ಕನ್ನಡ ಸುದ್ದಿ  /  Entertainment  /  Ott News Hanuman Starring Teja Sajja Ott Release Date Ott Watch Hanuman March 8 Zee5 Streming Pcp

HanuMan OTT: ಒಟಿಟಿಯಲ್ಲಿ ನಾಳೆ ಬಿಡುಗಡೆಯಾಗುತ್ತಿಲ್ಲ ಹನುಮಾನ್‌ ಸಿನಿಮಾ; ಮುಂದಿನ ವಾರ ತೇಜ ಸಜ್ಜಾ ಸಿನಿಮಾ ರಿಲೀಸ್‌

HanuMan OTT Release: ತೇಜ ಸಜ್ಜ ಹೀರೋ ಆಗಿರುವ ಸೂಪರ್‌ಹೀರೋ ಸಿನಿಮಾ ಹನುಮಾನ್‌ ಒಟಿಟಿಯಲ್ಲಿ ಮಾರ್ಚ್‌ 8ರಂದು ಬಿಡುಗಡೆಯಾಗುತ್ತಿದೆ. ಝೀ 5 ಒಟಿಟಿ ವೇದಿಕೆಯಲ್ಲಿ ಈ ಸಿನಿಮಾ ವೀಕ್ಷಿಸಬಹುದು. ಮಾರ್ಚ್‌ 2ರಂದು ಹನುಮಾನ್‌ ಬಿಡುಗಡೆಯಾಗುವುದಾಗಿ ಈ ಹಿಂದೆ ಹೇಳಲಾಗಿತ್ತು.

HanuMan OTT: ಹನುಮಾನ್‌ ಒಟಿಟಿ ಬಿಡುಗಡೆ ದಿನಾಂಕ
HanuMan OTT: ಹನುಮಾನ್‌ ಒಟಿಟಿ ಬಿಡುಗಡೆ ದಿನಾಂಕ

ಬೆಂಗಳೂರು: ತೇಜ ಸಜ್ಜಾ ನಟನೆಯ ಹನುಮಾನ್‌ ಸಿನಿಮಾವು ಸದ್ಯದಲ್ಲಿಯೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಹನುಮಾನ್‌ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ವರ್ಷದ ಬಹುನಿರೀಕ್ಷಿತ ಒಟಿಟಿ ಸಿನಿಮಾ ಇದಾಗಿದೆ. ಹನುಮಾನ್‌ ಸಿನಿಮಾವನ್ನು ಪ್ರಶಾಂತ್‌ ವರ್ಮಾ ನಿರ್ದೇಶಿಸಿದ್ದರು. ಈ ಸಿನಿಮಾ ತೆಲುಗು, ಹಿಂದಿ ಮಾತ್ರವಲ್ಲದೆ ಕನ್ನಡದಲ್ಲಿಯೂ ಡಬ್ಬಿಂಗ್‌ ಆಗಿತ್ತು. ಕರ್ನಾಟಕದ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನಗೊಂಡಿತ್ತು.

ಹನುಮಾನ್‌ ಸಿನಿಮಾ ಒಟಿಟಿ ಬಿಡುಗಡೆ ವಿವರ

ತೇಜ ಸಜ್ಜ ಹೀರೋ ಆಗಿರುವ ಸೂಪರ್‌ಹೀರೋ ಸಿನಿಮಾ ಹನುಮಾನ್‌ ಒಟಿಟಿಯಲ್ಲಿ ಮಾರ್ಚ್‌ 8ರಂದು ಬಿಡುಗಡೆಯಾಗುತ್ತಿದೆ. ಝೀ 5 ಒಟಿಟಿ ವೇದಿಕೆಯಲ್ಲಿ ಈ ಸಿನಿಮಾ ವೀಕ್ಷಿಸಬಹುದು. ಈ ಸಿನಿಮಾದಲ್ಲಿ ತೇಜ ಸಜ್ಜನ ಜತೆಗೆ ಅಮೃತ ಅಯ್ಯರ್‌, ವರಲಕ್ಷ್ಮಿ ಶರತ್‌ ಕುಮಾರ್‌, ವೆನೆಲ್ಲಾ ಕಿಶೋರ್‌, ಶಮುಥಿರಕಾಣಿ, ಸತ್ಯ ಮತ್ತು ವಿನಯ್‌ ರೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹನುಮಾನ್‌ ಸಿನಿಮಾವು ಚಿತ್ರಮಂದಿರಗಳಲ್ಲಿ ಜನವರಿ 12ರಂದು ಬಿಡುಗಡೆಯಾಗಿತ್ತು.

ಹನುಮಾನ್‌ ಸಿನಿಮಾ ಮಾರ್ಚ್‌ 2ರಂದು ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ, ಇದೀಗ ಬಂದ ವರದಿ ಪ್ರಕಾರ ಮಾರ್ಚ್‌ 8ರಂದು ಹನುಮಾನ್‌ ಝೀ 5ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಅಂಜನಾದ್ರಿ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಈ ಸಿನಿಮಾವನ್ನು ಪ್ರಶಾಂತ್‌ ವರ್ಮಾ ನಿರ್ದೇಶನ ಮಾಡಿದ್ದಾರೆ.

ಹಲವು ಭಾಷೆಗಳಲ್ಲಿ ಬಿಡುಗಡೆ

ತೇಜಾ ಸಜ್ಜಾ ನಟನೆಯ ಹನುಮಾನ್‌ ಸಿನಿಮಾದ ಒಟಿಟಿ ಹಕ್ಕುಗಳನ್ನು ಝೀ5 ತನ್ನದಾಗಿಸಿಕೊಂಡಿದೆ. ತೆಲುಗು ಮಾತ್ರವಲ್ಲದೆ ಈ ಸಿನಿಮಾ ಹಿಂದಿ, ಮರಾಠಿ, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಲಭ್ಯವಿದೆ. ಇಷ್ಟು ಮಾತ್ರವಲ್ಲದೆ ಸೂಪರ್‌ಹೀರೋ ಸಿನಿಮಾಗಳಿಗೆ ಜಾಗತಿಕವಾಗಿ ಬೇಡಿಕೆ ಇರುವುದರಿಂದ ಹನುಮಾನ್‌ ಸಿನಿಮಾವನ್ನು ಇಂಗ್ಲಿಷ್‌, ಸ್ಪ್ಯಾನಿಷ್‌, ಕೊರಿಯನ್‌, ಚೈನೀಸ್‌ ಮತ್ತು ಜಪಾನೀಸ್‌ ಭಾಷೆಗಳಲ್ಲೂ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಹನುಮಾನ್‌ ಸಿನಿಮಾವು ಜಾಗತಿಕ ಪ್ರೇಕ್ಷಕರನ್ನು ಸೆಳೆಯಲಿದೆ.

ಹನುಮಾನ್‌ ಸಿನಿಮಾ ಬಿಡುಗಡೆಯಾದ ಸಮಯದಲ್ಲೇ ಗುಂಟೂರು ಖಾರಂ ಸಿನಿಮಾ ಬಿಡುಗಡೆಯಾಗಿತ್ತು. ಜನವರಿ 12ರಂದು ಗುಂಟೂರು ಖಾರಂ ಸಿನಿಮಾವು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ತ್ರಿವಿಕ್ರಮ್‌ ಶ್ರೀನಿವಾಸ್‌ ಅವರ ನಿರ್ದೇಶನದ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಲೋಕಲ್‌ ಡಾನ್‌ ಒಬ್ಬರ ಜೀವನ ಕಥೆ ಆಧರಿತ ಚಿತ್ರ ಇದಾಗಿದೆ. ಮಹೇಶ್‌ ಬಾಬು ಮಾತ್ರವಲ್ಲದೆ ಪ್ರಕಾಶ್‌ ರಾಜ್‌, ರಮ್ಯಾ ಕೃಷ್ಣನ್‌, ಮೀನಾಕ್ಷಿ ಚೌಧರಿ ನಟಿಸಿದ್ದಾರೆ. ನಮ್ಮ ಕರ್ನಾಟಕದ ಶ್ರೀಲೀಲಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾವು ಹನುಮಾನ್‌ ಸಿನಿಮಾದಷ್ಟು ಬಾಕ್ಸ್‌ ಆಫೀಸ್‌ ಗಳಿಕೆ ಮಾಡಿಲ್ಲ. ಹನುಮಾನ್‌ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಕರ್ನಾಟಕದಲ್ಲಿ ದರ್ಶನ್‌ ನಟನೆಯ ಕಾಟೇರ ಸಿನಿಮಾದ ಹವಾ ಇತ್ತು. ಹೀಗಿದ್ದರೂ, ಹನುಮಾನ್‌ಗೆ ಒಂದಿಷ್ಟು ಥಿಯೇಟರ್‌ ಲಭಿಸಿದ್ದವು.

IPL_Entry_Point