Bigg Boss Kannada: ತನಗೆ ತಾನೇ ಪೂಜೆ ಮಾಡಿಕೊಂಡಿದ್ದರ ಬಗ್ಗೆ ಸ್ಪಷ್ಟನೆ ನೀಡಿದ ಚೈತ್ರಾ ಕುಂದಾಪುರ; ಇಲ್ಲಿದೆ ನಿಜವಾದ ಉತ್ತರ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: ತನಗೆ ತಾನೇ ಪೂಜೆ ಮಾಡಿಕೊಂಡಿದ್ದರ ಬಗ್ಗೆ ಸ್ಪಷ್ಟನೆ ನೀಡಿದ ಚೈತ್ರಾ ಕುಂದಾಪುರ; ಇಲ್ಲಿದೆ ನಿಜವಾದ ಉತ್ತರ

Bigg Boss Kannada: ತನಗೆ ತಾನೇ ಪೂಜೆ ಮಾಡಿಕೊಂಡಿದ್ದರ ಬಗ್ಗೆ ಸ್ಪಷ್ಟನೆ ನೀಡಿದ ಚೈತ್ರಾ ಕುಂದಾಪುರ; ಇಲ್ಲಿದೆ ನಿಜವಾದ ಉತ್ತರ

ಬಿಗ್‌ ಬಾಸ್‌ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಅವರ ವರ್ತನೆಯನ್ನು ನೋಡಿ ಇವರು ಚೈತ್ರಾ ಅಲ್ಲ ವಿಚಿತ್ರ ಎಂದು ಎಲ್ಲರೂ ಕಾಮೆಂಟ್ ಮಾಡುತ್ತಿದ್ದರು. ಅದೇ ಸಂಗತಿಯನ್ನು ಈ ಬಾರಿ ಕಿಚ್ಚನ ಪಂಚಾಯ್ತಿಯಲ್ಲಿ ಮತ್ತೆ ಪ್ರಸ್ತಾಪಿಸಲಾಗಿತ್ತು.

ತನಗೆ ತಾನೇ ಪೂಜೆ ಮಾಡಿಕೊಂಡದ್ದರ ಬಗ್ಗೆ ಸ್ಪಷ್ಟನೆ ನೀಡಿದ ಚೈತ್ರಾ ಕುಂದಾಪುರ
ತನಗೆ ತಾನೇ ಪೂಜೆ ಮಾಡಿಕೊಂಡದ್ದರ ಬಗ್ಗೆ ಸ್ಪಷ್ಟನೆ ನೀಡಿದ ಚೈತ್ರಾ ಕುಂದಾಪುರ (ಕಲರ್ಸ್ ಕನ್ನಡ)

ಈ ಹಿಂದೆ ಚೈತ್ರಾ ಕುಂದಾಪುರ ಅವರು ಬಿಗ್‌ ಬಾಸ್‌ ಮನೆಯೊಳಗಡೆ ತಮಗೆ ತಾವೇ ಪೂಜೆ ಮಾಡಿಕೊಂಡ ಕೆಲವು ದೃಶ್ಯಗಳು ವೈರಲ್ ಆಗಿತ್ತು. ಈ ಕುರಿತು ಸಾಮಾಜಿ ಜಾಲತಾಣಗಳಲ್ಲಿ ಚರ್ಚೆ ಕೂಡ ನಡೆದಿತ್ತು. ಅದೇ ವಿಚಾರವಾಗಿ ಈಗ ಮತ್ತೆ ಚರ್ಚೆ ಆರಂಭವಾಗಿದೆ. ಬಿಗ್‌ ಬಾಸ್‌ ಮನೆಯಲ್ಲಿ ನಿಮಗೆ ನೀವೇ ಪೂಜೆ ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು ಎಂದು ಹೇಳುತ್ತಾ ಸುದೀಪ್ ಅವರು ಆ ವಿಡಿಯೋವನ್ನು ಪ್ಲೇ ಮಾಡುತ್ತಾರೆ. ಆಗ ಅದಕ್ಕೆ ಚೈತ್ರಾ ಕುಂದಾಪುರ ಅವರು ಉತ್ತರ ನೀಡಿದ್ದಾರೆ. ಅದು ನನಗೆ ನಾನು ದೃಷ್ಟಿ ತೆಗೆದುಕೊಳ್ಳುತ್ತಿರುವುದು ಎಂದು ಹೇಳಿದ್ದಾರೆ.

ಆದರೆ ಎಲ್ಲರೂ ಅದನ್ನು ಅಪಾರ್ಥ ಮಾಡಿಕೊಂಡಿದ್ದಾರೆ. ನನಗೆ ನಾನೇ ಪೂಜೆ ಮಾಡಿಕೊಂಡೆ ಎಂದು ಅಂದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಆಗ ಅದಕ್ಕೆ ಮನೆಯ ಇತರ ಸದಸ್ಯರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಹೌದು ಚೈತ್ರಾ ಅವರು ದೃಷ್ಟಿ ತೆಗೆದುಕೊಂಡಿರುವ ಬಗೆ ಅದು ಎಂದು ಹೇಳಿದ್ದಾರೆ. ಈ ಹಿಂದೆ ಬೇರೆ ಯಾರಿಗೋ ಇದೇ ರೀತಿ ಮಾಡಿದ್ದರಂತೆ.

ಅವರು ನೀಡಿದ ಉತ್ತರದಲ್ಲಿ ತುಂಬಾ ಸ್ಪಷ್ಟತೆ ಇತ್ತು. ಅದು Aura Cleansing ಅಂತ ಪ್ರ್ಯಾಕ್ಟೀಸ್ ಮಾಡ್ತೀವಿ. ನಮಗೆ ತುಂಬಾ ದೃಷ್ಟಿ ಆದಾಗ ಹೀಗೆ ಮಾಡ್ತೀವಿ. ಗಂಟೆ ಯಾಕೆ ಬಾರಿಸ್ತೀವಿ ಅಂದ್ರೆ ನಮ್ಮ ಸುತ್ತ ನೆಗೆಟಿವ್ ಎನರ್ಜಿ ಇದ್ರೆ ಅದು ಹೋಗ್ಲಿ ಅಂತ ಆ ರೀತಿ ಮಾಡ್ತೀವಿ ಎಂದು ಹೇಳಿದ್ದಾರೆ.

ದೃಷ್ಟಿ ತೆಗೆಯುವ ರೀತಿಯಂತೆ

ಚೈತ್ರಾ ಅವರು ಹಿಂದೊಮ್ಮೆ ಭವ್ಯಾ ಗೌಡ ಅವರಿಗೆ ಇದೇ ರೀತಿ ಮಾಡಿದ್ದರಂತೆ. ಅದನ್ನು ಐಶ್ವರ್ಯ ನೋಡಿದ್ದರಂತೆ. ಈ ಎಲ್ಲ ವಿಚಾರಗಳೂ ಸಹ ಚರ್ಚೆಗೆ ಬಂದವು. ಚೈತ್ರಾ ಕುಂದಾಪುರ ಅವರು ಊದುಕಡ್ಡಿ ತೆಗೆದುಕೊಂಡು ಇನ್ನೊಂದು ಕೈಯ್ಯಲ್ಲಿ ಗಂಟೆ ಹಿಡಿದುಕುಂಡು ಪೂಜೆ ಮಾಡಿಕೊಂಡಿರುವುದನ್ನು ಜನರು ಬೇರೆ ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದರು. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ ಎಂಬಂತೆ ಇವರು ತಮ್ಮಲ್ಲೇ ತಾವು ದೇವರನ್ನು ಕಂಡಿದ್ದಾರೆ ಎಂದು ಜನರು ಕಾಮೆಂಟ್ ಮಾಡುತ್ತಿದ್ದರು.

ಇನ್ನೊಂದಷ್ಟು ಜನ ಇವರು ಚೈತ್ರಾ ಅಲ್ಲ ವಿಚಿತ್ರ ಎಂದು ಕಾಮೆಂಟ್ ಮಾಡಿದ್ದರು. ಇನ್ನು ಕೆಲವರು ತಮಗೆ ತಾವೇ ದೃಷ್ಟಿ ತೆಗೆದುಕೊಂಡಿರಬಹುದು. ಯಾಕೆಂದರೆ ಅವರು ಪೂಜೆ ಮಾಡಿಕೊಂಡ ನಂತರದಲ್ಲಿ ಆ ಕಡ್ಡಿಗಳನ್ನು ಮುರಿದು ಹಾಕಿದ್ದಾರೆ ಎಂದು ಹೇಳುತ್ತಿದ್ದರು. ಅವರು ನಿಂತಲ್ಲೇ ಪಕ್ಕದಲ್ಲಿ ದೇವಿಯ ಮೂರ್ತಿ ಕೂಡ ಇತ್ತು. ಆದರೆ ಅವರು ತಮಗೆ ತಾವೇ ಪೂಜೆ ಮಾಡಿಕೊಂಡಿರುವುದು ಕಾಣಿಸುತ್ತಿತ್ತು.

ಇನ್ನು ಟ್ರೋಲ್ ಪೇಜ್‌ಗಳು ಮಾಡಿದ ಕ್ರಿಯೇಟಿವ್‌ ಟ್ರೋಲ್‌ಗಳನ್ನು ವೇದಿಕೆಯಲ್ಲಿ ತೋರಿಸಲಾಗಿತ್ತು

Whats_app_banner