Cricket Year Ender 2024: ಭಾರತ ವನಿತೆಯರು ಈ ವರ್ಷವೂ ಟಿ20 ವಿಶ್ವಕಪ್ ಗೆಲ್ಲದಿರಲು ಕಾರಣವೇನು; ಪದೆಪದೇ ಅದೇ ತಪ್ಪು ಏಕಾಗ್ತಿದೆ?
ಕನ್ನಡ ಸುದ್ದಿ  /  ಕ್ರಿಕೆಟ್  /  Cricket Year Ender 2024: ಭಾರತ ವನಿತೆಯರು ಈ ವರ್ಷವೂ ಟಿ20 ವಿಶ್ವಕಪ್ ಗೆಲ್ಲದಿರಲು ಕಾರಣವೇನು; ಪದೆಪದೇ ಅದೇ ತಪ್ಪು ಏಕಾಗ್ತಿದೆ?

Cricket Year Ender 2024: ಭಾರತ ವನಿತೆಯರು ಈ ವರ್ಷವೂ ಟಿ20 ವಿಶ್ವಕಪ್ ಗೆಲ್ಲದಿರಲು ಕಾರಣವೇನು; ಪದೆಪದೇ ಅದೇ ತಪ್ಪು ಏಕಾಗ್ತಿದೆ?

Cricket Year Ender 2024: ಭಾರತ ಮಹಿಳಾ ತಂಡ ಈ ವರ್ಷ ನಡೆದ ಟಿ20 ವಿಶ್ವಕಪ್ ಅನ್ನೂ ಗೆಲ್ಲಲಿಲ್ಲ. ಹಾಗಾದರೆ ಕಪ್ ಗೆಲ್ಲದಿರಲು ಕಾರಣವೇನು; ಪದೇ ಪದೇ ಅದೇ ತಪ್ಪು ಏಕಾಗ್ತಿದೆ? ಇಲ್ಲಿದೆ ವಿವರ.

ಭಾರತ ವನಿತೆಯರು ಈ ವರ್ಷವೂ ಟಿ20 ವಿಶ್ವಕಪ್ ಗೆಲ್ಲದಿರಲು ಕಾರಣವೇನು; ಪದೆಪದೇ ಅದೇ ತಪ್ಪು ಏಕಾಗ್ತಿದೆ?
ಭಾರತ ವನಿತೆಯರು ಈ ವರ್ಷವೂ ಟಿ20 ವಿಶ್ವಕಪ್ ಗೆಲ್ಲದಿರಲು ಕಾರಣವೇನು; ಪದೆಪದೇ ಅದೇ ತಪ್ಪು ಏಕಾಗ್ತಿದೆ?

2024ರ ಕ್ಯಾಲೆಂಡರ್​ ತಿರುವಿ ಹಾಕಿ ನೂತನ ವರ್ಷಕ್ಕೆ ಕಾಲಿಡಲು ಕೆಲವೇ ದಿನಗಳು ಬಾಕಿ. ಎಲ್ಲರೂ ನೂತನ ವರ್ಷವನ್ನು ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಮಹಿಳಾ ಕ್ರಿಕೆಟ್​ನಲ್ಲಿ ಮತ್ತೊಂದು ನಿರಾಸೆ ಕಂಡಿದ್ದೇವೆ. ಚೊಚ್ಚಲ ಐಸಿಸಿ ಟ್ರೋಫಿ ಜಯಿಸುವ ಕನಸು ಈ ಬಾರಿಯೂ ಭಗ್ನಗೊಂಡಿದೆ. ಅದಕ್ಕೆ ತಂಡದಲ್ಲಿ ಆಗಿರುವ ಪ್ರಮಾದಗಳೇ ಕಾರಣ.

ಹೌದು, ಈ ವರ್ಷ ಅಕ್ಟೋಬರ್ 3ರಿಂದ ಅಕ್ಟೋಬರ್ 20ರ ತನಕ ನಡೆದ ಮಹಿಳೆಯರ ವಿಶ್ವಕಪ್​​ನಲ್ಲಿ ಭಾರತ ತಂಡ ಅತ್ಯಂತ ಕೆಟ್ಟ ಪ್ರದರ್ಶನ ನೀಡಿ ಲೀಗ್ ಹಂತದಿಂದಲೇ ಹೊರಬಿತ್ತು. ಎ ಗುಂಪಿನಲ್ಲಿ ಆಡಿದ 4 ಪಂದ್ಯಗಳಲ್ಲಿ 2 ಗೆಲುವು, 2 ಸೋಲು ಕಂಡು ಲೀಗ್​ನಲ್ಲೇ ಹೊರಬಿತ್ತು. ಪ್ರತಿ ಐಸಿಸಿ ಟೂರ್ನಿಗಳಲ್ಲೂ ಲೀಗ್ ಅಥವಾ ಸೆಮಿಫೈನಲ್​ಗೆ ತನ್ನ ಪ್ರಯಾಣವನ್ನು ಕೊನೆಗೊಳಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.

ಹಾಗಾದರೆ ಭಾರತ ಮಹಿಳಾ ಪದೆಪದೇ ಎಡವುತ್ತಿರುವುದೆಲ್ಲಿ? ಒಂದೇ ಒಂದು ಪ್ರಶಸ್ತಿ ಗೆಲ್ಲದಿರಲು ಕಾರಣಗಳೇನು? ಮುಂದಿನ ಸವಾಲುಗಳೇನು? ಪರಿಹಾರಗಳೇನು? ಇಲ್ಲಿದೆ ವಿವರ.

ತಂತ್ರಗಳನ್ನು ರೂಪಿಸುವಲ್ಲಿ ವಿಫಲ

ಐಸಿಸಿ ಈವೆಂಟ್​ಗಳಲ್ಲಿ ಭಾರತದ ಸೋಲಿಗೆ ಪ್ರಮುಖ ಕಾರಣ ತಂತ್ರಗಳನ್ನು ಸರಿಯಾದ ರೂಪಿಸದಿರುವುದು. ಎದುರಾಳಿ ತಂಡಗಳ ವೀಕ್ನೆಸ್ ಅರಿಯದೆ ಮೈದಾನಕ್ಕಿಳಿಯುವ ವನಿತೆಯರು, ಹೀನಾಯವಾಗಿ ಶರಣಾಗುತ್ತಿದ್ದಾರೆ. ಎದುರಾಳಿ ತಂಡದ ಬ್ಯಾಟರ್, ಬೌಲರ್​ಗಳ ವೀಕ್ನೆಸ್ ಅರಿತು ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಬೇಕು. ಹೀಗಾದಾಗ ಮಾತ್ರ ಮೇಲುಗೈ ಸಾಧಿಸಬಹುದು.

ಆತ್ಮವಿಶ್ವಾಸದ ಕೊರತೆ

ಟಿ20 ವಿಶ್ವಕಪ್ ಪಂದ್ಯಗಳ ವೇಳೆ ಮಹಿಳಾ ತಂಡದ ಆತ್ಮವಿಶ್ವಾಸ ಕುಗ್ಗಿದ್ದು ಕಂಡು ಬಂತು. ಬೌಂಡರಿ-ಸಿಕ್ಸರ್ ಹೊಡೆಸಿಕೊಂಡರೆ, ಬೌಲರ್ಸ್ ಮತ್ತೆ ಅಸಹಾಯಕರಾಗುತ್ತಿದ್ದರು. ಬ್ಯಾಟರ್​ಗಳು ಬೇಗ ಔಟಾದರೆ, ಮುಂದಿನ ಬ್ಯಾಟರ್ ಆತ್ಮವಿಶ್ವಾಸ ಕಳೆದುಕೊಂಡು ಮೈದಾನಕ್ಕೆ ಬರುತ್ತಿದ್ದರು. ಫೀಲ್ಡರ್​​ನಿಂದ ಎಡವಟ್ಟಾದರೂ​ ಮುಗಿದೇ ಹೋಯಿತು ಎನ್ನುವಂತಿರುತ್ತಿದ್ದರು.

ಬಲಿಷ್ಠ ತಂಡಗಳ ವಿರುದ್ಧ ನರ್ವಸ್

ಹೌದು, ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳ ಎದುರು ಕಣಕ್ಕಿಳಿಯುವುದಕ್ಕೂ ಮುನ್ನವೇ ಭಾರತ ಮಹಿಳಾ ತಂಡ ಸೋಲೋಪ್ಪಿಕೊಳ್ಳುತ್ತಿತ್ತು. ಮೈದಾನಕ್ಕೆ ಬರುವುದಕ್ಕೂ ಮುನ್ನವೇ ತುಂಬಾ ನರ್ವಸ್ ಆಗುತ್ತಿತ್ತು. ಅಂತಹ ತಂಡಗಳ ಎದುರು ಧೈರ್ಯ ತೋರುತ್ತಿರಲಿಲ್ಲ ಎಂಬುದು ಬೇಸರದ ಸಂಗತಿ.

ಒಂದಿಬ್ಬರ ಸ್ಥಿರ ಪ್ರದರ್ಶನ ಸಾಲದು

ಐಸಿಸಿ ಟೂರ್ನಿಗಳಲ್ಲಿ ಒಂದಿಬ್ಬರು ನೀಡುವ ಪ್ರದರ್ಶನ ಸಾಲದು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಎಲ್ಲರೂ ಒಗ್ಗಟ್ಟಾಗಿ ಪ್ರದರ್ಶನ ನೀಡಬೇಕು. ಆದರೆ ವಿಶ್ವಕಪ್​ನಲ್ಲಿ ಬೌಲಿಂಗ್​-ಬ್ಯಾಟಿಂಗ್ ಎರಡರಲ್ಲೂ ಕಳಪೆ ಪ್ರದರ್ಶನ ನೀಡಿತು. ಅದೂ ಅಲ್ಲದೆ, ತಂಡದಲ್ಲಿ ಫಿನಿಷರ್​ಗಳೇ ಇಲ್ಲ. ದಿನಕ್ಕೊಬ್ಬರು ಒಂದೊಂದು ಸ್ಥಾನದಲ್ಲಿ ಆಡುತ್ತಿದ್ದರು. ಇದು ಗೊಂದಲ ಹೆಚ್ಚಿಸುತ್ತಿತ್ತು.

ಪರ್ಫೆಕ್ಟ್​ ಪ್ಲೇಯಿಂಗ್ 11 ಸಂಯೋಜನೆ ವಿಫಲ

ಇದು ಕೂಡ ದೊಡ್ಡ ಸಮಸ್ಯೆ. ಒಂದು ಪಂದ್ಯದಲ್ಲಿ ವಿಫಲರಾದ ಆಟಗಾರ್ತಿಯನ್ನು ಮುಂದಿನ ಪಂದ್ಯಕ್ಕೆ ಬೆಂಚ್​​ಗೆ ಸೀಮಿತ ಮಾಡಲಾಗುತ್ತಿತ್ತು. ಇದು ಆತ್ಮ ವಿಶ್ವಾಸವನ್ನು ಕುಗ್ಗಿಸುವಂತೆ ಮಾಡುತ್ತಿತ್ತು. ಪ್ರತಿ ಪಂದ್ಯದಲ್ಲೂ ಪ್ಲೇಯಿಂಗ್ 11 ಬದಲಾಗುತ್ತಿತ್ತು. ಇದು ಆಟಗಾರ್ತಿಯರಿಗೆ ತೀವ್ರ ಗೊಂದಲ ಸೃಷ್ಟಿಸಿ ಆಟದ ಮೇಲೆ ಗಮನ ಕೊಡಲು ಕಷ್ಟವಾಗುತ್ತಿತ್ತು.

ವಿದೇಶಿ ಪಿಚ್​​ಗಳಲ್ಲಿ ಅಟ್ಟರ್​ ಫ್ಲಾಪ್

ಭಾರತದ ಪಿಚ್​​​​​ಗಳಲ್ಲಿ ಅಬ್ಬರಿಸುವ ಭಾರತದ ಮಹಿಳಾ ತಂಡದ ವಿದೇಶಿ ಪಿಚ್​ಗಳಲ್ಲಿ ತೀವ್ರ ಕಳಪೆ ಪ್ರದರ್ಶನ ನೀಡುತ್ತಿದೆ. ಫಾರಿನ್ ಪಿಚ್​​ಗಳ ಮರ್ಮ ಅರಿಯಲು ವಿಫಲವಾಗುತ್ತಿದೆ. ಫಾಸ್ಟ್, ಸ್ಪಿನ್, ಬೌನ್ಸಿ ಟ್ರ್ಯಾಕ್​ನಲ್ಲಿ ಹೇಗೆ ಆಡಬೇಕು ಎಂಬುದರ ಅಧ್ಯಯನ ನಡೆಸಬೇಕಿದೆ. ಹೀಗಾದಾಗ ಮಾತ್ರ ಐಸಿಸಿ ಈವೆಂಟ್​ಗಳಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗುತ್ತದೆ.

Whats_app_banner