ಕನ್ನಡ ಸುದ್ದಿ  /  Entertainment  /  Sandalwood News Darshan Umapathy Kaatera Title Controversy Row Olle Hudga Pratham Gives Suggestions To Both Mnk

‘ದರ್ಶನ್‌ ಮತ್ತೆ ಉಮಾಪತಿ ಇಬ್ಬರೂ ದೊಡ್ಡೋರು, ಅವ್ರಿಗೆ ಬುದ್ಧಿ ಹೇಳೋವಷ್ಟು ನಾನು ದೊಡ್ಡವನಲ್ಲ, ಬಿಟ್ಬಿಡಿ​’; ಪ್ರಥಮ್‌

ದರ್ಶನ್‌ ಮತ್ತು ಉಮಾಪತಿ ಶ್ರೀನಿವಾಸ್‌ ಗೌಡ ಅವರ ಕಿತ್ತಾಟ ಸೋಷಿಯಲ್‌ ಮೀಡಿಯಾದಲ್ಲೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹತ್ತಾರು ಮಂದಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಟ ಒಳ್ಳೆ ಹುಡುಗ ಪ್ರಥಮ್ ಸಹ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಅವರೇ ಕೂತು ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ.

‘ದರ್ಶನ್‌ ಮತ್ತೆ ಉಮಾಪತಿ ಇಬ್ಬರೂ ದೊಡ್ಡೋರು, ಅವ್ರಿಗೆ ಬುದ್ಧಿ ಹೇಳೋವಷ್ಟು ನಾನು ದೊಡ್ಡವನಲ್ಲ, ಬಿಟ್ಬಿಡಿ​’; ಪ್ರಥಮ್‌
‘ದರ್ಶನ್‌ ಮತ್ತೆ ಉಮಾಪತಿ ಇಬ್ಬರೂ ದೊಡ್ಡೋರು, ಅವ್ರಿಗೆ ಬುದ್ಧಿ ಹೇಳೋವಷ್ಟು ನಾನು ದೊಡ್ಡವನಲ್ಲ, ಬಿಟ್ಬಿಡಿ​’; ಪ್ರಥಮ್‌

Darshan Vs Umapathy: ಕಳೆದ ಕೆಲ ದಿನಗಳಿಂದ ಕಾಟೇರ ಸಿನಿಮಾದ ಶೀರ್ಷಿಕೆ ವಿಚಾರವಾಗಿ ನಟ ದರ್ಶನ್‌ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ನಡುವೆ ವಾಕ್‌ಸಮರ ನಡೆಯುತ್ತಿದೆ. ಶೀರ್ಷಿಕೆ ಇಟ್ಟಿದ್ದೇ ನಾನು ಎಂದು ದರ್ಶನ್‌ ಹೇಳಿದರೆ, ಆ ಟೈಟಲ್‌ ಕೊಟ್ಟಿದ್ದೇ ನಾನು ಎನ್ನುತ್ತಿದ್ದಾರೆ ಉಮಾಪತಿ ಶ್ರೀನಿವಾಸ್.‌ ಈ ನಡುವೆ ಇದೇ ಕಿತ್ತಾಟ ಸೋಷಿಯಲ್‌ ಮೀಡಿಯಾದಲ್ಲೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹತ್ತಾರು ಮಂದಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಟ ಒಳ್ಳೆ ಹುಡುಗ ಪ್ರಥಮ್ ಸಹ ಮಾತನಾಡಿದ್ದಾರೆ.

ಕಾಟೇರ ಸಿನಿಮಾದ 50ನೇ ದಿನದ ಸಂಭ್ರಮದಲ್ಲಿ ಮೈಕ್‌ ಕೈಗೆತ್ತಿಕೊಂಡಿದ್ದ ದರ್ಶನ್‌, ಉಮಾಪತಿ ಶ್ರೀನಿವಾಸ್‌ ಹೆಸರೆತ್ತದೇ ಪರೋಕ್ಷವಾಗಿ ಏ ತಗುಡು ಎಂದಿದ್ದರು. ಅಷ್ಟೇ ಅಲ್ಲ ಗುಮ್ಮಿಸ್ಕೋತಿಯಾ ಎಂದೂ ಆವಾಜ್‌ ಹಾಕಿದ್ದರು. ಇದಾದ ಮೇಲೆ ನಟ ದರ್ಶನ್‌ ಅವರ ಈ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ನಾನೂ ಕೈ ಕಟ್ಟಿ ಕೂತ್ತಿಲ್ಲ. ನನಗೂ ತಾಕತ್ತಿದೆ, ಬರಲಿ ನೋಡೋಣ ಎಂದು ಟಾಂಗ್‌ ಕೊಟ್ಟಿದ್ದರು ಉಮಾಪತಿ. ಈಗ ಇದೇ ವಿಚಾರದ ಬಗ್ಗೆ ಮಾತನಾಡಿರುವ ಪ್ರಥಮ್‌, ಅವ್ರು ದೊಡ್ಡವರು ಎಂದಿದ್ದಾರೆ.

ಕೂತು ಮಾತನಾಡಿದ್ರೆ, ಇಷ್ಟು ಸಮಸ್ಯೆಯೇ ಆಗ್ತಿರಲಿಲ್ಲ..

ಈ ಬಗ್ಗೆ ವಿಸ್ತಾರ ನ್ಯೂಸ್‌ ಜತೆಗೆ ಮಾತನಾಡಿರುವ ಪ್ರಥಮ್‌, "ನಿರ್ಮಾಪಕರಿಗೆ ಒಳ್ಳೆಯದು ಆಗಬೇಕು. ಕನ್ನಡ ಚಿತ್ರರಂಗದಲ್ಲಿ ದರ್ಶನ್‌ ಕೂಡ ಅಪ್ರತಿಮ ನಾಯಕರು. ನಾನು ಒಂದು ಮಾತು ಹೇಳ್ತೀನಿ. ಚಿತ್ರರಂಗದಲ್ಲಿ ಅಣ್ಣಾವ್ರಿದ್ದಾರೆ ಇದ್ದಾರೆ. ನಾವು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇವೆ. ಹಂಬಲ್‌ನೆಸ್‌ ಏನೂ ಅಂತ ಹೇಳಿಕೊಟ್ಟವರು ನಮಗೆ ಅಣ್ಣಾವ್ರು. ಅವರಿಂದ ಕಲಿಯುತ್ತಿದ್ದೇವೆ. ಇನ್ನು ದರ್ಶನ್‌ ಅವರು ತುಂಬ ಒಳ್ಳೆಯ ಕಲಾವಿದರು. ತುಂಬ ದೊಡ್ಡ ಸ್ಟಾರ್.‌ ಏನೋ ಆಗಿದೆ. ಬುದ್ಧಿವಂತರಾದ್ರೆ ನಾವು ಏನು ಮಾಡಬೇಕು ಅಂದ್ರೆ, ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಬೇಕು. ಇಬ್ಬರೇ ಕೂತು ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು"

"ಯಾವಾಗ ಪರ್ಸನಲ್‌ ಆಗಿ ಹೊರಗಡೆ ಬರ್ತಾ ಹೋಗುತ್ತೋ. ಅದು ಚರ್ಚೆ ಆಗುತ್ತಾ ಹೋಗುತ್ತೆ. ಹತ್ತು ಜನರ ಬಾಯಿಗೆ ಆಹಾರವಾಗುತ್ತೆ. ಹಾಗಾಗಿ ನನಗೆ ಸಿನಿಮಾ ಬಗ್ಗೆ ಕೇಳಿ ಹೇಳ್ತಿನಿ. ಈ ಜಗಳ ಬಗ್ಗೆ ಗೊತ್ತಿಲ್ಲ. ಏಕೆಂದರೆ ನಾನು ಚಿಕ್ಕ ಹುಡುಗ, ಅವರು ದೊಡ್ಡ ಪ್ರೊಡ್ಯೂಸರ್‌, ಅವ್ರು ದೊಡ್ಡ ಹೀರೋ. ಅವರೇ ಕೂತ್ಕೊಂಡು ಮಾತನಾಡಬೇಕು. ನಾನು ಇವರ ಬಗ್ಗೆ ಮಾತನಾಡಿದ್ರೆ ಒಂದು, ಇವರ ಬಗ್ಗೆ ಮಾತನಾಡಿದ್ರೆ ಇನ್ನೊಂದು ಮಾತು ಬರುತ್ವೆ. ಹಾಗಾಗಿ ಏನೇ ಇದ್ರೂ ಅವರೇ ಸಾಲ್ವ್‌ ಮಾಡಿಕೊಳ್ಳಬೇಕು"

"140 ವರ್ಷದ ಇತಿಹಾಸ ಇರೋ ಪಾರ್ಟಿಯಿಂದ, ಬರೀ ಒಂದುವರೆ ತಿಂಗಳಲ್ಲಿ ಕಾಂಗ್ರೆಸ್ ಪಾರ್ಟಿಯಿಂದ ಟಿಕೆಟ್ ಪಡೆದಿದ್ದಾರೆಂದರೆ ಅವರೇನು ಸಾಮಾನ್ಯದವರಲ್ಲ. ಹಾಗೇ ಒಬ್ಬ ಖಳನಟನ ಮಗ, ಸಣ್ಣ ಪಾತ್ರಗಳಿಂದ ಬಂದಿದ್ದು. ಲೈಟ್ ಬಾಯ್ ಆಗಿ, ಕ್ಯಾಮರಾ ಅಸಿಸ್ಟಂಟ್‌ ಆಗಿದ್ದರು. ಈಗ ಸೂಪರ್ ಸ್ಟಾರ್ ಆಗಿದ್ದಾರೆ. ನೀವು ಸಾಮಾನ್ಯದವರಲ್ಲ ದರ್ಶನ್‌ ಸರ್.‌ ನೀವಿಬ್ಬರೂ ಕೂತು ಮಾತನಾಡಿದ್ರೆ, ಯಾರೂ ಮಾತನಾಡೋ ಅವಶ್ಯಕತೆಯಿಲ್ಲ"

"ನಾವೆಲ್ಲ ಯಾರು ಸರ್ ನಿಮಗೆ ಬುದ್ಧಿ ಹೇಳೋಕೆ? ನಮ್ಮ ಹತ್ತ ಹೇಳಿಸ್ಕೊಂಡು ನೀವು ಮಾಡಬೇಕಾ? ನಿಮಗೆ ಮ್ಯಾಚುರಿಟಿ ಇದೆ. ಉಮಾಪತಿಗೆ ಹ್ಯಾಂಡಲ್ ಮಾಡೋ ಬುದ್ಧಿವಂತಿಕೆ ಇದೆ. ಕೂತು ಮಾತನಾಡಿದ್ರೆ ಯಾರ ಬಾಯಿಗೂ ಆಹಾರವಾಗಲ್ಲ" ಎನ್ನುತ್ತಲೇ ವಿಷ್ಣುವರ್ಧನ್ ದ್ವಾರಕೀಶ್ ಅವರ ಕಿತ್ತಾಟ ಮತ್ತು ಇಬ್ಬರೂ ಒಂದಾಗಿ ಹಿಟ್‌ ಸಿನಿಮಾದ ಉದಾಹರಣೆಯನ್ನೂ ಪ್ರಥಮ್‌ ನೆನಪಿಸಿಕೊಂಡರು.

IPL_Entry_Point