ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನಮ್ಮ ಮೆಟ್ರೋಗೂ ಬಂತು ಎಐ; ಚಾಲಕರಹಿತ ರೈಲುಗಳ ಟ್ರ್ಯಾಕ್ ಮೇಲ್ವಿಚಾರಣೆಗೆ ಕೃತಕ ಬುದ್ಧಿಮತ್ತೆ ಬಳಕೆ -Ai In Namma Metro

ಬೆಂಗಳೂರು ನಮ್ಮ ಮೆಟ್ರೋಗೂ ಬಂತು ಎಐ; ಚಾಲಕರಹಿತ ರೈಲುಗಳ ಟ್ರ್ಯಾಕ್ ಮೇಲ್ವಿಚಾರಣೆಗೆ ಕೃತಕ ಬುದ್ಧಿಮತ್ತೆ ಬಳಕೆ -AI in Namma Metro

ನಮ್ಮ ಮೆಟ್ರೋದಲ್ಲಿ ಇದೀಗ ಚಾಲಕರಹಿತ ರೈಲುಗಳು ಸಂಚಾರಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ರೈಲುಗಳ ಟ್ರ್ಯಾಕ್‌ ಮೇಲ್ವಿಚಾರಣೆಗೆ ಎಐ ಅನ್ನು ಬಳಸಲು ಬಿಎಂಆರ್‌ಸಿಎಲ್ ಮುಂದಾಗಿದೆ.

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿನ ಚಾಲಕರಹಿತ ರೈಲುಗಳ ಟ್ರ್ಯಾಕ್ ಮೇಲ್ವಿಚಾರಣೆಗೆ ಎಐ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿನ ಚಾಲಕರಹಿತ ರೈಲುಗಳ ಟ್ರ್ಯಾಕ್ ಮೇಲ್ವಿಚಾರಣೆಗೆ ಎಐ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ನಮ್ಮ ಮೆಟ್ರೋ (Namma Metro) ಚಾಲಕರಹಿತ ರೈಲುಗಳ (Driverless Metro Train) ಸಂಚಾರಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅತಿ ಶೀಘ್ರದಲ್ಲೇ ಈ ನೂತನ ಸೇವೆಯನ್ನು ಆರಂಭಿಸಲಿದೆ. ಇದಕ್ಕೂ ಮುನ್ನ ನಮ್ಮ ಮೆಟ್ರೋ ಮತ್ತೊಂದು ಸಾಹಸಕ್ಕೆ ಮುಂದಾಗಿದೆ.

ಟ್ರೆಂಡಿಂಗ್​ ಸುದ್ದಿ

ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಾಗುವ ಹಳದಿ ಮಾರ್ಗದಲ್ಲಿ ಸಾಗುವ ಚಾಲಕರಹಿತ ಮೆಟ್ರೋ ರೈಲುಗಳ ಟ್ರ್ಯಾಗಳನ್ನು ಮೇಲ್ವಿಚಾರಣೆ ಮಾಡಲು ಎಐ (ಕೃತಕ ಬುದ್ಧಿಮತ್ತೆ) ಬಳಸಲು ಮುಂದಾಗಿದೆ. ಇದಕ್ಕಾಗಿ ಸಿದ್ಧತೆಗಳನ್ನು ಆರಂಭಿಸಿದೆ.

ಹಳದಿ ಮಾರ್ಗವು ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಾಗುತ್ತದೆ. ಈ ಮಾರ್ಗ ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುತ್ತದೆ. ಇನ್ಫೋಸಿಸ್ ಮತ್ತು ಬಯೋಕಾನ್‌ನಂತಹ ಪ್ರಮುಖ ಕಂಪನಿಗಳು ಇದೇ ಮಾರ್ಗದಲ್ಲಿ ಬರುತ್ತವೆ. ಐಟಿ-ಬಿಟಿ ಕಂಪನಿಗಳು, ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಮೊದಲ ಬಾರಿಗೆ ಚಾಲಕರಹಿತ ಮೆಟ್ರೋ ಸಂಚಾರವನ್ನು ಈ ಮಾರ್ಗದಲ್ಲಿ ಆರಂಭಿಸಲಾಗುತ್ತಿದೆ. 2024ರ ಸೆಪ್ಟೆಂಬರ್ ವೇಳೆಗೆ ಡೈವರ್‌ಲೆಸ್ ಮೆಟ್ರೋ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.

ಈ ವಿಶೇಷ ರೈಲುಗಳು ಹಳಿಗಳಿಗೆ ಹೊಂದಾಣಿಕೆ ಸೇರಿದಂತೆ ಹಲವು ಕೆಲಸಗಳು ನಡೆಯುತ್ತಿವೆ. ಆರಂಭದಲ್ಲಿ ಚಾಲಕರಹಿತ ಮೆಟ್ರೋ ರೈಲಿನಲ್ಲಿ ಪೈಲಟ್‌ಗಳನ್ನು ಇರಿಸಲಾಗುತ್ತದೆ. ಅದರ ದೃಷ್ಟಿಗೋಚರತೆ ಸೇರಿದಂತೆ ಎಲ್ಲಾ ಹಂತಗಳನ್ನು ಪರೀಕ್ಷೆ ನಡೆಸಿದ ಬಳಿಕ ಈ ರೈಲುಗಳು ಪ್ರಯಾಣಿಕರ ಸೇವೆಗೆ ಮುಕ್ತವಾಗಲಿವೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಮಾರುಕಟ್ಟೆ ಜಾಹೀರಾತು, ಸುದ್ದಿ ವಾಚನದಿಂದ ಹಿಡಿದು ಬಾಲ್‌ ಹಿಡಿದು ಫುಟ್ಬಾಲ್‌ ಆಡುವವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಇದೀಗ ನಮ್ಮ ಮೆಟ್ರೋ ಕೂಡ ಚಾಲಕ ರಹಿತ ಮೆಟ್ರೋ ಟ್ರ್ಯಾಕ್ ಮೇಲ್ವಿಚಾರಣೆಗೆ ಈ ಎಐ ಅನ್ನು ಬಳಸಿಕೊಳ್ಳಲು ಮುಂದಾಗಿದೆ.

ಬೆಂಗಳೂರಿನಲ್ಲಿರುವ ನಮ್ಮ ಮೆಟ್ರೋದ ಮೊದಲ ಹಂತದದ ನೇರಳೆ ಮಾರ್ಗ 2011ರ ಅಕ್ಟೋಬರ್‌ನಿಂದ ಸಂಚಾರ ಆರಂಭಿಸಿದೆ. ಮೊದಲು ಬೈಯಪ್ಪನಹಳ್ಳಿಯಿಂದ ಎಂಜಿ ರಸ್ತೆಯವರೆಗೆ ಮಾತ್ರ ಸಂಚಾರ ಇತ್ತು. ಆ ನಂತರ ಇದನ್ನು ಮೈಸೂರು ರಸ್ತೆಯವರೆಗೆ ವಿಸ್ತರಿಸಲಾಯಿತು.

ಒಂದೇ ಹಂತದಲ್ಲೇ ಹಸಿರು ಮಾರ್ಗ ಸಂಪಿಗೆ ರಸ್ತೆ, ಯಶವಂತಪುರ, ಪೀಣ್ಣ ಇಂಡಸ್ಟ್ರಿ, ಸಂಪಿಗೆ ರಸ್ತೆ ಹಾಗೂ ನ್ಯಾಷನಲ್ ಕಾಲೇಜು ಮಾರ್ಗಗಳನ್ನು ಆರಂಭಿಸಲಾಗಿತ್ತು. ಎರಡನೇ ಹಂತದ ನೇರಳೆ ಮಾರ್ಗದಲ್ಲಿ ಮೈಸೂರು ರಸ್ತೆ, ಕೆಆರ್‌ಪುರ, ಕೆಂಗೇರಿ ಮಾರ್ಗ, ಹಸಿರು ಮಾರ್ಗ ಯಲಚೇನಹಳ್ಳಿ, ನಾಗಸಂದ್ರ, ಹಳದಿ ಮಾರ್ಗದಲ್ಲಿ ರಾಷ್ಟ್ರೀಯ ವಿದ್ಯಾಲಯ ರೋಡ್, ಪಿಂಕ್ ಮಾರ್ಗದಲ್ಲಿ ಕಾಳೇನ ಅಗ್ರಹಾರ, ನೀಲಿ ಮಾರ್ಗದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಹಾಗೂ ಕೃಷ್ಣರಾಜಪುರ ಮಾರ್ಗದಲ್ಲಿ ಆರಂಭಿಸಲಾಗಿತ್ತು.ಮೂರನೇ ಹಂತದಲ್ಲಿ ಆರೆಂಜ್ ಮಾರ್ಗ ಕೆಂಪಾಪುರ ಮಾರ್ಗದಲ್ಲಿ 22 ನಿಲ್ದಾಣಗಳು ಬರುತ್ತವೆ. ಇದು 32.2 ಕಿಲೋ ಮೀಟರ್ ಮಾರ್ಗವಾಗಿದ್ದು, ಕಾಮಕಾರಿ ನಡೆಯುತ್ತಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

IPL_Entry_Point