ದರ್ಶನ್‌- ಧ್ರುವ ನಡುವೆ ಮುನಿಸು? ಒಂದೇ ವೇದಿಕೆ ಮೇಲಿದ್ದರೂ ಮಾತಿಲ್ಲ ಕಥೆಯಿಲ್ಲ, ಫ್ಯಾನ್ಸ್‌ ವಲಯದಲ್ಲಿ ಹೆಚ್ಚಾಯ್ತು ಚರ್ಚೆ
ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‌- ಧ್ರುವ ನಡುವೆ ಮುನಿಸು? ಒಂದೇ ವೇದಿಕೆ ಮೇಲಿದ್ದರೂ ಮಾತಿಲ್ಲ ಕಥೆಯಿಲ್ಲ, ಫ್ಯಾನ್ಸ್‌ ವಲಯದಲ್ಲಿ ಹೆಚ್ಚಾಯ್ತು ಚರ್ಚೆ

ದರ್ಶನ್‌- ಧ್ರುವ ನಡುವೆ ಮುನಿಸು? ಒಂದೇ ವೇದಿಕೆ ಮೇಲಿದ್ದರೂ ಮಾತಿಲ್ಲ ಕಥೆಯಿಲ್ಲ, ಫ್ಯಾನ್ಸ್‌ ವಲಯದಲ್ಲಿ ಹೆಚ್ಚಾಯ್ತು ಚರ್ಚೆ

ಕಾವೇರಿಗಾಗಿ ನಡೆದ ಪ್ರತಿಭಟನೆಯಲ್ಲಿ ಕನ್ನಡ ಚಿತ್ರರಂಗ ಒಂದಾಗಿತ್ತು. ಆದರೆ, ಇದೇ ಬೃಹತ್‌ ವೇದಿಕೆ ಮೇಲೆ ದರ್ಶನ್‌ ಮತ್ತು ಧ್ರುವ ನಡುವೆ ಯಾವುದೂ ಸರಿಯಿಲ್ಲ ಎನ್ನುವಂತೆ ತೋರುತ್ತಿತ್ತು. ಆ ಫೋಟೋಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅಭಿಮಾನಿ ವಲಯದಲ್ಲಿ ಚರ್ಚೆಗೆ ಕಾಋಣವಾಗಿವೆ.

ದರ್ಶನ್‌- ಧ್ರುವ ನಡುವೆ ಮುನಿಸು? ಒಂದೇ ವೇದಿಕೆ ಮೇಲಿದ್ದರೂ ಮಾತಿಲ್ಲ ಕಥೆಯಿಲ್ಲ, ಫ್ಯಾನ್ಸ್‌ ವಲಯದಲ್ಲಿ ಹೆಚ್ಚಾಯ್ತು ಚರ್ಚೆ
ದರ್ಶನ್‌- ಧ್ರುವ ನಡುವೆ ಮುನಿಸು? ಒಂದೇ ವೇದಿಕೆ ಮೇಲಿದ್ದರೂ ಮಾತಿಲ್ಲ ಕಥೆಯಿಲ್ಲ, ಫ್ಯಾನ್ಸ್‌ ವಲಯದಲ್ಲಿ ಹೆಚ್ಚಾಯ್ತು ಚರ್ಚೆ

Darshan Vs Dhruva Sarja: ನಟ ದರ್ಶನ್‌ ಮತ್ತು ಸರ್ಜಾ ಕುಟುಂಬ ಮೊದಲಿಂದಲೂ ಆಪ್ತ. ಅದರಲ್ಲೂ ಅರ್ಜುನ್‌ ಸರ್ಜಾ ಕಂಡರೆ ದರ್ಶನ್‌ಗೆ ವಿಶೇಷ ಗೌರವ. ಪುತ್ರಿ ಐಶ್ವರ್ಯಾ ಅರ್ಜುನ್‌ ಅವರ ಚೊಚ್ಚಲ ಪ್ರೇಮ ಬರಹ ಚಿತ್ರದ ಹಾಡಿನಲ್ಲಿ ಚಿರು ಸರ್ಜಾ, ಧ್ರುವ ಸರ್ಜಾ, ಅರ್ಜುನ್‌ ಸರ್ಜಾ ಜತೆಗೆ ದರ್ಶನ್‌ ಸಹ ಕಾಣಿಸಿಕೊಂಡು ಹೆಜ್ಜೆ ಹಾಕಿದ್ದರು. ಕುರುಕ್ಷೇತ್ರ ಚಿತ್ರದಲ್ಲಿಯೂ ದರ್ಶನ್‌ ಜತೆಗೆ ಅರ್ಜುನ್‌ ಸರ್ಜಾ  ಒಟ್ಟಿಗೆ ಕೆಲಸ ಮಾಡಿದ್ದರು. ಆದರೆ, ಇತ್ತೀಚಿನ ಕೆಲ ದಿನಗಳಿಂದ ಇವರಿಬ್ಬರ ನಡುವೆ ಯಾವುದೂ ಸರಿಯಿಲ್ವಾ? ಹೀಗೊಂದು ಅನುಮಾನ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿತ್ತಾದರೂ ಪುರಾವೆ ಸಿಕ್ಕಿರಲಿಲ್ಲ. ಇದೀಗ ಸಾಕ್ಷಿ ಸಿಕ್ಕಿದೆ. ಫ್ಯಾನ್ಸ್‌ ವಲಯದಲ್ಲಿ ಬಗೆಬಗೆ ಚರ್ಚೆಗಳು ನಡೆಯುತ್ತಿವೆ.

ಕಾವೇರಿ ಹೋರಾಟಕ್ಕೆ ಚಿತ್ರೋದ್ಯಮದ ಬೆಂಬಲ ಇದೇ ಅನ್ನೋ ಕಾರಣಕ್ಕೆ ಚಂದನವನದ ಬಹುತೇಕ ಎಲ್ಲ ಕಲಾವಿದರು, ತಂತ್ರಜ್ಞರು ಫಿಲಂ ಚೇಂಬರ್‌ ಬಳಿಯ ವೇದಿಕೆ ಮೇಲೆ ಒಂದೆಡೆ ಸೇರಿ, ಕಾವೇರಿ ನಮ್ಮದು ಎಂದು ಒಕ್ಕೊರಲಲ್ಲಿ ಹೇಳಿಕೊಂಡಿದ್ದರು. ಹಿರಿಯ ನಟರಾದ ಶ್ರೀನಾಥ್, ಶ್ರೀನಿವಾಸ್‌ ಮೂರ್ತಿ, ಶಿವರಾಜ್‌ಕುಮಾರ್‌, ಹಂಸಲೇಖ, ಉಮಾಶ್ರೀ, ದುನಿಯಾ ವಿಜಯ್‌, ದರ್ಶನ್‌, ಧ್ರುವ ಸರ್ಜಾ, ವಸಿಷ್ಠ ಸಿಂಹ, ಶ್ರೀನಗರ ಕಿಟ್ಟಿ, ಶ್ರುತಿ, ಪೂಜಾ ಗಾಂಧಿ ಇನ್ನೂ ಹತ್ತಾರು ಜನ ಬೃಹತ್‌ ವೇದಿಕೆ ಮೇಲೆ ಆಸೀನರಾಗಿ, ಕಾವೇರಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದಿದ್ದರು. ಇದೇ ವೇದಿಕೆ ಮೇಲೆ ಇನ್ನೊಂದು ವೈಮನಸ್ಸು ಕ್ಯಾಮರಾ ಕಣ್ಣುಗಳಲ್ಲಿ ಕಂಡಿದೆ. ಸೋಷಿಯಲ್‌ ಮೀಡಿಯಾದಲ್ಲಿ ಫಾನ್ಸ್‌ ಸಹ ಈ ಕುರಿತು ಚರ್ಚೆ ಮಾಡುತ್ತಿದ್ದಾರೆ.

ಹಾಗಾದರೆ ಅಷ್ಟಕ್ಕೂ ಆಗಿದ್ದೇನು? ಉತ್ತರ ಹೀಗಿದೆ. ಬೃಹತ್‌ ವೇದಿಕೆ ಮೇಲೆ ಕನ್ನಡದ ಬಹುತೇಕ ಕಲಾವಿದರು ತಂತ್ರಜ್ಞರು ಆಸೀನರಾಗಿದ್ದರು. ಈ ವೇಳೆ ದರ್ಶನ್‌ ಆಗಮಿಸುತ್ತಿದ್ದಂತೆ, ವೇದಿಕೆ ಮುಂಭಾಗದಲ್ಲಿ ನಿಂತವರೆಲ್ಲ ಎದ್ದು ನಿಂತರು. ಇತ್ತ ಹಿರಿಯರ ಕಾಲಿಗೆ ನಮಸ್ಕರಿಸಿದ ದರ್ಶನ್‌ ಶಿವಣ್ಣನಿಗೆ ಅಪ್ಪುಗೆ ನೀಡಿ ಅವರ ಆಶೀರ್ವಾದವನ್ನೂ ಪಡೆದುಕೊಂಡರು. ಆದರೆ, ದರ್ಶನ್‌ ಆಗಮಿಸುತ್ತಿದ್ದಂತೆ, ತನಗೇನು ಗೊತ್ತೇ ಇಲ್ಲ ಎಂಬಂತೆ ಕುಳಿತಿದ್ದರು ಧ್ರುವ ಸರ್ಜಾ. ಸೌಜನ್ಯಕ್ಕೂ ದರ್ಶನ್‌ ಜತೆಗೆ ಮಾತನಾಡಲಿಲ್ಲ. ಅಷ್ಟೇ ಅಲ್ಲ ದರ್ಶನ್‌ ನೋಡಿ ಅವರ ಮೊಗದಲ್ಲಿ ನಗುವೂ ಕಾಣಲಿಲ್ಲ. ಈ ಮುನಿಸಿನ ಫೋಟೋಗಳು ವೈರಲ್‌ ಆಗುತ್ತಿದ್ದಂತೆ, ನೆಟ್ಟಿಗರು ಇಬ್ಬರ ನಡುವೆ ಯಾವುದೂ ಸರಿಯಿಲ್ಲ ಎಂದು ಬಗೆಬಗೆ ಕಾಮೆಂಟ್‌ ಹಾಕಿ ಪ್ರತಿಕ್ರಿಯಿಸುತ್ತಿದ್ದಾರೆ.

ಇದಲ್ಲದೇ ಹರಿದಾಡುತ್ತಿರುವ ಫೋಟೋಗಳಲ್ಲಿಯೂ ಧ್ರುವ ಕೊಂಚ ಮಂಕಾಗಿದ್ದರು. ವೇದಿಕೆ ಮೇಲಿದ್ದಷ್ಟು ಹೊತ್ತು ಅವರ ಮೊಗದಲ್ಲಿ ಸಣ್ಣ ನಗುವೂ ಕಾಣಲಿಲ್ಲ. ಫೋಟೋಗಳಲ್ಲಿಯೂ ಗಂಭೀರ ವದನನಾಗಿ ಧ್ರುವ ಕಾಣಿಸಿಕೊಂಡಿದ್ದರು. ವಸಿಷ್ಠ ಸಿಂಹ, ದರ್ಶನ್‌, ಶಿವಣ್ಣ ಮತ್ತು ಧ್ರುವ ಸರ್ಜಾ ಒಟ್ಟಿಗೆ ಒಂದೇ ಗ್ರೂಪ್‌ ಫೋಟೋದಲ್ಲಿ ಕಾಣಿಸಿದರೂ, ಧ್ರುವ ಮಾತ್ರ ಸುಮ್ಮನಿದ್ದರು. ಇತ್ತ ದರ್ಶನ್‌ ಮೈಕ್‌ ಹಿಡಿದು ಮಾತಿಗಿಳಿಯುತ್ತಿದ್ದಂತೆ, ವೇದಿಕೆಯಿಂದ ಪ್ರತಿಭಟನೆಯನ್ನು ಮೊಟಕುಗೊಳಿಸಿ ಹೊರಟೇ ಬಿಟ್ಟರು ಧ್ರುವ.

ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್‌ ಆಗುತ್ತಿದ್ದಂತೆ, ಈ ವರೆಗೂ ದರ್ಶನ್‌ ದರ್ಶನ್‌ ಎನ್ನುತ್ತಿದ್ದ ಧ್ರುವ ಅವರಿಗೇನಾಗಿದೆ? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಬೆಳೆಯುವಾಗ ಡಿಬಾಸ್‌ ಬೇಕು ಬೆಳೆದ ಮೇಲೆ ಯಾರೂ ಬೇಡ ಅನ್ನೋ ಹಾಗಾಗಿದೆ ಎಂದು ಇನ್ನು ಕೆಲವರು ತಮ್ಮ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. 

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner