ಮಂಗಳೂರಿನ ಆರೆಸ್ಸೆಸ್ ಕೇಂದ್ರ ಕಚೇರಿ ಸಂಘ ನಿಕೇತನದ ಗಣೇಶೋತ್ಸವ; ಕ್ರಿಶ್ಚಿಯನ್ ಬಂಧುಗಳಿಂದ ಗಣಪತಿಗೆ ಪೂಜೆ-christian community participating in the ganeshotsav at the rss headquarters sangha niketan in mangalore prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರಿನ ಆರೆಸ್ಸೆಸ್ ಕೇಂದ್ರ ಕಚೇರಿ ಸಂಘ ನಿಕೇತನದ ಗಣೇಶೋತ್ಸವ; ಕ್ರಿಶ್ಚಿಯನ್ ಬಂಧುಗಳಿಂದ ಗಣಪತಿಗೆ ಪೂಜೆ

ಮಂಗಳೂರಿನ ಆರೆಸ್ಸೆಸ್ ಕೇಂದ್ರ ಕಚೇರಿ ಸಂಘ ನಿಕೇತನದ ಗಣೇಶೋತ್ಸವ; ಕ್ರಿಶ್ಚಿಯನ್ ಬಂಧುಗಳಿಂದ ಗಣಪತಿಗೆ ಪೂಜೆ

Rashtriya Swayamsevak Sangh: ಮಂಗಳೂರಿನ ಆರೆಸ್ಸೆಸ್ ಕೇಂದ್ರ ಕಚೇರಿ ಸಂಘ ನಿಕೇತನದ ಗಣೇಶೋತ್ಸವದಲ್ಲಿ ಕ್ರಿಶ್ಚಿಯನ್ ಬಂಧುಗಳಿಂದ ಗಣಪತಿಗೆ ಪೂಜೆ ನಡೆದಿದ್ದು, ಸೌಹಾರ್ದತೆಯ ಸಂದೇಶವನ್ನು ಸಾರಿದೆ.

ಮಂಗಳೂರಿನ ಆರೆಸ್ಸೆಸ್ ಕೇಂದ್ರ ಕಚೇರಿ ಸಂಘ ನಿಕೇತನದ ಗಣೇಶೋತ್ಸವ; ಕ್ರಿಶ್ಚಿಯನ್ ಬಂಧುಗಳಿಂದ ಗಣಪತಿಗೆ ಪೂಜೆ
ಮಂಗಳೂರಿನ ಆರೆಸ್ಸೆಸ್ ಕೇಂದ್ರ ಕಚೇರಿ ಸಂಘ ನಿಕೇತನದ ಗಣೇಶೋತ್ಸವ; ಕ್ರಿಶ್ಚಿಯನ್ ಬಂಧುಗಳಿಂದ ಗಣಪತಿಗೆ ಪೂಜೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕೋಮು ವೈಷ್ಯಮ್ಯದ ಘಟನೆಗಳಿಗೆ ಹೆಸರುವಾಸಿ. ಇಲ್ಲಿ ನಡೆಯುವ ಪ್ರತಿಯೊಂದು ಅಹಿತಕರ ಘಟನೆಗಳು ಕೋಮು ದ್ವೇಷವನ್ನು ಹುಟ್ಟಿಸುತ್ತದೆ. ಇಂಥದರ ನಡುವೆ ರಾಷ್ಟ್ರೀಯ ಸ್ವಯಂಸೇವಕ ಸಂಘ (Rashtriya Swayamsevak Sangh- RSS) ಜಿಲ್ಲಾ ಕಚೇರಿ ಮಂಗಳೂರಿನ ಸಂಘ ನಿಕೇತನದಲ್ಲಿ ನಡೆಯುವ ಗಣೇಶೋತ್ಸವ ಸೌಹಾರ್ದತೆಯ ಸಂದೇಶವನ್ನು ಸಾರಿದೆ.

ಮಂಗಳೂರಿನ ಸಂಘನಿಕೇತನ ಆರ್​​ಎಸ್​​ಎಸ್​​ನ ಜಿಲ್ಲಾ ಕಚೇರಿ ಈ ಬಾರಿ 77ನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ಗಣೇಶೋತ್ಸವವು ಸಂಘನಿಕೇತನದಲ್ಲಿ ಆರಂಭವಾಗಿತ್ತು. ಆರ್​​​ಎಸ್​​ಎಸ್​ನ ಮಂಗಳೂರು ಕಚೇರಿಯಲ್ಲಿ ನಡೆಯುವ ಈ ಗಣೇಶೋತ್ಸವಕ್ಕೆ ಕೆಲವು ವರ್ಷಗಳಿಂದ ಸೌಹಾರ್ದತೆಯ ಟಚ್ ಸಿಕ್ಕಿದೆ.

ಕ್ರಿಶ್ಚಿಯನ್ ಬಂಧುಗಳಿಂದ ಪೂಜೆ

2007ರಿಂದ ಸಂಘ ನಿಕೇತನದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ಸಮಾರಂಭಕ್ಕೆ ಕ್ರಿಶ್ಚಿಯನ್ ಬಂಧುಗಳು ಬಂದು ಇಲ್ಲಿ ಪೂಜೆ ಸಲ್ಲಿಸುವುದು ನಡೆಯುತ್ತಿದೆ. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸದಸ್ಯರು ಸಾಮರಸ್ಯ ಹಾಗೂ ಸೌಹಾರ್ದತೆಯ ಗಣೇಶೋತ್ಸವದ ಭೇಟಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಅದರಂತೆ ಈ ಬಾರಿಯೂ ಸಂಘ ನಿಕೇತನದ ಗಣೇಶೋತ್ಸವಕ್ಕೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸದಸ್ಯರು ಬಂದು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಜೇನ್ ಮರಿಯಾ ಸಲ್ಡಾನಾ ನೇತೃತ್ವದಲ್ಲಿ ವಿಶೇಷ ಪೂಜೆ

ಈ ಸಂದರ್ಭದಲ್ಲಿ ಸಂಘನಿಕೇತನದಿಂದ ಕ್ರೈಸ್ತ ಬಾಂಧವರಿಗೆ ಪ್ರಸಾದ ವಿತರಣೆಯು ನಡೆಯಿತು. ಗಣಪನ ಭೇಟಿಗೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಗಣ್ಯ ಕ್ರೈಸ್ತ ಬಾಂಧವರು ಕರ್ನಾಟಕ ಬ್ಯಾಂಕ್ ಎಜಿಎಂ ಜೇನ್ ಮರಿಯಾ ಸಲ್ಡಾನಾ ಅವರ ನೇತೃತ್ವದಲ್ಲಿ ಭೇಟಿ ನೀಡಿ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ತೆನೆಹಬ್ಬಕ್ಕೆ ಹಿಂದೂಗಳಿಗೆ ಉಚಿತವಾಗಿ ತೆನೆ ಒದಗಿಸುವ ಹಾಗೂ ಗಣಪತಿ ವಿಸರ್ಜನೆಗೆ ಬೋಟುಗಳನ್ನು ಒದಗಿಸುವ ಸಾಮಾಜಿಕ ಕಾರ್ಯಕರ್ತ ಅರ್ಬರ್ಟ್ ಡಿಸೋಜ ಜೆಪ್ಪು ಅವರನ್ನು ಸನ್ಮಾನಿಸಲಾಯಿತು.

ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೊ, ಉದ್ಯಮಿ ಗ್ರಗರಿ ಡಿಸೋಜ, ನವೀನ್ ಕಾರ್ಡೋಜಾ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಕ್ರೈಸ್ತ ಬಾಂಧವರು ಉಪಹಾರ ಸೇವಿಸಿದರು. ಆ ಬಳಿಕ ಗಣೇಶೋತ್ಸವದ ಆಯೋಜಕರು ಹಾಗೂ ಕ್ರೈಸ್ತ ಬಾಂಧವರು ಜೊತೆಯಾಗಿ ಕುಳಿತು ಉಪಹಾರ ಸೇವಿಸಿದರು.

ಫ್ರ್ಯಾಂಕ್ಲಿನ್ ಡಿಸೋಜ ಹೇಳಿದ್ದೇನು?

ಈ ಸಂದರ್ಭದಲ್ಲಿ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸಂಸ್ಥಾಪಕ ಫ್ರ್ಯಾಂಕ್ಲಿನ್ ಡಿಸೋಜ ಮಾತನಾಡಿ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಸಮಗ್ರತೆ ಇಂದಿನ ಅಗತ್ಯವಾಗಿದೆ. ಸಮಾಜದಲ್ಲಿ ಆಗುವ ಎಲ್ಲಾ ಕಹಿ ಘಟನೆಗಳನ್ನು ಮರೆತು‌ ನಾವೆಲ್ಲರೂ ಒಂದು ರಾಷ್ಟ್ರ, ಒಂದು ಕುಟುಂಬ ಎಂಬುದನ್ನು ಮನದಲ್ಲಿಟ್ಟುಕೊಂಡು ಇಲ್ಲಿ ಬಂದಿದ್ದೇವೆ. ನಾವೆಲ್ಲರೂ ಸಹೋದರರು,‌ ಒಂದೇ ತಾಯಿ ಮಕ್ಕಳು ಎಂದು ಇಲ್ಲಿ ಬಂದಿದ್ದೇವೆ ಎಂದರು.

ಸಂಘನಿಕೇತನದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ಸತೀಶ್ ಪ್ರಭು ಮಾತನಾಡಿ, ನಾವು ಗಣೇಶೋತ್ಸವವನ್ನು ಧಾರ್ಮಿಕ ಕಾರ್ಯಕ್ರಮವಾಗಿ ಮಾಡದೆ ರಾಷ್ಟ್ರೀಯ ಭಾವೈಕ್ಯತೆಯಿಂದ ಮಾಡಿದ್ದೇವೆ. ಪ್ರತಿಯೊಬ್ಬರಿಗೂ ತಮ್ಮದೆ ಧಾರ್ಮಿಕ ನಂಬಿಕೆ ಇದೆ. ಆ ನಂಬಿಕೆಗಳು ದೇಶದ ಪ್ರಗತಿಗೆ ಮತ್ತು ರಾಷ್ಟ್ರೀಯ ಭಾವೈಕ್ಯತೆಗೆ ಪೂರಕವಾಗಿರಬೇಕು. ಅವರಲ್ಲಿ ಸಾಮಾಜಿಕ ಬದ್ದತೆ ಬಂದಾಗ ಈ ರೀತಿಯ ಸಾರ್ವಜನಿಕ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾರೆ.

mysore-dasara_Entry_Point