ದಕ್ಷ ಐಪಿಎಸ್​ ಅಧಿಕಾರಿ ರಮಣ್ ಗುಪ್ತಾಗೆ ತೀವ್ರ ಅನಾರೋಗ್ಯ, ಮಣಿಪಾಲ್ ಆಸ್ಪತ್ರೆಗೆ ದಾಖಲು; ಇಷ್ಟಕ್ಕೂ ಏನಾಗಿದೆ?
ಕನ್ನಡ ಸುದ್ದಿ  /  ಕರ್ನಾಟಕ  /  ದಕ್ಷ ಐಪಿಎಸ್​ ಅಧಿಕಾರಿ ರಮಣ್ ಗುಪ್ತಾಗೆ ತೀವ್ರ ಅನಾರೋಗ್ಯ, ಮಣಿಪಾಲ್ ಆಸ್ಪತ್ರೆಗೆ ದಾಖಲು; ಇಷ್ಟಕ್ಕೂ ಏನಾಗಿದೆ?

ದಕ್ಷ ಐಪಿಎಸ್​ ಅಧಿಕಾರಿ ರಮಣ್ ಗುಪ್ತಾಗೆ ತೀವ್ರ ಅನಾರೋಗ್ಯ, ಮಣಿಪಾಲ್ ಆಸ್ಪತ್ರೆಗೆ ದಾಖಲು; ಇಷ್ಟಕ್ಕೂ ಏನಾಗಿದೆ?

IPS Raman Gupta: ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ರಮಣ್ ಗುಪ್ತಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಿರಿಯ ಐಪಿಎಸ್​ ಅಧಿಕಾರಿ ರಮಣಗುಪ್ತಾ ತೀವ್ರ ಅನಾರೋಗ್ಯ
ಹಿರಿಯ ಐಪಿಎಸ್​ ಅಧಿಕಾರಿ ರಮಣಗುಪ್ತಾ ತೀವ್ರ ಅನಾರೋಗ್ಯ

ಬೆಂಗಳೂರು: ಹಿರಿಯ ಐಪಿಎಸ್​ ಅಧಿಕಾರಿ ಹಾಗೂ ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ರಮಣ್ ಗುಪ್ತಾ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ಬೆಂಗಳೂರಿನ ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೆಪ್ಟೆಂಬರ್​​ 16ರ ಸೋಮವಾರದಂದು ಮನೆಯಲ್ಲಿ ಕುಸಿದು ಬಿದ್ದಿದ್ದ ಕಾರಣ ಕುಟುಂಬಸ್ಥರು ತಕ್ಷಣವೇ ಹೆಬ್ಬಾಳದ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದರು. ಬೆನ್ನುನೋವು ಮತ್ತು ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ಆರೋಗ್ಯದಲ್ಲಿ ಏರುಪೇರು ಉಂಟಾಗಲು ಕಾರಣ ಏನೆಂಬುದು ತಿಳಿದು ಬಂದಿಲ್ಲ. ಚಿಕಿತ್ಸೆ ಮುಂದುವರೆದಿದೆ.

ಗೃಹ ಸಚಿವ ಪರಮೇಶ್ವರ್​ ಭೇಟಿ

ಗೃಹ ಸಚಿವ ಡಾ ಜಿ. ಪರಮೇಶ್ವರ್ ಅವರು ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಸೇರಿದಂತೆ ಮತ್ತಿತ್ತರ ಅಧಿಕಾರಿಗಳೊಂದಿಗೆ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ರಮಣ್ ದೀಪ್ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ಆಸ್ಪತ್ರೆ ವೈದ್ಯರಿಂದ ಪರಿಸ್ಥಿತಿ ಹೇಗಿದೆ ಎಂಬುದರ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಮಣ್ ಗುಪ್ತಾ ಎಲ್ಲೆಲ್ಲಿ ಸೇವೆ ಸಲ್ಲಿಸಿದ್ರು?

1980ರ ಜೂನ್ 11ರಂದು ಹರಿಯಾಣದಲ್ಲಿ ಜನಿಸಿದ ರಮಣ್ ಗುಪ್ತಾ ಅವರು, 2005ರಲ್ಲಿ ಐಪಿಎಸ್ ಆಗಿ ಆಯ್ಕೆಯಾದರು. ಎಂಐಬಿ (Master of International Business) ಶಿಕ್ಷಣ ಪಡೆದಿರುವ ಅಧಿಕಾರಿ, ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯ ಇಡಿ (ಜಾರಿ ನಿರ್ದೇಶನಾಲಯ) ಜಂಟಿ ನಿರ್ದೇಶಕ ಹುದ್ದೆ ಅಲಂಕರಿಸಿದ್ದ ರಮಣ್​ ಗುಪ್ತಾ ನಂತರ ಬಡ್ತಿ ಪಡೆದು ಬೆಂಗಳೂರು ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿದ್ದರು.

ಮತ್ತೆ ಬಡ್ತಿ ಪಡೆದು ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿ ವರ್ಗಾವಣೆ ಆಗಿದ್ದರು. ಆದರೆ ಅದೇ ವೇಳೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ವರ್ಗಾವಣೆ ಆದೇಶ ಬಂದ ದಿನವೇ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. ನಂತರ ಸಿಸಿಬಿಯಲ್ಲೂ ಸೇವೆ ಸಲ್ಲಿಸಿದರು. ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ ದಕ್ಷ ಅಧಿಕಾರಿ ಎನಿಸಿದ್ದ ಅವರು, ಹಾಸನ, ಶಿವಮೊಗ್ಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

Whats_app_banner