ತಾಂಡವ್‌ 2ನೇ ಮದುವೆ ವಿಚಾರ ಬಹಿರಂಗ, ಮಗನನ್ನು ಕುರುಡಾಗಿ ನಂಬಿದ್ದಕ್ಕೆ ಪಶ್ಚಾತಾಪದಿಂದ ಗೋಳಾಡಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ತಾಂಡವ್‌ 2ನೇ ಮದುವೆ ವಿಚಾರ ಬಹಿರಂಗ, ಮಗನನ್ನು ಕುರುಡಾಗಿ ನಂಬಿದ್ದಕ್ಕೆ ಪಶ್ಚಾತಾಪದಿಂದ ಗೋಳಾಡಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

ತಾಂಡವ್‌ 2ನೇ ಮದುವೆ ವಿಚಾರ ಬಹಿರಂಗ, ಮಗನನ್ನು ಕುರುಡಾಗಿ ನಂಬಿದ್ದಕ್ಕೆ ಪಶ್ಚಾತಾಪದಿಂದ ಗೋಳಾಡಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 9ರ ಎಪಿಸೋಡ್‌. ತನ್ನ ಕಪಾಟಿನಲ್ಲಿ ಶ್ರೇಷ್ಠಾ ಮದುವೆ ಆಹ್ವಾನ ಪತ್ರಿಕೆ ನೋಡುವ ಕುಸುಮಾ ಅವಳು ಮದುವೆ ಆಗಲು ಹೊರಟಿರುವುದು ನನ್ನ ಮಗನನ್ನೇ ಎಂದು ತಿಳಿದು ಶಾಕ್‌ ಆಗುತ್ತಾಳೆ. ಮಗನನ್ನು ನಂಬಿದ್ದಕ್ಕೆ ಬಹಳ ಪಶ್ಚಾತಾಪ ಪಡುತ್ತಾಳೆ.

ತಾಂಡವ್‌ 2ನೇ ಮದುವೆ ವಿಚಾರ ಬಹಿರಂಗ, ಮಗನನ್ನು ಕುರುಡಾಗಿ ನಂಬಿದ್ದಕ್ಕೆ ಪಶ್ಚಾತಾಪದಿಂದ ಗೋಳಾಡಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
ತಾಂಡವ್‌ 2ನೇ ಮದುವೆ ವಿಚಾರ ಬಹಿರಂಗ, ಮಗನನ್ನು ಕುರುಡಾಗಿ ನಂಬಿದ್ದಕ್ಕೆ ಪಶ್ಚಾತಾಪದಿಂದ ಗೋಳಾಡಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಮದುವೆ ಮನೆಯಿಂದ ಹೋಗುವಂತೆ ಶ್ರೇಷ್ಠಾ ತಂದೆ-ತಾಯಿ ಹೇಳಿದ ನಂತರ ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಭಾಗ್ಯಾ, ಕುಸುಮಾ ಮನೆಗೆ ವಾಪಸಾಗುತ್ತಾರೆ. ಅಲ್ಲಿ, ಮಗ ತಾಂಡವ್‌ ಕಿಟಕಿ ಸರಳು ತೆಗೆದು ತಪ್ಪಿಸಿಕೊಂಡಿರುವ ವಿಚಾರ ತಿಳಿದು ಕುಸುಮಾ ಕೋಪಗೊಳ್ಳುತ್ತಾಳೆ. ಕದ್ದು ಹೋಗುವಷ್ಟು ಶ್ರೇಷ್ಠಾ ಮದುವೆ ಮುಖ್ಯಾನಾ ಎಂದು ಭಾಗ್ಯಾ ಮನಸ್ಸಿನಲ್ಲೇ ಬೇಸರ ವ್ಯಕ್ತಪಡಿಸುತ್ತಾಳೆ.

ಯಾವುದರ ಬಗ್ಗೆಯೂ ಹೆಚ್ಚು ಯೋಚಿಸಬೇಡ, ಅವಳು ಮಾಡಿದ್ದನ್ನು ಅನುಭವಿಸುತ್ತಾಳೆ. ಶ್ರೇಷ್ಠಾ ಯಾರನ್ನಾದರೂ ಮದುವೆ ಆಗಲಿ, ನಮಗೇನು ಎಂದು ಸೊಸೆಗೆ ಧೈರ್ಯ ಹೇಳುವ ಕುಸುಮಾ ತನ್ನ ರೂಮ್‌ಗೆ ಬರುತ್ತಾಳೆ. ಶ್ರೇಷ್ಠಾ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾಳೆ. ತಂದೆ ತಾಯಿಗೆ ಇಷ್ಟವಿಲ್ಲದಿದ್ದರೂ ಯಾರದ್ದೋ ಮನೆ ಹಾಳು ಮಾಡಿಕೊಂಡು ತನ್ನ ಖುಷಿಯನ್ನು ಹುಡುಕಲು ಹೊರಟಿದ್ದಾಳೆ. ಇವಳು ಈ ರೀತಿ ಅಂತ ನನಗೆ ಗೊತ್ತಿರಲಿಲ್ಲ ಎಂದುಕೊಂದು ಕಪಾಟಿನತ್ತ ತಿರುಗಿ ನೋಡುತ್ತಾಳೆ. ಅಲ್ಲಿ ತನ್ನ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ನೋಡಿ, ಶ್ರೇಷ್ಠಾ ಮದುವೆ ಬಗ್ಗೆ ಯೋಚಿಸುತ್ತಾ ಇದೆಲ್ಲವನ್ನೂ ಮರೆತುಬಿಟ್ಟಿದ್ದೇನೆ. ಮೊದಲು ನನ್ನ ಬಟ್ಟೆಗಳನ್ನು ಸರಿಯಾಗಿ ಜೋಡಿಸಿಕೊಳ್ಳುತ್ತೇನೆ ಎಂದು ಬಟ್ಟೆಗಳನ್ನು ತಂದು ಬೆಡ್‌ ಮೇಲೆ ಹಾಕುತ್ತಾಳೆ.

ಕುಸುಮಾ ಮುಂದೆ ಮಗನ ಅಸಲಿ ಮುಖ ಬಯಲು

ಸೀರೆ ಮಡಚುವಾಗ ತಾಂಡವ್‌ ಬಚ್ಚಿಟ್ಟಿದ್ದ ಆಹ್ವಾನ ಪತ್ರಿಕೆ ಕಾಣುತ್ತದೆ. ಇದ್ಯಾರದ್ದು ಮದುವೆ ಪತ್ರಿಕೆ ನನ್ನ ಕಪಾಟಿನಲ್ಲಿ ಹೇಗೆ ಬಂದು ಎಂದು ನೋಡುವ ಕುಸುಮಾಗೆ ಅದು ಶ್ರೇಷ್ಠಾ ಮದುವೆಯದ್ದು ಎಂದು ತಿಳಿಯುತ್ತದೆ. ಇವಳ ಮದುವೆ ಆಹ್ವಾನ ಪತ್ರಿಕೆ ನೋಡಿ ನನಗೇನು ಪ್ರಯೋಜನ ಎಂದು ಸುಮ್ಮನಾಗುತ್ತಾಳೆ. ಅಪ್ಪ, ಅಮ್ಮನನ್ನು ಕಡೆಗಣಿಸುವ ಈ ಹುಡುಗಿ ಮದುವೆ ಆಹ್ವಾನ ಪತ್ರಿಕೆಯಲ್ಲಿ ಹೆತ್ತವರ ಹೆಸರು ಹಾಕಿಸಿದ್ದಾಳೋ ಇಲ್ಲವೋ ನೋಡೋಣ ಎಂದುಕೊಂಡು ಮದುವೆ ಕಾರ್ಡನ್ನು ಹೊರ ತೆಗೆಯುತ್ತಾಳೆ. ಅಲ್ಲಿ ಯಶೋಧಾ, ಶ್ರೀವರ, ಮಹೇಶ, ಸುಂದ್ರಿಯ ಹೆಸರನ್ನು ನೋಡಿದ ಕುಸುಮಾ ಕಣ್ಣು ನಿಧಾನವಾಗಿ ಫೋಟೋ ಮೇಲೆ ಹೋಗುತ್ತದೆ.

ಶ್ರೇಷ್ಠಾ ಜೊತೆಗಿನ ತಾಂಡವ್‌ ಫೋಟೋ ನೋಡಿ ಕುಸುಮಾ ಶಾಕ್‌ ಆಗುತ್ತಾಳೆ. ಶ್ರೇಷ್ಠಾ ಮದುವೆ ಆಗುತ್ತಿರುವುದು ನನ್ನ ಮಗನನ್ನೇ ಎಂದು ತಿಳಿದು ಕುಸುಮಾ ಅಳುತ್ತಾಳೆ. ಇಷ್ಟು ದಿನಗಳು ಯಾರು ಏನೇ ಹೇಳಿದರೂ ನಾನು ನಂಬಲಿಲ್ಲ. ನಿನಗೇಕೆ ಈ ಬುದ್ಧಿ ಬಂತು ಎಂದು ಮಗನನ್ನು ನೆನಪಿಸಿಕೊಂಡು ಅಳುತ್ತಾಳೆ. ಹಾಗಿದ್ದರೆ ನನ್ನ ಸೊಸೆಗೆ ಡಿವೋರ್ಸ್‌ ಕೊಡುತ್ತಿರುವುದು ಇದೇ ಕಾರಣಕ್ಕಾ? ಎಲ್ಲರೂ ಮಗನ ಬಗ್ಗೆ ಹೇಳಿದರೂ ನಾನೇಕೆ ಅದರ ಬಗ್ಗೆ ಯೋಚನೆ ಮಾಡಲಿಲ್ಲ ಎಂದುಕೊಳ್ಳುತ್ತಾಳೆ. ಮಗನನ್ನು ಕುರುಡಾಗಿ ನಂಬಿದಕ್ಕೆ ಪಶ್ಚಾತಾಪ ಪಡುತ್ತಾಳೆ. ತಾಂಡವ್‌, ಶ್ರೇಷ್ಠಾ ಮಾತುಗಳನ್ನು ಕುಸುಮಾ ನೆನಪಿಸಿಕೊಳ್ಳುತ್ತಾಳೆ.

ಪೂಜಾ ಅಪಹರಣ ವಿಚಾರ ತಿಳಿದ ಸುಂದ್ರಿ

ಭಾಗ್ಯಾ ತಾಯಿ ಸುನಂದಾ, ಅಳಿಯನ ಬಗ್ಗೆ ಹೇಳಿದ್ದು, ಧರ್ಮರಾಜ್‌ ಗೆಳೆಯರು ಹೇಳಿದ ಮಾತುಗಳು ಕಣ್ಣ ಮುಂದೆ ಬಂದು ಕುಸುಮಾ ಗೋಳಾಡುತ್ತಾಳೆ. ಈ ವಿಚಾರ ಭಾಗ್ಯಾಗೆ ಗೊತ್ತಾಗಬಾರದು ಎಂದು ಆಹ್ವಾನ ಪತ್ರಿಕೆಯನ್ನು ಮುಚ್ಚಿಡುತ್ತಾಳೆ.

ಇತ್ತ , ಸುಂದ್ರಿಗೆ ಮಹೇಶ ಕರೆ ಮಾಡಿ ಶ್ರೇಷ್ಠಾ ಬಗ್ಗೆ ಕೇಳುತ್ತಾನೆ. ನಾನು ಮದುಮಗನ ತಂದೆಯಂತೆ ರಾಜಾರೋಷವಾಗಿ ಮದುವೆಗೆ ಬರಬೇಕೆಂದುಕೊಂಡರೆ ನನಗೆ ಇಲ್ಲಿ ಹುಡುಗಿ ಕಾಯಲು ಬಿಟ್ಟಿದ್ದಾಳೆ. ಕರೆ ಮಾಡಿದರೂ ರಿಸೀವ್‌ ಮಾಡುತ್ತಿಲ್ಲ ಎಂದು ಕೋಪಗೊಳ್ಳುತ್ತಾನೆ. ನನ್ನ ಮದುವೆಗೆ ಬಾ ಎಂದು ಪೂಜಾಳನ್ನು ಕಾರಿನಲ್ಲಿ ಕರೆದೊಯ್ಯುವ ಶ್ರೇಷ್ಠಾ, ಆಕೆಯನ್ನು ಮಹೇಶನಿಗೆ ಒಪ್ಪಿಸಿರುತ್ತಾಳೆ. ಪೂಜಾ ಕೈ ಕಾಲುಗಳನ್ನು ಕಟ್ಟುವ ಮಹೇಶ ಆಕೆಗೆ ಕಾವಲು ಕಾಯುತ್ತಿರುತ್ತಾನೆ. ಅದು ಪೂಜಾ ಎಂದು ಸುಂದ್ರಿಗೆ ತಿಳಿದು ಗಾಬರಿ ಆಗುತ್ತಾಳೆ. 

ಮಗನ ವಿಚಾರ ತಿಳಿದ ಕುಸುಮಾ ಮುಂದೇನು ಮಾಡುತ್ತಾಳೆ? ಮಹೇಶನಿಂದ ತಪ್ಪಿಸಿಕೊಂಡು ಬಂದು ಪೂಜಾ ಮದುವೆ ನಿಲ್ಲಿಸುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

 

Whats_app_banner