ಜುಲೈನಲ್ಲಿ ಬೆಂಗಳೂರು ಪೊಲೀಸರ ಭರ್ಜರಿ ಭೇಟೆ; 54 ಡ್ರಗ್​ ಪೆಡ್ಲರ್ಸ್ ಬಂಧನ, 114 ಕೆಜಿ ಗಾಂಜಾ, 4 ಕೆಜಿ ಎಂಡಿಎಂಎ ಜಪ್ತಿ-cricme news 54 drug peddlers arrested in bengaluru 43 absconding accused including 9 rowdy sheeters arrested in july ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಜುಲೈನಲ್ಲಿ ಬೆಂಗಳೂರು ಪೊಲೀಸರ ಭರ್ಜರಿ ಭೇಟೆ; 54 ಡ್ರಗ್​ ಪೆಡ್ಲರ್ಸ್ ಬಂಧನ, 114 ಕೆಜಿ ಗಾಂಜಾ, 4 ಕೆಜಿ ಎಂಡಿಎಂಎ ಜಪ್ತಿ

ಜುಲೈನಲ್ಲಿ ಬೆಂಗಳೂರು ಪೊಲೀಸರ ಭರ್ಜರಿ ಭೇಟೆ; 54 ಡ್ರಗ್​ ಪೆಡ್ಲರ್ಸ್ ಬಂಧನ, 114 ಕೆಜಿ ಗಾಂಜಾ, 4 ಕೆಜಿ ಎಂಡಿಎಂಎ ಜಪ್ತಿ

Bengaluru Crime News: ಬೆಂಗಳೂರು ಪೊಲೀಸರು ಜುಲೈನಲ್ಲಿ ಭಾರಿ ಪ್ರಮಾಣದ ಮಾದಕವಸ್ತು ವಶಪಡಿಸಿಕೊಂಡಿದ್ದಾರೆ. 114 ಕೆಜಿ ಗಾಂಜಾ (ಮರಿಜುವಾನಾ), 4ಕೆಜಿ ಎಂಡಿಎಂಎ ಜಪ್ತಿ ಮಾಡಲಾಗಿದ್ದು, 54 ಡ್ರಗ್‌ ಪೆಡ್ಲರ್​​ಗಳನ್ನು ಬಂಧಿಸಿದ್ದಾರೆ.

ಜುಲೈನಲ್ಲಿ ಬೆಂಗಳೂರು ಪೊಲೀಸರ ಭರ್ಜರಿ ಭೇಟೆ; 54 ಡ್ರಗ್​ ಪೆಡ್ಲರ್ಸ್ ಬಂಧನ, 114 ಕೆಜಿ ಗಾಂಜಾ, 4 ಕೆಜಿ ಎಂಡಿಎಂಎ ಜಪ್ತಿ
ಜುಲೈನಲ್ಲಿ ಬೆಂಗಳೂರು ಪೊಲೀಸರ ಭರ್ಜರಿ ಭೇಟೆ; 54 ಡ್ರಗ್​ ಪೆಡ್ಲರ್ಸ್ ಬಂಧನ, 114 ಕೆಜಿ ಗಾಂಜಾ, 4 ಕೆಜಿ ಎಂಡಿಎಂಎ ಜಪ್ತಿ

ಬೆಂಗಳೂರು: ಮಾದಕ ವಸ್ತುಗಳ ವಿಷಯದಲ್ಲಿ ಬೆಂಗಳೂರಿನ ಪೊಲೀಸರು ಜುಲೈ ತಿಂಗಳಲ್ಲಿ ಭರ್ಜರಿ ಭೇಟೆಯಾಡಿದ್ದಾರೆ. ಈ ತಿಂಗಳಲ್ಲಿ 114 ಕೆಜಿ ಮರಿಜುವಾನಾ, 745 ಗ್ರಾಂ ಕೊಕೈನ್‌ ಮತ್ತು 4 ಕೆಜಿ ಎಂಡಿಎಂಎ ಕ್ರಿಸ್ಟಲ್ಸ್‌ ಜಪ್ತಿ ಮಾಡಿದ್ದಾರೆ. ಎನ್​ಡಿಪಿಎಸ್‌ ಕಾಯಿದೆಯಡಿಯಲ್ಲಿ 38 ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು ನಾಲ್ವರು ವಿದೇಶಿಯರು ಸೇರಿ 54 ಡ್ರಗ್‌ ಪೆಡ್ಲರ್​ಗಳನ್ನು ಬಂಧಿಸಿದ್ದಾರೆ.

ಇದೇ ತಿಂಗಳಲ್ಲಿ ತಲೆಮರೆಸಿಕೊಂಡಿದ್ದ 43 ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ 2005ರಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣವೂ ಸೇರಿದೆ ಎನ್ನುವುದು ವಿಶೇಷ. 9 ರೌಡಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದರ ಜೊತೆಗೆ 111 ರೌಡಿಗಳ ವಿರುದ್ಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಐದು ಕೊಲೆ ಪ್ರಕರಣಗಳಲ್ಲಿ ಐವರು ಆರೋಪಿಗಳಿಗೆ 20 ವರ್ಷಕ್ಕೂ ಮೀರಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಮೂರು ಮನೆ ಕಳ್ಳತನದ ಪ್ರಕರಣಗಳನ್ನು ಬೇಧಿಸಿದ ಪೊಲೀಸರು

ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳ ಪೊಲೀಸರು ಮೂರು ಮನೆ ಕೆಲಸದವರನ್ನು ಬಂಧಿಸಿದ್ದಾರೆ. ತಾವು ಕೆಲಸ ಮಾಡುತ್ತಿದ್ದ ಮನೆಗಳಲ್ಲಿ ಕಳವು ಮಾಡಿದ್ದ ಮೂವರನ್ನು ಬಂಧಿಸಿ ಅದರಂತೆ 30 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆಡುಗೋಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಲಕ್ಕಸಂದ್ರದಲ್ಲಿ ವಾಸವಾಗಿರುವ ಐಟಿ ಉದ್ಯೋಗಿಯೊಬ್ಬರು ವಿದೇಶ ಪ್ರವಾಸ ತೆರಳಿದ್ದಾಗ ಅವರ ಮನೆಯಲ್ಲಿ 20 ಲಕ್ಷ ರೂ. ಬೆಲೆ ಬಾಳುವ 333 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಮನೆ ಕೆಲಸದವರನ್ನು ಆಡುಗೋಡಿ ಪೊಲೀಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಐಟಿ ಉದ್ಯೋಗಿ (ಮನೆ ಮಾಲೀಕರು) ತನ್ನ ಮನೆಯ ಬೀಗದ ಕೀಲಿಯನ್ನು ಕೆಳಗಿನ ಮನೆಯಲ್ಲಿ ವಾಸವಾಗಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಕೊಟ್ಟು ಹೋಗಿದ್ದರು. ಕೆಲಸ ಮಾಡುತ್ತಿದ್ದ ವ್ಯಕ್ತಿ ಪ್ರತಿದಿನ ಕೀ ಪಡೆದುಕೊಂಡು ಮನೆಯನ್ನು ಸ್ವಚ್ಛಗೊಳಿಸಿ ಹೋಗುತ್ತಿದ್ದರು. ನಂತರ ಮನೆ ಮಾಲೀಕರು ವಿದೇಶದಿಂದ ಹಿಂತಿರುಗಿ ನೋಡಿದರೆ, ಆಭರಣಗಳು ಕಳವಾಗಿರುವುದು ಪತ್ತೆಯಾಗಿದ್ದವು. ನಂತರ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮನೆ ಕೆಲಸದವನನ್ನು ವಿಚಾರಣೆಗೊಳಪಡಿಸಿದಾಗ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದರು.

ಈತ ಕಳವು ಮಾಡಿದ ಆಭರಣಗಳನ್ನು ತನ್ನ 2ನೇ ಪತ್ನಿಗೆ ನೀಡಿದ್ದರು. ಚೆನ್ನೈನಲ್ಲಿರುವ ಈಕೆ ಆಭರಣಗಳನ್ನು ತಾನು ಕೆಲಸ ಮಾಡುತ್ತಿದ್ದ ಪಾರ್ಲರ್‌ ಮಾಲೀಕರು ಮತ್ತು ವಿವಿಧ ಗಿರವಿ ಅಂಗಡಿಗಳಲ್ಲಿ ಅಡವಿಟ್ಟಿದ್ದಳು. ತದನಂತರ ಆಭರಣಗಳನ್ನೂ ಪೊಲೀಸರು ಜಪ್ತಿ ಮಾಡಿಕೊಂಡಿದ್ದರು.

ಮತ್ತೊಂದು ಪ್ರಕರಣದಲ್ಲಿ ಎಚ್​ಎಎಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಮಾರತ್ತಹಳ್ಳಿಯ ಅಪಾರ್ಟ್​ಮೆಂಟ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿ 5 ಲಕ್ಷ ರೂಪಾಯಿ ಮೌಲ್ಯದ 80 ಗ್ರಾಂ ತೂಕದ ನೆಕ್ಲೆಸ್​ ವಶಪಡಿಸಿಕೊಂಡಿದ್ದಾರೆ. ಆರಂಭದಲ್ಲಿ ಇದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರನ್ನು ವಿಚಾರಣೆಗೆ ಒಳಪಡಿಸಿದ್ದರೂ ಆರೋಪಿ ಪತ್ತೆಯಾಗಿರಲಿಲ್ಲ. ಕೆಲವು ದಿನಗಳ ನಂತರ ಇದೇ ಮನೆಯ ಕೆಲಸದಾಕೆ ಕಳವು ಮಾಡಿದ್ದ ನೆಕ್ಲೆಸ್ ಧರಿಸಿಕೊಂಡು ವಾಟ್ಸಾ‌ಪ್​ನ ಡಿಪಿಯಲ್ಲಿ ಫೋಟೊ ಹಾಕಿಕೊಂಡಿದ್ದಳು. ಇದನ್ನು ಗಮನಿಸಿದ್ದ ಮನೆಯ ಮಾಲೀಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ಮತ್ತೊಂದು ಮನೆಯಲ್ಲಿಯೂ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಳು.

ಇಂತಹದ್ದೇ ಪ್ರಕರಣದಲ್ಲಿ ವೈಟ್‌ ಫೀಲ್ಡ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ನಲ್ಲೂರಹಳ್ಳಿಯ ಅಪಾರ್ಟ್​ಮೆಂಟ್​ವೊಂದರ ಹಿಂಬಾಗಿಲಿನಿಂದ ಪ್ರವೇಶಿಸಿ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮನೆ ಮಾಲೀಕರು ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 4 ಲಕ್ಷ ರೂಪಾಯಿ ಮೌಲ್ಯದ 50 ಗ್ರಾಂ ಚಿನ್ನಾಭರಣ ಮತ್ತು 100 ಗ್ರಾಂ ಬೆಳ್ಳಿ ಆಭರಣಗಳನ್ನು ವಪಡಿಸಿಕೊಂಡಿದ್ದಾರೆ.