Dharwad Crime: ಧಾರವಾಡದಲ್ಲಿ ಮೀಟರ್‌ ಬಡ್ಡಿ ದಂದೆ, ಮೂವರು ಬಡ್ಡಿಕುಳಗಳನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು-dharwad news hubli dharwad police arrest 3 people in money interest trading racket after suicide attempt prh ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Dharwad Crime: ಧಾರವಾಡದಲ್ಲಿ ಮೀಟರ್‌ ಬಡ್ಡಿ ದಂದೆ, ಮೂವರು ಬಡ್ಡಿಕುಳಗಳನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು

Dharwad Crime: ಧಾರವಾಡದಲ್ಲಿ ಮೀಟರ್‌ ಬಡ್ಡಿ ದಂದೆ, ಮೂವರು ಬಡ್ಡಿಕುಳಗಳನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು

ಹುಬ್ಬಳ್ಳಿ ಧಾರವಾಡದಲ್ಲಿ ನಡೆದಿದ್ದ ಅಪರಾಧ ಪ್ರಕರಣದಲ್ಲಿ ಹಲವರನ್ನು ಬಂಧಿಸಿರುವ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.ವರದಿ: ಪ್ರಸನ್ನಕುಮಾರ್‌ ಹಿರೇಮಠ

ಹುಬ್ಬಳ್ಳಿ ಧಾರವಾಡದಲ್ಲಿ ನಡೆದಿದ್ದ ಅಪರಾಧ ಪ್ರಕರಣಗಳ ಕುರಿತು ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಮಾಹಿತಿ ನೀಡಿದರು.
ಹುಬ್ಬಳ್ಳಿ ಧಾರವಾಡದಲ್ಲಿ ನಡೆದಿದ್ದ ಅಪರಾಧ ಪ್ರಕರಣಗಳ ಕುರಿತು ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಮಾಹಿತಿ ನೀಡಿದರು.

ಧಾರವಾಡ: ಬಡ್ಡಿ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ವಿಷ ಸೇವಿಸಿದ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಶಹರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಗೊಲ್ಲರ ಕಾಲನಿಯ ನಜೀರಸಾಬ ಅತ್ತಾರನಿಗೆ ಸಾಲ ನೀಡಿ ಬಡ್ಡಿಗೆ ಕಿರುಕುಳ ನೀಡಿದ್ದ ಗೊಲ್ಲರ ಕಾಲನಿಯ ಗುಲಿಗೆಪ್ಪ ಬಳ್ಳಾರಿ, ಲಕ್ಷ್ಮಣ ಬಳ್ಳಾರಿ ಹಾಗೂ ಶಂಕರ ಗೊಲ್ಲರ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.ಖಾಸಗಿಯವರಿಂದ ಸಾಲ ಪಡೆದಿದ್ದ ನಜೀರಸಾಬ ಅತ್ತಾರ ಎಂಬಾತ ಬಡ್ಡಿ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ವಿಷ ಸೇವಿಸಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ಆತನಿಗೆ ಪ್ರಜ್ಞೆ ಬಂದ ಬಳಿಕ ಹೆಚ್ಚಿನ ಮಾಹಿತಿ ಪಡೆದ ಶಹರ ಠಾಣೆಯ ಸಿಪಿಐ ಎನ್.ಜಿ. ಕಾಡದೇವರ ಹಾಗೂ ಸಿಬ್ಬಂದಿ ಎಸಿಪಿ ಪ್ರಶಾಂತ ಸಿದ್ದನಗೌಡರ ಮಾರ್ಗದರ್ಶನದಲ್ಲಿ ಕಿರುಕುಳ ನೀಡಿದವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹುಬ್ಬಳ್ಳಿ ಧಾರವಾಡದಲ್ಲಿ ಬಡ್ಡ ವಹಿವಾಟು ಎಗ್ಗಿಲ್ಲದೇ ನಡೆಯುತ್ತಿರುವ ದೂರುಗಳು ಬರುತ್ತಿವೆ. ಮೂರು ತಿಂಗಳ ಹಿಂದೆ ದಾಳಿ ನಡೆಸಿ ಹಲವರನ್ನು ಬಂಧಿಸಲಾಗಿತ್ತು. ಆದರೂ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಈ ಬಾರಿ ವ್ಯಕ್ತಿಯೊಬ್ಬ ಕಿರುಕುಳಕ್ಕೆ ಒಳಗಾಗಿದ್ದ ದೂರು ಬಂದಿತ್ತು. ಇದನ್ನಾಧರಿಸಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಿಂಗ್‌ ರೋಡ್ ದರೋಡೆ ಗ್ಯಾಂಗ್ ಸೆರೆ

ಹುಬ್ಬಳ್ಳಿ ನಗರದ ಬೆಂಡಿಗೇರಿ ಠಾಣೆ ಪೊಲೀಸರು ನಗರದ ಹೊರವಲಯದ ರಿಂಗ್ ರೋಡ್‌ನಲ್ಲಿ ವಾಹನ ಸವಾರರ ದರೋಡೆ ಮಾಡುತ್ತಿದ್ದ ಕುಖ್ಯಾತ ತಂಡವೊಂದನ್ನು ಬಂಧಿಸಿದೆ. ಈ ಸಂಬಧ ಏಳು ಜನ ಆರೋಪಿಗಳನ್ನು ಬಂಧಿಸಿ ೪೧೦೦ ರೂ ನಗದು ಸೇರಿದಂತೆ ಮೂರು ಮೊಬೈಲ್, ಎರಡು ದ್ವಿಚಕ್ರ ವಾಹನ, ಒಂದು ಚಾಕು, ಖಾರದ ಪುಡಿ, ಒಂದು ಆಟೋ ವಶಪಡಿಸಿಕೊಂಡಿದ್ದಾರೆ.

ಗಂಗಾಧರನಗರದ ಭೀಮರಾವ್ ತಾವರಗೊಪ್ಪ, ರವಿ ಗೋಕಾಕ್, ಕೆ.ಬಿ.ನಗರದ ದೀಪಕ್ ನರಗುಂದ, ಶ್ರೀನಿವಾಸ್ ವೀರಾಪುರ, ಸೋನಿಯಾಗಾಂಧಿ ನಗರದ ಶಶಿಕುಮಾರ್ ಸಾತಪತಿ, ಗೋಪನಕೊಪ್ಪದ ನಾಗರಾಜ್ ಬಳ್ಳಾರಿ ಎಂಬುವವರೆ ಬಂಧಿಸಲ್ಪಟ್ಟವರಾಗಿದ್ದು ಇವರೆಲ್ಲರೂ ರೌಡಿಶೀಟರ್‍ಸ್, ಎಮ್.ಓಬಿಯಲ್ಲಿ ಇದ್ದವರ ಜೊತೆಗೆ ಗುರು ತಿಸಿಕೊಂಡವರಾಗಿದ್ದಾರೆ ಎನ್ನುವುದು ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತ ಎನ್.ಶಶಿಕುಮಾರ ವಿವರಣೆ.

ಹೊರವಲಯದ ರಿಂಗ್ ರಸ್ತೆಯಲ್ಲಿ ಬೈಕ್ ಹಾಗೂ ಲಾರಿಗಳನ್ನು ಅಡ್ಡಗಟ್ಟಿ ಖಾರದಪುಡಿ ಎರಚಿ, ಚಾಕುವಿನಿಂದ ಹಲ್ಲೆ ನಡೆಸಿ ಬೆಲೆ ಬಾಳುವ ವಸ್ತುಗಳನ್ನು ದೋಚಿ ಈ ತಂಡ ತಲೆಮರೆಸಿಕೊಳ್ಳುತ್ತಿತ್ತು. ಅಲ್ಲದೇ ರಿಂಗ್ ರೋಡ್ ಸಂಚಾರವೇ ಬೇಡ ಎನ್ನುವಷ್ಟರ ಮಟ್ಟಿಗೆ ಸವಾರರು ಹೆದರುವಂತಾಗಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸ್‌ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿತ್ತು. ಈಗ ಹೆಡೆ ಮುರಿ ಕಟ್ಟಿ ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಡಿಗೇರಿ ಪೊಲೀಸ್ ಠಾಣೆಯ ಪಿಐ ಎಸ್.ಆರ್.ನಾಯಕ್ ನೇತೃತ್ವದ ತಂಡದಲ್ಲಿ ಪಿಎಸ್‌ಐ ರವಿ ವಡ್ಡರ, ಎಎಸ್‌ಐ ಟಿ.ಎನ್. ಸವದತ್ತಿ, ಸಿಬ್ಬಂದಿ ಪಿ.ಜಿ.ಪುರಾಣಿಕಮಠ, ಎನ್.ಐ. ನಿಲಗಾರ್, ಪಿ.ಎಫ್.ಅಂಬಿಗೇರ್, ಆರ್.ಎಸ್.ಹರ್ಕಿ, ರಮೇಶ ಹಿತ್ತಲಮನಿ, ಹನುಮಂತ ಕರಗಾವಿ, ಸೋಮು ಮೇಟಿ, ಬಸವರಾಜ ಗಳಗಿ, ಗುಡ್ಡಪ್ಪ ಒಗ್ಗಣ್ಣವರ, ಬಸು ಗೌಡರ, ಹನುಮಂತ ಆಲೂರ ಇತರರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಆಯುಕ್ತರು ಶ್ಲಾಘಿಸಿದರು.

(ವರದಿ: ಪ್ರಸನ್ನಕುಮಾರ ಹಿರೇಮಠ, ಹುಬ್ಬಳ್ಳಿ)

 

mysore-dasara_Entry_Point