children's theater shows: ಸಮಾಜದ ಸ್ವಾಸ್ಥ್ಯ ಕಾಪಾಡಲು ಮಕ್ಕಳ ರಂಗಭೂಮಿ ಅಗತ್ಯ; ಮಂಡ್ಯ ರಮೇಶ್‌ ಪ್ರತಿಪಾದನೆ
ಕನ್ನಡ ಸುದ್ದಿ  /  ಕರ್ನಾಟಕ  /  Children's Theater Shows: ಸಮಾಜದ ಸ್ವಾಸ್ಥ್ಯ ಕಾಪಾಡಲು ಮಕ್ಕಳ ರಂಗಭೂಮಿ ಅಗತ್ಯ; ಮಂಡ್ಯ ರಮೇಶ್‌ ಪ್ರತಿಪಾದನೆ

children's theater shows: ಸಮಾಜದ ಸ್ವಾಸ್ಥ್ಯ ಕಾಪಾಡಲು ಮಕ್ಕಳ ರಂಗಭೂಮಿ ಅಗತ್ಯ; ಮಂಡ್ಯ ರಮೇಶ್‌ ಪ್ರತಿಪಾದನೆ

children's theater shows: ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (SVYM) ಬುಧವಾರ ಏರ್ಪಡಿಸಿದ್ದ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠ ಕಾರ್ಯಕ್ರಮದಲ್ಲಿ ಮೈಸೂರಿನ ನಟನ ಸಂಸ್ಥೆಯ ಸಂಸ್ಥಾಪಕ, ಚಲಚಿತ್ರನಟ, ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಅವರು ʻಮಕ್ಕಳ ರಂಗಭೂಮಿʼ ಕುರಿತು ಮಾತನಾಡಿದರು.

ಪ್ರಸಿದ್ಧ ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಅವರು ʻಮಕ್ಕಳ ರಂಗಭೂಮಿʼ ಕುರಿತು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (SVYM) ಬುಧವಾರ ಏರ್ಪಡಿಸಿದ್ದ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸಿದ್ಧ ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಅವರು ʻಮಕ್ಕಳ ರಂಗಭೂಮಿʼ ಕುರಿತು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (SVYM) ಬುಧವಾರ ಏರ್ಪಡಿಸಿದ್ದ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧಾರವಾಡ: ಇಂದಿನ ಮಕ್ಕಳೇ ಹಾಲಿ ಸಮಾಜದ ಪ್ರತಿನಿಧಿಗಳು. ಅವರಲ್ಲಿ ಉತ್ತಮ ನಾಗರಿಕತೆಯನ್ನು ರೂಢಿಸುವುದು ಪ್ರಸ್ತುತ ಸಮಾಜದ ಕರ್ತವ್ಯ. ಹೀಗಿರುವಾಗ ಎಲ್ಲ ಬದಲಾವಣೆಯನ್ನು ಶಿಕ್ಷಣದಿಂದಲೇ ನಿರೀಕ್ಷೆ ಮಾಡುವುದು ಕಷ್ಟಸಾಧ್ಯ. ಇದರ ಅನುಷ್ಠಾನಕ್ಕೆ ಪರ್ಯಾಯ ವ್ಯವಸ್ಥೆಯನ್ನು ಆಕರಿಸುವುದು ಇಂದಿನ ಅಗತ್ಯ. ಆ ಪರ್ಯಾಯ ವ್ಯವಸ್ಥೆಯೇ ಮಕ್ಕಳ ರಂಗಭೂಮಿ ಎಂದು ಪ್ರಸಿದ್ದ ರಂಗಕರ್ಮಿ ಮಂಡ್ಯ ರಮೇಶ್ ಹೇಳಿದರು.

ಅವರು, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ಧಾರವಾಡ ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗಾಗಿ ಬುಧವಾರ (ಡಿ.21) ಏರ್ಪಡಿಸಿದ್ದ ಜ್ಞಾನದೀಪ ವೆಬಿನಾರ್‌ನಲ್ಲಿ ʻಮಕ್ಕಳ ರಂಗಭೂಮಿʼ ಕುರಿತು ಮಾತನಾಡಿದರು.

ಜ್ಞಾನದೀಪ ವೆಬಿನಾರ್‌ನ ಒಂದು ನೋಟ
ಜ್ಞಾನದೀಪ ವೆಬಿನಾರ್‌ನ ಒಂದು ನೋಟ

ಮಕ್ಕಳು ರಂಗಭೂಮಿಯಲ್ಲಿ ತೊಡಗಿಕೊಳ್ಳುವುದರಿಂದ ಅವರ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಸಿಗುವುದು. ಅಲ್ಲದೆ, ಸಮುದಾಯವನ್ನು ರಂಗಭೂಮಿಯತ್ತ ಸೆಳೆಯುವುದಕ್ಕೂ ಇದು ಕಾರಣವಾಗುತ್ತದೆ. ಒಂದೇ ಭಾಷೆಯ ವಿವಿಧ ಮಜಲುಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಅಲ್ಲದೇ ತುಲನಾತ್ಮಕ ಕಲಿಕೆಗೆ ದಾರಿ ಮಾಡಿ ಕೊಡುತ್ತದೆ. ಓದಿಗಿಂತಲೂ ವೇಗವಾಗಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ತಿರುಳನ್ನು ತಿಳಿಯಲು ರಂಗಭೂಮಿಯು ಅತ್ಯಗತ್ಯ ಎಂದು ಮಂಡ್ಯ ರಮೇಶ್‌ ಹೇಳಿದರು.

ಮಕ್ಕಳು ತಮ್ಮನ್ನು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಸಂವಹನ ಕೌಶಲ್ಯ, ಅಭಿನಯ ಕೌಶಲ್ಯ, ಭಾಷಾ ಬಳಕೆ ಕೌಶಲ್ಯ, ಸೌಂದರ್ಯ ಪ್ರಜ್ಞೆ, ಉಡುಪಿನ ಆಯ್ಕೆ ಇವೆಲ್ಲದಕ್ಕೂ ಮಿಗಿಲಾಗಿ ಮಗು ಸ್ವಯಂ ಅರಿವಿನ ಮೂಲಕ ಸಮಾಜಮುಖಿ ಚಿಂತನೆಯತ್ತ ತೊಡಗಿಕೊಳ್ಳುವಂತೆ ಮಾಡುವುದು. ಈ ನಿಟ್ಟಿನಲ್ಲಿ ಮಕ್ಕಳು ಹೆಚ್ಚು ಹೆಚ್ಚು ರಂಗಭೂಮಿಯತ್ತ ಆಕರ್ಷಿತರಾಗಬೇಕು ಎಂದು ಅವರು ಹೇಳಿದರು.

ವೆಬಿನಾರ್‌ನಲ್ಲಿ ಭಾಗವಹಿಸಿದ ಮಕ್ಕಳು ಮತ್ತು ಪಾಲಕರು
ವೆಬಿನಾರ್‌ನಲ್ಲಿ ಭಾಗವಹಿಸಿದ ಮಕ್ಕಳು ಮತ್ತು ಪಾಲಕರು

ಅಭಿನಯವನ್ನು ರೂಢಿಸಿಕೊಳ್ಳಲು ಏಕಾಗ್ರತೆ, ಗ್ರಹಿಸುವಿಕೆ, ಜ್ಞಾಪಕ ಶಕ್ತಿ ಮತ್ತು ಕಲ್ಪನಾ ಶಕ್ತಿಗಳು ಅಗತ್ಯವಾದ ಅಂಶಗಳು. ಇದಕ್ಕೂ ಮೊದಲು ಸಮಾಜದ ಪ್ರತಿಯೊಬ್ಬರನ್ನು ಗಮನಿಸಿ ಅನುಕರಿಸುವುದನ್ನು ರೂಢಿಸಿಕೊಳ್ಳಬೇಕು. ಕನ್ನಡಿಯನ್ನು ತನ್ನ ಅಭಿನಯದ ನಿರ್ದೇಶಕನಾಗಿ ಪರಿಗಣಿಸಬೇಕು. ಅದರ ಮುಂದೆ ಮತ್ತೆ ಮತ್ತೆ ಅಭಿನಯಿಸಿ ರೂಢಿಸಿಕೊಳ್ಳಬೇಕು. ಸಾಮಾಜಿಕ ಜ್ಞಾನದ ಅರಿವಿರಬೇಕು, ಒಟ್ಟಿನಲ್ಲಿ ರಂಜನೆಯ ಮೂಲಕ ಚಿಂತನೆಗೆ ಹಚ್ಚುವ ಕಾರ್ಯವನ್ನು ರಂಗಭೂಮಿಯು ಮಾಡುತ್ತದೆ. ಇದಕ್ಕೆ ಬುನಾದಿ ಎಂಬಂತೆ ಮಕ್ಕಳ ರಂಗಭೂಮಿ ಕಾರ್ಯ ನಿರ್ವಹಿಸುತ್ತದೆ. ತನ್ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ರಂಗಭೂಮಿಯ ಪಾತ್ರ ಬಹುಮಹತ್ವದ್ದು ಎಂದು ಮಂಡ್ಯ ರಮೇಶ್‌ ಅವರು ನಿರೂಪಿಸಿದರು.

ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಪಠ್ಯ ವಿಷಯಗಳ ಹೊರತಾಗಿ ಜ್ಞಾನ ವೃದ್ಧಿಗೆ ಪೂರಕವಾಗುವಂತಹ ವಿಷಯಗಳ ಮೇಲೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿ ಬುಧವಾರ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠ ಎಂಬ ಶೀರ್ಷಿಕೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (SVYM) ವೆಬಿನಾರ್‌ಗಳನ್ನು ಸಂಘಟಿಸುತ್ತಿದೆ.

ಈ ವೆಬಿನಾರಲ್ಲಿ 50 ಸರ್ಕಾರಿ ಶಾಲೆಗಳಿಂದ 834 ವಿದ್ಯಾರ್ಥಿಗಳು ಮತ್ತು 1298 ವಿದ್ಯಾರ್ಥಿನಿಯರು ಸೇರಿದಂತೆ 2132 ಮಕ್ಕಳು ಪಾಲ್ಗೊಂಡು ಹಲವು ಪ್ರಶ್ನೆಗಳನ್ನು ಕೇಳಿ ಸಂದೇಹ ಪರಿಹರಿಸಿಕೊಂಡರು.

ಗಮನಾರ್ಹ ಸುದ್ದಿಗಳು

Shankarnag Natakotsava 2022: ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.26ರಿಂದ 30ರ ತನಕ ಶಂಕರ್‌ನಾಗ್‌ ನಾಟಕೋತ್ಸವ ಸಂಭ್ರಮ; ಯಾವ ದಿನ ಯಾವ ನಾಟಕ?

Shankarnag Natakotsava 2022: ರಾಜ್ಯ ರಾಜಧಾನಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.26ರಿಂದ 30ರ ತನಕ ಶಂಕರ್‌ನಾಗ್‌ ನಾಟಕೋತ್ಸವದ ಸಂಭ್ರಮ. ವಿವಿಧ ನಾಟಕ ತಂಡಗಳು ಐದು ದಿನ ನಿತ್ಯವೂ ಸಂಜೆ ದಿನಕ್ಕೆ ಒಂದರಂತೆ ನಾಟಕ ಪ್ರದರ್ಶಿಸಲಿವೆ. ಅವುಗಳ ವಿವರ ಇಲ್ಲಿದೆ. ಕ್ಲಿಕ್‌ ಮಾಡಿ

Whats_app_banner