ಅಮೃತಧಾರೆ ಸೀರಿಯಲ್‌: ಬಲವಂತದ ಮದುವೆ ವ್ಯಾಲಿಡ್‌ ಅಲ್ಲ ಅಂದ ಕೇಡಿ; ಮಲ್ಲಿ ಜೈದೇವ್‌ ಮ್ಯಾರೇಜ್‌ ರಿಜಿಸ್ಟ್ರೇಷನ್‌ ಮಾಡಿಸಿಯೇ ಬಿಟ್ರು ಭೂಮಿಕಾ-televison news amrithadhaare kannada serial episode 209 malli jaidev marriage registation bhumika won pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ ಸೀರಿಯಲ್‌: ಬಲವಂತದ ಮದುವೆ ವ್ಯಾಲಿಡ್‌ ಅಲ್ಲ ಅಂದ ಕೇಡಿ; ಮಲ್ಲಿ ಜೈದೇವ್‌ ಮ್ಯಾರೇಜ್‌ ರಿಜಿಸ್ಟ್ರೇಷನ್‌ ಮಾಡಿಸಿಯೇ ಬಿಟ್ರು ಭೂಮಿಕಾ

ಅಮೃತಧಾರೆ ಸೀರಿಯಲ್‌: ಬಲವಂತದ ಮದುವೆ ವ್ಯಾಲಿಡ್‌ ಅಲ್ಲ ಅಂದ ಕೇಡಿ; ಮಲ್ಲಿ ಜೈದೇವ್‌ ಮ್ಯಾರೇಜ್‌ ರಿಜಿಸ್ಟ್ರೇಷನ್‌ ಮಾಡಿಸಿಯೇ ಬಿಟ್ರು ಭೂಮಿಕಾ

Amrithadhaare Kannada Serial: ಪೊಲೀಸ್‌ ದೂರು ನೀಡಿದ್ದು ಸ್ವತಃ ಜೈದೇವ್‌ ಅನ್ನೋ ಸತ್ಯ ಭೂಮಿಕಾಳಿಗೆ ತಿಳಿಯುತ್ತದೆ. ಬಲವಂತದ ಮದುವೆ ಮದುವೆಯೇ ಅಲ್ಲ ಎಂದು ಜೈದೇವ್‌ ಹೇಳುತ್ತಾನೆ. ಇನ್ಮುಂದೆ ನಾನೂ ಆಟ ಆಡ್ತಿನಿ ಅನ್ತಾರೆ ಭೂಮಿಕಾ. ಮಲ್ಲಿ ಜೈದೇವ್‌ ಮದುವೆ ರಿಜಿಸ್ಟ್ರೇಷನ್‌ ಅನ್ನು ಉಪಾಯದಿಂದ ಮಾಡುತ್ತಾರೆ.

ಮಲ್ಲಿ ಜೈದೇವ್‌ ಮ್ಯಾರೇಜ್‌ ರಿಜಿಸ್ಟ್ರೇಷನ್‌
ಮಲ್ಲಿ ಜೈದೇವ್‌ ಮ್ಯಾರೇಜ್‌ ರಿಜಿಸ್ಟ್ರೇಷನ್‌

Amrithadhaare Serial Story: ಭೂಮಿಕಾ ಪೊಲೀಸರಿಗೆ ಹೇಳಿರೋಲ್ಲ ಎಂದು ಗೌತಮ್‌ ಹೇಳುತ್ತಾನೆ. ಪೊಲೀಸರು ಹೇಳ್ತಾರೆ ಭೂಮಿಕಾ ಹೇಳಿದ್ದು ಅಂತ ಎನ್ನುತ್ತಾಳೆ ಶಕುಂತಲಾ ದೇವಿ ಹೇಳ್ತಾರೆ. "ಜೈದೇವ್‌ಗೆ ಬುದ್ಧಿ ಹೇಳಿ" ಎಂದು ಗೌತಮ್‌ ಹೇಳುತ್ತಾನೆ. ಶಕುಂತಲಾದೇವಿ ತನ್ನ ಹಠ ಬಿಡುವುದಿಲ್ಲ. ಮಾನ್ಯ ವಿಷಯವೂ ಬರುತ್ತದೆ. ಯಾವುದೇ ಕಾರಣಕ್ಕೂ ಭೂಮಿಕಾಳನ್ನು ಹರ್ಟ್‌ ಮಾಡಬೇಡಿ ಎಂದು ಗೌತಮ್‌ ಹೇಳುತ್ತಾನೆ. "ನನಗೆ ಬುದ್ಧಿವಾದ ಹೇಳುವಷ್ಟು ಮುಂದುವರೆದೆಯ, ಭೂಮಿಕಾಳನ್ನು ಸುಮ್ಮನೆ ಬಿಡಲಾರೆ" ಎಂದು ಶಕುಂತಲಾದೇವಿ ಸ್ವಗತ ಇರುತ್ತದೆ.

ಇನ್ನೊಂದೆಡೆ ಕಂಪ್ಲೇಟ್‌ ಕೊಟ್ಟದ್ದು ಯಾರು ಎಂದು ಭೂಮಿಕಾ ಯೋಚಿಸುತ್ತಾರೆ. ಜೈದೇವ್‌ ಪ್ರತಿಕ್ರಿಯೆಗಳನ್ನು ಯೋಚಿಸಿದಾಗ ಇದು ಜೈದೇವ್‌ನದ್ದೇ ಕೆಲಸ ಎನ್ನುವುದು ಭೂಮಿಕಾಳಿಗೆ ಅರ್ಥವಾಗುತ್ತದೆ. ಜೈದೇವ್‌ ಬಳಿಗೆ ಭೂಮಿಕಾ ಬರುತ್ತಾರೆ. "ಕೊನೆಗೂ ನಿಮ್ಮ ಬುದ್ದಿ ತೋರಿಸಿದ್ದೀರಿ. ತಪ್ಪು ಮಾಡಿ ತಿದ್ದಿ ಕೊಳ್ಳದೆ ಇರೋದೇ ದೊಡ್ಡ ತಪ್ಪು ಎನ್ನುತ್ತಾರೆ ಭೂಮಿಕಾ. "ದಾರಿ ತಪ್ಪಿದ ಮಗ" ಎನ್ನುತ್ತಾರೆ. "ನೀವು ಟೀಚರ್‌ ಅನ್ನೋದು ಗೊತ್ತಿತ್ತು" "ಎನ್ನುತ್ತಾನೆ ಗೌತಮ್‌. "ನೀವಾಗಿ ನೀವೇ ಕಂಪ್ಲೇಟ್‌ ಕೊಟ್ಟು ನನ್ನ ಹೆಸರು ಬರೋ ರೀತಿ ಮಾಡಿದ್ರಿ ಅಲ್ವ" ಎಂದು ಭೂಮಿಕಾ ಕೇಳುತ್ತಾಳೆ. "ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದ್ರಿ" ಎನ್ನುತ್ತಾಳೆ.

"ಇಷ್ಟು ದಿನ ನೀವು ಒಬ್ರೇ ಆಡಿದ್ರಿ, ಇನ್ನು ಮುಂದೆ ನಾನೂ ಆಟ ಆಡ್ತಿನಿ" ಎಂದು ಭೂಮಿಕಾ ಹೇಳುತ್ತಾಳೆ. "ಯಾರು ಗೆಲ್ತಾರೆ ನೋಡೇ ಬಿಡೋಣ" ಎನ್ನುತ್ತಾರೆ. "ಏನ್‌ ಟೀಚರ್‌ ಚಾಲೇಂಜಾ? ನಾನು ಸತ್ಯನೇ ಹೇಳ್ತಿನಿ ಕೇಳ್ತಿನಿ. ಮಲ್ಲಿ ಜತೆ ಪ್ರೀತಿಯ ನಾಟಕ ಆಡಿದೆ. ಗಾಡಿ ಟೆಸ್ಟ್‌ ಡ್ರೈವ್‌ ಮಾಡಿದ ಹಾಗೆ" ಎಂದೆಲ್ಲ ಹೇಳುತ್ತಾನೆ. "ಅಕ್ಕ ತಂಗಿಯರ ಜತೆ ಹುಟ್ಟಿದವರು ಹೀಗೆ ಮಾತನಾಡ್ತಾರ?" ಎಂದು ಭೂಮಿಕಾ ಹೇಳುತ್ತಾಳೆ. "ಮಲ್ಲಿ ಜತೆ ಸಂಸಾರ ಮಾಡಬೇಕು" ಎಂದು ಭೂಮಿಕಾ ಹೇಳಿದಾಗ "ಈ ಮದುವೆ ವ್ಯಾಲಿಡೇ ಅಲ್ಲ. ಬಲವಂತದಿಂದ ಕಟ್ಟಿಸಿದ ತಾಳಿ ಮದುವೆಯೇ ಅಲ್ಲ" ಎಂದು ಗೌತಮ್‌ ಹೇಳುತ್ತಾನೆ. ಭೂಮಿಕಾ ಯೋಚನೆಗೆ ಬೀಳುತ್ತಾಳೆ.

ಇನ್ನೊಂದೆಡೆ ಜೀವನ್‌ ಮತ್ತು ಮಹಿಮಾ ಪ್ರೀತಿಯ ಮಾತುಗಳು ಇರುತ್ತವೆ. "ನನಗೆ ನೀನು ಟನ್‌ಗಟ್ಟಲೆ ಇಷ್ಟ" ಎಂದೆಲ್ಲ ಮಹಿಮಾ ಹೇಳುತ್ತಾಳೆ. "ನಿನಗೆ ಪ್ರೀತಿ ಸಪ್ಲೈ ಮಾಡುವ ಡೀಲರ್‌ ನಾನಾಗ್ತಿನಿ" ಎಂದು ಜೀವನ್‌ ಹೇಳುತ್ತಾನೆ. ಒಂದಿಷ್ಟು ಮುತ್ತುಗಳ ವಿನಿಮಯವಾಗುತ್ತದೆ.

ಮಲ್ಲಿ ಜೈದೇವ್‌ ಮ್ಯಾರೇಜ್‌ ರಿಜಿಸ್ಟ್ರೇಷನ್‌

ಇನ್ನೊಂದೆಡೆ ಗೌತಮ್‌ ಮತ್ತು ಭೂಮಿಕಾ ಮಾತನಾಡುತ್ತ ಇರುವಾಗ ಆನಂದ್‌ ಆಗಮಿಸುತ್ತಾನೆ. ಒಂದಿಷ್ಟು ತಮಾಷೆ ಮಾತುಕತೆ ನಡೆಯುತ್ತದೆ. "ಆಫೀಸ್‌ನಲ್ಲಿ ಡಾಕ್ಯುಮೆಂಟೇಷನ್‌ ಮಾಡಬೇಕಿತ್ತು. ಮ್ಯಾರೇಜ್‌ ಸರ್ಟಿಫಿಕೇಟ್‌ ಬೇಕಿತ್ತು" ಎನ್ನುತ್ತಾನೆ ಆನಂದ್‌ ಹೇಳುತ್ತಾನೆ. "ಮದುವೆಯಾದ ತಕ್ಷಣ ಮ್ಯಾರೇಜ್‌ ಸರ್ಟಿಫಿಕೇಟ್‌ ಮಾಡಿಸಬೇಕು" ಎಂದು ಆನಂದ್‌ ಹೇಳುತ್ತಾನೆ. ಸ್ವಲ್ಪ ಹೊತ್ತಲ್ಲಿ ಮನೆಗೆ ಮದುವೆ ನೋಂದಣಿಗೆ ಅಧಿಕಾರಿ ಬರುತ್ತಾರೆ. ಆನಂದ್‌ ಜತೆ ಅಧಿಕಾರಿ ಬರುತ್ತಾನೆ. ಗೌತಮ್‌ ಮತ್ತು ಭೂಮಿಕಾ ಡಾಕ್ಯುಮೆಂಟ್‌ ನೀಡುತ್ತಾರೆ.

ಈ ಸಮಯದಲ್ಲಿ ಭೂಮಿಕಾಳಿಗೆ ಏನೋ ಯೋಚನೆ ಬರುತ್ತದೆ. "ಸರ್‌ ನಮ್ಮ ಜತೆ ಇನ್ನೊಂದು ಜೋಡಿ ಇದೆ. ಅವರದ್ದೂ ರಿಜಿಸ್ಟ್ರೇಷನ್‌ ಮಾಡಿ" ಎನ್ನುತ್ತಾಳೆ ಭೂಮಿಕಾ. ಜೈದೇವ್‌, ಶಕುಂತಲಾ ದೇವಿಗೆ ಟೆನ್ಷನ್‌ ಆಗುತ್ತದೆ. ಡಾಕ್ಯುಮೆಂಟ್ಸ್‌ ತರಲು ಹೇಳಿದಾಗ ಜೈದೇವ್‌ "ಆಫೀಸ್‌ನಲ್ಲಿ ಡಾಕ್ಯುಮೆಂಟ್ಸ್‌ ಇದೆ" ಎನ್ನುತ್ತಾನೆ. "ನೀವು ಆಫೀಸ್‌ಗೆ ಬಂದಾಗ ಒಂದು ಸೆಟ್‌ ದಾಖಲೆ ನನ್ನಲ್ಲಿ ನೀಡಿದ್ರಿ ಅಲ್ವ?" ಎಂದು ಭೂಮಿಕಾಳೇ ಡಾಕ್ಯುಮೆಂಟ್ಸ್‌ ತರುತ್ತಾಳೆ. ಜೈದೇವ್‌ಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಮಲ್ಲಿ ಮುಖದಲ್ಲಿ ಮಂದಹಾಸ ಮೂಡುತ್ತದೆ. ಶಕುಂತಲಾದೇವಿಗೂ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಸಹಿ ಹಾಕುವ ಸಂದರ್ಭದಲ್ಲಿ ಜೈದೇವ್‌ ವಿಚಿತ್ರವಾಗಿ ನಗುತ್ತಾನೆ. ಮಲ್ಲಿಯೂ ಸಹಿ ಹಾಕುತ್ತಾಳೆ. ಎಲ್ಲರೂ ಹೋದ ಬಳಿಕ ಭೂಮಿಕಾ ಜೈದೇವ್‌ಗೆ ಕಂಗ್ರಾಟ್ಸ್‌ ಹೇಳಿ "ಲೀಗಲ್‌ ಮ್ಯಾರೇಜ್‌" ಎನ್ನುತ್ತಾಳೆ. ಬಳಿಕ ಆನಂದ್‌ ಗೌತಮ್‌ ಭೂಮಿಕಾ ಟೀ ಕುಡಿತಾರೆ. "ಕಣ್ಣಾ ಕಣ್ಣಾ ಸಲಿಗೆ" ಎಂದೆಲ್ಲ ಆನಂದ್‌ ಗೇಲಿ ಮಾಡುತ್ತಾನೆ. ಮದುವೆ ರಿಜಿಸ್ಟ್ರೇಷನ್‌ ಪಾರ್ಟಿ ಯಾವಾಗ ಎಂದು ಆನಂದ್‌ ಕೇಳುತ್ತಾನೆ. ಗೌತಮ್‌ಗೆ ಆ ಪಾರ್ಟಿಯ ದಿನ ಭೂಮಿಕಾ ಮತ್ತಿನಲ್ಲಿ ಮುತ್ತು ಕೊಟ್ಟದ್ದು ನೆನಪಾಗುತ್ತದೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಧಾರಾವಾಹಿ ಕಲಾವಿದರ ಪರಿಚಯ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

mysore-dasara_Entry_Point