ಅಂಬಾರಿ ಉತ್ಸವ; ಬೆಂಗಳೂರಿನಿಂದ ಒಡಿಶಾದ ಪುರಿ ಜಗನ್ನಾಥನ ದರ್ಶನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಶೀಘ್ರ ಆರಂಭ-ksrtc to launch new long distance air conditioned sleeper bus services from bengaluru to ahmedabad puri prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಅಂಬಾರಿ ಉತ್ಸವ; ಬೆಂಗಳೂರಿನಿಂದ ಒಡಿಶಾದ ಪುರಿ ಜಗನ್ನಾಥನ ದರ್ಶನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಶೀಘ್ರ ಆರಂಭ

ಅಂಬಾರಿ ಉತ್ಸವ; ಬೆಂಗಳೂರಿನಿಂದ ಒಡಿಶಾದ ಪುರಿ ಜಗನ್ನಾಥನ ದರ್ಶನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಶೀಘ್ರ ಆರಂಭ

ಕೆಎಸ್‌ಆರ್‌ಟಿಸಿಯು ಯುರೋಪಿಯನ್ ಶೈಲಿಯ ಹೈಟೆಕ್ 'ಅಂಬಾರಿ ಉತ್ಸವ' ಎಸಿ ಬಸ್​ ಸೇವೆಯನ್ನು ಬೆಂಗಳೂರಿನಿಂದ ಒಡಿಶಾದ ಪುರಿಗೆ ಎಸಿ ಸ್ಲೀಪರ್​ ಬಸ್​​​​ ಸೇವೆ ಆರಂಭಿಸಲಿದೆ.

ಬೆಂಗಳೂರಿನಿಂದ ಒಡಿಶಾದ ಪುರಿ ಜಗನ್ನಾಥನ ದರ್ಶನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಶೀಘ್ರ ಆರಂಭ
ಬೆಂಗಳೂರಿನಿಂದ ಒಡಿಶಾದ ಪುರಿ ಜಗನ್ನಾಥನ ದರ್ಶನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಶೀಘ್ರ ಆರಂಭ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್​ಆರ್​​ಟಿಸಿ) ಸುದೀರ್ಘ ದೈನಂದಿನ ಬಸ್ ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ. ಬೆಂಗಳೂರಿನಿಂದ ಒಡಿಶಾದ ಪುರಿ, ಭುವನೇಶ್ವರ, ಕಟಕ್​​ಗೆ ಎಸಿ ಸ್ಲೀಪರ್​ ಬಸ್​ ಸೇವೆ ಆರಂಭಿಸಲು ಯೋಜನೆ ರೂಪಿಸುತ್ತಿದೆ. ಕೆಎಸ್‌ಆರ್‌ಟಿಸಿಯ ಯುರೋಪಿಯನ್ ಶೈಲಿಯ ಹೈಟೆಕ್ 'ಅಂಬಾರಿ ಉತ್ಸವ' ಎಸಿ ಬಸ್​ ಸೇವೆಯನ್ನು ಶೀಘ್ರದಲ್ಲೇ ಸೇವೆ ಆರಂಭಿಸಲಿವೆ. ಇನ್ಮುಂದೆ ಬೆಂಗಳೂರಿನಿಂದ ಪುರಿಯ ಜಗನ್ನಾಥ ದೇವಸ್ಥಾನಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ವರದಿಯಾಗಿದೆ.

ಕೆಎಸ್​ಆರ್​ಟಿಸಿ ಆರಂಭಿಸಿದ ನೂತನ ಯೋಜನೆಯಲ್ಲಿ ಬರೋಬ್ಬರಿ 1500 ಕಿ.ಮೀ ದೂರ ಪ್ರಯಾಣ ಬೆಳೆಸಲಿದೆ. ತಿರುಪತಿ, ವಿಜಯವಾಡ ಮತ್ತು ವಿಶಾಖಪಟ್ಟಣಂ ಮೂಲಕ ಸುಮಾರು 18 ಗಂಟೆಗಳ ಒಂದು ಮಾರ್ಗದಲ್ಲಿ 1,500 ಕಿಲೋಮೀಟರ್‌ ಕ್ರಮಿಸಲಿದೆ. ಇದೇ ಅತಿ ದೂರ ಕ್ರಮಿಸುವ ಮಾರ್ಗವಾಗಿದೆ. ಪ್ರಸ್ತುತ ಬೆಂಗಳೂರಿನಿಂದ ಶಿರಡಿಗೆ 1,058 ಕಿಮೀ ದೂರ ಕ್ರಮಿಸುತ್ತಿರುವುದೇ ಲಾಂಗ್ ಡಿಸ್ಟೆನ್ಸ್ ಕೆಎಸ್​ಆರ್​ಟಿಸಿ ಮಾರ್ಗ ಎನಿಸಿಕೊಂಡಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಅಂಬಾರಿ ಉತ್ಸವ ಬಸ್​​ಗಳು

ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಪವಿತ್ರ ಸ್ಥಳಗಳಲ್ಲಿ ಒಂದಾದ ಪುರಿಯ ಜಗನ್ನಾಥ ದೇವಾಲಯಕ್ಕೆ ಬಸ್ ಸೇವೆ ಆರಂಭಿಸುವಂತೆ ಕೆಎಸ್ಆರ್​​ಟಿಸಿಗೆ ಹೆಚ್ಚು ಒತ್ತಾಯ ಮತ್ತು ಮನವಿ ಕೇಳಿ ಬಂದಿವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿ ಹಿಂದೂಗೆ ತಿಳಿಸಿದ್ದಾರೆ. ಇದು ಕೆಎಸ್​ಆರ್​​ಟಿಸಿಯ ಉದ್ದದ ಮಾರ್ಗವಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ನೀಡಲು ಹೊಸ ಯುರೋಪಿಯನ್ ಶೈಲಿಯ, ಹವಾನಿಯಂತ್ರಿತ ಸ್ಲೀಪರ್ ಅಂಬಾರಿ ಉತ್ಸವ್ ಬಸ್‌ಗಳನ್ನು ನಿಯೋಜಿಸಲು ಯೋಜಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಡಿಶಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೊಂದಿಗೆ ಕೆಎಸ್​ಆರ್​ಟಿಸಿ ಚರ್ಚೆ ನಡೆಸುತ್ತಿದೆ. ಇದುವರೆಗೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಅಲ್ಲದೆ, ಮಾರ್ಗದ ಅಧ್ಯಯನಕ್ಕೆ ಸಂಬಂಧಿಸಿ ಒಡಿಶಾ ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದ್ದು, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಮೂಲಕ ಈ ಬಸ್ ಹಾದು ಹೋಗಲಿದ್ದು, ಈ ಎರಡೂ ರಾಜ್ಯಗಳಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಿರುಪತಿ, ವಿಜಯವಾಡ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣಂನಂತಹ ಪ್ರಮುಖ ಸ್ಥಳಗಳ ಮೂಲಕ ಹಾದುಹೋಗಲಿದೆ. ಈ ಮಾರ್ಗ ಕೆಎಸ್‌ಆರ್‌ಟಿಸಿಗೆ ಹೆಚ್ಚುವರಿ ಆದಾಯ ತರುತ್ತದೆ ಎಂದು ನಿರೀಕ್ಷಿಸುತ್ತೇವೆ ಎಂದು ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ದಿ ಹಿಂದೂಗೆ ತಿಳಿಸಿದ್ದಾರೆ.

ಪುರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಮತ್ತು ಭಕ್ತರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಲು ಇದು ಉತ್ತಮವಾದ ಯೋಜನೆಯಾಗಿದೆ. ಈ ಯೋಜನೆಯಂತೆ ಈ ಮಾರ್ಗದಲ್ಲಿ 2 ಬಸ್‌ ಸೇವೆಗಳನ್ನು ಒದಗಿಸಲು ಚಿಂತಿಸಿದ್ದು, ಒಂದು ಬೆಂಗಳೂರಿನಿಂದ ಗಮ್ಯಸ್ಥಾನಕ್ಕೆ ಹೋಗುತ್ತದೆ, ಇನ್ನೊಂದು ಅದೇ ದಿನ ಮರಳುತ್ತದೆ. ಈ ಮಲ್ಟಿ-ಆಕ್ಸಲ್ ಎಸಿ ಸ್ಲೀಪರ್ ಕೋಚ್‌ಗಳನ್ನು ಪ್ರಯಾಣಿಕರಿಗೆ ಸುಖಕರ ಪ್ರಯಾಣ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಬಹು ನಿಲುಗಡೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಇನ್ನೂ 20 ಅಂಬಾರಿ ಉತ್ಸವ ಸ್ಲೀಪರ್ ಬಸ್‌ ಸೇವೆ ಸೇರಿಸಲು ಕೆಎಸ್​ಆರ್​ಟಿಸಿ ಯೋಜಿಸುತ್ತಿದೆ. ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, “ನಾವು ಪ್ರಸ್ತುತ 20 ಅಂಬಾರಿ ಉತ್ಸವ ಬಸ್‌ಗಳನ್ನು ಹೊಂದಿದ್ದೇವೆ. ನಮಲ್ಲಿ ವೋಲ್ವೋ 9600 ಮಲ್ಟಿ-ಆಕ್ಸಲ್ ಎಸಿ ಸ್ಲೀಪರ್ ಕೋಚ್‌ಗಳಿವೆ. ಈ ಬಸ್‌ಗಳು ಈಗಾಗಲೇ ಪ್ರಯಾಣಿಕರಲ್ಲಿ ಜನಪ್ರಿಯವಾಗಿವೆ. ಒಡಿಶಾ ಮತ್ತು ಇತರ ರಾಜ್ಯಗಳಿಗೆ ದೂರದ ಸೇವೆಗಳನ್ನು ನಿರ್ವಹಿಸುವ ಯೋಜನೆಗಳೊಂದಿಗೆ ನಮ್ಮ ಸೇವೆ ವಿಸ್ತರಿಸಲು ಮತ್ತು ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆ ಪೂರೈಸಲು ಹೆಚ್ಚುವರಿ 20 ಬಸ್‌ ಸಂಗ್ರಹಿಸಲು ನೋಡುತ್ತಿದ್ದೇವೆ ಎಂದಿದ್ದಾರೆ.

mysore-dasara_Entry_Point