ಫಿಟ್ನೆಸ್‌ ಗುರಿ ತಲುಪಲು ಬೇಸಿಗೆ ಉತ್ತಮ ಕಾಲ; ಈ ಬದಲಾವಣೆಗಳನ್ನು ಮಾಡಿಕೊಂಡರೆ ಸುಲಭವಾಗಿ ತೂಕ ಇಳಿಯುತ್ತೆ-health news summer fitness tips the best time to reach the fitness goal follow these tips to lose weight arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಫಿಟ್ನೆಸ್‌ ಗುರಿ ತಲುಪಲು ಬೇಸಿಗೆ ಉತ್ತಮ ಕಾಲ; ಈ ಬದಲಾವಣೆಗಳನ್ನು ಮಾಡಿಕೊಂಡರೆ ಸುಲಭವಾಗಿ ತೂಕ ಇಳಿಯುತ್ತೆ

ಫಿಟ್ನೆಸ್‌ ಗುರಿ ತಲುಪಲು ಬೇಸಿಗೆ ಉತ್ತಮ ಕಾಲ; ಈ ಬದಲಾವಣೆಗಳನ್ನು ಮಾಡಿಕೊಂಡರೆ ಸುಲಭವಾಗಿ ತೂಕ ಇಳಿಯುತ್ತೆ

Summer Fitness Tips: ಬೇಸಿಗೆಯ ದಿನಗಳಲ್ಲಿ ಹೈಡ್ರೇಟ್‌ ಆಗಿರುವುದು ಅತಿ ಮುಖ್ಯ. ಆಹಾರ ಸೇವೆನೆಯಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿ, ತೂಕ ನಷ್ಟದ ಗುರಿಯನ್ನು ತಪ್ಪದೇ ಪಾಲಿಸಿದರೆ ಬೇಸಿಗೆಯಲ್ಲಿ ಫಿಟ್ನೆಸ್‌ ಗುರಿಯನ್ನು ಸಲುಭವಾಗಿ ತಲುಪಬಹುದು. ಅದಕ್ಕಾಗಿ ಈ ಟಿಪ್ಸ್‌ ಪಾಲಿಸಿ.

ಈ ಬದಲಾವಣೆಗಳನ್ನು ಮಾಡಿಕೊಂಡರೆ ಸುಲಭವಾಗಿ ತೂಕ ಇಳಿಯುತ್ತೆ
ಈ ಬದಲಾವಣೆಗಳನ್ನು ಮಾಡಿಕೊಂಡರೆ ಸುಲಭವಾಗಿ ತೂಕ ಇಳಿಯುತ್ತೆ

ನಾವೀಗ ಬೇಸಿಗೆಯ ಕಠಿಣ ದಿನಗಳನ್ನು ಎದುರಿಸುತ್ತಿದ್ದೇವೆ. ಸೂರ್ಯನ ತಾಪ ದಿನೇ ದಿನೇ ಏರುತ್ತಿದೆ. ಈ ಕಾಲದಲ್ಲಿ ನಿಮ್ಮ ದೇಹಕ್ಕೆ ಹೊಸತನ್ನು ನೀಡಲು ಸರಿಯಾದ ಸಮಯ. ಈ ಸಮಯದಲ್ಲಿ ನೀವು ನಿಮ್ಮ ಫಿಟ್ನೆಸ್‌ ಗುರಿಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು. ಏಕೆಂದರೆ ಬೇಸಿಗೆಯಲ್ಲಿ ಹಗಲು ತುಂಬಾ ದೀರ್ಘವಾಗಿರುತ್ತದೆ. ತಾಜಾ ತರಾಕರಿ, ಹಣ್ಣು ಸಿಗುತ್ತದೆ. ವ್ಯಾಯಾಮ ಮತ್ತು ಆಹಾರಕ್ರಮಗಳನ್ನು ಸುಲಭವಾಗಿ ಅಭ್ಯಾಸ ಮಾಡಿಕೊಳ್ಳಬಹುದಾಗಿದೆ. ವಾತಾವರಣವು ಬಿಸಿಲಿನಿಂದ ಕೂಡಿದ್ದರೂ, ತೂಕ ಇಳಿಸಿ ಆರೋಗ್ಯ ಕಾಪಾಡಿಕೊಳ್ಳಲು ಬೇಸಿಗೆಯ ದಿನಗಳು ಉತ್ತಮವಾಗಿವೆ. ನೀವು ಫಿಟ್ನೆಸ್‌ ಗುರಿಗಳನ್ನು ಹಾಕಿಕೊಂಡಿದ್ದರೆ ಈ ಸಮಯದಲ್ಲಿ ಆ ಗುರಿಯನ್ನು ತಲುಪಬಹುದು. ಬೇಸಿಗೆಯಲ್ಲಿ ನಿಮ್ಮ ಫಿಟ್ನೆಸ್‌ ಸಾಧಿಸಲು ನಿಮಗೆ ಸಹಾಯವಾಗುವ ಟಿಪ್ಸ್‌ಗಳು ಇಲ್ಲಿವೆ.

  1. ಹೈಡ್ರೇಟ್‌ ಆಗಿರಿ

ಬೇಸಿಗೆ ದಿನಗಳಲ್ಲಿ ಹೈಡ್ರೇಟ್‌ ಆಗಿರುವುದು ಅತಿ ಅವಶ್ಯಕ. ಈ ದಿನಗಳಲ್ಲಿ ಬೆವರುವಿಕೆ ಅತಿಯಾಗಿರುತ್ತದೆ. ನಿರ್ಜಲೀಕರಣವು ಆಯಾಸ, ಸ್ನಾಯು ಸೆಳೆತ ಮತ್ತು ವ್ಯಾಯಾಮ ಮಾಡುವಾಗ ನಿಶ್ಯಕ್ತಿ ಮುಂತಾದವುಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿ ಬೇಸಿಗೆಯ ದಿನಗಳಲ್ಲಿ ಯಥೇಚ್ಛವಾಗಿ ನೀರು ಕುಡಿಯಿರಿ. ನೀವು ಅತಿಯಾಗಿ ಹೊರಗಡೆ ಬಿಸಿಲಿನಲ್ಲಿ ಓಡಾಡುತ್ತಿದ್ದರೆ ನೀರಿಗೆ ಒಆರ್‌ಎಸ್‌ ಸೇರಿಸಿಕೊಳ್ಳಿ. ಅದು ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತದೆ. ಕಲ್ಲಂಗಡಿ ಹಣ್ಣು, ಸೌತೆಕಾಯಿ, ಮತ್ತು ಕಿತ್ತಳೆ ಹಣ್ಣು ಮುಂತಾದ ನೀರಿನ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಿ.

2. ಋತುಮಾನದ ಆಹಾರಗಳನ್ನು ಸೇವಿಸಿ

ಬೇಸಿಗೆಯಲ್ಲಿ ಅನೇಕ ತರಕಾರಿ, ಹಣ್ಣುಗಳು ಹೇರಳವಾಗಿ ಸಿಗುತ್ತವೆ. ಟೊಮೆಟೊ, ಪಾಲಕ್‌, ಮಾವಿನ ಹಣ್ಣು ಮುಂತಾದವುಗಳನ್ನು ನಿಮ್ಮ ಆಹಾರದ ಭಾಗವಾಗಿಸಿ. ಪೌಷ್ಟಿಕ ಆಹಾರಗಳನ್ನು ಸೇವಿಸಿ. ಪ್ರೋಟೀನ್‌ಯುಕ್ತ ಆಹಾರಗಳು, ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬಿನ ಆಹಾರಗಳನ್ನು ಸೇವಿಸಿ. ಆಹಾರದಲ್ಲಿ ಸಮತೋಲನವನ್ನು ಕಾಯ್ದುಕೊಂಡರೆ ಅವು ಸ್ನಾಯುಗಳ ಪುನಃಶ್ಚೇತನಕ್ಕೆ ಸಹಾಯ ಮಾಡುತ್ತದೆ.

ಜೀವನಶೈಲಿ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

3. ಗುರಿ ಸ್ಪಷ್ಟವಾಗಿರಲಿ

ನೀವು ತೂಕ ಕಳೆದುಕೊಂಡು ಫಿಟ್‌ ಆಗಿರಬೇಕು ಅನ್ನವುದು ನಿಮ್ಮ ಬಯಕೆಯಾಗಿದ್ದರೆ ಮೊದಲು ಗುರಿಯ ಬಗ್ಗೆ ಸ್ಪಷ್ಟ ಕಲ್ಪನೆಯಿರಲಿ. ಒಮ್ಮೆಲೆ ನಿಮ್ಮ ಪೂರ್ತಿ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಬದಲು ಒಂದೊಂದಾಗಿ ಬದಲಾಯಿಸಿಕೊಳ್ಳುತ್ತಾ ಹೋಗಿ. ತೂಕ ನಷ್ಟ, ಗಟ್ಟಿಮುಟ್ಟಾದ ಸ್ನಾಯು, ಆಹಾರ ಕ್ರಮದಲ್ಲಿ ಬದಲಾವಣೆ ಮುಂತಾದ ಎಲ್ಲಾ ಬದಲಾವಣೆಗಳನ್ನು ಹಂತ ಹಂತವಾಗಿ ತಲುಪಿ.

4. ಶಕ್ತಿ ಹೆಚ್ಚಿಸುವ ವ್ಯಾಯಾಮ ಮಾಡಿ

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಕಾರ್ಡಿಯೊವೆಸ್ಕ್ಯುಲರ್‌ ವ್ಯಾಯಾಮಗಳು ಉತ್ತಮ. ಇದು ಕ್ಯಾಲರಿಗಳನ್ನು ಸುಡುವುದರಿಂದ ಶಕ್ತಿ ಹೆಚ್ಚಿಸಿಕೊಳ್ಳಲು ಉತ್ತಮವಾಗಿದೆ. ವ್ಯಾಯಾಮ ಮಾಡುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಜೀರ್ಣಕ್ರಿಯೆ ಹೆಚ್ಚಿ ಪೂರ್ತಿ ದೇಹಕ್ಕೆ ಶಕ್ತಿ ಸಂಚಾರವಾಗುತ್ತದೆ. ವಾರದಲ್ಲಿ ಕನಿಷ್ಠ 2ರಿಂದ 3 ಬಾರಿ ಈ ವ್ಯಾಯಾಮಗಳನ್ನು ಮಾಡಲು ಪ್ರಯತ್ನಿಸಿ.

5. ಎಚ್ಚರದಿಂದ ತಿನ್ನಿರಿ

ಬೇಸಿಗೆಯಲ್ಲಿ ಹೊರಗಡೆಯ ಓಡಾಟ ಹೆಚ್ಚು, ತಂಪು ಪಾನೀಯಗಳ ಸೇವನೆಯೂ ಹೆಚ್ಚು. ಹಾಗಾಗಿ, ಈ ಸಮಯದಲ್ಲಿ ಆಹಾರ ಸೇವನೆಯಲ್ಲಿ ಎಚ್ಚರದಿಂದಿರಿ. ಪೋಷಕಾಂಶಗಳಿಂದ ತುಂಬಿರುವ ಆಹಾರ ಸೇವನೆ ಕಡೆಗೆ ಗಮನ ಕೊಡಿ. ಹೈಡ್ರೇಟ್‌ ಆಗಿರಬೇಕೆಂದು ಅಂಗಡಿಯಲ್ಲಿ ಸಿಗುವ ತಂಪು ಪಾನೀಯಗಳನ್ನು ಕುಡಿಯುವ ಬದಲಿಗೆ ಮನೆಯಲ್ಲಿಯೇ ಜ್ಯೂಸ್‌, ಪಾನಕಗಳನ್ನು ತಯಾರಿಸಿಕೊಂಡು ಕುಡಿಯಿರಿ. ಆರೋಗ್ಯಕರ ಆಹಾರ ಸೇವನೆ ಅಭ್ಯಾಸ ರೂಢಿಸಿಕೊಳ್ಳಿ.

6. ಹೊರಾಂಗಣ ವ್ಯಾಯಾಮಗಳನ್ನು ಮಾಡಿ

ಪಾರ್ಕ್‌ನಲ್ಲಿ ಜಾಗಿಂಗ್‌ ಮಾಡಲು, ಪ್ರಕೃತಿಯ ಮಧ್ಯೆ ಸೈಕಲ್‌ ಹೊಡೆಯಲು, ಸಮುದ್ರದ ದಂಡೆಯ ಮೇಲೆ ವ್ಯಾಯಾಮ ಮಾಡಲು ಬೇಸಿಗೆ ಉತ್ತಮವಾಗಿದೆ. ಇದು ನಿಮಗೆ ಸಂತೋಷ ನೀಡುವುದರ ಜೊತೆಗೆ ತಾಜಾತನದ ಅನುಭವವನ್ನು ನೀಡುತ್ತದೆ. ಪ್ರಕೃತಿಯ ಮಧ್ಯೆ ವ್ಯಾಯಾಮಗಳನ್ನು ಮಾಡುವುದು ನಿಮ್ಮ ಮನಸ್ಸನ್ನು ಶಾಂತಗೊಳಿಸಿ ಚೈತನ್ಯ ತುಂಬುತ್ತದೆ. ಇದು ಆರೋಗ್ಯ ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ.

ಇಲ್ಲಿ ಹೇಳಿರುವ ಸರಳ ಟಿಪ್ಸ್‌ ಪಾಲಿಸಿ. ತೂಕ ಇಳಿಸಿಕೊಳ್ಳಲು ಆಗುತ್ತಿಲ್ಲ ಎಂದು ಚಿಂತಿಸುವವರು ಸುಲಭದಲ್ಲಿ ತೂಕ ಕಡಿಮೆ ಮಾಡಿಕೊಳ್ಳಬಹುದಾಗಿದೆ.

mysore-dasara_Entry_Point