Modi Cabinet: ಮೋದಿ 3.0 ಸಂಪುಟಕ್ಕೆ ಕರ್ನಾಟಕದಿಂದ ಸೇರೋ ಸಂಸದರು ಯಾರು?-lok sabha election result who and how many will get berth in narendra modi new cabinet from karnataka mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Modi Cabinet: ಮೋದಿ 3.0 ಸಂಪುಟಕ್ಕೆ ಕರ್ನಾಟಕದಿಂದ ಸೇರೋ ಸಂಸದರು ಯಾರು?

Modi Cabinet: ಮೋದಿ 3.0 ಸಂಪುಟಕ್ಕೆ ಕರ್ನಾಟಕದಿಂದ ಸೇರೋ ಸಂಸದರು ಯಾರು?

Karnataka Politics ಕರ್ನಾಟಕದಿಂದ ನರೇಂದ್ರ ಮೋದಿ ಅವರ ನೂತನ ಸಂಪುಟ( Narendra Modi Cabinet) ಸೇರುವವರು ಯಾರು ಎನ್ನುವ ಕುತೂಹಲವಿದೆ.ವರದಿ: ಎಚ್‌.ಮಾರುತಿ, ಬೆಂಗಳೂರು)

ಕರ್ನಾಟಕದಿಂದ ಮೋದಿ ಸಂಪುಟ ಸೇರುವವರು ಯಾರು?
ಕರ್ನಾಟಕದಿಂದ ಮೋದಿ ಸಂಪುಟ ಸೇರುವವರು ಯಾರು?

ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದಿದೆ. ಫಲಿತಾಂಶವೂ ಪ್ರಕಟವಾಗಿದೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದು ಖಚಿತವಾಗಿದೆ. ರಾಜ್ಯದಲ್ಲಿ ಮೂರೂ ಪಕ್ಞಗಳಿಗೆ ಸಮಾಧಾನಕರ ಬಹುಮಾನ ಮಾತ್ರ ಸಿಕ್ಕಿದೆ. ಕರ್ನಾಟಕದ ಬಿಜೆಪಿ ಮತ್ತು ಜೆಡಿಎಸ್‌ ನಿಂದ ಯಾರು ಯಾರೆಲ್ಲಾ ಸಚಿವರಾಗಬಹುದು ಎಂಬ ಪ್ರಶ್ನೆ ಮಾತ್ರ ಕುತೂಹಲ ಕೆರಳಿಸಿದೆ. ಬಿಜೆಪಿಯಲ್ಲಿ ಸಚಿವರಾಗುವ ಅರ್ಹತೆಯುಳ್ಳ ಅನೇಕ ಘಟಾನುಘಟಿಗಳಿದ್ದಾರೆ. ಆದರೆ ಈ ಬಾರಿ ಹಿಂದಿನ ಬಾರಿಯಂತೆ ಫಲಿತಾಂಶವೂ ಕರ್ನಾಟಕದಿಂದ ಬಂದಿಲ್ಲ. ಅಲ್ಲದೇ ಪೂರ್ಣ ಬಹುಮತವಿಲ್ಲದೇ ಮೈತ್ರಿ ಪಕ್ಷಗಳಿಗೂ ಹೆಚ್ಚಿನ ಅವಕಾಶ ಕರ್ನಾಟಕ ಸಿಗುವ ಸಾಧ್ಯತೆ ಕಡಿಮೆ. ಮೂವರು ಇಲ್ಲವೇ ನಾಲ್ವರಿಗೆ ಸಿಗಬಹುದು ಎನ್ನಲಾಗುತ್ತಿದೆ.

ಯಾರು ಇದ್ದಾರೆ ರೇಸ್‌ ನಲ್ಲಿ

ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್‌ ಮತ್ತು ಬಸವರಾಜ ಬೊಮ್ಮಾಯಿ ಮತ್ತು ಬಿ. ವೈ ರಾಘವೇಂದ್ರ ಅರ್ಹತೆಯುಳ್ಳವರಾಗಿದ್ದಾರೆ. ಬ್ರಾಹ್ಮಣ ಸಮುದಾಯದಿಂದ ಪ್ರಹ್ಲಾದ ಜೋಷಿ ಸಚಿವ ಸಂಪುಟ ಸೇರುವುದು ಖಚಿತವಾಗಿದ್ದು, ಮತ್ತೊಬ್ಬರಿಗೆ ಅವಕಾಶ ಸಿಗುವುದಾದರೆ ಬೆಂಗಳೂರು ದಕ್ಷಿಣಕ್ಷೇತ್ರದ ಅಭ್ಯರ್ಥಿ ಯುವ ಬಿಜೆಪಿ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ ಅವರೊಗೆ ಅವಕಾಶ ಸಿಗಬಹುದು.

ದಲಿತ ಸಮುದಾಯದಿಂದ ಹಿರಿಯರಾದ ರಮೇಶ ಜಿಗಜಿಣಗಿ ಇಲ್ಲವೇ ಗೋವಿಂದ ಕಾರಜೋಳ ಅವಕಾಶ ಪಡೆದುಕೊಳ್ಳಬಹುದು.

ಡಾ.ಮಂಜುನಾಥ್‌ಗೆ ಉಂಟೇ ಅವಕಾಶ

ಹಾಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಬಾರಿ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳು ಕ್ಷೀಣ. ಇವರ ಬದಲಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸದಸ್ಯ ಡಾ.ಚೋಳೇನಹಳ್ಳಿ ನಂಜಪ್ಪ ಮಂಜುನಾಥ್ (Dr.c.n. manjunath) ಅಥವಾ ಮಂಡ್ಯ ಕ್ಷೇತ್ರದ ಸದಸ್ಯ ಮಾಜಿ ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ಇಬ್ಬರಲ್ಲಿ ಒಬ್ಬರು ಸಚಿವರಾಗುವುದು ಖಚಿತವಾಗಿದೆ. ಆದರೆ ಯಾರು ಎನ್ನುವುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿ ಉದ್ಭವಿಸಿದೆ.

ಮೈತ್ರಿ ಮಾಡಿಕೊಳ್ಳುವಾಗಲೇ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದಾಗಿ ಜೆಡಿಎಸ್‌ ವರಿಷ್ಠ ಕುಮಾರಸ್ವಾಮಿ ಅವರಿಗೆ ಭರವಸೆ ನೀಡಲಾಗಿದೆ. ಅದರಲ್ಲೂ ಕೃಷಿ ಸಚಿವರಾಗಿ ಇಸ್ರೇಲ್‌ ಮಾದರಿಯ ಕೃಷಿಯನ್ನು ದೇಶದಲ್ಲಿ ಪರಿಚಯಿಸಬೇಕು ಎನ್ನುವುದು ಅವರ ಅಭಿಲಾಷೆಯಾಗಿದೆ.

ಡಾ. ಮಂಜುನಾಥ್‌ ಅವರಿಗೂ ಇದೇ ಭರವಸದೆ ಸಿಕ್ಕಿದೆ. ಮೋದಿ ಸಂಪುಟದಲ್ಲಿ ಆರೋಗ್ಯ ಖಾತೆಯ ಜವಬ್ದಾರಿ ಹೊರುತ್ತಾರೆ ಎಂದು ಜನಜನಿತವಾಗಿದೆ. ಚಲಾವಣೆಯಾದ ಮತಗಳಲ್ಲಿ ಶೇ.56.21ರಷ್ಟು ಮತ ಗಳಿಸಿ 2,69,647 ತರದ ಗೆಲುವಿಗೆ ಸಚಿವರಾಗುತ್ತಾರೆ ಎಂಬ ಆಸೆಯೂ ಸೇರಿದೆ ಎನ್ನುವುದು ಸುಳ್ಳಲ್ಲ. ಪಕ್ಷ, ಜಾತಿ ವಯೋಮಾನ, ಅಂತಸ್ತು ಎಲ್ಲವನ್ನೂ ಮರೆತು ಮಂಜುನಾಥ್‌ ಅವರು ಆರೋಗ್ಯ ಸಚಿವರಾಗುತ್ತಾರೆ, ರಾಜ್ಯ ಮತ್ತು ದೇಶದಲ್ಲಿ ಅನೇಕ ಬದಲಾವಣೆಗಳನ್ನು ತರಲಿದ್ದಾರೆ ಎಂಬ ಆಸೆಯಿಂದ ಮತ ಚಲಾಯಿಸಿದ ಲಕ್ಷಾಂತರ ಮತದಾರರಿದ್ದಾರೆ.

ಮಂಜುನಾಥ್‌ ಅವರ ಮಾವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೂ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅವರು ಮಂಜುನಾಥ್‌ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಮೋದಿ ಮತ್ತು ಅಮಿತ್‌ ಶಾ ಉತ್ಸುಕರಾಗಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿದ್ದರು. ಮಂಜುನಾಥ್‌ ಅವರಿಗೆ ಭರವಸೆ ನೀಡಿದ್ದರೂ ಬಹಿರಂಗವಾಗಿ ಎಸ್‌ ಎಂದು ಹೇಳಿಕೊಳ್ಳುವಂತಿಲ್ಲ. ಕರೆ ಬರುವವರೆಗೂ ಗೌಪ್ಯವಾಗಿಯೇ ಇಡಬೇಕಾಗುತ್ತದೆ.

ಗೌಡರ ಕುಟುಂಬದಲ್ಲಿ ಯಾರಿಗೆ?

ಹಾಗಾದರೆ ಮೋದಿ ಅವರ ಸಹದ್ಯೋಗಿಯಾಗುವವರು ಯಾರು ಎಂಬ ಪ್ರಶ್ನೆ ಕೊನೆಯವರೆಗೂ ಉಳಿದುಕೊಳ್ಳುತ್ತದೆ. ಸಂದರ್ಶನವೊಂದರಲ್ಲಿ ಡಾ.ಮಂಜುನಾಥ್‌ ಅವರು ಕುಮಾರಸ್ವಾಮಿ ಅವರ ಪಕ್ಷವೇ ಬೇರೆ, ನಾನು ಪ್ರತಿನಿಧಿಸುವ ಪಕ್ಷವೇ ಬೇರೆ ಎಂದು ಹೇಳಿದ್ದಾರೆ.ಗೌಡರ ಕುಟುಂಬ ಮತ್ತು ಬಿಜೆಪಿ ಮೂಲಗಳ ಪ್ರಕಾರ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಖಚಿತ. ಆದರೆ ಯಾರಿಗೆ ಎನ್ನುವುದು ಮಾತ್ರ ಬಹಿರಂಗಗೊಂಡಿಲ್ಲ. ಇಬ್ಬರೂ ಧುರೀಣರೂ ಒಂದೇ

ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಹಾಗೆಯೇ ಇಬ್ಬರಿಗೂ ಸಚಿವರಾಗುವ ಮಹತ್ವಾಕಾಂಕ್ಷೆ ಇದ್ದೇ ಇರುತ್ತದೆ. ರಾಜಕೀಯವಾಗಿ ಪಕ್ಷವನ್ನು ಉಳಿಸಿಕೊಳ್ಳಲು ಸಂಘಟನೆಯ ದೃಷ್ಟಿಯಿಂದ ಕುಮಾರಸ್ವಾಮಿ ಸಚಿವರಾಗಬೇಕು ಎಂದು ಜೆಡಿಎಸ್‌ ಮುಖಂಡರು ಬಯಸುತ್ತಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರುವ ಅವಶ್ಯಕತೆ ಇದ್ದು ಡಾ. ಮಂಜುನಾಥ್‌ ಅವರಿಗೆ ಅವಕಾಶ ನೀಡಿದರೆ ಒಳ್ಳೆಯದು ಎಂದು ಬಯಸುವವರ ಸಂಖ್ಯೆ ಕಡಿಮೆಯೇನಿಲ್ಲ.

ಬಿಜೆಪಿಯಲ್ಲಿ ಅಂತಿಮ ಕ್ಷಣದವರೆಗೂ ಯಾವುದೇ ಮಾಹಿತಿ ಸೋರಿಕೆಯಾಗುವುದಿಲ್ಲ. ಎಲ್ಲ ನಿರ್ಧಾರಗಳನ್ನೂ ಹೈಕಮಾಂಡ್‌ ತೆಗೆದುಕೊಳ್ಳುತ್ತದೆ. ಇಬ್ಬರಿಗೂ ಮಣೆ ಹಾಕಿದರೂ ಅಚ್ಚರಿಯೇನಿಲ್ಲ. ಅಥವಾ ಒತ್ತಡ ಹೇರಿ ಕುಮಾರಸ್ವಾಮಿ ಸಚಿವರಾದರೆ ಡಾ.ಮಂಜುನಾಥ್‌ ಅವರಿಗೆ ಬೇರೆಯದ್ದೇ ಹೊಣೆ ಹೊರಿಸಲೂಬಹುದು. ಎಲ್ಲ ಪ್ರಶ್ನೆಗಳಿಗೂ ಉತ್ತರಕ್ಕಾಗಿ ಕೆಲವು ದಿನಗಳವರೆಗೆ ಕಾಯಲೇಬೇಕು.

ವರದಿ: ಎಚ್.ಮಾರುತಿ, ಬೆಂಗಳೂರು

mysore-dasara_Entry_Point