ಭಾಗ್ಯಾ ಮರ್ಯಾದೆ ಕಳೆಯೋಕೆ ವಿಡಿಯೋ ಮಾಡಿಸಿದ್ದು ನಾನೇ ಎಂದ ಶ್ರೇಷ್ಠಾ, ಕೋಪದಿಂದ ಕೆನ್ನೆಗೆ ಬಾರಿಸಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ-kannada television news colors kannada bhagyalakshmi serial 20th august episode tandav slapped shrestha rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಾ ಮರ್ಯಾದೆ ಕಳೆಯೋಕೆ ವಿಡಿಯೋ ಮಾಡಿಸಿದ್ದು ನಾನೇ ಎಂದ ಶ್ರೇಷ್ಠಾ, ಕೋಪದಿಂದ ಕೆನ್ನೆಗೆ ಬಾರಿಸಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಾ ಮರ್ಯಾದೆ ಕಳೆಯೋಕೆ ವಿಡಿಯೋ ಮಾಡಿಸಿದ್ದು ನಾನೇ ಎಂದ ಶ್ರೇಷ್ಠಾ, ಕೋಪದಿಂದ ಕೆನ್ನೆಗೆ ಬಾರಿಸಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಭಾಗ್ಯಾ ಮರ್ಯಾದೆ ಕಳೆಯಲು ಮೇಘಾಗೆ ದುಡ್ಡು ಕೊಟ್ಟು ವಿಡಿಯೋ ಮಾಡಿಸಿದ್ದು ನಾನೇ ಎಂದು ಶ್ರೇಷ್ಠಾ ಕೋಪದಿಂದ ಹೇಳುತ್ತಾಳೆ. ಇದಕ್ಕೆ ಸಿಟ್ಟಾಗುವ ತಾಂಡವ್‌ ಶ್ರೇಷ್ಠಾ ಕೆನ್ನೆಗೆ ಹೊಡೆಯುತ್ತಾನೆ. ಡಿವೋರ್ಸ್‌ ಕೇಳಿದ್ದು ಭಾಗ್ಯಾ ಅಲ್ಲ, ತಾಂಡವ್‌ ಎಂದು ಎಲ್ಲರಿಗೂ ಗೊತ್ತಾಗುವಂತೆ ವಿಡಿಯೋ ಮಾಡಲು ಕುಸುಮಾ, ಮೆಘಾಗೆ ಹೇಳುತ್ತಾಳೆ.

ಭಾಗ್ಯಾ ಮರ್ಯಾದೆ ಕಳೆಯೋಕೆ ವಿಡಿಯೋ ಮಾಡಿಸಿದ್ದು ನಾನೇ ಎಂದ ಶ್ರೇಷ್ಠಾ, ಕೋಪದಿಂದ ಕೆನ್ನೆಗೆ ಬಾರಿಸಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಾ ಮರ್ಯಾದೆ ಕಳೆಯೋಕೆ ವಿಡಿಯೋ ಮಾಡಿಸಿದ್ದು ನಾನೇ ಎಂದ ಶ್ರೇಷ್ಠಾ, ಕೋಪದಿಂದ ಕೆನ್ನೆಗೆ ಬಾರಿಸಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio cinema)

Bhagyalakshmi Serial: ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತಿದ್ದ ಶ್ರೇಷ್ಠಾ ಬಳಿ ಬರುವ ಭಾಗ್ಯಾ ಆಕೆಗೆ ಬುದ್ಧಿ ಹೇಳುತ್ತಾಳೆ. ಮತ್ತೊಮ್ಮೆ ನನ್ನ ಜೀವನದಲ್ಲಿ ಆಟ ಆಡಬೇಡ ಎಂದು ಎಚ್ಚರಿಸುತ್ತಾಳೆ. ಆದರೆ ಶ್ರೇಷ್ಠಾ ಮಾತ್ರ ತನ್ನ ತಪ್ಪಿನ ಬಗ್ಗೆ ಅರಿವಾಗುವುದೇ ಇಲ್ಲ. ನಾನು ಮಾಡುತ್ತಿರುವುದೆಲ್ಲಾ ಸರಿ ಎಂಬ ಅಹಂನಲ್ಲೇ ಶ್ರೇಷ್ಠಾ ಭಾಗ್ಯಾಗೆ ಎದುರುತ್ತರ ನೀಡುತ್ತಾಳೆ.

ವಿಡಿಯೋ ಮಾಡಿಸಿದ್ದು ನಾನೇ ಎಂದು ಒಪ್ಪಿಕೊಂಡ ಶ್ರೇಷ್ಠಾ

ತನ್ನ ಸೊಸೆಯದ್ದು ಏನೂ ತಪ್ಪಿಲ್ಲ ಎಂಬುದನ್ನು ಸಾಬೀತು ಮಾಡಲು ಕುಸುಮಾ, ತಾಂಡವ್‌ನನ್ನು ದೇವಸ್ಥಾನಕ್ಕೆ ಕರೆ ತರುತ್ತಾಳೆ. ಅಲ್ಲಿವರೆಗೂ ನಾನು ಎಲ್ಲಿಗೆ ಹೋಗುತ್ತಿದ್ದೇನೆ, ಯಾರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ ಎಂದು ತಾಂಡವ್‌ಗೆ ಗೊತ್ತಿರುವುದಿಲ್ಲ. ಒಂದೆಡೆ ಕುಸುಮಾ, ಮತ್ತೊಂದೆಡೆ ಭಾಗ್ಯಾಳನ್ನು ನೋಡಿ ಸುಂದ್ರಿ ಭಯಗೊಳ್ಳುತ್ತಾಳೆ. ಇವರಿಬ್ಬರ ಮಧ್ಯೆ ಸಿಲುಕಿದರೆ ನನಗೆ ಖಂಡಿತ ಉಳಿಗಾಲವಿಲ್ಲ ಎಂದುಕೊಂಡು ಬಚ್ಚಿಟ್ಟುಕೊಂಡೇ ಅಲ್ಲಿ ನಡೆಯುವುದನ್ನೆಲ್ಲಾ ಗಮನಿಸುತ್ತಾಳೆ. ಭಾಗ್ಯಾ ಎದುರು ತಾಂಡವ್‌ನನ್ನು ಕರೆತರುವ ಕುಸುಮಾ, ನಿನ್ನ ಬಗ್ಗೆ ವಿಡಿಯೋ ಮಾಡಿ ನಮ್ಮ ಮನೆ ಮರ್ಯಾದೆಯನ್ನು ಹರಾಜು ಹಾಕಿದ್ದು ಯಾರು ತೋರಿಸು ಎನ್ನುತ್ತಾಳೆ. ಅಷ್ಟರಲ್ಲಿ ಅಲ್ಲಿ ಮೇಘಾ ಇರುವುದನ್ನು ನೋಡುತ್ತಾಳೆ.

ವಿಡಿಯೋ ಮಾಡಿದ್ದು ಇವಳೇ ಎಂದು ಕುಸುಮಾಗೆ ಅರ್ಥವಾಗಿ ಮೇಘಾ ಕೆನ್ನೆಗೆ ಬಾರಿಸುತ್ತಾಳೆ. ದುಡ್ಡು ಕೊಟ್ಟರೆ ಏನು ಬೇಕಾದರೂ ಮಾಡ್ತೀಯ? ಮೊದಲು ಯಾವುದು ಸುಳ್ಳು, ಯಾವುದು ಸತ್ಯ ಎನ್ನುವುದನ್ನು ಅರ್ಥ ಮಾಡಿಕೋ ನಂತರ ಮುಂದುವರಿ ಎಂದು ಬುದ್ಧಿ ಹೇಳುತ್ತಾಳೆ. ವಿಡಿಯೋ ಮಾಡಿದ್ದು ಮೇಘಾ ಆದರೆ ದುಡ್ಡು ಕೊಟ್ಟು ಮಾಡಿಸಿದ್ದು ಈ ಶ್ರೇಷ್ಠಾ ಎಂದು ಭಾಗ್ಯಾ ಹೇಳಿದಾಗ ಕುಸುಮಾ ಶ್ರೇಷ್ಠಾಗೆ ಕೂಡಾ ಕಪಾಳಮೋಕ್ಷ ಮಾಡುತ್ತಾಳೆ. ಶ್ರೇಷ್ಠಾ ಏಕೆ ವಿಡಿಯೋ ಮಾಡಿಸುತ್ತಾಳೆ ಎಂದು ತಾಂಡವ್‌ ಪ್ರಶ್ನಿಸುತ್ತಾನೆ. ಕೆನ್ನೆಗೆ ಹೊಡೆದಳೆಂಬ ಕೋಪಕ್ಕೆ ಶ್ರೇಷ್ಠಾ ಕುಸುಮಾಗೆ ಎದುರುತ್ತರ ಕೊಡುತ್ತಾಳೆ. ಎಲ್ಲರಿಗೂ ಬುದ್ಧಿ ಹೇಳುವ ಭಾಗ್ಯಾ ತನ್ನ ಗಂಡನನ್ನು ಸರಿಯಾಗಿ ನೋಡುತ್ತಿಲ್ಲ, ಅದರಿಂದಲೇ ಡಿವೋರ್ಸ್‌ ಆಗುತ್ತಿದೆ ಎಂದು ಎಲ್ಲರಿಗೂ ಗೊತ್ತಾಗಬೇಕು, ಆದ್ದರಿಂದಲೇ ನಾನು ದುಡ್ಡು ಕೊಟ್ಟು ವಿಡಿಯೋ ಮಾಡಿಸಿದ್ದು ಏನು ಈಗ ಎನ್ನುತ್ತಾಳೆ.

ಶ್ರೇಷ್ಠಾಗೆ ಕಪಾಳಮೋಕ್ಷ ಮಾಡಿದ ತಾಂಡವ್

ವಿಡಿಯೋ ಮಾಡಿಸಿದ್ದು ಶ್ರೇಷ್ಠಾ ಎಂದು ತಿಳಿದ ಕೂಡಲೇ ತಾಂಡವ್‌ಗೂ ಸಿಟ್ಟು ನೆತ್ತಿಗೇರುತ್ತದೆ. ಎಲ್ಲರ ಮುಂದೆ ಶ್ರೇಷ್ಠಾ ಕೆನ್ನೆಗೆ ಬಾರಿಸುತ್ತಾನೆ. ಫ್ರೆಂಡ್‌ ಎಂದು ಸಲುಗೆ ಕೊಟ್ಟರೆ ವಿಡಿಯೋ ಮಾಡಿ ನನ್ನ ಮರ್ಯಾದೆ ಹೋಗುವಂತೆ ಮಾಡಿದ್ದೀಯ ಎಂದು ಪ್ರಶ್ನಿಸುತ್ತಾನೆ. ನನ್ನ ಕೆನ್ನೆಗೆ ಹೊಡೆದಿದ್ದೀರ, ಇಂದು ನಿಮ್ಮೆಲ್ಲರ ಮಾನ ಮರ್ಯಾದೆ ಕಳೆಯುತ್ತೇನೆ, ಇಂದು ಎರಡರಲ್ಲಿ ಒಂದು ನಿರ್ಧಾರವಾಗಬೇಕು ಎನ್ನುತ್ತಾಳೆ. ಶ್ರೇಷ್ಠಾ ಮಾತು ಕೇಳಿ ಕುಸುಮಾ, ಭಾಗ್ಯಾಗೆ ಅನುಮಾನ ಉಂಟಾಗುತ್ತದೆ, ಏನು ನಿರ್ಧಾರವಾಗಬೇಕು ಎಂದು ಭಾಗ್ಯಾ ಕೇಳುತ್ತಾಳೆ. ನಿನಗೇ ಮರ್ಯಾದೆ ಇಲ್ಲ, ಅಂಥದರಲ್ಲಿ ನೀನು ನಮ್ಮ ಮನೆ ಮರ್ಯಾದೆ ಕಳೆಯಲು ಹೇಗೆ ಸಾಧ್ಯ ಎಂದು ಕುಸುಮಾ ಪ್ರಶ್ನಿಸುತ್ತಾಳೆ.

ಮತ್ತೆ ಮೇಘಾ ಬಳಿ ಬರುವ ಕುಸುಮಾ, ನಿನಗೆ ನಮ್ಮ ಮನೆ ಬಗ್ಗೆ ಏನು ಗೊತ್ತು? ಡಿವೋರ್ಸ್‌ ಕೊಡುತ್ತಿರುವುದು ಭಾಗ್ಯಾ ಅಂತ ನಿನಗೆ ಹೇಗೆ ಗೊತ್ತು? ಎಂದು ಪ್ರಶ್ನಿಸುತ್ತಾಳೆ. ಕುಸುಮಾ ಮಾತಿಗೆ ಮೇಘಾ ತಲೆ ತಗ್ಗಿಸಿ ನಿಲ್ಲುತ್ತಾಳೆ. ನಿನ್ನಿಂದಲೇ ನಡೆದ ತಪ್ಪು ನಿನ್ನಿಂದಲೇ ಸರಿ ಆಗಬೇಕು. ಭಾಗ್ಯಾ ಓದಿಲ್ಲ ಅಂತ ಆಕೆಗೆ ಮೊದಲು ಡಿವೋರ್ಸ್‌ ಕೇಳಿದ್ದು ತಾಂಡವ್‌ ಅಂತ ಎಲ್ಲರಿಗೂ ಗೊತ್ತಾಗುವಂತೆ ವಿಡಿಯೋ ಮಾಡು ಎನ್ನುತ್ತಾಳೆ. ಈ ಮಾತನ್ನು ಕೇಳಿ ತಾಂಡವ್‌ ಗಾಬರಿಯಾಗುತ್ತಾನೆ. ನಿನ್ನ ಸೊಸೆ ಮರ್ಯಾದೆ ಉಳಿಸಲು ನನ್ನ ಮರ್ಯಾದೆ ಏಕೆ ತೆಗೆಯುತ್ತಿದ್ದೀಯ? ಈಗಾಗಲೇ ನಮ್ಮ ಮನೆ ಮರ್ಯಾದೆ ಹಾಳಾಗಿದೆ, ಈಗ ಮತ್ತೆ ಇದೇ ವಿಚಾರವನ್ನು ಹೊರಗೆ ನಿಂತು ಮಾತನಾಡಿ ಮತ್ತೆ ಮರ್ಯಾದೆ ಕಳೆದುಕೊಳ್ಳುವುದು ಎಷ್ಟು ಸರಿ, ಇಲ್ಲಿಂದ ಹೋಗೋಣ ಬನ್ನಿ ಎನ್ನುತ್ತಾನೆ. ಆದರೆ ಕುಸುಮಾ ಮಾತ್ರ ಮಗನ ಮಾತಿಗೆ ಜಗ್ಗುವುದಿಲ್ಲ, ಇಲ್ಲ ಇಂದು ಇದೆಲ್ಲವನ್ನೂ ಸರಿ ಮಾಡಿಯೇ ನಾನು ಇಲ್ಲಿಂದ ಹೋಗುವುದು ಎಂದು ಪಟ್ಟು ಹಿಡಿದು ನಿಲ್ಲುತ್ತಾಳೆ.

ಕುಸುಮಾ ಹೇಳಿದಂತೆ ಮೇಘಾ ವಿಡಿಯೋ ಮಾಡುತ್ತಾಳಾ? ತಾಂಡವ್‌ ಡಿವೋರ್ಸ್‌ ಕೇಳಿದ್ದು ಅಂತ ಎಲ್ಲರಿಗೂ ಗೊತ್ತಾಗುತ್ತಾ? ಜೊತೆಗೆ ತಾಂಡವ್‌ ಶ್ರೇಷ್ಠಾ ಸಂಬಂಧ ಬಯಲಾಗುವುದಾ? ಎಲ್ಲದಕ್ಕೂ ಮುಂದಿನ ಎಪಿಸೋಡ್‌ಗಳಲ್ಲಿ ಉತ್ತರ ದೊರೆಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌