ಕನ್ನಡ ಸುದ್ದಿ  /  ಕರ್ನಾಟಕ  /  Dharwad Result: ಧಾರವಾಡದಲ್ಲಿ 5ನೇ ಬಾರಿ ಗೆದ್ದು ಬೀಗಿದ ಪ್ರಹ್ಲಾದ್‌ ಜೋಶಿ; ಕಾಂಗ್ರೆಸ್‌ನ ವಿನೋದ ಅಸೂಟಿಗೆ ಸೋಲು

Dharwad Result: ಧಾರವಾಡದಲ್ಲಿ 5ನೇ ಬಾರಿ ಗೆದ್ದು ಬೀಗಿದ ಪ್ರಹ್ಲಾದ್‌ ಜೋಶಿ; ಕಾಂಗ್ರೆಸ್‌ನ ವಿನೋದ ಅಸೂಟಿಗೆ ಸೋಲು

ಧಾರವಾಡ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಕರ್ನಾಟಕದ ಪ್ರತಿಷ್ಠಿತ ರಾಜಕೀಯ ಕ್ಷೇತ್ರವಾದ ಧಾರವಾಡ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಪ್ರಹ್ಲಾದ್‌ ಜೋಶಿ ಅಭ್ಯರ್ಥಿ 5ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೋಟಿ ಅವರಿಗೆ ಸೋಲಾಗಿದೆ. Dharwad Lok Sabha Elections Result.

ಧಾರವಾಡದಲ್ಲಿ 5ನೇ ಬಾರಿ ಗೆದ್ದು ಬೀಗಿದ ಪ್ರಹ್ಲಾದ್‌ ಜೋಶಿ; ಕಾಂಗ್ರೆಸ್‌ನ ವಿನೋದ ಅಸೂಟಿಗೆ ಸೋಲು
ಧಾರವಾಡದಲ್ಲಿ 5ನೇ ಬಾರಿ ಗೆದ್ದು ಬೀಗಿದ ಪ್ರಹ್ಲಾದ್‌ ಜೋಶಿ; ಕಾಂಗ್ರೆಸ್‌ನ ವಿನೋದ ಅಸೂಟಿಗೆ ಸೋಲು

ಧಾರವಾಡ: ಲೋಕಸಭಾ ಚುನಾವಣೆ 2024ರ ಫಲಿತಾಂಶ ಕೊನೆಗೂ ಪ್ರಕಟಗೊಂಡಿದೆ. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ 5ನೇ ಬಾರಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿಗೆ ಸೋಲಾಗಿದೆ. ಜೋಷಿ ಅವರು 95 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಟ್ರೆಂಡಿಂಗ್​ ಸುದ್ದಿ

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಬರುವುದು ಖಚಿತವಾದರೂ ಕರ್ನಾಟಕ ಲೋಕಸಭಾಕ್ಷೇತ್ರಗಳಲ್ಲಿ ಯಾವ ಪಕ್ಷ ಗೆಲುವು ಸಾಧಿಸಿದೆ ಎಂಬ ಕುತೂಹಲ ಇರುವುದು ಸಹಜ. ಇದೀಗ ರಾಜ್ಯದ ಪ್ರತಿಷ್ಠಿತ ರಾಜಕೀಯ ಕಣ ಎನ್ನಿಸಿಕೊಂಡಿರುವ ಧಾರವಾಡ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ (Dharwad Lok Sabha MP Election 2024 Result) ಹೊರಬಿದ್ದಿದೆ. ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪ್ರಬಲ ಪಕ್ಷಗಳಾಗಿದ್ದು, ಜೆಡಿಎಸ್‌ ಅಸ್ತಿತ್ವ ಹೊಂದಿಲ್ಲ. ಈ ಬಾರಿ ಧಾರಾವಾಡದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರಾ ಹಣಾಹಣಿ ಇತ್ತು. ಕೇಂದ್ರ ಸಚಿವ, ಬಿಜೆಪಿ ಮುಖಂಡ ಪ್ರಹ್ಲಾದ್‌ ಜೋಶಿ (Pralhad joshi) 4 ಬಾರಿ ಗೆದ್ದಿರುವ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ, ಅವರಿಗೆ ಎದುರಾಳಿಯಾಗಿ ಈ ಬಾರಿ ಕಾಂಗ್ರೆಸ್‌ ಹೊಸಮುಖ ವಿನೋದ ಅಸೂಟಿ (Vinod Asuti) ಅವರನ್ನು ಕಣಕ್ಕೆ ಇಳಿಸಿತ್ತು. ಇದೀಗ 5ನೇ ಬಾರಿಯೂ ಗೆಲುವು ಅವರದ್ದೇ ಆಗಿದೆ. 1996ರಿಂದ ಧಾರವಾಡದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಈ ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರಾ ಹಣಾಹಣಿಯಿದ್ದು ಗೆಲುವ ಯಾರಿಗೆ ಎಂಬ ಬಗ್ಗೆ ಕುತೂಹಲ ಹೆಚ್ಚಿತ್ತು. ಧಾರಾವಾಡದಲ್ಲೂ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಬಾಳನಗೌಡ್ರ ಮಲ್ಲಿಕಾರ್ಜುನಗೌಡ, ಬಂಕಾಪುರ ಶೌಕತಲಿ, ಬುಗಾಡಿ ಬಸವಲಿಂಗಪ್ಪ ಈರಪ್ಪ, ಡಾ.ಗುರಪ್ಪ ಎಚ್ ಇಮ್ರಾಪುರ ಮೊದಲಾದವರು ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಧಾರವಾಡ ಲೋಕಸಭೆ ಎಲೆಕ್ಷನ್ ಕ್ವಿಕ್‌ ಲುಕ್‌

ಲೋಕಸಭಾ ಕ್ಷೇತ್ರದ ಹೆಸರು: ಧಾರವಾಡ

ಅಭ್ಯರ್ಥಿಯ ಹೆಸರು ಮತ್ತು ಪಡೆದ ಮತಗಳು

ಪ್ರಹ್ಲಾದ ಜೋಶಿ (ಬಿಜೆಪಿ): 682400 ಮತಗಳು

ವಿನೋದ ಅಸೂಟಿ (ಕಾಂಗ್ರೆಸ್‌): 587397 ಮತಗಳು

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಪಡೆದ ಪ್ರಹ್ಲಾದ್‌ ಜೋಶಿ ಪರಿಚಯ

ಕರ್ನಾಟಕದ ಪ್ರಮುಖ ರಾಜಕಾರಣಿ ಪ್ರಹ್ಲಾದ ಜೋಶಿ ಪ್ರಸ್ತುತ ಹುಬ್ಬಳ್ಳಿ ಧಾರವಾಡದ ಹಾಲಿ ಸಂಸದರಾಗಿದ್ದಾರೆ. 2004ರಿಂದ ಸತತವಾಗಿ ಸಂಸದರಾಗಿ ಆಯ್ಕೆಯಾಗಿದ್ದು 2019ರಿಂದ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರ್‌ಎಸ್‌ಎಸ್‌ ಹಿನ್ನೆಲೆಯುಳ್ಳ ಜೋಶಿ 1992ರಲ್ಲಿ ರಾಜಕೀಯ ಪ್ರವೇಶಿಸುತ್ತಾರೆ. 2004ರಲ್ಲಿ ಮೊದಲ ಬಾರಿ ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದಿದ್ದರು, ಅಂದಿನಿಂದ ಇಂದಿನವರೆಗೆ ಧಾರವಾಡ ಕ್ಷೇತ್ರದಿಂದ ನಿರಂತರವಾಗಿ ಗೆಲುವು ಸಾಧಿಸುತ್ತಿದ್ದಾರೆ.

ಚುನಾವಣಾ ಕಣ: ಧಾರವಾಡ ಲೋಕಸಭಾ ಕ್ಷೇತ್ರ

ಧಾರವಾಡ ಕ್ಷೇತ್ರದಲ್ಲಿ 1951 ರಿಂದ 1991ರವರೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಸತತ ಗೆಲುವು ಕಂಡಿತ್ತು. ಆದರೆ 1996ರಿಂದ ಈ ಚುನಾವಣೆಯವರೆಗೆ ಸತತ ಸೋಲು ಕಂಡಿದೆ. 1996ರಿಂದ ಧಾರಾವಾಡದಲ್ಲಿ ಬಿಜೆಪಿ ಗೆಲುವಿನ ಪತಾಕೆ ಹಾರಿಸುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿನಯ್‌ ಕುಲಕರ್ಣಿ ವಿರುದ್ಧ 2,05,072 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

 

Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.

ಟಿ20 ವರ್ಲ್ಡ್‌ಕಪ್ 2024