ಹುಬ್ಬಳ್ಳಿ: ಗಾಳಿಪಟ ಬಿಡಿಸಲು ಹೋದ ಬಾಲಕನಿಗೆ ಕರೆಂಟ್‌ ಶಾಕ್; ಗಂಭೀರ ಸ್ಥಿತಿಯಲ್ಲಿ ಕೆಎಂಸಿ ಆಸ್ಪತ್ರೆಗೆ ದಾಖಲು
ಕನ್ನಡ ಸುದ್ದಿ  /  ಕರ್ನಾಟಕ  /  ಹುಬ್ಬಳ್ಳಿ: ಗಾಳಿಪಟ ಬಿಡಿಸಲು ಹೋದ ಬಾಲಕನಿಗೆ ಕರೆಂಟ್‌ ಶಾಕ್; ಗಂಭೀರ ಸ್ಥಿತಿಯಲ್ಲಿ ಕೆಎಂಸಿ ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ: ಗಾಳಿಪಟ ಬಿಡಿಸಲು ಹೋದ ಬಾಲಕನಿಗೆ ಕರೆಂಟ್‌ ಶಾಕ್; ಗಂಭೀರ ಸ್ಥಿತಿಯಲ್ಲಿ ಕೆಎಂಸಿ ಆಸ್ಪತ್ರೆಗೆ ದಾಖಲು

ವಿದ್ಯುತ್‌ ಕೇಬಲ್‌ನಲ್ಲಿ ಸಿಕ್ಕಿಕೊಂಡಿದ್ದ ಗಾಳಿಪಟ ಬಿಡಿಸಲು ಹೋದ ಬಾಲಕನಿಗೆ ಕರೆಂಟ್‌ ಶಾಕ್‌ ಹೊಡದಿದೆ. ಇದರಿಂದ ಬಾಲಕನ ಸಂಪೂರ್ಣ ದೇಹ ಸುಟ್ಟ ಸ್ಥಿತಿಯಲ್ಲಿದ್ದು, ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತಿದೆ.

ಹುಬ್ಬಳ್ಳಿಯಲ್ಲಿ ಗಾಳಿಪಟ ಬಿಡಿಸಲು ಹೋದ ಬಾಲಕನಿಗೆ ಕರೆಂಟ್‌ ಶಾಕ್; ಆಸ್ಪತ್ರೆಗೆ ದಾಖಲು
ಹುಬ್ಬಳ್ಳಿಯಲ್ಲಿ ಗಾಳಿಪಟ ಬಿಡಿಸಲು ಹೋದ ಬಾಲಕನಿಗೆ ಕರೆಂಟ್‌ ಶಾಕ್; ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ: ಗಾಳಿಪಟ ಹಾರಿಸುವ ಹುಚ್ಚು ಬಾಲಕನೊಬ್ಬನ ಜೀವಕ್ಕೆ ಕುತ್ತು ತಂದಿದೆ. ವಿದ್ಯುತ್ ಕೇಬಲ್‌ಗೆ ಸಿಕ್ಕಿಕೊಂಡಿದ್ದ ಗಾಳಿಪಟ ಬಿಡಿಸಲು ಹೋದಾಗ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬಾಲಕನ ದೇಹ ಶೇಕಡಾ 90ರಷ್ಟು ಸುಟ್ಟು ಹೋಗಿದ್ದು, ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತೋಷ ನಗರದಲ್ಲಿ ಈ ಅವಘಡ ನಡೆದಿದ್ದು, ರಾಹುಲ್ ಬದ್ದಿ ಎಂಬ ಬಾಲಕನೇ ಅಪಘಾತಕ್ಕೆ ಒಳಗಾದವ. ವಿದ್ಯುತ್ ಕೇಬಲ್‌ಗೆ ಗಾಳಿಪಟ ಸಿಲುಕಿಕೊಂಡಿದ್ದು, ಕಬ್ಬಿನಿಂದ ವಿದ್ಯುತ್ ಕೇಬಲ್‌ಗೆ ಬಾಲಕ ಹೊಡೆದಿದ್ದಾನೆ. ಹೀಗಾಗಿ ಬಾಲಕನಿಗೆ ವಿದ್ಯುತ್ ತಗುಲಿದೆ.

ಬಾಲಕನ ಸಂಪೂರ್ಣ ದೇಹ ಸುಟ್ಟ ಸ್ಥಿತಿಯಲ್ಲಿದ್ದು, ಬಾಲಕನನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ದೇಹದ 90 ಪ್ರತಿಷತ ಭಾಗ ಸುಟ್ಟಿದ್ದು, ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ಹೊಸ ಮದ್ಯದಂಗಡಿಗಳಿಗೆ ಲೈಸೆನ್ಸ್

ಹೊಸದಾಗಿ ಮದ್ಯದಂಗಡಿಗಳಿಗೆ ಲೈಸನ್ಸ್ ನೀಡುವ ಬಗ್ಗೆ ಸರ್ಕಾರ ಯೋಚಿಸಿದೆ ಎಂದು ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ತಿಳಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯವನ್ನು ಸಿಎಂ ಅವರ ಗಮನಕ್ಕೆ ತಂದಿಲ್ಲ. ಅವರ ಗಮನಕ್ಕೆ ತಂದು ಮುಂದಿನ ಹೆಜ್ಜೆ ಇಡಲಾಗುವುದು ಎಂದರು. ಅಬಕಾರಿ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ಮಾಡಿಲ್ಲ. ಸಹಜವಾಗಿ ಅಧಿಕಾರಿಗಳಿಗೆ ಬಡ್ತಿ ನೀಡಿದ್ದೇವೆ. "ನೋ ಟ್ರಾನ್ಸ್‌ಫರ್ ನಥಿಂಗ್" ಎಂದರು.

ವರ್ಗಾವಣೆ ವಿಷಯದಲ್ಲಿ ಕೋಟ್ಯಂತರ ರೂಪಾಯಿ ಹಣ ಪಡೆಯಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ನಾನು ಕೋಟ್ಯಂತರ ರೂಪಾಯಿ ಹಣ ನೋಡಿಲ್ಲ. ಯಾರಾದರೂ ಇದ್ದರೇ ತೋರಿಸಿ ಎಂದು ಸವಾಲ್ ಹಾಕಿದರು.

ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ತಪ್ಪು ಮಾಡಿಲ್ಲ

ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ ಹಣದ ಮೇಲೆ ಚುನಾವಣೆ ನಡೆಸುತ್ತಿದೆ. ಆದರೆ ಜನತೆ ಬಿಜೆಪಿಯವರಿಂದ ಹಣ ತೆಗೆದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಹಣ ಕೆಲಸ ಮಾಡುವುದಿಲ್ಲ. ನಮ್ಮ ಪಕ್ಷದಲ್ಲಿ ಸಾಮರಸ್ಯವಿದೆ. ಅದೇ ಬಿಜೆಪಿಯಲ್ಲಿ ಇಲ್ಲ. ಈ ಬಾರಿ ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ಇದರಲ್ಲಿ ಎರಡು ಮಾತಿಲ್ಲ ಎಂದರು.

ವಕ್ಪ್ ವಿಷಯದಲ್ಲಿ ಕಾಂಗ್ರೆಸ್ ಯಾವುದೇ ತಪ್ಪು ಮಾಡಿಲ್ಲ. ಈ ಹಿಂದೆ ಬಿಜೆಪಿಯವರು ಕೊಟ್ಟ ನೋಟಿಸ್ ಇಂದಿಗೂ ಮುಂದುವರೆಯುತ್ತಿದೆ. ಕಾಂಗ್ರೆಸ್ ಎಂದಿಗೂ ರೈತ ವಿರೋಧಿ ಕೆಲಸ ಮಾಡಿಲ್ಲ. ವಿಜಯಪುರದಲ್ಲಿ ಆಗಿರುವ ಒಂದೆರಡು ಘಟನೆಗಳನ್ನು ಮುಂದಿಟ್ಟುಕೊಂಡು ರೈತರು ಧರಣಿ ಮಾಡುತ್ತಿದ್ದಾರೆ. ಅವರಿಗೆ ಧರಣಿ ಮಾಡಲು ಅಧಿಕಾರವಿದೆ. ನೋಟಿಸ್ ಹಿಂಪಡೆಯುವ ಮೂಲಕ ರೈತರಿಗೆ ಅನ್ಯಾಯ ವಾಗದಂತೆ ನೋಡಿಕೊಳ್ಳುವುದಾಗಿ ಸಿಎಂ ಸೂಚನೆ ನೀಡಿದ್ದಾರೆ ಎಂದರು.

ಉಪಚುನಾವಣೆ ಹಿನ್ನೆಲೆ ಬಿಜೆಪಿಯವರು ವಕ್ಪ ವಿಷಯವನ್ನಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಚುನಾವಣೆ ಮುಗಿದ ಬಳಿಕ ಪ್ರತಿಭಟನೆ ನಿಲ್ಲಿಸಿ ಮನೆಗೆ ಹೋಗುತ್ತಾರೆ ಎಂದರು.

Whats_app_banner