ಕನ್ನಡ ಸುದ್ದಿ  /  ಕರ್ನಾಟಕ  /  Shimoga News: ರಾಹುಲ್‌ ಗಾಂಧಿ ಫಿಟ್ನೆಸ್‌ಗೆ ನಟ ಶಿವಣ್ಣ ಫಿದಾ, ಪ್ರಧಾನಿಯಾದರೆ ದೇಶ ಫಿಟ್‌ ಇಡಲಿದ್ದಾರೆ ಎಂದ್ರು ಹ್ಯಾಟ್ರಿಕ್‌ ಹೀರೋ

Shimoga News: ರಾಹುಲ್‌ ಗಾಂಧಿ ಫಿಟ್ನೆಸ್‌ಗೆ ನಟ ಶಿವಣ್ಣ ಫಿದಾ, ಪ್ರಧಾನಿಯಾದರೆ ದೇಶ ಫಿಟ್‌ ಇಡಲಿದ್ದಾರೆ ಎಂದ್ರು ಹ್ಯಾಟ್ರಿಕ್‌ ಹೀರೋ

ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್‌ ಚುನಾವಣಾ ಸಭೆಯಲ್ಲಿ ರಾಹುಲ್‌ ಗಾಂಧಿ ದೈಹಿಕ ಸದೃಡತೆ( Rahul Gandhi Fitness) ನಟ ಶಿವರಾಜಕುಮಾರ್‌ ಹೊಗಳಿದರು.

ರಾಹುಲ್‌ ಫಿಟ್ನೆಸ್‌ಗೆ ಶಿವಣ್ಣ ಫಿದಾ
ರಾಹುಲ್‌ ಫಿಟ್ನೆಸ್‌ಗೆ ಶಿವಣ್ಣ ಫಿದಾ

ಶಿವಮೊಗ್ಗ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಅವರ ಫಿಟ್ನೆಸ್‌ಗೆ ನಾನೂ ಮಾರು ಹೋಗಿದ್ದೇನೆ. ಅವರ ಫಿಟ್ನೆಸ್‌ ನೋಡಿದರೆ ನನಗೂ ನಿಜವಾಗಿಯೂ ಖುಷಿಯಾಗುತ್ತದೆ. ಹಿಂದೆ ಹಲವಾರು ಬಾರಿ ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ. ನಾನು ರಾಹುಲ್‌ ಗಾಂಧಿ ಅವರ ಅಭಿಮಾನಿ. ಇದು ಕನ್ನಡದ ನಟ, ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಕುರಿತು ಹೇಳಿದ ಅಭಿಮಾನದ ನುಡಿ. ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆ ಹಿನ್ನೆಯಲ್ಲಿ ಗುರುವಾರ ನಡೆದ ಬೃಹತ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಿವರಾಜಕುಮಾರ್‌ ಅವರು ರಾಹುಲ್‌ ಗಾಂಧಿ ಕುರಿತು ಮೆಚ್ಚುಗೆ ಮಾತುಗಳನ್ನೇ ಆಡಿದರು. ಶಿವಣ್ಣ ಅವರ ಈ ಮಾತಿಗೆ ರಾಹುಲ್‌ ಗಾಂಧಿ ಅವರದ್ದೂ ನಗೆಯೇ ಉತ್ತರವಾಗಿತ್ತು. ಅಭಿಮಾನಿಗಳು ಕೂಡ ಶಿವಣ್ಣ ಮಾತಿಗೆ ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿದರು.

ಟ್ರೆಂಡಿಂಗ್​ ಸುದ್ದಿ

ರಾಹುಲ್‌ ಗಾಂಧಿ ಅವರ ದೈಹಿಕ ಸಾಮರ್ಥ್ಯ ನೋಡಿದರೆ ಖುಷಿ ಎನ್ನಿಸುತ್ತದೆ. ಏಕೆಂದರೆ ದೇಶದ ನಾಯಕರಾದವರು ಮೊದಲು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ದೈಹಿಕ ಸದೃಢತೆ ಕಾಪಾಡಿಕೊಳ್ಳಬೇಕು. ರಾಹುಲ್‌ ಗಾಂಧಿ ಅವರನ್ನು ನೋಡಿದಾಗ ದೈಹಿಕವಾಗಿ ಸದೃಢತೆ ಹೊಂದಿದವರು ದೇಶವನ್ನೂ ಇದೇ ರೀತಿ ಇಟ್ಟುಕೊಳ್ಳುತ್ತಾರೆ ಅನ್ನಿಸುತ್ತದೆ. ರಾಹುಲ್‌ ಗಾಂಧಿ ಕೂಡ ಪ್ರಧಾನಿಯಾದರೆ ದೇಶವನ್ನು ಫಿಟ್‌ ಆಗಿಯೇ ಇಡಬಲ್ಲರು ಎಂದು ಹೇಳಿದರು.

ಶಿವಮೊಗ್ಗದ ಕಾಂಗ್ರೆಸ್‌ ಸಮಾವೇಶದಲ್ಲಿ ಭಾಗಿಯಾಗಿದ್ದೇನೆ. ಅದೂ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅಂತವರೊಂದಿಗೆ ವೇದಿಕೆ ಹಂಚಿಕೊಂಡಿದ್ದೇನೆ. ನನ್ನೊಂದಿಗೆ ನಟ ದುನಿಯಾ ವಿಜಯ್‌ ಕೂಡ ಭಾಗಿಯಾಗಿರುವುದು ಸಂತಸ ದೈಕ ಎಂದು ಶಿವರಾಜಕುಮಾರ್‌ ಹೇಳಿದರು.

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಶಿವರಾಜಕುಮಾರ್‌ ಪತ್ನಿ ಗೀತಾ ಶಿವರಾಜಕುಮಾರ್‌ ಕಣಕ್ಕೆ ಇಳಿದಿದ್ದಾರೆ. ದಶಕದ ಹಿಂದೆ ಗೀತಾ ಅವರು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. ಆಗ ಶಿವರಾಜಕುಮಾರ್‌ ಪತ್ನಿ ಪರವಾಗಿ ಮತಯಾಚಿಸಿದ್ದರು. ಚುನಾವಣೆ ಮುಗಿಯುವವರಗೂ ಜತೆಯಲ್ಲಿಯೇ ಇದ್ದರು. ಈ ಬಾರಿ ಕಾಂಗ್ರೆಸ್‌ನಿಂದ ಗೀತಾ ಸ್ಪರ್ಧಿಸಿದ್ದು., ಈ ಬಾರಿಯೂ ಶಿವಮೊಗ್ಗದಲ್ಲೇ ಶಿವರಾಜಕುಮಾರ್‌ ಬೀಡು ಬಿಟ್ಟಿದ್ದಾರೆ. ಬಹುತೇಕ ಎರಡು ತಿಂಗಳಿನಿಂದ ಶಿವರಾಜಕುಮಾರ್‌ ಅವರು ಶಿವಮೊಗ್ಗ ಪ್ರವಾಸದಲ್ಲಿದ್ದಾರೆ.

ಒಂದು ತಿಂಗಳಿನಿಂದ ಕ್ಷೇತ್ರದಲ್ಲೇ ಇದ್ದರು ಪತ್ನಿ ಗೆಲ್ಲಿಸಲು ಹರಸಾಹಸ ಪಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರು ನಾಲ್ಕು ಪಕ್ಷಗಳಿಂದ ಲೋಕಸಭೆ ಚುನಾವಣೆಗೆ ಆಯ್ಕೆಯಾದ ಕ್ಷೇತ್ರವಿದು. ಇಲ್ಲಿ ಅವರ ಮಗಳು ಗೀತಾ ಗೆಲ್ಲಲೇಬೇಕು ಎನ್ನುವ ಪ್ರಯತ್ನ ನಡೆಸಿದ್ದಾರೆ. ಪತಿ ಶಿವರಾಜ್‌ ಕುಮಾರ್‌ ಜತೆಯಲ್ಲಿ ಹಲವಾರು ನಟರು,ಕಲಾವಿದರು ಕೂಡ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point