Indian Railways: ದಸರಾಗೆ ಯಶವಂತಪುರ, ಮೈಸೂರಿನಿಂದ ಹಾಸನ- ಮಂಗಳೂರು-ಉಡುಪಿ ಮಾರ್ಗದಲ್ಲಿ ಕಾರವಾರಕ್ಕೆ ವಿಶೇಷ ರೈಲುಗಳ ಸಂಚಾರ
ದಸರಾ ಅಂಗವಾಗಿ ಯಶವಂತಪುರ ಹಾಗೂ ಮೈಸೂರಿನಿಂದ ಕಾರವಾರಕ್ಕೆ ವಿಶೇಷ ರೈಲು ಸಂಚಾರ ಮಾಡಲು ಭಾರತೀಯ ರೈಲ್ವೆ ಹುಬ್ಬಳ್ಳಿ ವಲಯ ಮುಂದಾಗಿದೆ. ಇದರ ವಿವರ ಇಲ್ಲಿದೆ.
ಹುಬ್ಬಳ್ಳಿ: ದಸರಾ ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈರುತ್ಯ ರೈಲ್ವೆ ಹುಬ್ಬಳ್ಳಿ ವಲಯದ ಬೆಂಗಳೂರು ವಿಭಾಗವು ಯಶವಂತಪುರ-ಕಾರವಾರ ಮತ್ತು ಮೈಸೂರು-ಕಾರವಾರ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ. ಎರಡು ಪ್ರತ್ಯೇಕ ದಿನಗಳಲ್ಲಿ ಈ ರೈಲು ಎರಡು ಬಾರಿ ಸಂಚರಿಸಲಿದೆ. ಯಶವಂತಪುರದಿಂದ ಕಾರವಾರ ಹಾಗೂ ಕಾರವಾರದಿಂದ ಯಶವಂತಪುರ, ಮೈಸೂರಿನಿಂದ ಕಾರವಾರ ಹಾಗೂ ಕಾರವಾರದಿಂದ ಮೈಸೂರುವರೆಗೂ ಈ ರೈಲು ಸಂಚರಿಸಲಿದೆ. ಹಾಸನ, ಮಂಗಳೂರು, ಉಡುಪಿ ಮಾರ್ಗವಾಗಿ ಈ ರೈಲು ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.
ರೈಲು ಸಂಖ್ಯೆ 06569 ಯಶವಂತಪುರ-ಕಾರವಾರ ವಿಶೇಷ ಎಕ್ಸ್‌ಪ್ರೆಸ್ ಯಶವಂತಪುರದಿಂದ 2024 ರ ಅಕ್ಟೋಬರ್ 11 ರಂದು ಮಧ್ಯರಾತ್ರಿ 12:30 ಗಂಟೆಗೆ ಹೊರಟು ಅದೇ ದಿನ ಸಂಜೆ 4:15 ಗಂಟೆಗೆ ಕಾರವಾರವನ್ನು ತಲುಪಲಿದೆ.
ಮಾರ್ಗದಲ್ಲಿ ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು ಹಾಲ್ಟ್, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ, ಅಂಕೋಲಾಗಳಲ್ಲಿ ರೈಲು ನಿಲುಗಡೆ ಇರಲಿದೆ.
ರೈಲು ಸಂಖ್ಯೆ 06570 ಕಾರವಾರ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ಕಾರವಾರದಿಂದ 2024 ರ ಅಕ್ಟೋಬರ್ 11 ರಂದು ರಾತ್ರಿ 11:30 ಗಂಟೆಗೆ ಹೊರಟು ಮರುದಿನ 4:40 ಗಂಟೆಗೆ ಮೈಸೂರಿಗೆ ತಲುಪಲಿದೆ.ಮಾರ್ಗ ಮಧ್ಯೆ ಅಂಕೋಲಾ, ಗೋಕರ್ಣ ರಸ್ತೆ, ಕುಮಟಾ, ಹೊನ್ನಾವರ, ಮುರ್ಡೇಶ್ವರ, ಭಟ್ಕಳ, ಬೈಂದೂರು ಹಾಲ್ಟ್, ಕುಂದಾಪುರ, ಬಾರ್ಕೂರು, ಉಡುಪಿ, ಮೂಲ್ಕಿ, ಸುರತ್ಕಲ್, ಬಂಟವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.
ರೈಲು ಸಂಖ್ಯೆ 06585 ಮೈಸೂರಿನಿಂದ 2024 ರ ಅಕ್ಟೋಬರ್ 12 ರಂದು 9 :20 ಗಂಟೆಗೆ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಮರುದಿನ 4:15 ಗಂಟೆಗೆ ಕಾರವಾರವನ್ನು ತಲುಪುತ್ತದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06586 2024 ರ ಅಕ್ಟೋಬರ್ 13, ರಂದು ರಾತ್ರಿ 11 :30 ಗಂಟೆಗೆ ಕಾರವಾರದಿಂದ ಹೊರಟು ಮರುದಿನ ಸಂಜೆ 4:40 ಗಂಟೆಗೆ ತನ್ನ ಮೈಸೂರನ್ನು ತಲುಪುತ್ತದೆ.
ಮಾರ್ಗದಲ್ಲಿ, ಈ ವಿಶೇಷ ರೈಲುಗಳು (06585/86) ಮಂಡ್ಯ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ ಮತ್ತು ಅಂಕೋಲಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.
ಈ ವಿಶೇಷ ರೈಲುಗಳು (06569, 06570, 06585 & 06586) 18 ಕೋಚ್‌ಗಳನ್ನು ಒಳಗೊಂಡಿರುತ್ತವೆ, ಅವುಗಳೆಂದರೆ: ಎಸಿ-ಟು-ಟೈರ್-2, ಎಸಿ ತ್ರೀ-ಟೈರ್-2, ಸ್ಲೀಪರ್ ಕ್ಲಾಸ್-6, ಜನರಲ್ ಸೆಕೆಂಡ್ ಕ್ಲಾಸ್-6, ಮತ್ತು ಎಸ್‌ಎಲ್‌ಆರ್/ಡಿ -2.