ಕನ್ನಡ ಸುದ್ದಿ  /  ಕರ್ನಾಟಕ  /  Puttur News: ಕರ್ನಾಟಕ To ಲಂಡನ್; ರಾಜ್ಯದ ಶ್ರೀಮಂತ ಪ್ರವಾಸೋದ್ಯಮ ಪರಿಚಯಿಸಲು 75 ದೇಶಗಳ ಪ್ರವಾಸಕ್ಕೆ ಹೊರಟಿದ್ದಾರೆ ಪುತ್ತೂರಿನ ಸಿನಾನ್

Puttur News: ಕರ್ನಾಟಕ TO ಲಂಡನ್; ರಾಜ್ಯದ ಶ್ರೀಮಂತ ಪ್ರವಾಸೋದ್ಯಮ ಪರಿಚಯಿಸಲು 75 ದೇಶಗಳ ಪ್ರವಾಸಕ್ಕೆ ಹೊರಟಿದ್ದಾರೆ ಪುತ್ತೂರಿನ ಸಿನಾನ್

Sinan from Puttur: ಈಗಾಗಲೇ ಕಳೆದ ಏಪ್ರಿಲ್ 29ರಿಂದ ಸುಮಾರು ಇಪ್ಪತ್ತು ದಿನಗಳ ಅವಧಿಯಲ್ಲಿ ಕರ್ನಾಟಕವನ್ನು ಸುತ್ತಾಡಿರುವ ಸಿನಾನ್ ಪುತ್ತೂರಿಗೆ ಮರಳಿದ್ದಾರೆ. ಅಲ್ಲಿಂದ ತಮ್ಮ ವಾಹನದೊಂದಿಗೆ ಮುಂಬೈಗೆ ತೆರಳಿ, ವಾಹನವನ್ನು ಹಡಗಿನಲ್ಲಿ ದುಬೈಗೆ ಸಾಗಿಸುತ್ತಾರೆ. ಜೊತೆಗೆ ಅವರೂ ದುಬೈಗೆ ಹೋಗಿ ಅಲ್ಲಿಂದ ಇತರ ದೇಶಗಳಿಗೆ ಪ್ರವಾಸ ಶುರುಮಾಡಲಿದ್ದಾರೆ.

ಮಹೀಂದ್ರ ಸ್ಕಾರ್ಪೀಯೋ ಕಾರನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಪ್ರಪಂಚ ಪರ್ಯಟನೆಗೆ ಹೊರಟ ಪುತ್ತೂರಿನ ಸಿನಾನ್
ಮಹೀಂದ್ರ ಸ್ಕಾರ್ಪೀಯೋ ಕಾರನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಪ್ರಪಂಚ ಪರ್ಯಟನೆಗೆ ಹೊರಟ ಪುತ್ತೂರಿನ ಸಿನಾನ್

ಮಂಗಳೂರು: "ಕರ್ನಾಟಕ TO ಲಂಡನ್" ಹೀಗೆಂದು ಮಹೀಂದ್ರಾ ಸ್ಕಾರ್ಪಿಯೋ ಕಾರಿನಲ್ಲಿ ಬರೆದುಕೊಂಡು ಕನ್ನಡದ ಧ್ವಜವನ್ನು ಹಾರಿಸುತ್ತಾ, ಪ್ರಪಂಚ ಪರ್ಯಟನಕ್ಕೆ ಹೊರಟ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ 29ರ ಹರೆಯದ ಯುವಕ ಸಿನಾನ್ ಸುಮ್ಮನೆ ಗಮ್ಮತ್ತು ಮಾಡಲು ತಿರುಗಾಟ ಮಾಡಲು ಹೊರಟಿಲ್ಲ. ಕರ್ನಾಟಕದ ಶ್ರೀಮಂತ ಪ್ರವಾಸೋದ್ಯಮ ಅವಕಾಶಗಳನ್ನು ಜಗತ್ತಿಗೆ ತಿಳಿಸುವುದು ನನ್ನ ಉದ್ದೇಶ ಎಂದು ಎಚ್​ಟಿ ಕನ್ನಡ ಪ್ರತಿನಿಧಿಯೊಂದಿಗೆ ಪ್ರವಾಸದ ಉದ್ದೇಶಗಳನ್ನು ಹಂಚಿಕೊಂಡರು ಸಿನಾನ್.

ಟ್ರೆಂಡಿಂಗ್​ ಸುದ್ದಿ

ಈಗಾಗಲೇ ಕಳೆದ ಏಪ್ರಿಲ್ 29ರಿಂದ ಸುಮಾರು ಇಪ್ಪತ್ತು ದಿನಗಳ ಅವಧಿಯಲ್ಲಿ ಕರ್ನಾಟಕವನ್ನು ಸುತ್ತಾಡಿರುವ ಸಿನಾನ್ ಪುತ್ತೂರಿಗೆ ಮರಳಿದ್ದಾರೆ. ಅಲ್ಲಿಂದ ತಮ್ಮ ವಾಹನದೊಂದಿಗೆ ಮುಂಬೈಗೆ ತೆರಳಿ, ವಾಹನವನ್ನು ಹಡಗಿನಲ್ಲಿ ದುಬೈಗೆ ಸಾಗಿಸುತ್ತಾರೆ. ಜೊತೆಗೆ ಅವರೂ ದುಬೈಗೆ ಹೋಗಿ ಅಲ್ಲಿಂದ ಇತರ ದೇಶಗಳಿಗೆ ಪ್ರವಾಸ ಶುರುಮಾಡಲಿದ್ದಾರೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಪ್ರದೇಶವಾದ ಈಶ್ವರಮಂಗಲದವರಾದ ಸಿನಾನ್, ಪ್ರಸ್ತುತ ಪುತ್ತೂರಿನ ದರ್ಬೆ ನಿವಾಸಿ. ಆದರೆ ಇಂಟೀರಿಯರ್ ಡೆಕೋರೇಶನ್ ನಲ್ಲಿ ಪದವಿ ಪಡೆದ ಮೇಲೆ ಅವರು ಯುನೈಟೆಡ್ ಕಿಂಗ್ಡಮ್ ಗೆ ತೆರಳಿದರು. ವಿಶೇಷವಾಗಿ ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿದ ಇಂಟೀರಿಯರ್ ಕೆಲಸಗಳನ್ನು ಮಾಡುವ ಮೂಲಕ ತನ್ನ ಉದ್ಯಮದ ಜೊತೆಗೆ ಹೋಟೆಲ್ ಗಳು, ಪ್ರವಾಸಿಗರೊಂದಿಗೆ ಜೋಡಿಸಿಕೊಂಡರು. ಪ್ರವಾಸದ ವಿಶೇಷ ಆಸಕ್ತಿ ಅಲ್ಲಿಯೇ ಮೊಳಕೆಯೊಡೆಯಿತು.

"ಮಹೀಂದ್ರ ಸ್ಕಾರ್ಪೀಯೋ ವಾಹನವನ್ನು ವಿಶೇಷವಾಗಿ ವಿನ್ಯಾಸಗೊಳಿಸಿದೆ. ಕರ್ನಾಟಕವನ್ನು ಪ್ರೊಮೋಟ್ ಮಾಡುವ ಉದ್ದೇಶ ನನಗಿದೆ. ಟೂರಿಸಂ ಕುರಿತು ಮಾಹಿತಿಯನ್ನು ಹಂಚಿಕೊಳ್ಳಬೇಕು. ಎಲ್ಲ ದೇಶಗಳಲ್ಲಿ ಕನ್ನಡಿಗರ ಸಂಪರ್ಕ ಮಾಡುವ ಮೂಲಕ ಇದನ್ನು ಈಡೇರಿಸಬಹುದು ಎಂಬ ನಂಬಿಕೆ ನನಗಿದೆ. ಕರ್ನಾಟಕದ ಪ್ರವಾಸೋದ್ಯಮದ ಮಹತ್ವವನ್ನು ಹೋದಲ್ಲೆಲ್ಲಾ ತಿಳಿಸುತ್ತೇನೆ" ಎಂದು ಪ್ರವಾಸದ ಕುರಿತು ತಿಳಿಸಿದರು.

ಯೂಟ್ಯೂಬರ್ ಆಗಿ ಫೇಮಸ್

ಅಂದ ಹಾಗೆ ಸಿನಾನ್ ಅವರು ಯೂಟ್ಯೂಬ್ (https://www.youtube.com/@united.wander) ಮತ್ತು ಇನ್ಸ್ ಸ್ಟಾ ಗ್ರಾಂ ಮೂಲಕವೂ ಸಾಮಾಜಿಕ ಜಾಲತಾಣಿಗರಿಗೆ ಪರಿಚಿತರು. United Wander ಎಂಬ ಹೆಸರಲ್ಲಿ Instagram ಖಾತೆ ಅವರಿಗಿದೆ. https://instagram.com/united.wander?igshid=YmMyMTA2M2Y= United Wander Youtube ಮೂಲಕ ಅವರು ತನ್ನ ಪ್ರವಾಸದ ಮಾಹಿತಿಯನ್ನು ಅದರಲ್ಲಿ ಹಂಚಿಕೊಳ್ಳಲಿದ್ದಾರೆ.

ಐದು ವರ್ಷಗಳಿಂದ ತಯಾರಿ

"ಸುಮಾರು ಐದು ವರ್ಷಗಳಿಂದಲೇ ಈ ಸಂಚಾರಕ್ಕಾಗಿ ನಾನು ತಯಾರಿ ಮಾಡುತ್ತಿದ್ದೆ" ಎಂದರು ಸಿನಾನ್. ಇದಕ್ಕಾಗಿ ವಿಶೇಷ ಕಾರನ್ನು ಸಿದ್ಧಪಡಿಸಿಕೊಂಡು ಏಕಾಂಗಿಯಾಗಿಯೇ ಪ್ರಪಂಚ ಪರ್ಯಟನೆ ಮಾಡಲಿದ್ದಾರೆ. ಇಂಡಿಯನ್ ಮೇಡ್ ಮಹೀಂದ್ರಾ ಸ್ಕಾರ್ಪಿಯೋ ಕಾರು ಇವರ ಸಂಚಾರದ ಸಾರಥಿ. ಕಾರಿನ ಎರಡೂ ಬದಿಗಳಲ್ಲಿ ಸ್ಟಿಕ್ಕರಿಂಗ್ ಮಾಡಿಸಿದ್ದಾರೆ. ಬಾನೆಟ್ ಭಾಗದಲ್ಲಿ ಪ್ರಯಾಣದ ಪರಿಚಯ-ಉದ್ದೇಶವಿದೆ. ಬಲಬದಿಯಲ್ಲಿ ಕರ್ನಾಟಕ ಧ್ವಜದ ಹಳದಿ-ಕೆಂಪು ಬಣ್ಣ, ಕಾಫಿ-ಟೀ ತೋಟ, ಗೋಲ್‌ಗುಂಬಝ್, ಹಂಪಿಯ ಕಲ್ಲಿನ ರಥ, ಜೋಗ ಜಲಪಾತದ ಚಿತ್ರಣವಿದೆ. ಹಿಂಭಾಗದಲ್ಲಿ ಅವರ ಯೂಟ್ಯೂಬ್ ಚಾನೆಲ್, ಇನ್‌ಸ್ಟಾಗ್ರಾಮ್ ಲೋಗೋ, ಐಡಿ ಜತೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ಅಂಟಿಸಿರುವ ಅಪ್ಪು ಪುನೀತ್ ರಾಜ್‌ಕುಮಾರ್ ಅವರ ಸ್ಟಿಕರ್ ಇದೆ. ಕಾರಿನ ಬಲಭಾಗದಲ್ಲಿ ತಾಜ್‌ಮಹಲ್, ಭಾರತದ ತ್ರಿವರ್ಣ, ಅಶೋಕ ಚಕ್ರ, ಮೇಲ್ಭಾಗದಲ್ಲಿ ಲಗೇಜ್ ಕ್ಯಾರಿಯರ್‌ಗೆ ವ್ಯವಸ್ಥೆ ಮಾಡಲಾಗಿದೆ. ಹಿಂಭಾಗದಲ್ಲಿ ಕಿಚನ್, ಟಾಯ್ಲೆಟ್ ಸೆಟಪ್, ಬೆಡ್ ವ್ಯವಸ್ಥೆಗಳನ್ನು ದುಬೈನಲ್ಲಿ ಮಾಡಲಿದ್ದಾರೆ.

1 ಲಕ್ಷ ಕಿ.ಮೀ. ಪ್ರಯಾಣದ ಗುರಿ

ಏಷ್ಯಾ, ಯುರೋಪ್ ಮತ್ತು ಆಫ್ರಿಕಾ ಮೂರು ಖಂಡಗಳಲ್ಲಿ ಪ್ರಯಾಣ ಸಾಗಲಿದೆ. ಒಟ್ಟು 1 ಲಕ್ಷ ಕಿಲೋಮೀಟರ್‌ಗಳ ಪ್ರಯಾಣ ಕ್ರಮಿಸುವ ಉದ್ದೇಶ ಹೊಂದಿದ್ದಾರೆ. ಈ ಒಟ್ಟು ಪ್ರಯಾಣ ಪೂರ್ಣಗೊಳಿಸಲು ಎರಡು ವರ್ಷ ತಗಲಲಿದೆ. ಇದಕ್ಕಾಗಿ 1 ಕೋಟಿ ರೂ. ಖರ್ಚು ತಗಲಲಿದೆ. ಆರ್ಥಿಕ ಸಹಕಾರಕ್ಕಾಗಿ ಸ್ಪಾನ್ಸರ್‌ಗಳ ನಿರೀಕ್ಷೆಯಲ್ಲಿಯೂ ಇದ್ದಾರೆ. 75 ರಾಷ್ಟ್ರಗಳಲಿನ ಪ್ರವಾಸಿ ತಾಣಕ್ಕೂ ಭೇಟಿ ನೀಡುವ ಗುರಿ ಹೊಂದಿದ್ದಾರೆ. ಬೇರೆ ಬೇರೆ ರಾಷ್ಟ್ರದಲ್ಲಿರುವ ಕನ್ನಡಿಗರನ್ನು ಸಂಪರ್ಕಿಸಿ ಅಲ್ಲಿ ಕರ್ನಾಟಕ ಪ್ಷೇಕ್ಷಣಿಯ ಸ್ಥಳಗಳ ಬಗ್ಗೆ ಜಾಗೃತಿ ಮೂಡಿಸಲು ಭಿನ್ನವಿಸಲಿದ್ದಾರೆ. ಸಿನಾನ್ ಅಮೆರಿಕನ್ ವೀಸಾ ಹೊಂದಿದ್ದು ಇದರಿಂದ 50 ದೇಶಗಳನ್ನು ಸಂದರ್ಶಿಸಲು ಸಾಧ್ಯವಿದೆ. ಯುಕೆ ವೀಸಾದಿಂದ ಯರೋಫ್ ಖಂಡದ ಸಂಚಾರ ಸುಲಭ. ವಾಹನ ನಿರ್ವಹಣೆ, ಆರೋಗ್ಯ ಈ ಎರಡೇ ಸಿನಾನ್ ಮುಂದಿರುವ ಸವಾಲು.

ವರದಿ: ಹರೀಶ ಮಾಂಬಾಡಿ, ಮಂಗಳೂರು

ಟಿ20 ವರ್ಲ್ಡ್‌ಕಪ್ 2024