Actress Siri Marriage: ಬಿಗ್‌ಬಾಸ್‌ ಕನ್ನಡದ ಸಿರಿಗೆ ಮದುವೆ ಸಂಭ್ರಮ: ರಾಮಚಾರಿ ಸೀರಿಯಲ್‌ ನಟಿಯ ಸಿಂಪಲ್‌ ಮ್ಯಾರೇಜ್‌ ಸ್ಟೋರಿ
ಕನ್ನಡ ಸುದ್ದಿ  /  ಮನರಂಜನೆ  /  Actress Siri Marriage: ಬಿಗ್‌ಬಾಸ್‌ ಕನ್ನಡದ ಸಿರಿಗೆ ಮದುವೆ ಸಂಭ್ರಮ: ರಾಮಚಾರಿ ಸೀರಿಯಲ್‌ ನಟಿಯ ಸಿಂಪಲ್‌ ಮ್ಯಾರೇಜ್‌ ಸ್ಟೋರಿ

Actress Siri Marriage: ಬಿಗ್‌ಬಾಸ್‌ ಕನ್ನಡದ ಸಿರಿಗೆ ಮದುವೆ ಸಂಭ್ರಮ: ರಾಮಚಾರಿ ಸೀರಿಯಲ್‌ ನಟಿಯ ಸಿಂಪಲ್‌ ಮ್ಯಾರೇಜ್‌ ಸ್ಟೋರಿ

Actress Siri marriage: ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಸ್ಪರ್ಧಿ ಸಿರಿ ಶುಭವಿವಾಹ ಚಿಕ್ಕಬಳ್ಳಾಪುರದ ನಂದಿಗ್ರಾಮದಲ್ಲಿ ನಡೆದಿದೆ. ಹೆಚ್ಚು ಪ್ರಚಾರವಿಲ್ಲದೆ ಸರಳವಾಗಿ ವೈವಾಹಿಕ ಜೀವನಕ್ಕೆ ಪ್ರವೇಶಿಸಿದ್ದಾರೆ.

ಕಿರುತೆರೆ ನಟಿ ಸಿರಿ ಮದುವೆ
ಕಿರುತೆರೆ ನಟಿ ಸಿರಿ ಮದುವೆ

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಸ್ಪರ್ಧಿ ಸಿರಿ ಶುಭವಿವಾಹ ಚಿಕ್ಕಬಳ್ಳಾಪುರದ ನಂದಿಗ್ರಾಮದಲ್ಲಿ ನಡೆದಿದೆ. ಹೆಚ್ಚು ಪ್ರಚಾರವಿಲ್ಲದೆ ಸರಳವಾಗಿ ವೈವಾಹಿಕ ಜೀವನಕ್ಕೆ ಪ್ರವೇಶಿಸಿದ್ದಾರೆ. ಇವರ ವಿವಾಹದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ರಂಗೋಲಿ, ಮನೆಯೊಂದು ಮೂರು ಬಾಗಿಲು, ಬದುಕು, ರಾಮಚಾರಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಸಿರಿ ನಟಿಸಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ಪರಭಾಷೆಯ ಸೀರಿಯಲ್‌ಗಳಲ್ಲೂ ಸಿರಿ ನಟಿಸುತ್ತಿದ್ದಾರೆ.

ಮದುಮಗ ಯಾರು?

ಸಿರಿ ಅವರು ಉದ್ಯಮಿ ಪ್ರಭಾಕರ್‌ ಅವರನ್ನು ವಿವಾಹವಾಗಿದ್ದಾರೆ. ಮಂಡ್ಯ ಮೂಲದ ಪ್ರಭಾಕರ್‌ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಸಿರಿ ಮತ್ತು ಪ್ರಭಾಕರ್‌ ಅವರ ವಿವಾಹ ಜೂನ್‌ 13ರಂದು ನಡೆದಿದೆ.

 

30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಸದ್ಯ ಇವರ ಮದುವೆ ಫೋಟೋಸ್‌, ವಿಡಿಯೋಸ್‌ ನೋಡಿ ಸೋಷಿಯಲ್‌ ಮೀಡಿಯಾದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ಇವರ ಮದುವೆಯಾ? ಯಾವುದೋ ಸೀರಿಯಲ್‌ ಶೂಟಿಂಗ್‌ ಇರಬೇಕು? ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. ಆದರೆ, ಸಿರಿಯವರು ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿವಾಹದ ಫೋಟೋ ಹಾಕಿ ಮದುವೆಯಾಗಿರುವುದನ್ನು ಖಚಿತಪಡಿಸಿದ್ದಾರೆ.

ಎರಡು ದಿನಗಳ ಹಿಂದೆಯೇ ಮೈತುಂಬ ಅರಿಷಿಣ ಹಚ್ಚಿರುವ ಸಿರಿ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ಕಾಣಿಸಿಕೊಂಡಿತ್ತು. ಆದರೆ, ಇದ್ಯಾವುದೋ ಶೂಟಿಂಗ್‌ ವಿಡಿಯೋ ಎಂದು ಜನರು ಅಂದುಕೊಂಡಿದ್ದರು. ಆದರೆ, ಇದೀಗ ಅವರ ಮದುವೆ ಸ್ಟೋರಿ ಎಲ್ಲರಿಗೂ ಗೊತ್ತಾಗಿದೆ. ಸುಮಾರು 40 ವರ್ಷ ವಯಸ್ಸಿನ ಕನ್ನಡದ ಜನಪ್ರಿಯ ನಟಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಸಿರಿ ಅವರು ಕನ್ನಡ ಕಿರುತೆರೆಯಲ್ಲಿ ಸುಮಾರು 30 ವರ್ಷಕ್ಕೂ ಹೆಚ್ಚು ಕಾಲದಿಂದ ನಟಿಸುತ್ತಿದ್ದಾರೆ. ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

Whats_app_banner