ಬೆಂಗಳೂರು ಸಂಚಾರ ಸಲಹೆ; ಹೊಸ ರೋಡ್‌, ಚೆನ್ನಕೇಶವನಗರದಲ್ಲಿ ಕರಗ ಉತ್ಸವ, ಸುಗಮ ಸಂಚಾರಕ್ಕೆ ಬದಲಿ ಮಾರ್ಗ ಪ್ರಕಟಿಸಿದ ಸಂಚಾರ ಪೊಲೀಸರು-bengaluru news traffic advisory issued in wake of karaga procession at hosa road bengaluru traffic police uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಸಂಚಾರ ಸಲಹೆ; ಹೊಸ ರೋಡ್‌, ಚೆನ್ನಕೇಶವನಗರದಲ್ಲಿ ಕರಗ ಉತ್ಸವ, ಸುಗಮ ಸಂಚಾರಕ್ಕೆ ಬದಲಿ ಮಾರ್ಗ ಪ್ರಕಟಿಸಿದ ಸಂಚಾರ ಪೊಲೀಸರು

ಬೆಂಗಳೂರು ಸಂಚಾರ ಸಲಹೆ; ಹೊಸ ರೋಡ್‌, ಚೆನ್ನಕೇಶವನಗರದಲ್ಲಿ ಕರಗ ಉತ್ಸವ, ಸುಗಮ ಸಂಚಾರಕ್ಕೆ ಬದಲಿ ಮಾರ್ಗ ಪ್ರಕಟಿಸಿದ ಸಂಚಾರ ಪೊಲೀಸರು

ಬೆಂಗಳೂರು ಸಂಚಾರ ಸಲಹೆ; ಹೊಸ ರೋಡ್‌, ಚೆನ್ನಕೇಶವನಗರದಲ್ಲಿ ಕರಗ ಉತ್ಸವ ಇಂದು ನಡೆಯುತ್ತಿರುವ ಕಾರಣ ಸುಗಮ ಸಂಚಾರಕ್ಕೆ ಸಂಚಾರ ಪೊಲೀಸರು ಬದಲಿ ಮಾರ್ಗ ಪ್ರಕಟಿಸಿದರು. ಇದರ ವಿವರ ಇಲ್ಲಿದೆ. ಇದಷ್ಟೇ ಅಲ್ಲದೆ, ಆಂಧ್ರ ಪ್ರದೇಶದಲ್ಲಿ ಮೇ 13ಕ್ಕೆ ಚುನಾವಣೆ ಇರುವ ಕಾರಣ ಸಂಚಾರ ದಟ್ಟಣೆ ಉಳಿದ ಕೆಲವೆಡೆಯೂ ಇರಲಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಸಂಚಾರ ಸಲಹೆ; ಹೊಸ ರೋಡ್‌, ಚೆನ್ನಕೇಶವನಗರದಲ್ಲಿ ಕರಗ ಉತ್ಸವ, ಸುಗಮ ಸಂಚಾರಕ್ಕೆ ಬದಲಿ ಮಾರ್ಗವನ್ನು ಸಂಚಾರ ಪೊಲೀಸರು ಪ್ರಕಟಿಸಿದ್ದಾರೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಸಂಚಾರ ಸಲಹೆ; ಹೊಸ ರೋಡ್‌, ಚೆನ್ನಕೇಶವನಗರದಲ್ಲಿ ಕರಗ ಉತ್ಸವ, ಸುಗಮ ಸಂಚಾರಕ್ಕೆ ಬದಲಿ ಮಾರ್ಗವನ್ನು ಸಂಚಾರ ಪೊಲೀಸರು ಪ್ರಕಟಿಸಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಹೊಸರಸ್ತೆ ಮತ್ತು ಚನ್ನಕೇಶವನಗರಗಳಲ್ಲಿ ಜಾತ್ರೆ ಊರಹಬ್ಬದ ಪ್ರಯುಕ್ತ ರಥೋತ್ಸವ, ಕರಗ ಹಾಗೂ ಪಲ್ಲಕ್ಕಿ ಉತ್ಸವ ಇಂದು (ಮೇ 11) ನಡೆಯುತ್ತಿದ್ದು, ಈ ಭಾಗದಲ್ಲಿ ಸಂಚಾರ ದಟ್ಟಣೆ ನಿರ್ವಹಿಸುವ ಸಲುವಾಗಿ ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಸಂಚಾರ ಸಲಹೆ (Traffic Advisory) ಯನ್ನು ನೀಡಿದ್ದಾರೆ.

ಇದರಂತೆ, ಹೊಸರೋಡ್‌ನಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವ ಕಾರಣ ಈ ಭಾಗದ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರುವುದಾಗಿ ಬೆಂಗಳೂರು ಸಂಚಾರ ಪೊಲೀಸ್ ಪ್ರಕಟಣೆ ತಿಳಿಸಿದೆ.

ಬೆಂಗಳೂರು ಸಂಚಾರ ಪೊಲೀಸರ ಸಂಚಾರ ಸಲಹೆ

ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ ಸರಹದ್ದಿನ ಹೊಸರಸ್ತೆ ಮತ್ತು ಚನ್ನಕೇಶವನಗರಗಳಲ್ಲಿ ಜಾತ್ರೆ ಊರಹಬ್ಬದ ಪ್ರಯುಕ್ತ ರಥೋತ್ಸವ, ಕರಗ ಹಾಗೂ ಪಲ್ಲಕ್ಕಿ ಉತ್ಸವಗಳ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ.

ಹೀಗಾಗಿ ಹೊಸರೋಡ್‌ನಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಈ ಸಮಯದಲ್ಲಿ ವಾಹನಗಳ ಸುಗಮ ಸಂಚಾರ ಮತ್ತು ಪಾದಚಾರಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿರುತ್ತದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಸಂಚಾರ ಸಲಹೆಯ 4 ಮುಖ್ಯ ಅಂಶಗಳು

1) ರಾಯಸಂದ್ರ ಜಂಕ್ಷನ್ ಕಡೆಯಿಂದ ಕೂಡ್ಲುಗೇಟ್ ಕಡೆಗೆ ಸಂಚರಿಸುವ ವಾಹನಗಳು ಚೂಡಸಂದ್ರ ಬಿರ್ಲಾ ಜಂಕ್ಷನ್ ಮುಖಾಂತರ ಕೂಡ್ಲುಗೇಟ್ ಕಡೆಗೆ ಸಂಚರಿಸಬೇಕು

2) ರಾಯಸಂದ್ರ ಜಂಕ್ಷನ್ ಕಡೆಯಿಂದ ಎಲೆಕ್ಟ್ರಾನಿಕ್‌ ಸಿಟಿ ಕಡೆಗೆ ಸಂಚರಿಸುವ ವಾಹನಗಳು ಓಲ್ಡ್ ಆರ್.ಟಿ.ಓ. ಜಂಕ್ಷನ್‌ನಿಂದ ದೊಡ್ಡನಾಗಮಂಗಲ ಮುಖಾಂತರ ಎಲೆಕ್ಟ್ರಾನಿಕ್‌ ಸಿಟಿ ಕಡೆಗೆ ಸಂಚರಿಸಬೇಕು

3) ನಾಗನಾಥಪುರ ಜಂಕ್ಷನ್ ಕಡೆಯಿಂದ ರಾಯಸಂದ್ರ ಕಡೆಗೆ ಸಂಚರಿಸುವ ವಾಹನಗಳು ಕೂಡ್ಲುಗೇಟ್ ಜಂಕ್ಷನ್‌ನಿಂದ ಕೂಡ್ಲುರಸ್ತೆ, ಬಿರ್ಲಾ ಜಂಕ್ಷನ್, ಚೂಡಸಂದ್ರ ಜಂಕ್ಷನ್ ಮುಖಾಂತರ ರಾಯಸಂದ್ರ ಕಡೆಗೆ ಸಂಚರಿಸಬೇಕು

4) ಹೊಸೂರು ರಸ್ತೆ ಕಡೆಯಿಂದ ಜೈಲು ರಸ್ತೆ, ರಾಯಸಂದ್ರ ರಸ್ತೆಯ ಕಡೆಗೆ ಸಂಚರಿಸುವ ವಾಹನಗಳು ಎಲೆಕ್ಟ್ರಾನಿಕ್‌ಸಿಟಿ 2ನೇ ಹಂತದಿಂದ ದೊಡ್ಡನಾಗಮಂಗಲ, ಓಲ್ಡ್ ಆರ್.ಟಿ.ಓ. ಜಂಕ್ಷನ್ ಮುಖಾಂತರ ಸಂಚರಿಸಬೇಕು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಸಂಚಾರ ಪೊಲೀಸರ ಸಂಚಾರ ಸಲಹೆಯ ಟ್ವೀಟ್‌

ಮೇ 13ಕ್ಕೆ ಆಂಧ್ರ ಪ್ರದೇಶ ಚುನಾವಣೆ, ಕೆಆರ್ ಪುರಂ, ಹೆಬ್ಬಾಳ ಮತ್ತು ಹೊರವರ್ತುಲ ರಸ್ತೆಯಲ್ಲಿ ಟ್ರಾಫಿಕ್‌

ಆಂಧ್ರಪ್ರದೇಶದ ಚುನಾವಣೆ ಮೇ 13 ರಂದು ನಡೆಯಲಿದ್ದು, ಬೆಂಗಳೂರಿನಲ್ಲಿರುವ ಆಂಧ್ರ ಪ್ರದೇಶದವರು ತಮ್ಮ ಊರಿಗೆ ಹೋಗುತ್ತಿದ್ದಾರೆ. ಇದಲ್ಲದೆ, ದೀರ್ಘ ವಾರಾಂತ್ಯದ ಕಾರಣ ಬೆಂಗಳೂರು ಮಹಾನಗರದಿಂದ ಔಟಿಂಗ್‌ಗೆ ಎಂದು ಹೊರಹೋಗುವ ಸಂಚಾರ ಅಧಿಕವಾಗಿರುತ್ತದೆ. ಮುಖ್ಯವಾಗಿ ಕೆಆರ್ ಪುರಂ, ಹೆಬ್ಬಾಳ ಮತ್ತು ಹೊರವರ್ತುಲ ರಸ್ತೆಗಳಲ್ಲಿ ಸಂಚಾರ ಅಧಿಕವಾಗಿದ್ದು, ಸುಗಮ ಸಂಚಾರಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

mysore-dasara_Entry_Point