Amruthadhaare September 28th Episode: ಮಗು ಸಾಯಲು ಜೈದೇವ್ ಕಾರಣ, ಅವರ ಮೋಸವೇ ಕಾರಣ, ಚೆನ್ನಾಗಿ ಯಾಮಾರಿಸಿಬಿಟ್ರಿ- ಮಲ್ಲಿ ಮನದ ಮಾತು
Amruthadhaare September 28th Episode: ಮಲ್ಲಿಗೆ ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದಾಳೆ. ಅವಳಿಗೆ ಜೈದೇವ್‌ನ ಮೋಸ ಕಾಡುತ್ತಿದೆ. ಭೂಮಿಕಾ ಸಾಂತ್ವಾನ ಹೇಳುತ್ತಿದ್ದಾರೆ. ಅಪೇಕ್ಷಾ ತನ್ನ ಎಂದಿನ ಧಿಮಾಕು ಮುಂದುವರೆಸಿದ್ದಾಳೆ. ದಿಯಾ ಮತ್ತು ಜೈದೇವ್ ಹಳೆ ಚಾಳಿ ಮುಂದುವರೆಸಿದ್ದಾರೆ.
Amruthadhaare September 28th Episode: ಕಳೆದುಹೋದ ಮಗುವಿನ ನೆನಪಿನಲ್ಲಿ ಮಲ್ಲಿ ತನ್ನ ಮನೆಯಲ್ಲಿ ಕೊರಗುತ್ತಿದ್ದಾಳೆ. ಕೈಯಲ್ಲಿ ಗೊಂಬೆ ಹಿಡಿದುಕೊಂಡು ಅಳುತ್ತಿದ್ದಾಳೆ. ಯಾಕೆ ದೇವರೆ ಹೀಗೆ ಮಾಡಿದೆ ಎಂದು ಗೋಳಾಡುತ್ತಿದ್ದಾಳೆ. ಆಗ ಅಲ್ಲಿಗೆ ಬಂದ ಭೂಮಿಕಾ ಮಲ್ಲಿಗೆ ಹಾಲು ನೀಡುತ್ತಾಳೆ. ಅಲ್ಲಿಂದ ಹೋಗಬೇಕೆಂದುಕೊಂಡಾಗ ಭೂಮಿಕಾಳ ಕೈಯನ್ನು ಮಲ್ಲಿ ಎಳೆದು "ಅಕ್ಕೋರೆ ನನ್ನ ಕ್ಷಮಿಸಿಬಿಡಿ. ನಿಮ್ಮ ಬಳಿ ಅತಿಯಾಗಿ ಮಾತನಾಡಿಬಿಟ್ಟೆ. ನಿಮ್ಮ ಬಳಿ ಮೊದಲಿನಂತೆ ಇರಲು ಒಂದೇ ಒಂದು ಅವಕಾಶ ನೀಡಿ" ಎಂದು ಅಳುತ್ತಾ ಹೇಳುತ್ತಾಳೆ. ಭೂಮಿಕಾ ಸಾಂತ್ವಾನ ಹೇಳುತ್ತಾರೆ. "ಎಲ್ಲಿ ಪ್ರೀತಿ, ಅಕ್ಕರೆ ಇರುತ್ತೋ ಅಲ್ಲಿ ಬೇಜಾರು ಇರೋದಿಲ್ಲ. ನಿನ್ನ ಬಗ್ಗೆ ತುಂಬಾ ಪ್ರೀತಿ ಇದೆ ಮಲ್ಲಿ" ಎಂದು ಭೂಮಿಕಾ ಹೇಳುತ್ತಾರೆ. "ನಿಮ್ಮದು ದೊಡ್ಡ ಮನಸ್ಸು ಅಕ್ಕೋರೆ" ಎಂದು ಮಲ್ಲಿ ಹೇಳುತ್ತಾಳೆ. "ಅಕ್ಕೋರೆ ನಿಮಗೆ ನೋವು ಕೊಟ್ಟು ಬಿಟ್ಟೆ ಎಂಬ ನೋವು ಬರ್ತಾ ಇದೆ" ಎನ್ನುತ್ತಾಳೆ. "ಅದೇ ಯಾಕೆ ನೋವು ಬರ್ತಾ ಇದೆ" ಎಂದು ಕೇಳುತ್ತಾರೆ ಭೂಮಿಕಾ. "ಬೇಗ ಹುಷರಾಗು" ಎಂದು ಭೂಮಿಕಾ ಹೇಳಿದಾಗ "ಮೈಗಾದ ಗಾಯ ಗುಣವಾಗುತ್ತದೆ ಅಕ್ಕೋರೆ, ಆದರೆ, ಮನಸ್ಸಿಗಾದ ಗಾಯ ಗುಣವಾಗೋದಿಲ್ಲ. ಇಷ್ಟು ದಿನ ಮಗುವಿಗಾಗಿ ಬದುಕಿದ್ದೆ. ಇನ್ನು ಯಾಕೆ ಬದುಕಿರಲಿ. ನಾನು ಮಗುವಿನ ಜತೆಯೇ ಹೋಗಿರಬೇಕಿತ್ತು" ಎಂದು ಹೇಳುತ್ತಾಳೆ ಮಲ್ಲಿ. "ಸಮಧಾನವಾಗಿರು ಎಂದು ಹೇಳೋದು ಕಷ್ಟ. ಆದರೆ, ನಿನಗೆ ಇನ್ನೂ ಅವಕಾಶ ಇದೆ. ಜೀವನದಲ್ಲಿ ಕಷ್ಟಗಳು ಬರುತ್ತವೆ. ಆದರೆ, ಧೈರ್ಯವಾಗಿ ಇರಬೇಕು" ಎಂದೆಲ್ಲ ಭೂಮಿಕಾ ಭರವಸೆ ನೀಡುತ್ತಾರೆ.
ಧಿಮಾಕಿನ ವರ್ತನೆ ಮುಂದುವರೆಸಿದ ಅಪೇಕ್ಷಾ
ಪಾರ್ಥ ಮತ್ತು ಅಪೇಕ್ಷಾ ಮಾತನಾಡುತ್ತಾ ಇದ್ದಾರೆ. "ಅಪೇಕ್ಷಾ, ಮಲ್ಲಿ ಜತೆ ಮಾತನಾಡಿದ್ರ? ಆಸ್ಪತ್ರೆಗೂ ಹೋಗಿಲ್ಲ. ಅಟ್‌ಲಿಸ್ಟ್, ಮನೆಗೆ ಬಂದಾಗಲೂ ಮಾತನಾಡಬಹುದಲ್ವ?" ಎಂದು ಪಾರ್ಥ ಕೇಳುತ್ತಾನೆ. "ನಾನು ಈಗ ಮಾತನಾಡಿದ್ರೆ ಏನಾಗುತ್ತದೆ. ಆಲ್‌ರೆಡಿ ಸುಸ್ತಾದವರಿಗೆ ಇನ್ನಷ್ಟು ಸುಸ್ತಾಗುತ್ತದೆ" ಎಂದು ನೆಪ ಹೇಳುತ್ತಾಳೆ. ".... ಒಟ್ಟಿನಲ್ಲಿ ನೀವು ಹೇಳುವ ಹಾಗೆ ಈ ಮನೆಯಲ್ಲಿ ನಾನು ಇರಬೇಕು, ಅಷ್ಟೇ ಅಲ್ವಾ?ʼ ಎಂದು ತುಂಬಾ ಮಾತನಾಡುತ್ತಾಳೆ. "ಅದು ಹಾಗಲ್ಲ.. ಅಲ್ಲಿ ಅತ್ತಿಗೆ ಒಬ್ಬರೇ ಸಹಾಯ ಮಾಡುತ್ತಾರೆ. ನೀವು ಹೋದ್ರೆ ಅವರಿಗೆ ಹೆಲ್ಪ್ ಆಗುತ್ತದೆ ಅಲ್ವ" ಎಂದು ಕೇಳುತ್ತಾನೆ. "ನಮಗೆ ಯಾರಾದರೂ ಹೆಲ್ಪ್ ಮಾಡಿಲ್ಲದಿದ್ದರೂ ಅವರಿಗೆ ನಾನು ಹೆಲ್ಪ್ ಮಾಡ್ತಿನಿ" ಎಂದು ಕೋಪದಿಂದ ಎದ್ದು ಹೋಗುತ್ತಾಳೆ.
ಮಲ್ಲಿ ಭೂಮಿಕಾ ಮಾತನಾಡುವಾಗ ಜೈದೇವ್ ಎಂಟ್ರಿ
ಭೂಮಿಕಾ ಜತೆ ಮಲ್ಲಿ ಮಾತು ಮುಂದುವರೆಯುತ್ತದೆ. ಭೂಮಿಕಾ ಸಾಧ್ಯವಿರುವಷ್ಟು ಸಮಧಾನ ಮಾಡುತ್ತಾಳೆ. ಇದೇ ಸಮಯದಲ್ಲಿ "ಇಲ್ಲಿ ಯಾವುದೂ ನಾವು ಅಂದುಕೊಂಡಂತೆ ಇಲ್ಲ ಅಕ್ಕೋರೆ" ಎಂದು ಹೇಳುತ್ತಾಳೆ. "ಯಾಕೆ ಹೀಗೆ ಹೇಳ್ತಾ ಇದ್ದೀಯ" ಎಂದು ಕೇಳುತ್ತಾರೆ ಭೂಮಿಕಾ. ಅದೇ ಸಮಯದಲ್ಲಿ ದೂರದಲ್ಲಿ ಜೈದೇವ್ ಇಣುಕುತ್ತಾನೆ. ಒಟ್ಟಾರೆ, ವಿಷಯ ಸದ್ಯದಲ್ಲಿ ಹೇಳುವಂತೆ ಇಲ್ಲ. ಮಲ್ಲಿ ಏನೋ ಮಾತನಾಡಬೇಕು ಅನ್ನುವಷ್ಟರಲ್ಲಿ ಜೈದೇವ್ ಎಂಟ್ರಿ ನೀಡುತ್ತಾನೆ. "ನಾನು ಹೇಳಿದೆ ಅತ್ತಿಗೆ, ಕಾರಿನಿಂದ ಇಳಿಯಬೇಡಿ ಎಂದು. ಕೇಳಲಿಲ್ಲ" ಎಂದು ಹೇಳುತ್ತಾನೆ. "ಮಲ್ಲಿ ನೀನು ರೆಸ್ಟ್ ಮಾಡು" ಎಂದು ಭೂಮಿಕಾ ಹೇಳುತ್ತಾರೆ. ಇದಾದ ಬಳಿಕ ಮಲ್ಲಿ ಬಳಿ "ನಾನು ಮನೆಯವರ ಬಳಿ ಬೇರೆಯೇ ಕಥೆ ಹೇಳಿದ್ದೀನಿ. ನೀರು ತರಬೇಕೆಂದು ನಾನು ಹೋದಾಗ ಹೀಗೆ ಆಯ್ತು ಎಂದಿದ್ದೇನೆ. ನೀನು ಅದನ್ನೇ ಹೇಳು" ಎನ್ನುತ್ತಾನೆ. ದಿಯಾಳ ಜತೆ ನೋಡಿದ್ದೇನೆ ಎಂದು ಯಾವ ಬಾಯಿಂದ ಹೇಳಲಿ ಎಂದುಕೊಳ್ಳುತ್ತಾಳೆ ಮಲ್ಲಿ. ನಾನು ನಿಮ್ಮನ್ನು ಆ ಸ್ಥಿತಿಯಲ್ಲಿ ನೋಡಿಲ್ಲ ಎಂಬರ್ಥದಲ್ಲಿ ಜಾಣತನದಿಂದ ಮಾತನಾಡುತ್ತಾಳೆ. ಎಷ್ಟು ಚೆನ್ನಾಗಿ ಯಾಮಾರಿಸಿಬಿಟ್ರಿ, ನನ್ನ ಮಗು ಹೋಗೋಕ್ಕೆ ನೀವೇ ಕಾರಣ, ನಿಮ್ಮ ಮೋಸನೇ ನನ್ನ ಮಗುನ ಬಲಿ ತೆಗೆದುಕೊಂಡು ಬಿಡ್ತು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾಳೆ ಮಲ್ಲಿ.
ಮರುದಿನ ಜೈದೇವ್ ದಿಯಾಳ ಜತೆ ಕಾರಿನಲ್ಲಿ ಖುಷಿಯಾಗಿ ಮಾತನಾಡುತ್ತಿದ್ದಾನೆ. "ಎಲ್ಲಿ ಮಲ್ಲಿ ನಮ್ಮನ್ನು ನೋಡಿದ್ದಾಳೆ ಅಂದುಕೊಂಡಿದ್ದೆ. ಅವಳು ನೋಡಿಲ್ಲ" ಎಂದು ದಿಯಾಳ ಬಳಿ ಖುಷಿಯಿಂದ ಹೇಳುತ್ತಾನೆ. ದಿಯಾಳಿಗೂ ಸಮಧಾನವಾಗುತ್ತದೆ. ಹೀಗಿದ್ದರೂ "ಮಲ್ಲಿ ನಮ್ಮನ್ನು ನೋಡಿದ್ರೂ ನೋಡದಂತೆ ಡ್ರಾಮಾ ಮಾಡ್ತಾ ಇರಬಹುದಲ್ವ" ಎಂಬ ಸಂಶಯದ ಹುಳುವನ್ನು ಜೈದೇವ್ ಮನಸ್ಸಲ್ಲಿ ಬಿಡುತ್ತಾಳೆ. ಜೈದೇವ್ ಚಮಕ್‌ಚಲ್ಲೋ ಜತೆ ಮಾತು ಮುಂದುವರೆಯುತ್ತದೆ. ಗೌತಮ್ ಮನೆಯಲ್ಲೇ ಆಫೀಸ್ ಕೆಲಸ ನೋಡುತ್ತಿದ್ದಾರೆ. ಆಗ ಭೂಮಿಕಾ ಬರುತ್ತಾರೆ. ಮಲ್ಲಿ ಬಗ್ಗೆ ಕಾಳಜಿಯ ಮಾತುಗಳನ್ನಾಡುತ್ತಾರೆ. ಸೀರಿಯಲ್ ಮುಂದುವರೆಯುತ್ತದೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)
ವಿಭಾಗ