ಇಡೀ ದಿನ ಆ ಹುಡುಗಿ ಹಿಂದೆಯೇ ಸುತ್ತಾಡಿದ್ದೆ; ಸ್ಕೂಲ್ ಕ್ರಶ್ ನೆನೆದ ರಕ್ಷಿತ್ ಶೆಟ್ಟಿ
ಈ ಹುಡುಗಿ ಬಗ್ಗೆ ಮೊದಲು ಈ ರೀತಿ ಅನಿಸಿರಲಿಲ್ಲ, ಇವತ್ತು ಏಕೆ ಹೀಗೆ ಆಗ್ತಿದೆ ಎಂದುಕೊಂಡೆ. ಆ ದಿನ ಇಡೀ ಟ್ರಿಪ್ ಮುಗಿಯುವವರೆಗೂ ಅವಳ ಹಿಂದೆಯೇ ಸುತ್ತಾಡಿದ್ದೆ'' ಎಂದು ರಕ್ಷಿತ್ ಶೆಟ್ಟಿ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 1 ರಂದು ತೆರೆ ಕಂಡ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅಭಿನಯದ 'ಸಪ್ತ ಸಾಗರದದಾಚೆ ಎಲ್ಲೋ' ಸಿನಿಮಾ ಸಕ್ಸಸ್ ಆಗಿದೆ. ಸಿನಿಮಾ ನೋಡಿ ತೆಲುಗು ಮಂದಿ ಕೂಡಾ ಫಿದಾ ಆಗಿದ್ದಾರೆ. ತೆಲುಗಿನಲ್ಲಿ ಈ ಸಿನಿಮಾ 'ಸಪ್ತ ಸಾಗರಲು ದಾಟಿ' ಹೆಸರಿನಲ್ಲಿ ರಿಲೀಸ್ ಆಗಿದೆ. ಸೈಡ್ ಬಿ ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ.
ಸ್ಕೂಲ್ ಕ್ರಶ್ ನೆನೆದ ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಕೆಮಿಸ್ಟ್ರಿಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಒಂದು ಸುಂದರ ಪ್ರೇಮ ಕಥೆ. ಸಿನಿಮಾ ಪ್ರಮೋಷನ್ ಸಮಯದಲ್ಲಿ ಫಿಲ್ಮ್ ಕಂಪ್ಯಾನಿಯನ್ ಸೌತ್ ಎಂಬ ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರುಕ್ಮಿಣಿ ವಸಂತ್, ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ತಮ್ಮ ಕ್ರಶ್‌ಗಳ ಬಗ್ಗೆ ಮಾತನಾಡಿದ್ದಾರೆ. ರಕ್ಷಿತ್ ಶೆಟ್ಟಿ ಸ್ಕೂಲ್ ಟ್ರಿಪ್‌ಗೆ ಹೋದಾಗ ನಡೆದ ಘಟನೆಯನ್ನು ಹಂಚಿಕೊಂಡಿದ್ದು ಆ ವಿಡಿಯೋ ವೈರಲ್ ಆಗುತ್ತಿದೆ.
ಟ್ರಿಪ್ ಮುಗಿಯುವವರೆಗೂ ಆ ಹುಡುಗಿ ಹಿಂದೆ ಸುತ್ತಾಡಿದ್ದೆ
ಸ್ಕೂಲ್‌ನಲ್ಲಿ ಆಗಿದ್ದನ್ನು ಲವ್ ಎನ್ನಲು ಸಾಧ್ಯವಿಲ್ಲ, ಅದನ್ನು ಕ್ರಶ್ ಎನ್ನಬಹುದು. ''ಒಮ್ಮೆ ಸ್ಕೂಲ್ ಟ್ರಿಪ್ ಹೋಗಿದ್ದೆವು. ಬಸ್‌ನಲ್ಲಿ ನಾನು ಲಾಸ್ಟ್ ಸೀಟ್‌ನಲ್ಲಿ ಕೂತಿದ್ದೆ. ಆಗ ಒಂದು ಹುಡುಗಿ ಬಂದಳು. ಆಕೆ 6ನೇ ಕ್ಲಾಸ್‌ನಿಂದಲೂ ನನ್ನ ಕ್ಲಾಸ್‌ಮೇಟ್. ಆದರೆ ಆಕೆಯನ್ನು ನಾನು ಗಮನಿಸಿರಲಿಲ್ಲ. ಆಕೆ ಬಸ್ ಹತ್ತಿ ಕುಳಿತುಕೊಂಡಳು, ಒಮ್ಮೆ ನನ್ನತ್ತ ತಿರುಗಿ ನೋಡಿ ನಕ್ಕಳು, ಕೆಲವು ಸೆಕೆಂಡ್‌ಗಳ ಕಾಲ ನನ್ನ ಮನಸ್ಸಿಗೆ ಏನೋ ಒಂದು ವಿಭಿನ್ನ ಅನುಭವ ಆಯ್ತು. ಈ ಹುಡುಗಿ ಬಗ್ಗೆ ಮೊದಲು ಈ ರೀತಿ ಅನಿಸಿರಲಿಲ್ಲ, ಇವತ್ತು ಏಕೆ ಹೀಗೆ ಆಗ್ತಿದೆ ಎಂದುಕೊಂಡೆ. ಆ ದಿನ ಇಡೀ ಟ್ರಿಪ್ ಮುಗಿಯುವವರೆಗೂ ಅವಳ ಹಿಂದೆಯೇ ಸುತ್ತಾಡಿದ್ದೆ'' ಎಂದು ರಕ್ಷಿತ್ ಶೆಟ್ಟಿ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ವಿಡಿಯೋಗೆ ನೆಟಿಜನ್ಸ್ ಕಾಮೆಂಟ್ ಮಾಡಿದ್ದಾರೆ. ಈ ಲವ್, ಕ್ರಶ್ ಅನ್ನೋದು ಎಲ್ಲಾ ಹುಡುಗರ ವೀಕ್‌ನೆಸ್ ಎಂದು ನೆಟಿಜನ್ ಒಬ್ಬರು ಕಾಮೆಂಟ್ ಮಾಡಿದ್ಧಾರೆ. ಇನ್ನೊಬ್ಬರು ರಶ್ಮಿಕಾ ಹೆಸರನ್ನು ಪ್ರಸ್ತಾಪಿಸಿದ್ದಾರೆ.
ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾ
'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾವನ್ನು ಪರಮ್ವಃ ಸ್ಟುಡಿಯೋಸ್ ಬ್ಯಾನರ್ ಅಡಿ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಹೇಮಂತ್ ರಾವ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಜೊತೆಗೆ ಚೈತ್ರಾ ಆಚಾರ್, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ಅವಿನಾಶ್, ಶರತ್ ಲೋಹಿತಾಶ್ವ ಹಾಗೂ ಇನ್ನಿತರರು ನಟಿಸಿದ್ದಾರೆ.