Radhana Ram: ಕನಸಿನ ರಾಣಿ ಮಾಲಾಶ್ರೀ ಮಗಳೀಗ ದರ್ಶನ್‌ಗೆ ಹೀರೋಯಿನ್!‌; D56ಗೆ ಎಂಟ್ರಿಕೊಟ್ಟ ರಾಧನಾ ರಾಮ್....
ಕನ್ನಡ ಸುದ್ದಿ  /  ಮನರಂಜನೆ  /  Radhana Ram: ಕನಸಿನ ರಾಣಿ ಮಾಲಾಶ್ರೀ ಮಗಳೀಗ ದರ್ಶನ್‌ಗೆ ಹೀರೋಯಿನ್!‌; D56ಗೆ ಎಂಟ್ರಿಕೊಟ್ಟ ರಾಧನಾ ರಾಮ್....

Radhana Ram: ಕನಸಿನ ರಾಣಿ ಮಾಲಾಶ್ರೀ ಮಗಳೀಗ ದರ್ಶನ್‌ಗೆ ಹೀರೋಯಿನ್!‌; D56ಗೆ ಎಂಟ್ರಿಕೊಟ್ಟ ರಾಧನಾ ರಾಮ್....

ಶುಭ ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ದರ್ಶನ್‌ ನಟನೆಯ D56 ತಾತ್ಕಾಲಿಕ ಶೀರ್ಷಿಕೆಯ ಚಿತ್ರಕ್ಕೆ ನಾಯಕಿಯ ಆಗಮನವಾಗಿದೆ. ಆ ನಾಯಕಿಯ ಹೆಸರು ರಾಧನಾ‌ ರಾಮ್!

<p>ಕನಸಿನ ರಾಣಿ ಮಾಲಾಶ್ರೀ ಮಗಳೀಗ ದರ್ಶನ್‌ಗೆ ಹೀರೋಯಿನ್!‌; D56ಗೆ ಎಂಟ್ರಿಕೊಟ್ಟ ರಾಧನಾ ರಾಮ್....</p>
ಕನಸಿನ ರಾಣಿ ಮಾಲಾಶ್ರೀ ಮಗಳೀಗ ದರ್ಶನ್‌ಗೆ ಹೀರೋಯಿನ್!‌; D56ಗೆ ಎಂಟ್ರಿಕೊಟ್ಟ ರಾಧನಾ ರಾಮ್....

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ದರ್ಶನ್‌ ಮತ್ತು ನಿರ್ದೇಶಕ ತರುಣ್‌ ಸುಧೀರ್‌ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕಳೆದ ವರ್ಷವೇ ಅಧಿಕೃತವಾಗಿತ್ತು. ಚಿತ್ರಕ್ಕೆ ರಾಕ್‌ಲೈನ್‌ ವೆಂಕಟೇಶ್‌ ಬಂಡವಾಳ ಹೂಡಲಿದ್ದಾರೆ, ತರುಣ್‌ ಸುಧೀರ್‌ ನಿರ್ದೇಶನ ಮಾಡಲಿದ್ದಾರೆ ಎಂಬುದನ್ನು ಬಿಟ್ಟು ಹೆಚ್ಚಿನ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ಶುಭ ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ D56 ತಾತ್ಕಾಲಿಕ ಶೀರ್ಷಿಕೆಯ ಚಿತ್ರಕ್ಕೆ ನಾಯಕಿಯ ಆಗಮನವಾಗಿದೆ. ಆ ನಾಯಕಿಯ ಹೆಸರು ರಾಧನಾ‌ ರಾಮ್!

ಯಾರಿದು ರಾಧನಾ ರಾಮ್?‌ ಈವರೆಗೂ ಈ ಹೆಸರನ್ನು ಎಲ್ಲಿಯೂ ಕೇಳಿಯೇ ಇಲ್ಲವಲ್ಲ ಎಂದುಕೊಳ್ಳುತ್ತಿದ್ದರೆ, ಅದಕ್ಕೆ ಉತ್ತರವೂ ಸಿಕ್ಕಿದೆ. ಹೌದು, ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಎಂದೇ ಖ್ಯಾತಿ ಪಡೆದಿರುವ ನಟಿ ಮಾಲಾಶ್ರೀ ಮಗಳು ರಾಧನಾ ರಾಮ್‌, ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಆ ವಿಚಾರವನ್ನು ತಂಡ ಬಹಿರಂಗಪಡಿಸಿದೆ. ನಿರ್ದೇಶಕ ತರುಣ್‌ ಸುಧೀರ್‌ ರಾಧನಾ ಅವರ ಫೋಟೋ ಶೇರ್‌ ಮಾಡಿಕೊಂಡು ಸ್ವಾಗತಿಸಿದ್ದಾರೆ.

ನಿರ್ಮಾಪಕ ರಾಮು ಮತ್ತು ನಟಿ ಮಾಲಾಶ್ರೀ ಮಗಳಾದ ರಾಧನಾ ರಾಮ್‌ ಅವರಿಗಿದು ಮೊದಲ ಸಿನಿಮಾ. ತಂದೆ ರಾಮು ಅವರೇ ಮಗಳನ್ನು ಮುಂದೊಂದು ದಿನ ದೊಡ್ಡದಾಗಿ ಲಾಂಚ್‌ ಮಾಡುವ ಬಗ್ಗೆ ಪ್ಲಾನ್‌ ರೂಪಿಸಿದ್ದರಂತೆ. ಇದೀಗ ಅವರ ಕನಸು ನನಸಾಗಿದೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಜೋಡಿಯಾಗಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಮಿನುಗುತಿರೋ ತಾರೆಗಳೊಟ್ಟಿಗೆ, ಹೊಸದೊಂದು ತಾರೆ!

ಚಿತ್ರದ ನಿರ್ದೇಶಕ ತರುಣ್‌ ಸುಧೀರ್‌, ತಮ್ಮ ಹೊಸ ಚಿತ್ರದ ನಾಯಕಿಯನ್ನು ಅಷ್ಟೇ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಮಿನುಗುತಿರೋ ತಾರೆಗಳೊಟ್ಟಿಗೆ, ಹೊಸದೊಂದು ತಾರೆ. ನಮ್ಮ ಚಿತ್ರ #D56 ಗೆ ನಾಯಕಿಯಾಗಿ ರಾಧನಾ ರಾಮ್‌ಗೆ ಸ್ವಾಗತ! ಕನಸಿನರಾಣಿ ಮಾಲಾಶ್ರೀ ಹಾಗೂ 'ಕೋಟಿ' ರಾಮು ರವರ ಮಗಳಾದ ರಾಧನಾ ರಾಮನ್‌ಗೆ ಬೆಳ್ಳಿ ತೆರೆಗೆ ನಲ್ಮೆಯ ಸ್ವಾಗತ!" ಎಂದು ಬರೆದುಕೊಂಡಿದ್ದಾರೆ.

ಕಾಟೇರ ಸಿನಿಮಾ ವದಂತಿ..

"ಕ್ರಾಂತಿ" ಸಿನಿಮಾ ಮುಗಿಯುವ ಮುನ್ನವೇ ದರ್ಶನ್ ಅವರ 56ನೇ ಸಿನಿಮಾ ಸುದ್ದಿ ಮುನ್ನೆಲೆಗೆ ಬಂದಿತ್ತು. ದರ್ಶನ್ ಮುಂದಿನ ಸಿನಿಮಾಗೆ, ಅಂದರೆ 56ನೇ ಸಿನಿಮಾಗೆ "ಕಾಟೇರ" ಎಂದು ಹೆಸರಿಟ್ಟಿರುವುದಾಗಿ ದರ್ಶನ್ ಆಪ್ತ ವಲಯ ಹೇಳಿಕೊಂಡಿತ್ತು. ಆದರೆ ಈ ವಿಚಾರದ ಬಗ್ಗೆ ದರ್ಶನ್ ಆಗಲೀ, ಚಿತ್ರತಂಡವಾಗಲೀ ಅಧಿಕೃತ ಘೋಷಣೆ ಮಾಡಿಲ್ಲ. ತರುಣ್ ಸುಧೀರ್, ಈ ಚಿತ್ರಕ್ಕಾಗಿ ಗಧೆ, ಚೌಡಯ್ಯ, ಕಾಟೇರ ಎಂಬ ಮೂರು ಟೈಟಲ್​​​ಗಳನ್ನು ಆಯ್ದುಕೊಂಡಿದ್ದು ಕಡೆಗೂ ಕಾಟೇರ ಎಂಬ ಟೈಟಲ್ ಫೈನಲ್ ಆಗಿದೆ ಎನ್ನಲಾಗುತ್ತಿದೆ. ಕಳೆದ ವರ್ಷ ತೆರೆ ಕಂಡ ರಾಬರ್ಟ್ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದರು. ಈ ಸಿನಿಮಾ ನಂತರ ಇದೀಗ ಮತ್ತೆ ತರುಣ್ ಸುಧೀರ್ ಹಾಗೂ ದರ್ಶನ್ ಕಾಂಬಿನೇಶನ್​​​​​​ನಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ. ತರುಣ್ ಸುಧೀರ್ ಜೊತೆಗಿನ ಸಿನಿಮಾವನ್ನು ಫೆಬ್ರವರಿ 16 ದರ್ಶನ್ ಹುಟ್ಟುಹಬ್ಬದಂದು ಘೋಷಣೆ ಮಾಡಲಾಗಿತ್ತು. ಈ ಚಿತ್ರವನ್ನು ರಾಕ್​​ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ.

ಕ್ರಾಂತಿಯ ಪ್ಯಾನ್‌ ಇಂಡಿಯಾ ಪೋಸ್ಟರ್‌ ಬಿಡುಗಡೆ...

ರಾಬರ್ಟ್‌ ಸಿನಿಮಾ ಮೂಲಕ ಶತಕೋಟಿ ಕ್ಲಬ್‌ಗೆ ಸೇರಿದ್ದ ದರ್ಶನ್‌, ಇದೀಗ ಆ ವರಸೆಯನ್ನು ಮುಂದುವರಿಸಲು ಸಜ್ಜಾಗಿದ್ದಾರೆ. "ಕ್ರಾಂತಿ" ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಲು ದರ್ಶನ್‌ ಸಜ್ಜಾಗಿದ್ದಾರೆ. ಅದರಂತೆ, ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆ ಆಗಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಪೋಸ್ಟರ್‌ಗಳನ್ನು ಸ್ವತಃ ದರ್ಶನ್‌ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದು, ಏಕಾಂಗಿಯಾಗಿ ಹೋರಾಡುವುದನ್ನು ಕಲಿ ಎಂಬ ಕ್ಯಾಪ್ಷನ್‌ ನೀಡಿ ಫೋಟೋ ಬಿಡುಗಡೆ ಮಾಡಿದ್ದಾರೆ.

Whats_app_banner