ಮೈಸೂರು ದಸರಾ ಆನೆಗಳ ನಡುವೆ ಜಗಳ; ಧನಂಜಯ-ಕಂಜನ್ ಕಾದಾಟಕ್ಕೆ ಬೆಚ್ಚಿದ ಮಾವುತರು, ದಿಕ್ಕಾಪಾಲಾಗಿ ಓಡಿದ ಜನ-mysore news dasara elephants engage in fight create panic in mysuru dhananjaya and kanjan fight viral video prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ದಸರಾ ಆನೆಗಳ ನಡುವೆ ಜಗಳ; ಧನಂಜಯ-ಕಂಜನ್ ಕಾದಾಟಕ್ಕೆ ಬೆಚ್ಚಿದ ಮಾವುತರು, ದಿಕ್ಕಾಪಾಲಾಗಿ ಓಡಿದ ಜನ

ಮೈಸೂರು ದಸರಾ ಆನೆಗಳ ನಡುವೆ ಜಗಳ; ಧನಂಜಯ-ಕಂಜನ್ ಕಾದಾಟಕ್ಕೆ ಬೆಚ್ಚಿದ ಮಾವುತರು, ದಿಕ್ಕಾಪಾಲಾಗಿ ಓಡಿದ ಜನ

Mysore news: ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಮುಖ್ಯ ದ್ವಾರದ ಬಳಿ ಶುಕ್ರವಾರ ಸಂಜೆ ಎರಡು ದಸರಾ ಆನೆಗಳು ರಾತ್ರಿ ಊಟದ ವೇಳೆ ಜಗಳವಾಡಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಮೈಸೂರು ದಸರಾ ಆನೆಗಳ ನಡುವೆ ಜಗಳ
ಮೈಸೂರು ದಸರಾ ಆನೆಗಳ ನಡುವೆ ಜಗಳ

ಮೈಸೂರು: ಮೈಸೂರು ದಸರಾ ಆರಂಭಕ್ಕೆ ದಿನಗಣನೆ ಶುರುವಾಗಿದೆ. ನಾಡ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಅದರಂತೆ ಗಜಪಡೆಯ ತಾಲೀಮು ನಡೆಸಲಾಗುತ್ತಿದೆ. ಆದರೆ, ಸೆಪ್ಟೆಂಬರ್​​ 20ರ ತಡರಾತ್ರಿ ದಸರಾ ಗಜಪಡೆಯ ನಡುವೆ ದಾಂಧಲೆ ನಡೆದಿದ್ದು, ಆತಂಕ ಸೃಷ್ಟಿಸಿತ್ತು. ಇದೀಗ ಇಂದು (ಸೆಪ್ಟೆಂಬರ್​21) ಎಂದಿನಂತೆ ಗಜಪಡೆಯ ತಾಲೀಮು ಸುಗಮವಾಗಿ ನಡೆಯಿತು.

ಅರಮನೆಯ ಜಯಮಾರ್ತಾಂಡ ದ್ವಾರದ ಮುಖ್ಯ ದ್ವಾರದ ಬಳಿ ಧನಂಜಯ ಹಾಗು ಕಂಜನ್ ಆನೆಗಳು ನಡುವೆ ದಾಂಧಲೆ ಏರ್ಪಟ್ಟಿತ್ತು. ಆದರೆ ಇಂದು ಮೈಸೂರು ಅರಮನೆಯಿಂದ ಅಭಿಮನ್ಯು ನೇತೃತ್ವದಲ್ಲಿ ನಡೆದ ಗಜಪಡೆ ತಾಲೀಮಿನಲ್ಲಿ ಧನಂಜಯ ಮತ್ತು ಕಂಜನ್ ಆನೆಗಳು ತಾಲೀಮಿನಲ್ಲಿ ಭಾಗಿಯಾಗಿದ್ದವು. ಒಂದೇ ಸಾಲಿನಲ್ಲಿ ಸಾಗಿದರೂ ಕಂಜನ್, ಧನಂಜಯ ಆನೆ ದೂರಾ ದೂರ ಸಾಗಿದವು. ಆನೆಗಳ ಸಾಲಿನಲ್ಲಿ 4ನೇ ಆನೆಯಾಗಿ ಕಂಜನ್ ಹಾಗೂ ಕೊನೆಯಲ್ಲಿ ಸಾಗಿದ ಧನಂಜಯ ಸಾಗಿದ.

ಒಂದು ಆನೆಯು ಇನ್ನೊಂದನ್ನು ಅರಮನೆ ಆವರಣದಿಂದ ಹೊರಗೆ ಓಡಿಸಿತು. ಆದರೆ ಅದೃಷ್ಟವಶಾತ್, ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಆದರೆ ಒಬ್ಬ ಮಾವುತನು ತನ್ನ ಆನೆಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದನು. ಇನ್ನೊಂದು ಮುಖ್ಯರಸ್ತೆ ತಲುಪಿದ ನಂತರ ನಿಲ್ಲಿಸಿತು. ಅರಣ್ಯಾಧಿಕಾರಿಗಳ ಪ್ರಕಾರ ಎರಡು ಆನೆಗಳು ಆನೆಗಳಿಗೆ ಊಟ ಬಡಿಸುವಾಗ ಒಟ್ಟಿಗೆ ತಂದ ಪರಿಣಾಮ ಈ ಘಟನೆ ನಡೆದಿದೆ .

ಕಾದಾಟಕ್ಕೆ ಕಾರಣ ತಿಳಿಸಿದ ಅಧಿಕಾರಿ

ಸದ್ಯಕ್ಕೆ ಎರಡೂ ಆನೆಗಳು ಶಾಂತವಾಗಿದ್ದು, ಎರಡೂ ಆನೆಗಳು ಮುಖಾಮುಖಿಯಾಗದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಮುನ್ನೆಚ್ಚರಿಕೆ ವಹಿಸಿದ್ದಾರೆ. ದಸರಾ ಗಜಪಡೆ ದಾಂಧಲೆ ಕುರಿತು ಡಿಸಿಎಫ್ ಡಾ. ಐಬಿ ಪ್ರಭುಗೌಡ ಸ್ಪಷ್ಟನೆ ನೀಡಿದ್ದು, ನಿನ್ನೆ ರಾತ್ರಿ ಆನೆಗಳಿಗೆ ಆಹಾರ ಕೊಡುವಾಗ ಕಂಜನ್ ಮತ್ತು ಧನಂಜಯ ಆನೆಗಳ ನಡುವೆ ಜಗಳ ಆಗಿದೆ. ಗಂಡಾನೆಗಳ ಸ್ವಭಾವ ಹಾಗಯೇ ಇರುತ್ತದೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರತಿ ಬಾರಿಯೂ ಆನೆಗಳಿಗೆ ಆಹಾರ ಕೊಡುವಾಗ ಹೆಣ್ಣಾನೆ ಜೊತೆಯಲ್ಲಿರುತ್ತಿತ್ತು. ನಿನ್ನೆ ರಾತ್ರಿ ಆಹಾರ ಕೊಡುವಾಗ ಹೆಣ್ಣಾನೆ ಜೊತೆಯಲ್ಲಿ ಇಲ್ಲದ ಕಾರಣ ಧನಂಜಯ ಆನೆ ಕಂಜನ್ ಆನೆ ವಿರುದ್ಧ ಕಾದಾಟಕ್ಕೆ ಮುಂದಾಗಿದೆ. ಧನಂಜಯ ಆನೆ ಕಂಜನ್ ಆನೆಯನ್ನು ಓಡಿಸಿಕೊಂಡು ಹೋಗಿದೆ. ಈ ವೇಳೆ ಕಂಜನ್ ಆನೆಯ ಮೇಲಿದ್ದ ಮಾವುತ ಕೆಳಕ್ಕೆ ಜಿಗಿದಿದ್ದಾನೆ ಎಂದು ತಿಳಿಸಿದ್ದಾರೆ.

ಅರಮನೆಯಿಂದ ಹೊರಗೆ ಹೋಗುತ್ತಿದ್ದಂತೆ ಧನಂಜಯ ನಿಯಂತ್ರಣಕ್ಕೆ ಬಂದಿದೆ. ಈ ಘಟನೆ ಹಠಾತ್ ನಡೆದಿದೆ. ಕಂಜನ್ ಮತ್ತು ಧನಂಜಯ ಆನೆಗೆ ಮದ ಬಂದಿಲ್ಲ, ಇದನ್ನು ಈಗಾಗಲೇ ಪರೀಕ್ಷೆ ಮಾಡಲಾಗಿದೆ. ಕಂಜನ್ ಆನೆ ರಸ್ತೆಗೆ ಹೋಗುತ್ತಿದಂತೆ ಜನರನ್ನು ನೋಡಿ ಗಾಬರಿಯಾಗಿ ಸುಮ್ಮನಾಗಿದೆ. ಜನರು ಆನೆಗಳನ್ನು ದೂರದಿಂದಲೇ ನೋಡಬೇಕು. ಯಾರು ಹತ್ತಿರಕ್ಕೆ ಬರಬಾರದು ಎಂದು ಪ್ರಭುಗೌಡ ಸ್ಪಷ್ಟನೆ ನೀಡಿದ್ದಾರೆ.

mysore-dasara_Entry_Point