ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ಕಾರವಾರ ಮೈಸೂರು ನಡುವೆ 2 ಟ್ರಿಪ್‌ ಬೇಸಿಗೆ ವಿಶೇಷ ರೈಲು ಸಂಚಾರ ಇಂದಿನಿಂದ, ವೇಳಾಪಟ್ಟಿ, ಇತರೆ ವಿವರ ಪ್ರಕಟಿಸಿದ ಕೊಂಕಣ ರೈಲ್ವೆ

ಮೈಸೂರು ಕಾರವಾರ ಮೈಸೂರು ನಡುವೆ 2 ಟ್ರಿಪ್‌ ಬೇಸಿಗೆ ವಿಶೇಷ ರೈಲು ಸಂಚಾರ ಇಂದಿನಿಂದ, ವೇಳಾಪಟ್ಟಿ, ಇತರೆ ವಿವರ ಪ್ರಕಟಿಸಿದ ಕೊಂಕಣ ರೈಲ್ವೆ

ಭಾರತೀಯ ರೈಲ್ವೆಯು ಬೇಸಿಗೆ ರಜೆಯ ಪ್ರಯಾಣಿಕ ದಟ್ಟಣೆ ನಿರ್ವಹಿಸುವುದಕ್ಕಾಗಿ ವಿಶೇಷ ರೈಲು ಸಂಚಾರ ಘೋಷಿಸುತ್ತಲೇ ಇದೆ. ಇದರ ಭಾಗವಾಗಿ ಈಗ ನೈಋತ್ಯ ರೈಲ್ವೆಯ ಸಹಯೋಗದೊಂದಿಗೆ, ಮೈಸೂರು ಕಾರವಾರ ಮೈಸೂರು ನಡುವೆ 2 ಟ್ರಿಪ್‌ ಬೇಸಿಗೆ ವಿಶೇಷ ರೈಲು ಸಂಚಾರ ಇಂದಿನಿಂದ ಶುರು ಮಾಡುವುದಾಗಿ ಕೊಂಕಣ ರೈಲ್ವೆ ಪ್ರಕಟಿಸಿದೆ. ಇದರ ವೇಳಾಪಟ್ಟಿ, ಇತರೆ ವಿವರ ಇಲ್ಲಿದೆ.

ಮೈಸೂರು  ಕಾರವಾರ ಮೈಸೂರು ನಡುವೆ 2 ಟ್ರಿಪ್‌ ಬೇಸಿಗೆ ವಿಶೇಷ ರೈಲು ಸಂಚಾರ ಇಂದಿನಿಂದ (ಸಾಂಕೇತಿಕ ಚಿತ್ರ)
ಮೈಸೂರು ಕಾರವಾರ ಮೈಸೂರು ನಡುವೆ 2 ಟ್ರಿಪ್‌ ಬೇಸಿಗೆ ವಿಶೇಷ ರೈಲು ಸಂಚಾರ ಇಂದಿನಿಂದ (ಸಾಂಕೇತಿಕ ಚಿತ್ರ)

ಬೆಂಗಳೂರು: ಮೈಸೂರು -ಕಾರವಾರ-ಮೈಸೂರು ನಡುವೆ ಎರಡು ಟ್ರಿಪ್‌ ಬೇಸಿಗೆ ವಿಶೇಷ ರೈಲು ಸಂಚಾರವನ್ನು ಕೊಂಕಣ ರೈಲ್ವೆ ಪ್ರಕಟಿಸಿದೆ. ಬೇಸಿಗೆ ರಜೆಯ ಪ್ರಯಾಣಿಕ ದಟ್ಟಣೆಯನ್ನು ನಿರ್ವಹಿಸುವ ಸಲುವಾಗಿ ಈ ವಿಶೇಷ ಒನ್‌ವೇ ಸಮ್ಮರ್ ಎಕ್ಸ್‌ಪ್ರೆಸ್ ಸ್ಪೆಷಲ್ ಟ್ರೇನ್ ಸಂಚಾರವನ್ನು ಕೊಂಕಣ ರೈಲ್ವೆ ಘೋಷಿಸಿದೆ.

ಟ್ರೆಂಡಿಂಗ್​ ಸುದ್ದಿ

ಇದರಂತೆ, ರೈಲು ಸಂಖ್ಯೆ 06241/ 06242 ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಮೈಸೂರು-ಕಾರವಾರ-ಮೈಸೂರು ನಡುವೆ ಎರಡು ಟ್ರಿಪ್ ರೈಲು ಸಂಚಾರ ನಡೆಸಲಿವೆ. ನೈಋತ್ಯ ರೈಲ್ವೆ ಜೊತೆಗೆ ಹೊಂದಾಣಿಕೆಯಲ್ಲಿ ಈ ರೈಲು ಸಂಚಾರವನ್ನು ಘೋಷಿಸಿರುವುದಾಗಿ ಕೊಂಕಣ್ ರೈಲ್ವೆ ಹೇಳಿಕೊಂಡಿದೆ.

ರೈಲು ಸಂಖ್ಯೆ 06241/ 06242 ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವೇಳಾಪಟ್ಟಿ ಮತ್ತು ಇತರೆ ವಿವರ ಹೀಗಿದೆ.

ಮೈಸೂರು ಜಂಕ್ಷನ್ ಕಾರವಾರ ಒನ್ ವೇ ಸಮ್ಮರ್ ಎಕ್ಸ್‌ಪ್ರೆಸ್ ಸ್ಪೆಷಲ್‌

ರೈಲು ಸಂಖ್ಯೆ 06241 ಮೈಸೂರು ಜಂಕ್ಷನ್‌ - ಕಾರವಾರ ಒನ್‌ ವೇ ಸಮ್ಮರ್ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಮೈಸೂರು ಜಂಕ್ಷನ್‌ನಿಂದ ಇಂದು (ಮೇ 3) ರಾತ್ರಿ 8: 15ಕ್ಕೆ ಹೊರಟು ನಾಳೆ (ಮೇ 4) ಮಧ್ಯಾಹ್ನ 1 ಗಂಟೆಗೆ ಕಾರವಾರ ತಲುಪಲಿದೆ. ಇನ್ನೊಂದು ಟ್ರಿಪ್ ಸೋಮವಾರ (ಮೇ 6) ರಾತ್ರಿ 8: 15ಕ್ಕೆ ಮೈಸೂರು ಜಂಕ್ಷನ್‌ನಿಂದ ಹೊರಟು (ಮೇ 7) ಮಧ್ಯಾಹ್ನ 1 ಗಂಟೆಗೆ ಕಾರವಾರ ತಲುಪಲಿದೆ.

ಈ ರೈಲು ಮಂಡ್ಯ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್, ಯಶವಂತಪುರ, ನೆಲಮಂಗಲ, ಕುಣಿಗಲ್‌, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರ್ (ಎಚ್‌), ಭಟ್ಕಳ, ಮುರುಡೇಶ್ವರ, ಕುಮಟಾ ಮತ್ತು ಗೋಕರ್ಣ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಕಾರವಾರ ಮೈಸೂರು ಜಂಕ್ಷನ್ ಒನ್ ವೇ ಸಮ್ಮರ್ ಎಕ್ಸ್‌ಪ್ರೆಸ್ ಸ್ಪೆಷಲ್‌

ರೈಲು ಸಂಖ್ಯೆ 06242 ಕಾರವಾರ- ಮೈಸೂರು ಜಂಕ್ಷನ್ ಒನ್ ವೇ ಸಮ್ಮರ್ ಎಕ್ಸ್‌ಪ್ರೆಸ್ ಸ್ಪೆಷಲ್‌ ರೈಲು ನಾಳೆ (ಮೇ 4) ರಾತ್ರಿ 10 ಗಂಟೆಗೆ ಕಾರವಾರದಿಂದ ಹೊರಟು, ಮಾರನೇ ದಿನ (ಮೇ 5) ಮುಸ್ಸಂಜೆ 6: 15ಕ್ಕೆ ಮೈಸೂರು ಜಂಕ್ಷನ್ ತಲುಪಲಿದೆ. ಇದೇ ರೀತಿ ಇನ್ನೊಂದು ಟ್ರಿಪ್‌ ಮಂಗಳವಾರ (ಮೇ 7) ರಂದು ರಾತ್ರಿ 10 ಗಂಟೆಗೆ ಹೊರಟು ಮಾರನೇ ದಿನ (ಮೇ 8) ಮುಸ್ಸಂಜೆ 6: 15ಕ್ಕೆ ಮೈಸೂರು ಜಂಕ್ಷನ್‌ ತಲುಪಲಿದೆ.

ಈ ರೈಲುಗಳು ಗೋಕರ್ಣ ರೋಡ್, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರ್ (ಎಚ್‌), ಕುಂದಾಪುರ, ಬಾರಕೂರು, ಉಡುಪಿ, ಮೂಲ್ಕಿ, ಸುರತ್ಕಲ್, ಮಂಗಳೂರು ಜಂಕ್ಷನ್, ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್‌, ಸಕಲೇಶಪುರ, ಹಾಸನ, ಯಶವಂತಪುರ, ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್‌, ಮಂಡ್ಯ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿವೆ.

ವಿಶೇಷ ರೈಲುಗಳ ಪ್ರಯಾಣ ಟಿಕೆಟ್ ಬುಕ್ಕಿಂಗ್ ಮತ್ತು ಇತರೆ ಮಾಹಿತಿ

ಈ ವಿಶೇಷ ರೈಲುಗಳಲ್ಲಿ 17 ಬೋಗಿಗಳಿದ್ದು, 2 ಟೈರ್ ಎಸಿ ಬೋಗಿ 1, 3 ಟೈರ್ ಎಸಿ ಬೋಗಿ 2, ಸ್ಲೀಪರ್ ಬೋಗಿ 8, ಜನರಲ್ ಬೋಗಿ 4, ಎಸ್‌ಎಲ್‌ ಆರ್ ಬೋಗಿ 2 ಇವೆ.

ಮೈಸೂರು ಜಂಕ್ಷನ್‌ - ಕಾರವಾರ - ಮೈಸೂರು ಜಂಕ್ಷನ್ ಒನ್ ವೇ ಸಮ್ಮರ್ ಎಕ್ಸ್‌ಪ್ರೆಸ್ ಸ್ಪೆಷಲ್‌ ರೈಲುಗಳ ಟಿಕೆಟ್ ಬುಕ್ ಮಾಡಲು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ www.enquiry.indianrail.gov.in ಗೆ ಹೋಗಬೇಕು ಅಥವಾ ಎನ್‌ಟಿಇಎಸ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇಲ್ಲವೇ ಸಮೀಪದ ರೈಲು ನಿಲ್ಧಾಣಕ್ಕೆ ಹೋಗಬೇಕು.

IPL_Entry_Point