ಬೆಂಗಳೂರಲ್ಲಿ ಡಿಸೆಂಬರ್‌ ಚಳಿ ವಾಡಿಕೆ: ಆದರೆ, ಈ ಬಾರಿ ನವೆಂಬರ್ ಮಧ್ಯದಲ್ಲೇ ಶುರುವಾಗಿದೆ ನೋಡಿ; ಉತ್ತರ ಕರ್ನಾಟಕದಲ್ಲೂ ವಿಪರೀತ ಚಳಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಡಿಸೆಂಬರ್‌ ಚಳಿ ವಾಡಿಕೆ: ಆದರೆ, ಈ ಬಾರಿ ನವೆಂಬರ್ ಮಧ್ಯದಲ್ಲೇ ಶುರುವಾಗಿದೆ ನೋಡಿ; ಉತ್ತರ ಕರ್ನಾಟಕದಲ್ಲೂ ವಿಪರೀತ ಚಳಿ

ಬೆಂಗಳೂರಲ್ಲಿ ಡಿಸೆಂಬರ್‌ ಚಳಿ ವಾಡಿಕೆ: ಆದರೆ, ಈ ಬಾರಿ ನವೆಂಬರ್ ಮಧ್ಯದಲ್ಲೇ ಶುರುವಾಗಿದೆ ನೋಡಿ; ಉತ್ತರ ಕರ್ನಾಟಕದಲ್ಲೂ ವಿಪರೀತ ಚಳಿ

ಬೆಂಗಳೂರಲ್ಲಿ ಡಿಸೆಂಬರ್ ಚಳಿ ವಾಡಿಕೆ. ಅಂದರೆ ಬೆಂಗಳೂರು ಸುತ್ತಮುತ್ತ ಪ್ರದೇಶಗಳಲ್ಲಿ ಚಳಿ ಶುರುವಾಗುವುದು ಡಿಸೆಂಬರ್‌ಗೆ. ಆದರೆ ಈ ಬಾರಿ ನವೆಂಬರ್ ಮಧ್ಯದಲ್ಲೇ ಚಳಿ ಶುರುವಾಗಿದೆ. ಇನ್ನೂ ಗಮನಿಸಬೇಕಾದ ಅಂಶ ಎಂದರೆ ಉತ್ತರ ಕರ್ನಾಟಕದಲ್ಲೂ ವಿಪರೀತ ಚಳಿ ಶುರುವಾಗಿದೆ. ಉಷ್ಣಾಂಶ, ತೇವಾಂಶ ಇಳಿಕೆಯಾಗಿದೆ. ಈ ಕುರಿತ ವಿವರ ಇಲ್ಲಿದೆ.

ಕರ್ನಾಟಕ ಹವಾಮಾನ: ಬೆಂಗಳೂರಲ್ಲಿ ಡಿಸೆಂಬರ್‌ ಚಳಿ ವಾಡಿಕೆ. ಆದರೆ, ಈ ಬಾರಿ ನವೆಂಬರ್ ಮಧ್ಯದಲ್ಲೇ ಚಳಿ ಶುರುವಾಗಿದೆ. ಉತ್ತರ ಕರ್ನಾಟಕದಲ್ಲೂ ವಿಪರೀತ ಚಳಿ ಇದ್ದು, ಈ ಕುರಿತ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕ ಹವಾಮಾನ: ಬೆಂಗಳೂರಲ್ಲಿ ಡಿಸೆಂಬರ್‌ ಚಳಿ ವಾಡಿಕೆ. ಆದರೆ, ಈ ಬಾರಿ ನವೆಂಬರ್ ಮಧ್ಯದಲ್ಲೇ ಚಳಿ ಶುರುವಾಗಿದೆ. ಉತ್ತರ ಕರ್ನಾಟಕದಲ್ಲೂ ವಿಪರೀತ ಚಳಿ ಇದ್ದು, ಈ ಕುರಿತ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ) (Dhruvnk -‍ X / HTNews)

ಬೆಂಗಳೂರು: ಹವಾಮಾನ ವೈಪರೀತ್ಯದ ಅನುಭವ ಈ ಬಾರಿ ತುಸು ಹೆಚ್ಚೇ ಆಗುತ್ತಿದ್ದು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಈ ಸಲ ಹೆಚ್ಚಿನ ಮಳೆಯಾಗಿರುವುದಷ್ಟೇ ಅಲ್ಲ, ಚಳಿಯೂ ಹೆಚ್ಚಾಗಲಿದೆ. ತೇವಾಂಶ ಕಡಿಮೆಯಾಗುವ ಕಾರಣ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಿತ್ತು. ಆದರೆ ಆ ಸೂಚಿತ ಅವಧಿಗೂ ಮೊದಲೇ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ತಾಪಮಾನದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಚಳಿ ಹೆಚ್ಚಾಗಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಕನಿಷ್ಠ ಉಷ್ಣಾಂಶವು 15.5 ಡಿಗ್ರಿ ಸೆಲ್ಶಿಯಸ್ ಮತ್ತು 16 ಡಿಗ್ರಿ ಸೆಲ್ಶಿಯಸ್ ನಡುವೆ ಕಂಡುಬಂದಿದೆ. ಎರಡು ಮೂರು ದಿನಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಕನಿಷ್ಠ ಉಷ್ಣಾಂಶ 12.6 ಡಿಗ್ರಿ ಸೆಲ್ಶಿಯಸ್ ದಾಖಲಾಗಿದ್ದನ್ನೂ ನೆನಪು ಮಾಡಿಕೊಳ್ಳಬಹುದು. ಇದು ಚಳಿಗಾಲದ ಆರಂಭವಾದರೂ ತುಸು ಹೆಚ್ಚೇ ಚಳಿ ಇರುವುದನ್ನು ಸೂಚಿಸುತ್ತದೆ. ಬೆಂಗಳೂರಿಗರು ಈಗಾಗಲೇ ಸ್ವೆಟ್ಟರ್, ಜಾಕೆಟ್‌, ಮಫ್ಲರ್‌ ಸುತ್ತಿಕೊಳ್ಳಲಾರಂಭಿಸಿದ್ದಾರೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಲ್ಲಿ ಡಿಸೆಂಬರ್‌ ಚಳಿ ವಾಡಿಕೆ, ಆದರೆ ಈ ಬಾರಿ ನವೆಂಬರ್ ಮಧ್ಯದಲ್ಲೇ ಶುರುವಾಗಿದೆ

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಚಳಿಗಾಲ ಶುರುವಾಗುವುದು ವಾಡಿಕೆ. ಇದು ಫೆಬ್ರವರಿ ಆರಂಭದ ತನಕವೂ ಇರುತ್ತದೆ. ಆದರೆ ಈ ವರ್ಷ ನಿಗದಿತ ಅವಧಿಗೂ ಮೊದಲೇ ಅಂದರೆ ನವೆಂಬರ್ ಮಧ್ಯಭಾಗದಲ್ಲೇ ಚಳಿಗಾಲ ಶುರುವಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಈ ಬಾರಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಸಾಮಾನ್ಯ ಹೆಚ್ಚು ಚಳಿ ಅನುಭವಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ನಿವೃತ್ತ ನಿರ್ದೇಶಕ ಶ್ರೀನಿವಾಸ್ ರೆಡ್ಡಿ, ಈ ಚಳಿಗಾಲವು ಹಿಂದಿನ ವರ್ಷಗಳಿಗಿಂತ ಕಠಿಣವಾಗಿರಬಹುದು ಎಂದು ಹೇಳಿದ್ಧಾಗಿ ಆ ವರದಿ ವಿವರಿಸಿದೆ.

ಮುಂದಿನ ದಿನಗಳಲ್ಲಿ ಬೆಂಗಳೂರು ಸುತ್ತಮುತ್ತ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಶಿಯಸ್‌ ಮತ್ತು 14 ಡಿಗ್ರಿ ಸೆಲ್ಶಿಯಸ್‌ ನಡುವೆ ಕಾಡಬಹುದು. ಅದೇ ರೀತಿ ಬೀದರ್‌ ಮತ್ತು ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಶಿಯಸ್‌ಗಿಂತಲೂ ಕಡಿಮೆಯಾಗಬಹುದು ಎಂದು ವರದಿ ಹೇಳಿದೆ.

ಬೆಂಗಳೂರು ಮಾತ್ರವಲ್ಲ, ಉತ್ತರ ಕರ್ನಾಟಕದಲ್ಲೂ ವಿಪರೀತ ಚಳಿ

ಅವಧಿಗೂ ಮೊದಲೇ ಚಳಿ ಶುರುವಾಗಿರುವುದು ಬೆಂಗಳೂರು ಸುತ್ತಮುತ್ತ ಮಾತ್ರ ಅಂತ ಅಂದ್ಕೊಳ್ಳಬೇಡಿ. ಉತ್ತರ ಕನ್ನಾಡದ ಜಿಲ್ಲೆಗಳಲ್ಲೂ ವಿಶೇಷವಾಗಿ ಬೀದರ್‌, ಕಲಬುರಗಿ, ವಿಜಯಪುರ ಮುಂತಾದ ಜಿಲ್ಲೆಗಳಲ್ಲೂ ಕನಿಷ್ಠ ಉಷ್ಣಾಂಶ ತೀವ್ರವಾಗಿ ಕುಸಿದಿದೆ. ಇದು ಚಳಿಯ ಪ್ರಮಾಣವನ್ನು ಹೆಚ್ಚಿಸಿದ್ದು, ಜನರಿಗೆ ವಿಪರೀತ ಚಳಿಯ ಅನುಭವ ನೀಡಿದೆ. ವಿಜಯಪುರದಲ್ಲಿ ನಿನ್ನೆ (ನವೆಂಬರ್ 24) ಕೂಡ ಕನಿಷ್ಠ ಉಷ್ಣಾಂಶ 12 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿತ್ತು. ಇದೇ ರೀತಿ ಕನಿಷ್ಠ ತಾಪಮಾನ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿವೆ. ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಈ ರೀತಿ ಕನಿಷ್ಠ ತಾಪಮಾನ ಅಥವಾ ಉಷ್ಣಾಂಶ ಇಳಿಕೆ ಇರುವುದಿಲ್ಲ. ಈ ಬಾರಿ ಹೀಗಾಗಿರುವುದು ವಿಪರೀತ ಚಳಿಯ ಮುನ್ಸೂಚನೆಯಾಗಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದ ಕೆಲವು ಕಡೆ ಕನಿಷ್ಠ ಉಷ್ಣಾಂಶ 3 ಡಿಗ್ರಿ ಸೆಲ್ಶಿಯಸ್‌ 4 ಡಿಗ್ರಿ ಸೆಲ್ಶಿಯಸ್ ಮಟ್ಟಕ್ಕೂ ಇಳಿಕೆಯಾಗಬಹುದು ಎಂದು ಪರಿಣತರು ಅಂದಾಜಿಸಿದ್ದಾಗಿ ವರದಿ ಹೇಳಿದೆ.

ಈ ಪರಿ ವಿಪರೀತ ಚಳಿ ಯಾಕೆ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳು ಈಗ ಅನುಭವಿಸುತ್ತಿರುವ ಆರಂಭಿಕ ಮತ್ತು ತೀವ್ರ ಚಳಿಗಾಲದ ಪರಿಸ್ಥಿತಿಗಳನ್ನು ಅನೇಕ ಅಂಶಗಳಿಗೆ ಕಾರಣವೆಂದು ಹವಾಮಾನಶಾಸ್ತ್ರಜ್ಞರು ಹೇಳುತ್ತಾರೆ. ಬೆಂಗಳೂರು ಮಿರರ್ ಪ್ರಕಾರ, ಪೆಸಿಫಿಕ್ ಸಾಗರದ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ ಇರುವ ಲಾ ನಿನಾ ವಿದ್ಯಮಾನವು ಚಳಿ ಹೆಚ್ಚಾಗುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ.

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಒಣಹವೆ ವಾತಾವರಣವಿದ್ದರೂ, ಬೆಂಗಳೂರು ಮತ್ತು ಇತರ ಕೆಲವು ಜಿಲ್ಲೆಗಳಲ್ಲಿ ನವೆಂಬರ್ 26 ಮತ್ತು 27 ರಂದು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನವೆಂಬರ್ 23ರ ಹವಾಮಾನ ಮುನ್ಸೂಚನೆ ವರದಿಯಲ್ಲಿ ಹೇಳಿತ್ತು. ಬೆಂಗಳೂರಿನಲ್ಲಿ ಪ್ರಸ್ತುತ ತೇವಾಂಶದ ಮಟ್ಟ ಶೇಕಡ 49 ರಷ್ಟಿದ್ದು, ಈಶಾನ್ಯ ಮಾರುತದ ವೇಗ ಗಂಟೆಗೆ 13 ಕಿ.ಮೀ. ಇದೆ ಎಂದು ವರದಿ ಹೇಳಿದೆ.

Whats_app_banner