Annayya Serial: ಅಪ್ಪನ ಕಣ್ತಪ್ಪಿಸಿ ಶಿವು ಸಹಾಯ ಪಡೆದು ಮೆಡಿಕಲ್ ಕ್ಯಾಂಪ್‌ಗೆ ಹೋದ ಪಾರು, ಮುಂದಾಗಿದ್ದೇನು ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಅಪ್ಪನ ಕಣ್ತಪ್ಪಿಸಿ ಶಿವು ಸಹಾಯ ಪಡೆದು ಮೆಡಿಕಲ್ ಕ್ಯಾಂಪ್‌ಗೆ ಹೋದ ಪಾರು, ಮುಂದಾಗಿದ್ದೇನು ನೋಡಿ

Annayya Serial: ಅಪ್ಪನ ಕಣ್ತಪ್ಪಿಸಿ ಶಿವು ಸಹಾಯ ಪಡೆದು ಮೆಡಿಕಲ್ ಕ್ಯಾಂಪ್‌ಗೆ ಹೋದ ಪಾರು, ಮುಂದಾಗಿದ್ದೇನು ನೋಡಿ

Annayya Serial Kannada: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಪಾರು ಅಪ್ಪನ ಕಣ್ತಪ್ಪಿಸಿ ಶಿವು ಸಹಾಯ ಪಡೆದು ಮೆಡಿಕಲ್ ಕ್ಯಾಂಪ್‌ಗೆ ಹೋಗಿದ್ದಾಳೆ. ಅಷ್ಟೇ ಅಲ್ಲ ಯಾರೋ ಹೊಸ ವ್ಯಕ್ತಿಯ ಪರಿಚಯವನ್ನು ಅವಳು ಈಗ ಶಿವುಗೆ ಮಾಡಿಸಲಿದ್ದಾಳೆ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ

ಶಿವು ತನ್ನ ತಂಗಿ ರಮ್ಯಾ ಶಾಸ್ತ್ರವನ್ನು ತುಂಬಾ ಸಡಗರ ಹಾಗೂ ಸಂಭ್ರಮದಿಂದ ಮಾಡಿದ್ದಾನೆ. ಆದರೆ ರಮ್ಯಾ ಅವನ ಸ್ವಂತ ತಂಗಿ ಅಲ್ಲ ಎಂಬ ವಿಷಯವನ್ನು ಗೌಡರು ಅವಳಿಗೆ ತಿಳಿಸಲು ಹೋಗಿದ್ದರು. ಆಗ ಶಿವ ಕಾಡಿಬೇಡಿ ಮಾವನನ್ನು ತಡೆದಿದ್ದಾನೆ. ಸತ್ಯ ಹೇಳಬೇಕು ಎಂದುಕೊಂಡರೂ ಕೊನೆಗೆ ಅವನ ಮಾತನ್ನು ಕೇಳಿ ಮಾವ ಬೇಕು ಎಂದೇ ಸುಮ್ಮನಾಗಿದ್ದಾನೆ. ಅದಾದ ನಂತರ ತುಂಬಾ ಅಲಂಕಾರ ಮಾಡಿಕೊಂಡು ತಲೆ ಕೂದಲನ್ನು 10 ಬಾರಿ ಬಾಚಿಕೊಂಡು, ತಂಗಿಯರ ಸೆಂಟ್ ಹಾಕಿಕೊಂಡು, ಶಿವು ಫುಲ್ ರೆಡಿಯಾಗಿದ್ದಾನೆ.

ಅವನು ಯಾಕೆ ಅಷ್ಟೊಂದು ರೆಡಿಯಾಗಿದ್ದಾನೆ? ಎಂದು ತಂಗಿಯರಿಗೆಲ್ಲ ಆಶ್ಚರ್ಯ ಆಗಿದೆ. ಆನಂತರದಲ್ಲಿ ಮಾವನ ಹತ್ತಿರ ಅವನ ಇಬ್ಬರು ಹೆಂಡತಿಯರು "ಪಾರ್ವತಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತೇವೆ. ನಾವು ಹರಕೆ ಹೊತ್ತಿದ್ದೆವು. ಅವಳ ಎಂಗೇಜ್ಮೆಂಟ್ ಸರಾಗವಾಗಲಿ ಎಂದು ಅದು ಈಗ ನೆರವೇರಿದೆ ಹಾಗಾಗಿ ನಾವು ಹೋಗಿಬರುತ್ತೇವೆ ನೀವು ಒಪ್ಪಿಗೆ ಕೊಡಬೇಕು" ಎಂದು ಕೇಳುತ್ತಾರೆ.

ಆಗ ಮಾವಯ್ಯ ಆಯ್ತು ಹೋಗಿ ಬನ್ನಿ ಎಂದು ಹೇಳುತ್ತಾರೆ. ಹಾಗೆ ಸುಳ್ಳು ಹೇಳಿಕೊಂಡು ಪಾರ್ವತಿಯನ್ನ ಅವರು ಕರೆದುಕೊಂಡು ದೇವಸ್ಥಾನಕ್ಕೆ ಬರುತ್ತಾರೆ. ಅಲ್ಲಿಂದ ಶಿವು ಅವಳನ್ನು ಮೆಡಿಕಲ್ ಕ್ಯಾಂಪ್ಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ತುಂಬಾ ಎಮರ್ಜೆನ್ಸಿ ಇರುತ್ತದೆ. ಒಂದು ಮಹಿಳೆ ಅವಳಿಗೆ ಪ್ರಸವ ವೇದನೆ ಆರಂಭವಾಗಿರುತ್ತದೆ. ಆದರೆ ಆ ಜಾಗಕ್ಕೆ ಬಂದ ಬೇರೆಯವರು ಈ ಜಾಗವನ್ನು ಕೂಡಲೇ ಖಾಲಿ ಮಾಡಬೇಕು ಇದು ನಮ್ಮ ಜಾಗ ಎಂದು ದಬ್ಬಾಳಿಕೆ ಮಾಡುತ್ತಾರೆ.

ಆಗ ಶಿವು ಅವರನ್ನೆಲ್ಲ ಹೊಡೆದು ಹೆರಿಗೆ ಆಗುವಷ್ಟು ಸಮಯ ಹೇಗೋ ಆ ಜಾಗವನ್ನು ಸಂರಕ್ಷಿಸುತ್ತಾನೆ. ಅದಾದ ನಂತರ ಪಾರ್ವತಿ ಅವನಿಗೆ ಧನ್ಯವಾದ ತಿಳಿಸುತ್ತಾಳೆ. ನಿನಗೊಂದು ಸರ್ಪ್ರೈಸ್ ಇದೆ ಬಾ ಎಂದು ಕರೆದುಕೊಂಡು ಹೋಗುತ್ತಾಳೆ. ಆಗ ಕಾರಿನಿಂದ ಯಾರೋ ಒಬ್ಬ ವ್ಯಕ್ತಿ ಇಳಿದಿದ್ದಾನೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಣಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner