ಜ್ಯೂ. ಎನ್‌ಟಿಆರ್‌ ನಂತರ ಆಂಧ್ರಪ್ರದೇಶ, ತೆಲಂಗಾಣ ನೆರೆ ಪೀಡಿತರಿಗೆ ಸಹಾಯ ಹಸ್ತ ಚಾಚಿದ ಟಾಲಿವುಡ್‌ ಸ್ಟಾರ್ಸ್;‌ ಯಾರು ಎಷ್ಟು ಕೊಟ್ರು?
ಕನ್ನಡ ಸುದ್ದಿ  /  ಮನರಂಜನೆ  /  ಜ್ಯೂ. ಎನ್‌ಟಿಆರ್‌ ನಂತರ ಆಂಧ್ರಪ್ರದೇಶ, ತೆಲಂಗಾಣ ನೆರೆ ಪೀಡಿತರಿಗೆ ಸಹಾಯ ಹಸ್ತ ಚಾಚಿದ ಟಾಲಿವುಡ್‌ ಸ್ಟಾರ್ಸ್;‌ ಯಾರು ಎಷ್ಟು ಕೊಟ್ರು?

ಜ್ಯೂ. ಎನ್‌ಟಿಆರ್‌ ನಂತರ ಆಂಧ್ರಪ್ರದೇಶ, ತೆಲಂಗಾಣ ನೆರೆ ಪೀಡಿತರಿಗೆ ಸಹಾಯ ಹಸ್ತ ಚಾಚಿದ ಟಾಲಿವುಡ್‌ ಸ್ಟಾರ್ಸ್;‌ ಯಾರು ಎಷ್ಟು ಕೊಟ್ರು?

ಕಳೆದ ಕೆಲವು ದಿನಗಳಿಂದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಎರಡೂ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಈ ಪರಿಸ್ಥಿತಿಯಲ್ಲಿ ತೆಲುಗು ಸ್ಟಾರ್‌ ನಟರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಸಹಾಯ ಮಾಡಿದ್ದಾರೆ.

ಜ್ಯೂ. ಎನ್‌ಟಿಆರ್‌ ನಂತರ ಆಂಧ್ರಪ್ರದೇಶ, ತೆಲಂಗಾಣ ನೆರೆ ಪೀಡಿತರಿಗೆ ಸಹಾಯ ಹಸ್ತ ಚಾಚಿದ ಟಾಲಿವುಡ್‌ ಸ್ಟಾರ್ಸ್;‌ ಯಾರು ಎಷ್ಟು ಕೊಟ್ರು?
ಜ್ಯೂ. ಎನ್‌ಟಿಆರ್‌ ನಂತರ ಆಂಧ್ರಪ್ರದೇಶ, ತೆಲಂಗಾಣ ನೆರೆ ಪೀಡಿತರಿಗೆ ಸಹಾಯ ಹಸ್ತ ಚಾಚಿದ ಟಾಲಿವುಡ್‌ ಸ್ಟಾರ್ಸ್;‌ ಯಾರು ಎಷ್ಟು ಕೊಟ್ರು?

ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ವಿಜಯವಾಡದಲ್ಲಿ ಪರಿಸ್ಥಿತಿ ಬಹಳ ಭಯಾನಕವಾಗಿದೆ. ರಸ್ತೆಯಲ್ಲಿ ಸುತ್ತುವರೆದ ನೀರಿನಿಂದ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಲೂ ಕಷ್ಟ ಪಡುತ್ತಿದ್ದಾರೆ. ಸರಿಯಾದ ಸಮಯಕ್ಕೆ ಅನ್ನ, ನೀರು ದೊರೆಯದೆ ಸಂಕಷ್ಟದಲ್ಲಿದ್ದಾರೆ.

ಜನರ ಪರಿಸ್ಥಿತಿ ಅರಿತು ಎಷ್ಟೋ ಜನರು ಸಹಾಯ ಹಸ್ತ ಚಾಚಿದ್ದಾರೆ. ಸಿನಿಮಾ ನಟ ನಟಿಯರು ಕೂಡಾ ಆಂಧ್ರ ಪ್ರದೇಶ, ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣಕಾಸಿನ ಸಹಾಯ ಮಾಡುತ್ತಿದ್ದಾರೆ. 4 ದಿನಗಳ ಹಿಂದಷ್ಟೇ ತೆಲುಗು ನಟ ಜ್ಯೂನಿಯರ್‌ ಎನ್‌ಟಿಆರ್‌ 50 ಲಕ್ಷ ರೂ. ಧನ ಸಹಾಯ ಮಾಡಿದ್ದರು. ಎರಡೂ ರಾಜ್ಯಗಳಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ಜನರ ಜೀವನವನ್ನು ಅತಂತ್ರಕ್ಕೆ ಸಿಲುಕಿಸಿದೆ. ಆದಷ್ಟು ಬೇಗ ತೆಲುಗು ಜನರು ಈ ಸಮಸ್ಯೆಯಿಂದ ಪಾರಾಗಲೆಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ಜನರ ಸಮಸ್ಯೆ ಪರಿಹರಿಸಲು ಎರಡೂ ರಾಜ್ಯಗಳು ಶತ ಪ್ರಯತ್ನ ಮಾಡುತ್ತಿವೆ. ಆಂಧ್ರಪ್ರದೇಶ, ತೆಲಂಗಾಣ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿಗೆ ನಾನು ಕೂಡಾ 50 ಲಕ್ಷ ರೂಪಾಯಿ ನೀಡುತ್ತಿದ್ದೇನೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದರು. ಇದೀಗ ಮಹೇಶ್‌ ಬಾಬು, ಪ್ರಭಾಸ್‌, ಚಿರಂಜೀವಿ ಕೂಡಾ ಹಣ ನೀಡಿದ್ದಾರೆ.

ಭಯಂಕರ ಮಳೆಯಿಂದಾಗಿ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಉಂಟಾಗಿರುವ ಪರಿಸ್ಥಿತಿ ಕಂಡು ಬಹಳ ದುಃಖವಾಗುತ್ತಿದೆ. ಈ ಕಷ್ಟಕರ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯವಾಗಲೆಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಾನು 1 ಕೋಟಿ ರೂ. ನೀಡುತ್ತಿದ್ದೇನೆ. ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ಅಲ್ಲು ಅರ್ಜುನ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ತೆಲುಗು ರಾಜ್ಯಗಳಲ್ಲಿ ಪ್ರವಾಹದಿಂದ ಉಂಟಾಗಿರುವ ಪರಿಸ್ಥಿತಿ ನೋಡಿ ಮನಸ್ಸಿಗೆ ಬಹಳ ಬೇಸರವಾಗುತ್ತಿದೆ. ಎಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಎರಡೂ ರಾಜ್ಯಗಳು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದೆ. ಈ ಸಮಯದಲ್ಲಿ ಆ ಜನರಿಗೆ ಧೈರ್ಯ ಹೇಳುವುದು ಮಾತ್ರವಲ್ಲದೆ, ತಮ್ಮ ಕೈಲಾದ ಸಹಾಯ ಮಾಡುವುದು ಅವಶ್ಯಕವಾಗಿದೆ. ಆದ್ದರಿಂದ ಆಂಧ್ರ ಪ್ರದೇಶ ಸಿಎಂ ಪರಿಹಾರ ನಿಧಿಗೆ 50 ಲಕ್ಷ, ತೆಲಂಗಾಣ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ಸೇರಿ ಒಟ್ಟು 1 ಓಟಿ ರೂ ನೀಡುತ್ತಿದ್ದೇನೆ ಎಂದು ಹಿರಿಯ ನಟ ಚಿರಂಜೀವಿ ತಿಳಿಸಿದ್ದಾರೆ.

ಪ್ರವಾಹವು ಎರಡೂ ತೆಲುಗು ರಾಜ್ಯಗಳಿಗೆ ಬಹಳ ಸಮಸ್ಯೆ ತಂದೊಡ್ಡಿದೆ. ಜನರ ಕಷ್ಟಕ್ಕೆ ಸಹಾಯವಾಗಲೆಂದು ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ನಾನು 50 ಲಕ್ಷ ರೂ. ನೀಡುತ್ತಿದ್ದೇನೆ. ಆದಷ್ಟು ಬೇಗ ಎರಡೂ ಸರ್ಕಾರಗಳು ಜನರ ಕಷ್ಟವನ್ನು ನಿಯಂತ್ರಣಕ್ಕೆ ತರಲು ಇನ್ನಷ್ಟು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ. ಎಲ್ಲರೂ ನಿಮ್ಮ ಕೈಲಾದಷ್ಟು ಕೊಡುಗೆ ನೀಡಿ ಎಂದು ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಮನವಿ ಮಾಡಿದ್ದಾರೆ.

ನಟ ಪ್ರಭಾಸ್‌ ಕೂಡಾ ಆಂಧ್ರ ಪ್ರದೇಶ, ತೆಲಂಗಾಣ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ. ಆದರೆ ಈ ವಿಚಾರವನ್ನು ಸಿನಿ ವಿಮರ್ಶಕ ರಮೇಶ್‌ ಬಾಲಾ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಎರಡೂ ರಾಜ್ಯಗಳಿಗೂ ಪ್ರಭಾಸ್‌ 2 ಕೋಟಿ ರೂ. ಹಣ ಘೋಷಿಸಿದ್ದಾರೆ ಎಂದು ಹೇಳಿದ್ದಾರೆ.

ಸ್ಟಾರ್‌ಗಳ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Whats_app_banner