿಸಿದ ರಶ್ಮಿ, ರಮ್ಯಾಳಿಗೆ ಆರತಿ ಮಾಡಿದ ಅಕ್ಕಂದಿರು

Annayya Serial Kannada: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಅಣ್ಣಯ್ಯನ ಪುಟ್ಟ ತಂಗಿ ದೊಡ್ಡವಳಾಗಿದ್ದಾಳೆ. ಅವಳಿಗೆ ಮಾಡಬೇಕಾದ ಎಲ್ಲಾ ಶಾಸ್ತ್ರಗಳನ್ನು ಮಾಡುತ್ತಿದ್ದಾರೆ. ಆದರೆ ಮನೆಗೆ ಬಂದ ಪರ್ಶುವಿನ ಕಾಟ ಹೆಚ್ಚಾಗಿದೆ. ರಶ್ಮಿ ಅವನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾಳೆ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ

ರಮ್ಯ ಮೈನೆರೆದಿರುವುದಕ್ಕಾಗಿ ಅವಳ ಮನೆಗೆ ಮಾವ ಹಾಗೂ ಅತ್ತೆಯರೆಲ್ಲ ಬರುತ್ತಾರೆ. ಅವರು ಬಂದು ಅವಳಿಗೆ ಆರತಿ ಮಾಡುತ್ತಾರೆ. ಅದಕ್ಕಾಗಿಯೇ ಇವನು ಕರೆದುಕೊಂಡು ಬಂದಿರುತ್ತಾನೆ. “ಪಾರು ಯಾಕೆ ಬರಲಿಲ್ಲ?” ಎಂದು ಶಿವು ಕೇಳುತ್ತಾನೆ. ಆಗ ಅವನ ಮಾವ ಹೇಳುತ್ತಾನೆ “ ಅವಳು ಇನ್ನು ಮುಂದೆ ನಮ್ಮ ಸ್ವತ್ತಲ್ಲ, ನಮ್ಮ ಸ್ವತ್ತಲ್ಲದೇ ಇರುವಾಗ ನಾವು ಅವಳನ್ನು ಎಲ್ಲಿಗೂ ಕರೆದುಕೊಂಡು ಬರೋಕೆ ಆಗೋದಿಲ್ಲ” ಎಂದು ಹೇಳುತ್ತಾನೆ. ಆ ಮಾತನ್ನು ಕೇಳಿ ಶಿವುಗೆ ಬೇಸರ ಆಗುತ್ತದೆ. ಆದರೂ ಅವನು ತೋರಿಸಿಕೊಳ್ಳುವುದಿಲ್ಲ.

ಮನೆಯನ್ನೆಲ್ಲ ಸುಂದರವಾಗಿ ಅಲಂಕಾರ ಮಾಡಿರುತ್ತಾನೆ. ಇನ್ನು ಗೌಡರು ಬಂದ ತಕ್ಷಣ ಗೋಡಂಬಿ ಹತ್ತಿರ ಕುಡಿಯಲು ಜೂಸ್‌ ತೆಗೆದುಕೊಂಡು ಬರೋಕೆ ಹೇಳುತ್ತಾನೆ. ಆಗ ಅವನು ಗೊತ್ತಾಗದೇ ಪೇಪರ್ ಕಪ್‌ನಲ್ಲಿ ಜ್ಯೂಸ್‌ ತೆಗೆದುಕೊಂಡು ಬಂದು ಅವರ ಮುಂದೆ ಹಿಡಿಯುತ್ತಾನೆ. ಆಗ ಅವರು ತೆಗೆದುಕೊಳ್ಳೋದಿಲ್ಲ. ಅಷ್ಟರಲ್ಲಿ ಅಲ್ಲಿಗೆ ಶಿವು ಬರ್ತಾನೆ. ಬಂದು ಅವನನ್ನು ತಡೆದು “ ನಿನಗೆ ಯಾರಿಗೆ ಏನು ಕೊಡಬೇಕು ಎಂದು ಗೊತ್ತಾಗೋದಿಲ್ವ? ಹೋಗು ಮಾವನಿಗೆ ಗಾಜಿನ ಲೋಟದಲ್ಲಿ ಜ್ಯೂಸ್‌ ತಗೊಂಡ್‌ ಬಾ” ಎಂದು ಹೇಳುತ್ತಾನೆ.

ಜ್ಯೂಸ್‌ ಪ್ರಸಂಗ

ಆಗ ಅವನು ಬೇಗ ಹೋಗಿ ಶಿವು ಹೇಳಿದ ರೀತಿಯಲ್ಲೇ ಜ್ಯೂಸ್ ತರುತ್ತಾನೆ. ಇನ್ನು ಇತ್ತ ಪರ್ಶು ಶಿವು ಹಿರಿ ತಂಗಿಗೆ ತುಂಬಾ ಕಾಟ ಕೊಡ್ತಾ ಇರ್ತಾನೆ. ಆದರೆ ಅವಳು ಇದುವರೆಗೆ ಯಾರ ಹತ್ತಿರವೂ ಆ ಬಗ್ಗೆ ಹೇಳಿಕೊಂಡಿರೋದಿಲ್ಲ. ಅವಳಿಗೆ ತುಂಬಾ ನೋವಾಗುತ್ತದೆ. ಆದರೂ ತಡೆದುಕೊಂಡು ಇರ್ತಾಳೆ. ಆದರೆ ಈದ ರಶ್ಮಿಗೆ ಯಾಕೋ ಅವನನ್ನು ನೋಡಿ ಅನುಮಾನ ಬರುತ್ತದೆ. ಅವಳು ಅವಳ ಸಹಾಯಕ್ಕೆ ಬರುತ್ತಾಳೆ.

ಒಂದು ಗಾಜಿನ ಲೋಟದಲ್ಲಿ ಬಿಸಿನೀರು ಹಾಕಿ, ಆ ನಂತರದಲ್ಲಿ ಅದಕ್ಕೆ ಅರಶಿನ ಹಾಗೂ ಉಪ್ಪು ಹಾಕಿ ತಂದುಕೊಡ್ತಾಳೆ. ಇದೇ ಜ್ಯೂಸ್‌ ಕುಡಿ ಎಂದು ಹೇಳುತ್ತಾಳೆ. ಆಗ ಅವನು ಕುಡಿಯಲಾಗದಿದ್ದರೂ ಕುಡಿಯಲೇಬೇಕಾಗುತ್ತದೆ.

ರಮ್ಯಳಿಗೆ ಆರತಿ-ಅಲಂಕಾರ
ರಮ್ಯ ತುಂಬಾ ಮುದ್ದಾಗಿ ಕಾಣುತ್ತಾಳೆ. ಅವಳಿಗೆ ಸೀರೆ ಉಡಿಸಿ ರೆಡಿ ಮಾಡುತ್ತಾರೆ. ಅವಳು ಸುಂದರವಾಗಿ ರೆಡಿಯಾಗಿ ನಂತರ ಹೊರಗಡೆ ನಾಚಿಕೆಯಿಂದ ಬರುತ್ತಾಳೆ. ಅಕ್ಕಂದಿರು ಹಾಗೂ ಅತ್ತೆಯಂದಿರು ಅವಳಿಗೆ ಆರತಿ ಬೆಳಗುತ್ತಾರೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಣಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

mysore-dasara_Entry_Point