ಮೈಸೂರು ಅರಮನೆ ಬಳಿ ಪಾರಿವಾಳಗಳಿಗೆ ಧಾನ್ಯ ಹಾಕದಂತೆ ನಿರ್ಬಂಧ; ಆಹಾರ ಅರಸಿ ದಸರಾ ಗಜಪಡೆ ಬಳಿ ಬಂದ ಹಕ್ಕಿಗಳು-mysuru news doves gather at dasara elephant yard in search of food as ban on giving grains to pigeons near palace jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ಅರಮನೆ ಬಳಿ ಪಾರಿವಾಳಗಳಿಗೆ ಧಾನ್ಯ ಹಾಕದಂತೆ ನಿರ್ಬಂಧ; ಆಹಾರ ಅರಸಿ ದಸರಾ ಗಜಪಡೆ ಬಳಿ ಬಂದ ಹಕ್ಕಿಗಳು

ಮೈಸೂರು ಅರಮನೆ ಬಳಿ ಪಾರಿವಾಳಗಳಿಗೆ ಧಾನ್ಯ ಹಾಕದಂತೆ ನಿರ್ಬಂಧ; ಆಹಾರ ಅರಸಿ ದಸರಾ ಗಜಪಡೆ ಬಳಿ ಬಂದ ಹಕ್ಕಿಗಳು

ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಹಕ್ಕಿಗಳಿಗೆ ಪ್ರಾಣಿಪ್ರಿಯರು ನಿತ್ಯ ಧಾನ್ಯಗಳನ್ನು ಹಾಕುತ್ತಿದ್ದರು. ಆದರೆ, ಈ ಸ್ಥಳದಲ್ಲಿ ಧಾನ್ಯಗಳನ್ನು ಹಾಕಬಾರದು ಎಂದು ದಿಢೀರ್ ನಿರ್ಬಂಧ ಹಾಕಲಾಗಿದೆ. ಇದರಿಂದ ಪಾರಿವಾಳಗಳು ದಸರಾ ಗಜಪಡೆಗಳ ಬಳಿ ಬಂದು ಆಹಾರ ಹುಡುಕುತ್ತಿವೆ.

ಮೈಸೂರು ಅರಮನೆ ಬಳಿ ಪಾರಿವಾಳಗಳಿಗೆ ಧಾನ್ಯ ಹಾಕದಂತೆ ನಿರ್ಬಂಧ; ಜನರ ಆಕ್ರೋಶ
ಮೈಸೂರು ಅರಮನೆ ಬಳಿ ಪಾರಿವಾಳಗಳಿಗೆ ಧಾನ್ಯ ಹಾಕದಂತೆ ನಿರ್ಬಂಧ; ಜನರ ಆಕ್ರೋಶ

ಮೈಸೂರು ಅರಮನೆ ಬಳಿ ಪಾರಿವಾಳಗಳಿಗೆ ಧಾನ್ಯಗಳನ್ನು ಹಾಕುವುದಕ್ಕೆ ದಿಢೀರ್ ನಿರ್ಬಂಧ ಹಾಕಿದ ಹಿನ್ನೆಲೆಯಲ್ಲಿ ಪಾರಿವಾಳಗಳು ಆಹಾರವಿಲ್ಲದೆ ಪರದಾಡುತ್ತಿವೆ. ಪ್ರತಿನಿತ್ಯ ಈ ಭಾಗದಲ್ಲಿ ಸಾರ್ವಜನಿಕರು ಹಕ್ಕಿಗಳಿಗೆ ಧಾನ್ಯ ಕಾಳುಗಳನ್ನು ಹಾಕುತ್ತಿದ್ದರು. ಇದರಿಂದ ಹಕ್ಕಿಗಳು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಇದೀಗ ದಿಢೀರನೆ ಮೈಸೂರು ಅರಮನೆ ಬಳಿ ಪಾರಿವಾಳಗಳಿಗೆ ಧಾನ್ಯಗಳನ್ನು ಹಾಕುವುದಕ್ಕೆ ದಿಢೀರ್ ಬ್ರೇಕ್ ಹಾಕಲಾಗಿದೆ. ಹೀಗಾಗಿ ಆಹಾರವನ್ನರಸುತ್ತಾ ಪಾರಿವಾಳಗಳು ದಸರಾ ಗಜಪಡೆ ಬಳಿಗೆ ಬಂದಿವೆ. ಆನೆಗಳ ಲದ್ದಿಯಲ್ಲಿ ಆಹಾರಕ್ಕಾಗಿ ಹುಡುಕಾಟ ನಡೆಸಿವೆ. ಅಲ್ಲದೆ ಆನೆಗಳಿಗೆ ಆಹಾರವಾಗಿ ಕೊಟ್ಟು ಉಳಿದ ಭತ್ತ, ದ್ವಿದಳ ಧಾನ್ಯಗಳಿಗಾಗಿ ಹುಡುಕಾಟ ನಡೆಸಿವೆ.

ಈವರೆಗೂ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಹಕ್ಕಿಗಳಿಗೆ ಪ್ರಾಣಿ ಹಾಗೂ ಪಕ್ಷಿಪ್ರಿಯರು ನಿತ್ಯ ಧಾನ್ಯಗಳನ್ನು ಹಾಕುತ್ತಿದ್ದರು. ಇದು ಹಕ್ಕಿಗಳಿಗೂ ಅಭ್ಯಾಸವಾಗಿತ್ತು. ಹೊಟ್ಟೆಗೆ ಆಹಾರ ಸಿಗುವ ಆಸೆಯಲ್ಲಿ ನಿತ್ಯ ಇದೇ ಭಾಗದಲ್ಲಿ ಬಂದು ಸೇರುತ್ತಿದ್ದವು. ಆದರೆ, ಈ ಸ್ಥಳದಲ್ಲಿ ಧಾನ್ಯಗಳನ್ನು ಹಾಕುತ್ತಿದ್ದವರಿಗೆ ಹಾಕಬೇಡಿ ಎಂದು ದಿಢೀರ್ ನಿರ್ಬಂಧ ಹಾಕಲಾಗಿದೆ.

ಜನರು ಹಾಕುತ್ತಿದ್ದ ಧಾನ್ಯಗಳನ್ನು ತಿಂದು ಆರಾಮಾಗಿ ವಿಹರಿಸುತ್ತಿದ್ದ ಪಾರಿವಾಳಗಳು ಈಗ ತಿನ್ನಲು ಏನೂ ಸಿಗದೆ ಕಂಗಾಲಾಗಿವೆ. ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿವೆ. ಆದರೆ, ಪಾರಿವಾಳಗಳ ಆಹಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡದೇ ದಿಢೀರ್ ರದ್ದು ಮಾಡಿರುವುದು ಭಾರಿ ವಿರೋಧಕ್ಕೆ ಕಾರಣವಾಗಿದೆ. ಮೂಕ‌ ಪಕ್ಷಿಗಳ ನೆರವಿಗೆ ಪ್ರಾಣಿ ಹಾಗೂ ಪಕ್ಷಿಪ್ರಿಯರು ನಿಂತಿದ್ದಾರೆ.

ಸಾರ್ವಜನಿಕರಿಂದ ಆಕ್ರೋಶ

ಮೈಸೂರು ಅರಮನೆ ಬಳಿ ಪಾರಿವಾಳಗಳಿಗೆ ಧಾನ್ಯಗಳನ್ನು ಹಾಕದಂತೆ ದಿಢೀರ್ ನಿರ್ಬಂಧ ವಿಧಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿನಿತ್ಯ ಧಾನ್ಯಗಳನ್ನು ಹಾಕಲು ಸಾರ್ವಜನಿಕರು ಬರುತ್ತಿದ್ದರು. ಇದೀಗ ಏಕಾಏಕಿ ನಿರ್ಬಂಧಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಇತಿಹಾಸ ತಜ್ಞ ನಂಜರಾಜ ಅರಸ್ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ.

ಪ್ರತಿನಿತ್ಯ ಧಾನ್ಯಗಳನ್ನು ಹಾಕಲು ಅವಕಾಶವಿತ್ತು. ಈಗ ಏಕಾಏಕಿ ನಿರ್ಬಂಧಿಸಲಾಗಿದೆ. ಎಂದಿನಂತೆ ಇಂದು ಕೂಡಾ ಹಕ್ಕಿಗಳಿಗೆ ಧಾನ್ಯಗಳನ್ನು ಹಾಕಲು ಬಂದ ಜನರು ಬಂದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕೆಲವರು ಧಾನ್ಯಗಳನ್ನು ಹಾಕದಂತೆ ತಡೆದಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ತಡೆದವರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ.

ಏಕಾಏಕಿ ಧಾನ್ಯಗಳನ್ನು ಹಾಕದಂತೆ ನಿರ್ಬಂಧ ವಿಧಿಸಿರುವುದಕ್ಕೆ ಇತಿಹಾಸ ತಜ್ಞ ನಂಜರಾಜ ಅರಸ್ ಕಿಡಿಕಾರಿದ್ದಾರೆ. ಪಾರಿವಾಳಗಳಿಗೆ ಆಹಾರ ನೀಡಲು ಅಡ್ಡಿ ಮಾಡಿರುವವರು, ಇನ್ನೂ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾರಾ ಎಂದು ಪರೋಕ್ಷವಾಗಿ ಸಂಸದ ಯದುವೀರ್ ಒಡೆಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

mysore-dasara_Entry_Point