ಈ ಬಾರಿ ಮೈಸೂರು ದಸರಾ ಜಂಬೂಸವಾರಿ ದಿನ ಹವಾಮಾನ ಹೇಗಿರಲಿದೆ; ವಿಜಯದಶಮಿ ದಿನ ಮಳೆ ಬರುತ್ತಾ ಹೇಗೆ ?-dasara weather mysore dasara 2024 weather updates rain prediction on jamboo savari day kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಈ ಬಾರಿ ಮೈಸೂರು ದಸರಾ ಜಂಬೂಸವಾರಿ ದಿನ ಹವಾಮಾನ ಹೇಗಿರಲಿದೆ; ವಿಜಯದಶಮಿ ದಿನ ಮಳೆ ಬರುತ್ತಾ ಹೇಗೆ ?

ಈ ಬಾರಿ ಮೈಸೂರು ದಸರಾ ಜಂಬೂಸವಾರಿ ದಿನ ಹವಾಮಾನ ಹೇಗಿರಲಿದೆ; ವಿಜಯದಶಮಿ ದಿನ ಮಳೆ ಬರುತ್ತಾ ಹೇಗೆ ?

Mysore Dasara Weather ಮೈಸೂರು ದಸರಾ ಜಂಬೂ ಸವಾರಿ ನೋಡಲೆಂದೇ ಲಕ್ಷಾಂತರ ಮಂದಿ ಸೇರುತ್ತಾರೆ. ಈ ದಿನ ಮೈಸೂರಿನಲ್ಲಿ ಮಳೆ ಬರಬಹುದಾ ಹೇಗೆ ಎನ್ನುವ ಪ್ರಶ್ನೆಗೆ ಹವಾಮಾನ ತಜ್ಞರು ಉತ್ತರ ನೀಡಿದ್ದಾರೆ.

ಮೈಸೂರು ದಸರಾ ಜಂಬೂ ಸವಾರಿ ದಿನ ಮಳೆಯಾಗಲಿದೆಯಾ ಎನ್ನುವ ಕುರಿತು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಮೈಸೂರು ದಸರಾ ಜಂಬೂ ಸವಾರಿ ದಿನ ಮಳೆಯಾಗಲಿದೆಯಾ ಎನ್ನುವ ಕುರಿತು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಮೈಸೂರು: ವಿಶ್ವವಿಖ್ಯಾತ ದಸರಾಕ್ಕೂ ಮಳೆಗೂ ಬಿಡಿಸಲಾಗದ ನಂಟು. ದಸರಾ ಸಮಯದಲ್ಲಿ ಮಳೆ ಬರಲೇಬೇಕು. ಅದರಲ್ಲೂ ಜಂಬೂ ಸವಾರಿ ದಿನ ಚಾಮುಂಡೇಶ್ವರಿ ಪುಷ್ಪಾರ್ಚನೆ ನಂತರವಾದರೂ ನಾಲ್ಕು ಹನಿಯಾದರೂ ಬಂದು ಹೋಗುತ್ತದೆ. ಹಿಂದಿನ ಹಲವಾರು ವರ್ಷಗಳಲ್ಲಿ ಇಂತಹ ಅನುಭವವಾಗಿದೆ. ಈ ಬಾರಿಯೂ ಜಂಬೂ ಸವಾರಿಗೆ ಆನೆಗಳ ತಾಲೀಮು, ಕುಶಾಲತೋಪು ಸಿಡಿಸುವ ಚಟುವಟಿಕೆ, ಅರಮನೆಗೆ ಬಣ್ಣದ ಸಿಂಗಾರದ ಕೆಲಸ ಭರದಿಂದ ಸಾಗಿದೆ. ಈ ವರ್ಷದ ದಸರಾ ಕೊಂಚ ಹೆಚ್ಚು ವಿಜೃಂಭಣೆಯಿಂದಲೇ ನಡೆಯತ್ತಿದೆ. ಜಂಬೂ ಸವಾರಿ ದಿನಕ್ಕಾಗಿ ತಯಾರಿ ನಡೆದಿದ್ದು, ಹೆಚ್ಚಿನ ಜನರನ್ನು ಅರಮನೆ ಒಳ ಪ್ರವೇಶಿಸುವಂತೆ ಮಾಡುವ ಪ್ರಯತ್ನವೂ ನಡೆದಿದೆ. ಇಷ್ಟೆಲ್ಲಾ ಸಿದ್ದತೆಗಳು ಆಗುವಾಗ ಮುಖ್ಯ ದಿನದಂದು ಮಳೆ ಬರಲಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಸಾಮಾನ್ಯವಾಗಿ ಮಳೆಗಾಲ ಶುರುವಾಗುವುದು ಜೂನ್‌ನಲ್ಲಿ. ಅದು ಸೆಪ್ಟಂಬರ್‌ ಅಂತ್ಯದವರೆಗೂ ಇರಲಿದೆ. ನಾಲ್ಕು ತಿಂಗಳ ಮಳೆಗಾಲ ಮುಗಿಯುವ ಹೊತ್ತಿಗೆ ನವರಾತ್ರಿಯೂ ಶುರುವಾಗುವ ಸಮಯ. ಕೆಲವೊಮ್ಮೆ ಮಳೆಗಾಲದಲ್ಲೂ ಬಂದಿದ್ದು ಇದೆ. ಆದರೂ ಮಳೆಗಾಲ ಕೊನೆಯ ಹಂತಕ್ಕೆ ಬಂದಿರುತ್ತದೆ. ಬಹುತೇಕ ಸಂದರ್ಭದಲ್ಲಿ ಮಳೆ ಇನ್ನೂ ಕೆಲವು ದಿನ ವಿಸ್ತರಣೆಯಾಗುವ ಸಾಧ್ಯತೆಗಳು ಇರುತ್ತವೆ. ದಸರಾ ವೇಳೆಯೂ ಕೆಲವು ಮಳೆಗಳು ಇವೆ. ಸೆಪ್ಟೆಂಬರ್ 14 ರಿಂದ ಉತ್ತರಾ, ಸೆಪ್ಟೆಂಬರ್ 28 ರಿಂದ ಹಸ್ತ, ಅಕ್ಟೋಬರ್ 11 ರಿಂದ ಚಿತ್ತಾ, ಅಕ್ಟೋಬರ್ 25 ರಿಂದ ಸ್ವಾತಿ ಮಳೆ ಆರಂಭವಾಗಲಿವೆ. ಇವು ಸಾಮಾನ್ಯ ಮಳೆಯಾದರೂ ಭಾರೀ ಪ್ರಮಾಣದಲ್ಲಿ ಸುರಿಯುವುದು ಕಡಿಮೆ.

ಮೈಸೂರು ದಸರಾ ಶುರುವಾದ ಹತ್ತು ದಿನಗಳ ಕಾಲ ಮಳೆ ಬಂದ ಉದಾಹರಣೆ ಇದೆ. ಮಧ್ಯಾಹ್ನ, ಸಂಜೆಯೂ ಮಳೆಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅಡ್ಡಿಯಾಗಿವೆ. ಕೆಲವೊಮ್ಮೆ ಅರಮನೆ ವೇದಿಕೆ ಕಾರ್ಯಕ್ರಮವನ್ನು ಒಳ ಭಾಗದಲ್ಲಿ ನಡೆಸಿದ ಉದಾಹರಣೆಯೂ ಇದೆ. ಜಂಬೂ ಸವಾರಿ ದಿನವೂ ಮಳೆಯಾದ ಸನ್ನಿವೇಶಗಳೂ ಇವೆ. ಆದರೆ ಜಂಬೂ ಸವಾರಿಯೇ ರದ್ದಾಗುವ ಮಟ್ಟಿಗೆ ಮಳೆ ಸುರಿದಿದ್ದು ಕಡಿಮೆ.

ಕಳೆದ ವರ್ಷ ದಸರಾ ಸಮಯದಲ್ಲಿ ಸಣ್ಣ ಮಳೆಯಾಗಿದ್ದು ಬಿಟ್ಟರೆ ತೊಂದರೆ ಆಗಿರಲಿಲ್ಲ. ಜಂಬೂ ಸವಾರಿ ದಿನ ಮಳೆಯ ಸುಳಿವಿಲ್ಲದೇ ಸುಸೂತ್ರವಾಗಿಯೇ ಎಲ್ಲವೂ ಮುಗಿದಿತ್ತು.. ಅದಕ್ಕಿಂತ ಮೂರು ವರ್ಷ ಕೋವಿಡ್‌ ಕಾರಣದಿಂದ ದಸರಾವನ್ನು ವೈಭವದಿಂದ ಆಚರಿಸಿರಲಿಲ್ಲ.

ಈ ವರ್ಷವೂ ದಸರಾ ಸಮಯದಲ್ಲಿ ಮಳೆಯ ವಾತಾವರಣವಂತೂ ಇದೆ. ಜಂಬೂ ಸವಾರಿ ದಿನವೂ ಮಳೆಯಾಗುವ ಮುನ್ಸೂಚನೆಯಿದ್ದರೂ ಯಾವ ರೀತಿ ಆಗಬಹುದು ಎನ್ನುವ ಕುರಿತು ಹವಾಮಾನ ಇಲಾಖೆಯೂ ವರದಿಗಾಗಿ ಕಾಯುತ್ತಿದೆ.

ಮೈಸೂರು ಭಾಗದಲ್ಲಿ ಮಳೆ ಅಕ್ಟೋಬರ್‌ವರೆಗೂ ಕೆಲವೊಮ್ಮೆ ವಿಸ್ತರಣೆಯಾದ ಉದಾಹರಣೆಯಿದೆ. ಅದು ದಸರಾ ಅವಧಿಯೂ ಸೇರಿದಂತೆ ಮಳೆ ಸುರಿದಿದೆ. ಜಂಬೂ ಸವಾರಿ ದಿನವೂ ಹಿಂದಿನ ವರ್ಷಗಳಲ್ಲಿ ಮಳೆಯಾಗಿದೆ. ಆದರೆ ಭಾರೀ ಪ್ರಮಾಣದ ಮಳೆ ಆಗಿದ್ದು ಕಡಿಮೆಯೇ. ಹೋದ ವರ್ಷ ಜಂಬೂ ಸವಾರಿ ದಿನ ಮಳೆಯಾಗಿರಲಿಲ್ಲ. ಈ ಬಾರಿಯೂ ಹೆಚ್ಚಿನ ಮಳೆ ನಿರೀಕ್ಷೆಯಿಲ್ಲ. ಇದರಿಂದ ವಿಜಯದಶಮಿ ಆಚರಣೆಗೇನೂ ಅಡ್ಡಿಯಾಗದು ಎಂದು ಮೈಸೂರು ಸಮೀಪ ಇರುವ ನಾಗನಹಳ್ಳಿ ಕೃಷಿ ಕೇಂದ್ರದ ಹವಾಮಾನ ವಿಭಾಗದ ಹಿರಿಯ ಅಧಿಕಾರಿ ಡಾ.ಸುಮಂತ್‌ ಹೇಳುತ್ತಾರೆ.

mysore-dasara_Entry_Point