ತಾಯಿ ಆಗುತ್ತಿರುವ ಸಿಹಿ ಸುದ್ದಿಯನ್ನು ಅಮ್ಮನಿಗೆ ಹೇಳಿ, ಅಣ್ಣ ಮನೆ ಬಿಟ್ಟು ಹೋಗಿದ್ದಕ್ಕೆ ಕಣ್ಣೀರಿಟ್ಟ ಜಾಹ್ನವಿ; ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ತಾಯಿ ಆಗುತ್ತಿರುವ ಸಿಹಿ ಸುದ್ದಿಯನ್ನು ಅಮ್ಮನಿಗೆ ಹೇಳಿ, ಅಣ್ಣ ಮನೆ ಬಿಟ್ಟು ಹೋಗಿದ್ದಕ್ಕೆ ಕಣ್ಣೀರಿಟ್ಟ ಜಾಹ್ನವಿ; ಲಕ್ಷ್ಮೀ ನಿವಾಸ ಧಾರಾವಾಹಿ

ತಾಯಿ ಆಗುತ್ತಿರುವ ಸಿಹಿ ಸುದ್ದಿಯನ್ನು ಅಮ್ಮನಿಗೆ ಹೇಳಿ, ಅಣ್ಣ ಮನೆ ಬಿಟ್ಟು ಹೋಗಿದ್ದಕ್ಕೆ ಕಣ್ಣೀರಿಟ್ಟ ಜಾಹ್ನವಿ; ಲಕ್ಷ್ಮೀ ನಿವಾಸ ಧಾರಾವಾಹಿ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 26ರ ಎಪಿಸೋಡ್‌ನಲ್ಲಿ ಚುನಾಣೆಯಲ್ಲಿ ಜವರೇಗೌಡ, ಮುನಿಸ್ವಾಮಿ ವಿರುದ್ಧ ಗೆಲುವು ಸಾಧಿಸುತ್ತಾನೆ. ಮತ್ತೊಂದೆಡೆ ಶ್ರೀನಿವಾಸ್‌, ವೆಂಕಿ ಪಾಲಿನ ದುಡ್ಡು ಕೊಡಲು ಮುಂದಾದಾಗ ಅದನ್ನು ಸಂತೋಷ್‌ ಕಸಿದುಕೊಳ್ಳುತ್ತಾನೆ.

ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 26ರ ಎಪಿಸೋಡ್‌
ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 26ರ ಎಪಿಸೋಡ್‌ (PC: Zee Kannada Facebook)

Lakshmi Nivasa Serial: ಜಾಹ್ನವಿ ತಾಯಿ ಆಗಿದ್ದಾಳೆ. ಆದರೆ ಈಗಲೇ ನಮ್ಮ ಮಗು ಮಧ್ಯೆ ಬರುತ್ತಿದೆ, ಆದ್ದರಿಂದ ನಮಗೆ ಈ ಮಗು ಬೇಡ ಎಂದು ಜಯಂತ್‌ ಹೇಳಿದ ಮಾತನ್ನು ಕೇಳಿ ಜಾಹ್ನವಿ ಶಾಕ್‌ ಆಗಿದ್ದಾಳೆ. ಚಿನ್ನು ಮರಿಗೆ ಬೇಸರವಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡ ಜಯಂತ್‌ , ನಂತರ ತನ್ನ ನಿರ್ಧಾರವನ್ನು ಬದಲಿಸುತ್ತಾನೆ. ನಾನು ಅಮ್ಮನಾಗುತ್ತಿರುವ ವಿಚಾರವನ್ನು ಮನೆಯವರಿಗೆ ಹೇಳುತ್ತೇನೆ ಎಂದು ಜಯಂತ್‌ ಬಳಿ ಮನವಿ ಮಾಡಿ ಮನೆಗೆ ಕಾಲ್‌ ಮಾಡುತ್ತಾಳೆ.

ವೆಂಕಿ ಮನೆ ಬಿಟ್ಟು ಹೋಗಿದ್ದಕ್ಕೆ ಕಣ್ಣೀರಿಟ್ಟ ಜಾಹ್ನವಿ

ಇತ್ತ ಮನೆಯಲ್ಲಿ ಸಂತೋಷ್‌, ವೆಂಕಿಯನ್ನು ಮನೆ ಬಿಟ್ಟು ಕಳಿಸಿದ್ದಕ್ಕೆ ಎಲ್ಲರೂ ಬೇಸರಗೊಂಡಿದ್ದಾರೆ. ಸಂತೋಷ್‌ ಮಾತ್ರ ಇನ್ನು ಆಸ್ತಿ ವೆಂಕಿ ಪಾಲಾಗುವುದಿಲ್ಲ ಎಂಬ ಖುಷಿಯಲ್ಲಿದ್ದಾನೆ. ಗಂಡನ ವರ್ತನೆ ಕಂಡು ವೀಣಾ ಕೂಡಾ ಕೋಪಗೊಂಡಿದ್ದಾಳೆ. ಲಕ್ಷ್ಮೀ ಕರೆ ಮಾಡಿದಾಗ ಅವಳು ಅಳುತ್ತಿದ್ದನ್ನು ಕಂಡು ಜಾಹ್ನವಿ ಗಾಬರಿ ಆಗುತ್ತಾಳೆ. ಆದರೆ ವೆಂಕಿ ಅಣ್ಣ ಮನೆ ಬಿಟ್ಟು ಹೋದ ವಿಚಾರ ತಿಳಿದು ಅಳಲು ಆರಂಭಿಸುತ್ತಾಳೆ. ಇವರ ಮನೆಯಲ್ಲಿ ಪ್ರತಿದಿನ ಏನಾದರೂ ಒಂದು ಸಮಸ್ಯೆ ಇದ್ದೇ ಇರುತ್ತದೆ. ಕಾಲ್‌ ಮಾಡಬೇಡಿ ಎಂದರೂ ಮಾಡುತ್ತಾರೆ ಈಗ ಅಳುತ್ತಾರೆ ಎಂದು ಜಯಂತ್‌ ಕೋಪಗೊಳ್ಳುತ್ತಾನೆ. ಜಾಹ್ನವಿ ವೆಂಕಿಗೆ ವಿಡಿಯೋ ಕಾಲ್‌ ಮಾಡುತ್ತಾಳೆ. ಆದರೆ ಜಯಂತ್‌ಗೆ ಅದನ್ನೂ ಸಹಿಸಿಕೊಳ್ಳಲು ಆಗುವುದಿಲ್ಲ. ನಮ್ಮ ಮನೆಗೆ ಬಂದುಬಿಡು ಎಂದು ವೆಂಕಿಗೆ ಹೇಳುತ್ತಾಳೆ. ಆದರೆ ವೆಂಕಿ ಹಾಗೂ ಚೆಲ್ವಿ ಇದಕ್ಕೆ ಒಪ್ಪುವುದಿಲ್ಲ.

ಜಾಹ್ನವಿ ಅಳುವುದನ್ನು ಕಂಡು ಅವಳನ್ನು ಸಮಾಧಾನ ಮಾಡಲು ಜಯಂತ್‌, ಲಕ್ಷ್ಮೀಗೆ ಕಾಲ್‌ ಮಾಡಿ ಜಾಹ್ನವಿ ತಾಯಿ ಆಗುತ್ತಿರುವುದನ್ನು ಹೇಳುತ್ತಾನೆ. ಇದನ್ನು ಕೇಳಿ ಲಕ್ಷ್ಮೀ ಖುಷಿಯಾಗಿ ಎಲ್ಲರಿಗೂ ವಿಚಾರ ಹೇಳುತ್ತಾಳೆ. ಎಲ್ಲರೂ ಸಿಹಿ ತಿನ್ನುತ್ತಾರೆ. ಈ ವಿಚಾರವನ್ನು ಹೇಗಾದರೂ ವೆಂಕಿಗೆ ಹೇಳಬೇಕು ಎಂದು ಲಕ್ಷ್ಮೀ ಬಯಸುತ್ತಾಳೆ. ಆದರೆ ಸಂತೋಷ್‌ ಅದಕ್ಕೆ ಅವಕಾಶ ನೀಡುವುದಿಲ್ಲ.

ಜವರೇಗೌಡ ಮನೆಗೆ ಬಂದ ಸ್ವಾಮೀಜಿ

ಇತ್ತ ಜವರೇಗೌಡ ಎಲೆಕ್ಷನ್‌ನಲ್ಲಿ ಗೆದ್ದಿರುವುದನ್ನು ಸಂಭ್ರಮಿಸುತ್ತಾನೆ. ಅದರೆ ತನಗೆ ಇಷ್ಟು ದಿನ ಓಟು ಬಾರದ ಕಡೆಯೆಲ್ಲಾ ಸಾಕಷ್ಟು ಓಟು ಬಂದಿದೆ. ಅದಕ್ಕೆ ಕಾರಣ ಮಗ, ಸೊಸೆ ಎಂದು ತಿಳಿದು ಆಶ್ಚರ್ಯಗೊಳ್ಳುತ್ತಾನೆ. ಆದರೂ ಅವರಿಬ್ಬರ ಬಗ್ಗೆ ಅವನಿಗೆ ಕನಿಕರ ಉಂಟಾಗುವುದಿಲ್ಲ. ಎಲೆಕ್ಷನ್‌ ಮುಗಿದ ನಂತರ ಭಾವನಾಳನ್ನು ಹೊರಗೆ ಕಳಿಸುತ್ತೇನೆ ಎಂದು ಹೇಳಿದ್ದೀರಿ ಬೇಗ ಮಾಡಿ ಎಂದು ಹೆಂಡತಿ ರೇಣುಕಾ , ಜವರೇಗೌಡನಿಗೆ ಹೇಳುತ್ತಾಳೆ. ಹಿರಿ ಸೊಸೆ ಕೂಡಾ ಅತ್ತೆಗೆ ಸಾಥ್‌ ನೀಡುತ್ತಾಳೆ. ನಾನು ಈಗಷ್ಟೇ ಎಲೆಕ್ಷನ್‌ನಲ್ಲಿ ಗೆದ್ದಿದ್ದೇನೆ, ಎಲ್ಲರ ಕಣ್ಣು ನನ್ನ ಮೇಲಿರುತ್ತದೆ ಸ್ವಲ್ಪದಿನ ನನಗೆ ಸಮಯ ಕೊಡು ಎನ್ನುತ್ತಾನೆ. ಅಷ್ಟರಲ್ಲಿ ಸ್ವಾಮೀಜಿಯೊಬ್ಬರು ಜವರೇಗೌಡನನ್ನು ನೋಡಲು ಮನೆಗೆ ಬರುತ್ತಾರೆ.

ಜವರೇಗೌಡನಿಗೆ ಸ್ವಾಮೀಜಿ ಏನು ಹೇಳುತ್ತಾರೆ? ಅದರಿಂದ ಅವನ ಮನಸ್ಸು ಬದಲಾಗುವುದಾ? ವೆಂಕಿಗೆ ಜಾಹ್ನವಿ ತಾನು ತಾಯಿ ಆಗುತ್ತಿರುವ ಸುದ್ದಿಯನ್ನು ಹೇಳುತ್ತಾಳಾ? ಕಾದು ನೋಡಬೇಕು.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner