ಬೆಂಗಳೂರಿನಲ್ಲಿ ತ್ರಿಕೋನ ಪ್ರೇಮ ಪ್ರಕರಣ; ಗೆಳತಿ ವಿಚಾರಕ್ಕೆ ನಡೆದ ಗಲಾಟೆ ರೂಮ್​ಮೇಟ್​ ಕೊಲೆಯಲ್ಲಿ ಅಂತ್ಯ, ಪ್ರೀತಿ ಮಾಯೆ ಹುಷಾರು…-bengaluru crime news love triangle murder man kills roommate after fight over woman in sanjayanagara prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ತ್ರಿಕೋನ ಪ್ರೇಮ ಪ್ರಕರಣ; ಗೆಳತಿ ವಿಚಾರಕ್ಕೆ ನಡೆದ ಗಲಾಟೆ ರೂಮ್​ಮೇಟ್​ ಕೊಲೆಯಲ್ಲಿ ಅಂತ್ಯ, ಪ್ರೀತಿ ಮಾಯೆ ಹುಷಾರು…

ಬೆಂಗಳೂರಿನಲ್ಲಿ ತ್ರಿಕೋನ ಪ್ರೇಮ ಪ್ರಕರಣ; ಗೆಳತಿ ವಿಚಾರಕ್ಕೆ ನಡೆದ ಗಲಾಟೆ ರೂಮ್​ಮೇಟ್​ ಕೊಲೆಯಲ್ಲಿ ಅಂತ್ಯ, ಪ್ರೀತಿ ಮಾಯೆ ಹುಷಾರು…

Bengaluru Crime News: ಪ್ರೀತಿಸುತ್ತಿದ್ದ ಯುವತಿ ವಿಚಾರವಾಗಿ ಜಗಳವಾಡಿದ ಯುವಕನೊಬ್ಬ ತನ್ನ ರೂಮ್ ಮೇಟ್​​ನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗೆಳತಿ ವಿಚಾರವಾಗಿ ನಡೆದ ಗಲಾಟೆ ರೂಮ್​ಮೇಟ್​ ಕೊಲೆಯಲ್ಲಿ ಅಂತ್ಯ
ಗೆಳತಿ ವಿಚಾರವಾಗಿ ನಡೆದ ಗಲಾಟೆ ರೂಮ್​ಮೇಟ್​ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಗೆಳತಿಗಾಗಿ ಇಬ್ಬರು ಯುವಕರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ತನ್ನಂತೆಯೇ ತನ್ನ ಪ್ರೇಯಸಿಯನ್ನೇ ಪ್ರೀತಿಸುತ್ತಿದ್ದ ಕಾರಣ ರೂಮ್​ಮೇಟ್​ನನ್ನೇ ಭೀಕರವಾಗಿ ಕೊಲೆಗೈದಿರುವ ಘಟನೆ ನಗರದ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತನನನ್ನು ವರುಣ್ ಕೋಟ್ಯಾನ್ ಎಂದು ಗುರುತಿಸಲಾಗಿದೆ. ಆತನ ರೂಮ್ ಮೇಟ್ ದಿವೇಶ್ ಹತ್ಯೆಗೈದ ಆರೋಪಿ ಎನ್ನಲಾಗಿದೆ. ಇಬ್ಬರೂ ಗೆದ್ದಲಹಳ್ಳಿ ನಿವಾಸಿಗಳಾಗಿದ್ದು, ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು.

ಕೋಟ್ಯಾನ್ ಬಾಗಲೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ದಿವೇಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸೆಪ್ಟೆಂಬರ್​ 20ರ ಶುಕ್ರವಾರ, ಇಬ್ಬರು ಸ್ನೇಹಿತರು ಇವರ ಮನೆಗೆ ಭೇಟಿ ಕೊಟ್ಟಿದ್ದರು. ನಾಲ್ವರು ಪಾರ್ಟಿಗಾಗಿ ಕೋರಮಂಗಲಕ್ಕೆ ತೆರಳಿದ್ದರು. ಶನಿವಾರ ಮುಂಜಾನೆ 4.30ರ ಸುಮಾರಿಗೆ 2 ಬೈಕ್​ಗಳಲ್ಲಿ ದೇವನಹಳ್ಳಿಗೆ ಜಾಲಿ ರೈಡ್​​ ಹೋಗಿ ವಾಪಸಾಗಿದ್ದರು. ಮನೆಗೆ ಬಂದಿದ್ದ ಇಬ್ಬರು ಸ್ನೇಹಿತರಲ್ಲಿ ಒಬ್ಬ ಕೋಟ್ಯಾನ್ ರೂಮ್​​ನಲ್ಲಿ ಮಲಗಿದ್ದ. ಮತ್ತೊಬ್ಬ ತನ್ನ ಮನೆಗೆ ತೆರಳಿದ್ದ.

ಆದರೆ, ವರುಣ್ ಮತ್ತು ದಿವೇಶ್ ತಮ್ಮ ಮನೆಯ ಹೊರಗೆ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಹುಡುಗಿ ವಿಚಾರ ಪ್ರಸ್ತಾಪವಾಗಿದೆ. ಆಗ ವರುಣ್ ಮತ್ತು ದಿವೇಶ್ ನಡುವೆ ವಾಗ್ವಾದ ನಡೆಯಿತು. ಅದು ದೈಹಿಕ ವಾಗ್ವಾದಕ್ಕೂ ಕಾರಣವಾಯಿತು. ತನ್ನ ಪ್ರೇಯಸಿ ವಿಚಾರವಾಗಿ ದಿವೇಶ್, ವರುಣ್ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ ಈ ವೇಳೆ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದ ವರುಣ್​ನನ್ನು ಬೆನ್ನಟ್ಟಿದ ದಿವೇಶ್​ ತಳ್ಳಿದ್ದಾನೆ. ಕೆಳಕ್ಕೆ ತಳ್ಳಿ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾನೆ. ಪೊಲೀಸರು ಆರೋಪಿ ದಿವೇಶ್ ನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

30 ಪೀಸ್ ಮಾಡಿ ಫ್ರಿಡ್ಜ್​ನಲ್ಲಿಟ್ಟಿದ್ದ ಭೂಪ

ತನ್ನ ಪತ್ನಿಯನ್ನು ಭೀಕರವಾಗಿ ಕೊಂದ ಪತಿ, ಮೃತ ದೇಹವನ್ನು 30 ಪೀಸ್ ಮಾಡಿ ಪ್ರಿಡ್ಜ್​​ನಲ್ಲಿಟ್ಟದ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಾಸನೆ ಬರದಂತೆ ರಾಸಾಯನಿಕ ಸಿಂಪಡಿಸಿದ್ದ. ಮಹಾಲಕ್ಷ್ಮೀ (29) ಬರ್ಬರವಾಗಿ ಹತ್ಯೆಯಾದ ಮಹಿಳೆ. ಹತ್ಯೆಗೈದವನನ್ನು ಹುಕುಂ ಸಿಂಗ್ ರಾಣಾ ಎಂದು ಹೇಳಲಾಗಿದೆ. ಇವರು ನೇಪಾಳ ಮೂಲದವರು. ಮಹಾಲಕ್ಷ್ಮಿ ವೈಯಕ್ತಿಕ ಕಾರಣಕ್ಕಾಗಿ ಗಂಡ ಹಾಗೂ ಮಗುವನ್ನು ತೊರೆದು ವೈಯಾಲಿಕಾವಲ್ ಠಾಣಾ ವ್ಯಾಪ್ತಿಯ ಮುನೇಶ್ವರ ನಗರದಲ್ಲಿ ಕಳೆದ 5 ತಿಂಗಳಿಂದ ವಾಸವಾಗಿದ್ದಳು.

ಮೃತ ಮಹಿಳೆ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಿಳೆಯನ್ನು ಸಂಪರ್ಕಿಸಿದರೂ ಮೊಬೈಲ್ ಸ್ವಿಚ್ ಆಫ್ ಬರುವುದನ್ನು ಅನುಮಾನಗೊಂಡ ಮಹಿಳೆ ತಾಯಿ ಹಾಗೂ ಕುಟುಂಬಸ್ಥರು ಮನೆ ಬಳಿ ಬಂದಿದ್ದಾರೆ. ಬೀಗ ಹೊಡೆದು ಒಳಹೋಗುತ್ತಿದ್ದಂತೆ ಶವದ ದುರ್ವಾಸನೆ ಮೂಗಿಗೆ ಅಪ್ಪಳಿಸಿತ್ತು. ಬ್ರಿಡ್ಜ್ ಓಪನ್ ಮಾಡುತ್ತಿದ್ದಂತೆ ಮಹಿಳೆಯ ಶವವನ್ನು ಸುಮಾರು 30 ಹೆಚ್ಚು ತುಂಡುಗಳಾಗಿ ಕತ್ತರಿಸುವುದನ್ನು ಕಂಡು ಗಾಬರಿಯಾಗಿದ್ದಾರೆ.

ಮಹಿಳೆಯರ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್; ಬಂಧನ

ಬೆಂಗಳೂರಿನ 21 ವರ್ಷದ ಬಿಟೆಕ್ ವಿದ್ಯಾರ್ಥಿಯನ್ನು ನಗರದ ಪಶ್ಚಿಮ ಅಂಚಿನಲ್ಲಿರುವ ತನ್ನ ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಯಿತು. ಶಂಕಿತ ಆರೋಪಿಯನ್ನು ಕುಶಾಲ್ ಕೆ ಎಂದು ಗುರುತಿಸಲಾಗಿದ್ದು, ಆತ ಮಾಗಡಿ ಸಮೀಪದ ಚಿಕ್ಕಗೊಲ್ಲರಹಟ್ಟಿ ಮೂಲದ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಎಂದು ಹೇಳಲಾಗಿದೆ.

mysore-dasara_Entry_Point