ಜಿಮ್‌ ಫಿಟ್ನೆಸ್‌, ಬ್ಯೂಟಿಷಿಯನ್‌, ಚಾಟ್ಸ್‌ ತಯಾರಿಕೆ, ಬೆಂಗಳೂರಲ್ಲಿ ಯುವ ಇಲಾಖೆಯಿಂದ ತರಬೇತಿ; ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್‌ 17 ಕಡೆ ದಿನ-bangalore news karnataka youthservice department training beautician fitness chat preparation september 17 last date kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಜಿಮ್‌ ಫಿಟ್ನೆಸ್‌, ಬ್ಯೂಟಿಷಿಯನ್‌, ಚಾಟ್ಸ್‌ ತಯಾರಿಕೆ, ಬೆಂಗಳೂರಲ್ಲಿ ಯುವ ಇಲಾಖೆಯಿಂದ ತರಬೇತಿ; ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್‌ 17 ಕಡೆ ದಿನ

ಜಿಮ್‌ ಫಿಟ್ನೆಸ್‌, ಬ್ಯೂಟಿಷಿಯನ್‌, ಚಾಟ್ಸ್‌ ತಯಾರಿಕೆ, ಬೆಂಗಳೂರಲ್ಲಿ ಯುವ ಇಲಾಖೆಯಿಂದ ತರಬೇತಿ; ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್‌ 17 ಕಡೆ ದಿನ

Training Programs ಕರ್ನಾಟಕದಲ್ಲಿ ಯುವ ಸಮುದಾಯವನ್ನು ವೃತ್ತಿಪರವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ವಿವಿಧ ತರಬೇತಿ ಹಮ್ಮಿಕೊಂಡಿದೆ. ಇದರ ಮಾಹಿತಿ ಇಲ್ಲಿದೆ.

ಕರ್ನಾಟಕ ಯುವ ಸಬಲೀಕರಣ ಇಲಾಖೆಯು ಬ್ಯುಟಿಷಯನ್‌ ತರಬೇತಿ ಶಿಬಿರವನ್ನು ನಡೆಸಲಿದೆ.
ಕರ್ನಾಟಕ ಯುವ ಸಬಲೀಕರಣ ಇಲಾಖೆಯು ಬ್ಯುಟಿಷಯನ್‌ ತರಬೇತಿ ಶಿಬಿರವನ್ನು ನಡೆಸಲಿದೆ.

ಬೆಂಗಳೂರು: ಪ್ರಸಕ್ತ (2024-25) ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಯುವಕ, ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟಿಷಿಯನ್, ಚಾಟ್ಸ್ ತಯಾರಿಕೆ ತರಬೇತಿ ಶಿಬಿರಗಳನ್ನು ಇಲಾಖೆ ವತಿಯಿಂದ ಆಯೋಜಿಸಲಾಗಿದೆ. ತರಬೇತಿಯ ವಿವರ ಇಂತಿದೆ. ಸೆಪ್ಟೆಂಬರ್, 19 ರಿಂದ ಅಕ್ಟೋಬರ್, 03 ರವರೆಗೆ ಜಿಮ್/ ಫಿಟ್ನೆಸ್ ತರಬೇತಿ ಶಿಬಿರ(15 ದಿನಗಳು). ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ 18 ರಿಂದ 40 ವರ್ಷದೊಳಗಿರಬೇಕು. ತರಬೇತಿಯು ಬೆಂಗಳೂರಿನ ಕಸ್ತೂರಬಾ ರಸ್ತೆಯ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸೆಪ್ಟೆಂಬರ್, 21 ರಿಂದ ಅಕ್ಟೋಬರ್, 03 ರವರೆಗೆ ಬ್ಯೂಟೀಷಿಯನ್ ತರಬೇತಿ ಶಿಬಿರ(13 ದಿನಗಳು) ನಡೆಯಲಿದ್ದು, ಎಸ್‍ಎಸ್‍ಎಲ್‍ಸಿ(ಪಾಸ್/ಫೇಲ್) ಮಹಿಳೆಯರಿಗೆ ಮಾತ್ರ. ಕನಿಷ್ಠ 18 ವರ್ಷದಿಂದ 40 ವರ್ಷದೊಳಗಿರಬೇಕು. ತರಬೇತಿಯು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.

ಅಕ್ಟೋಬರ್, 04 ರಿಂದ 09 ರವರೆಗೆ ಚಾಟ್ಸ್ ತಯಾರಿಕೆ ತರಬೇತಿ ಶಿಬಿರ ನಡೆಯಲಿದೆ. ಎಸ್‍ಎಸ್‍ಎಲ್‍ಸಿ(ಪಾಸ್/ಫೇಲ್) ಕನಿಷ್ಠ 18 ರಿಂದ 40 ವರ್ಷದೊಳಗಿರಬೇಕು. ತರಬೇತಿಯು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.

ನೀವು ಏನು ಮಾಡಬೇಕು

ತರಬೇತಿಯನ್ನು ಕರ್ನಾಟಕದ ಯುವಕ, ಯುವತಿಯರಿಗೆ ಮಾತ್ರ ನೀಡಲಾಗುವುದು. ಯುವಕ, ಯುವತಿಯರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಅರ್ಜಿದಾರರು ಕಡ್ಡಾಯವಾಗಿ ಆರ್‍ಡಿ ಸಂಖ್ಯೆಯಿರುವ ಜಾತಿ ಪ್ರಮಾಣ ಪತ್ರ ಲಗತ್ತಿಸಬೇಕು.

ಅರ್ಜಿದಾರರ ಹೆಸರು ಹಾಗೂ ಭಾವಚಿತ್ರವುಳ್ಳ ಆಧಾರ್ ಪತ್ರವನ್ನು ಲಗತ್ತಿಸಬೇಕು. ಜಿಮ್ ಫಿಟ್ನೆಸ್, ಬ್ಯೂಟಿಷಿಯನ್, ಚಾಟ್ಸ್ ತಯಾರಿಕೆ ತರಬೇತಿಗಳಿಗೆ ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ ಪಾಸ್/ಫೇಲ್ ಶಿಕ್ಷಣವನ್ನು ಹೊಂದಿರಬೇಕು. (ದೃಢೀಕೃತ ಅಂಕಪಟ್ಟಿಯನ್ನು ಪ್ರತಿಯನ್ನು ಲಗತ್ತಿಸಬೇಕು).

ಏನು ಸೌಲಭ್ಯ ಇದೆ

ಅರ್ಜಿದಾರರ ಪ್ರಮಾಣ ಪತ್ರಗಳನ್ನು ಸಂಬಂಧಿಸಿದ ಉಪ/ ಸಹಾಯಕ ನಿರ್ದೇಶಕರಿಂದ ದೃಢೀಕರಿಸಿ ಸಲ್ಲಿಸಬೇಕು. ತರಬೇತಿ ಶಿಬಿರದಲ್ಲಿ ಭಾಗವಹಿಸುವ ಯುವಕ, ಯುವತಿಯರಿಗೆ ಲಘು ಉಪಹಾರ ಒದಗಿಸಲಾಗುವುದು. ಹೊರ ಜಿಲ್ಲೆಗಳಿಂದ ಆಗಮಿಸುವ ಶಿಬಿರಾರ್ಥಿಗಳಿಗೆ ಸಾಮಾನ್ಯ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಅರ್ಜಿದಾರರು ದೈಹಿಕವಾಗಿ ಸದೃಢರಾಗಿರಬೇಕು.

ಆಯಾ ಜಿಲ್ಲೆಯ ಆಸಕ್ತ ಕ್ರೀಡಾಪಟುಗಳು ಅರ್ಜಿ ನಮೂನೆಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣದಲ್ಲಿ ಪಡೆದು ಸೆಪ್ಟೆಂಬರ್, 17 ರೊಳಗೆ ಕಚೇರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂ.ಸಂ.08272-220986 ಮತ್ತು ತರಬೇತುದಾರರು 9980887499 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಅವರು ತಿಳಿಸಿದ್ದಾರೆ.

mysore-dasara_Entry_Point