ಹುಟ್ಟುಹಬ್ಬ ಆಚರಿಸಬೇಕಿದ್ದ ಮನೆಯಲ್ಲಿ ಸೂತಕ; ನ್ಯಾಯ ಕೊಡಿಸುವಂತೆ ಅಂಗಲಾಚಿದ ಸ್ಕೂಟರ್‌ ಶೋರೂಮ್‌ ಅಗ್ನಿ ದುರಂತದಲ್ಲಿ ಸಾವನ್ನಪಿದ ಯುವತಿ ತಂದೆ
ಕನ್ನಡ ಸುದ್ದಿ  /  ಕರ್ನಾಟಕ  /  ಹುಟ್ಟುಹಬ್ಬ ಆಚರಿಸಬೇಕಿದ್ದ ಮನೆಯಲ್ಲಿ ಸೂತಕ; ನ್ಯಾಯ ಕೊಡಿಸುವಂತೆ ಅಂಗಲಾಚಿದ ಸ್ಕೂಟರ್‌ ಶೋರೂಮ್‌ ಅಗ್ನಿ ದುರಂತದಲ್ಲಿ ಸಾವನ್ನಪಿದ ಯುವತಿ ತಂದೆ

ಹುಟ್ಟುಹಬ್ಬ ಆಚರಿಸಬೇಕಿದ್ದ ಮನೆಯಲ್ಲಿ ಸೂತಕ; ನ್ಯಾಯ ಕೊಡಿಸುವಂತೆ ಅಂಗಲಾಚಿದ ಸ್ಕೂಟರ್‌ ಶೋರೂಮ್‌ ಅಗ್ನಿ ದುರಂತದಲ್ಲಿ ಸಾವನ್ನಪಿದ ಯುವತಿ ತಂದೆ

ಬೆಂಗಳೂರು ಎಲೆಕ್ಟ್ರಿಕ್‌ ಸ್ಕೂಟರ್‌ ಶೋರೂಮ್‌ ಬೆಂಕಿ ದುರಂತದಲ್ಲಿ ಸಾವನ್ನಪ್ಪಿದ, ಉದ್ಯೋಗಿ ಪ್ರಿಯಾ ಪೋಷಕರು ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. ಬುಧವಾರ ಪ್ರಿಯಾ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದರು. ಬರ್ತ್‌ಡೇ ಆಚರಿಸಬೇಕಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.

ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ ಬೈಕ್‌ ಶೋರೂಮ್‌ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ ಪ್ರಿಯಾ ಪೋಷಕರು
ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ ಬೈಕ್‌ ಶೋರೂಮ್‌ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ ಪ್ರಿಯಾ ಪೋಷಕರು

ಬೆಂಗಳೂರು: ಮಂಗಳವಾರ ರಾತ್ರಿ ಬೆಂಗಳೂರು ರಾಜಾಜಿನಗರದ ಎಲೆಕ್ಟ್ರಿಕ್‌ ಬೈಕ್‌ ಶೋರೂಮ್‌ ಅಗ್ನಿ ಅವಘಡದಲ್ಲಿ 20 ವರ್ಷದ ಉದ್ಯೋಗಿ ಪ್ರಿಯಾ ಎಂಬ ಯುವತಿ ಬಲಿಯಾಗಿದ್ದಾರೆ. ಬೆಂಕಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಪ್ರಿಯಾ ಸಾವನ್ನನ್ನಪ್ಪಿದ್ದಾರೆ. ಮಗಳ ಸಾವಿಗೆ ನ್ಯಾಯ ದೊರಕಿಸಿಕೊಂಡುವಂತೆ ಪ್ರಿಯಾ ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಬುಧವಾರ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಯುವತಿ

ಪ್ರಿಯಾ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಇಂದು ಬುಧವಾರ (ನ.20) ಪ್ರಿಯಾ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಆದರೆ ಬರ್ತ್‌ಡೇ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದ ಪ್ರಿಯಾ ಬೆಂಕಿ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮಗಳನ್ನು ಕಳೆದುಕೊಂಡು ತಂದೆ ತಾಯಿ ಶಾಕ್‌ನಲ್ಲಿದ್ದಾರೆ. ಪ್ರೀತಿಯ ಮಗಳ ಹುಟ್ಟುಹಬ್ಬ ಆಚರಿಸಲು ಹೊಸ ಬಟ್ಟೆ ತಂದಿದ್ದೆವು, ಕೇಕ್‌ಗೆ ಕೂಡಾ ಆರ್ಡರ್‌ ಮಾಡಿದ್ದೆವು. ಬರ್ತ್‌ಡೇ ಆಚರಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದೆವು. ಆದರೆ ಈ ರೀತಿ ಆಗಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಮಗಳು ಮನೆಯ ಮಹಾಲಕ್ಷ್ಮಿಯಂತೆ ಇದ್ದಳು, ಅವಳನ್ನು ಕಳೆದುಕೊಂಡು ಅನಾಥವಾಗಿದ್ದೇವೆ ಎಂದು ಪ್ರಿಯಾ ತಂದೆ ತಾಯಿ ದುಃಖ ವ್ಯಕ್ತಪಡಿಸಿದ್ದಾರೆ.

ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಪೋಷಕರ ಮನವಿ

ಮಗಳು ಚಿಕ್ಕ ವಯಸ್ಸಿನಲ್ಲೇ ಮನೆಯ ಜವಾಬ್ದಾರಿ ವಹಿಸಿಕೊಂಡಿದ್ದಳು. ಭವಿಷ್ಯದ ಬಗ್ಗೆ ಬಹಳ ಕನಸು ಕಂಡಿದ್ದಳು. ಕಂಪನಿಗಾಗಿ ಹಗಲು, ರಾತ್ರಿ ದುಡಿದಿದ್ದಳು. ಕಷ್ಟಪಟ್ಟು ಕೆಲಸ ಮಾಡಿ ಅಲ್ಲಿ ಕೆಲಸ ಮಾಡುತ್ತಿದ್ದ 20 ಜನರಿಗೆ ಹೆಡ್‌ ಆಗಿದ್ದಳು. ಆದರೆ ಅಷ್ಟು ಜನರಲ್ಲಿ ನನ್ನ ಮಗಳು ಮಾತ್ರ ಸಾವನ್ನಪ್ಪಿದಳು ಎನ್ನುತ್ತಿದ್ದಾರೆ. ದುರಂತ ನಡೆದ ನಂತರ ಕಂಪನಿಯವರು ನಮಗೆ ಒಂದು ಕರೆ ಕೂಡಾ ಮಾಡಿಲ್ಲ. ಟಿವಿ ನೋಡಿದ ನಂತರವಷ್ಟೇ ನಾವು ವಿಚಾರ ತಿಳಿದುಕೊಂಡಿದ್ದು. ನಮಗೆ ನ್ಯಾಯ ಬೇಕು, ಶೋರೂಮ್‌ನವರಿಗೆ ಶಿಕ್ಷೆ ಆಗಬೇಕು ಎಂದು ಮೃತ ಯುವತಿ ಪ್ರಿಯಾ ತಂದೆ ಆರ್ಮುಗಂ ಕಣ್ಣೀರು ಹಾಕಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಪ್ರಿಯಾ

ಮಂಗಳವಾರ ಸಂಜೆ ಸುಮಾರು 5.30 ರ ಸಮಯದಲ್ಲಿ ಒಂದು ಎಲೆಕ್ಟ್ರಿಕ್‌ ಬೈಕ್‌ನ ಬ್ಯಾಟರಿ ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿ ಇಡೀ ಶೋರೂಮ್‌ಗೆ ವ್ಯಾಪಿಸಿದೆ. ಸುತ್ತಲೂ ಇತರ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಇದ್ದ ಕಾರಣ ಸ್ಪೋಟ ಹೆಚ್ಚಾಗಿ ಬೆಂಕಿ ಸುತ್ತಲೂ ವ್ಯಾಪಿಸಿದೆ. ಶೋರೂಮ್‌ನಲ್ಲಿ ಬೆಂಕಿ ವ್ಯಾಪಿಸುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ 3 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ. ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಶೋರೂಮ್‌ನಲ್ಲಿದ್ದ ಇತರರು ಹೊರಗೆ ಬಂದು ಜೀವ ಉಳಿಸಿಕೊಂಡಿದ್ದಾರೆ. ಆದರೆ ಪ್ರಿಯಾ, ಹೊರಗೆ ಬಾರಲಾಗದೆ ಶೋರೂಮ್‌ನಲ್ಲೇ ಸಿಲುಕಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಂತೆ ಪ್ರಿಯಾ ಅವರನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾರೆ.

 

 

 

Whats_app_banner